ಬುಧವಾರ, ಜನವರಿ 7, 2009

ಅರ್ಪಣೆ

ರಾಮಕೃಷ್ಣರಿಗೊಂದು ನಮನ

ಬಾಳದಾರಿಯಲ್ಲಿ ಸಾಗಿದ್ದೆ ಒಂಟಿಯಾಗಿ
ಕನಸುಗಳ ನನಸಾಗಿಸುವ ಕನಸಹೊತ್ತು,
ಎಡರು-ತೊಡರುಗಳಿಗೆಲ್ಲಾ ಬಿದ್ದರೂ, ಎದ್ದು.
ಮುಂದೆಲ್ಲೋ ತಿರುವನಲಿ ಬೆಳಕಿನ ಕಿಂಡಿಯ
ಆಸೆಯನು ಹೊತ್ತು, ಮನಸು ನಲಿವಾಗುತಿತ್ತು.

ಬದುಕಿನ ಪ್ರವಾಹದೊಳಗೆ ಸಿಲುಕಿ, ಬಳಲಿ,
ಮೊರೆಯನಿಡುತ್ತಿದ್ದೆ ನಾ ಹಗಲು, ಇರುಳು
ಹಾಯಿದೋಣಿಯನೊಂದ ಕರುಣಿಸು...
ಕಾಣದ ತೀರವ ಸೇರಿಸು ಹೇ ಕೃಷ್ಣ,
ಭವ ಬಂಧನವ ಬಿಡಿಸು ಹೇ ರಾಮ...

ನಿನ್ನ ಒಂದು ಹೊನ್ನ ಕಿರಣದಿಂದ
ಬಾಳು ಸೂರ್ಯನ ಹಗಲಾಯಿತು,
ಹಾಯಿದೋಣಿಯ ಜೊತೆಗೆ,
ಅಂಬಿಗನ ಬರುವಾಯಿತು.
ಕನಸುಗಳಿಗೆ ರೂಪ ಸಿಕ್ಕಿ,
ಗುರಿಯೇ ಬದಲಾಯಿತು,
ಒಡೆದ ಕನಸುಗಳೆಲ್ಲಾ ಸೇರೆ,
ಕುಡಿಯ ಜನನವಾಯಿತು.

ಒಂಟಿಯಿಂದ ಜಂಟಿಯಾಗಿ,

ಸಪ್ತಪದಿಯ ತುಳಿದಿಗಿಂದು
ವರುಷ ನಾಲ್ಕು ಕಳೆದರೂ,
ಜನ್ಮಾಂತರದ ಬಂಧವಿದು
ಪ್ರೇಮವೆಂದೂ ಕಳೆಯದು.
ಸೀತೆಗೊಬ್ಬ ರಾಮನಂತೆ,
ರಾಧೆಗೊಲಿದ ಕೃಷ್ಣನಂತೆ,
ನನ್ನೊಳಗೆ ರಾಮಕೃಷ್ಣನು.

ಈ ಸುದಿನದಂದು ನನ್ನ ೫೦ನೆಯ ಪೋಸ್ಟ್ ಆದ "ರಾಮಕೃಷ್ಣರಿಗೊಂದು ನಮನ" ಕವನವನ್ನು ನನ್ನವರಿಗೆ ಅರ್ಪಿಸುತ್ತಿದ್ದೇನೆ.

-ತೇಜಸ್ವಿನಿ ಹೆಗಡೆ

27 ಕಾಮೆಂಟ್‌ಗಳು:

Unknown ಹೇಳಿದರು...

ತೇಜಕ್ಕಾ,
ಸುಂದರವಾದ ಕವನ. ನಿಮಗಿಬ್ಬರಿಗೂ ಶುಭಾಶಯಗಳು.
ನಿಮ್ಮ ಬದುಕು ಸದಾ ಸುಂದರವಾಗಿರಲಿ. ನಿಮ್ಮ ಲೇಖನಿಯಿಂದ ಇನ್ನೂ ಕವನ, ಲೇಖನಗಳು ಹರಿದು ಬರಲಿ.

ಚಿತ್ರಾ ಸಂತೋಷ್ ಹೇಳಿದರು...

"ಒಂಟಿಯಿಂದ ಜಂಟಿಯಾಗಿ,
ಸಪ್ತಪದಿಯ ತುಳಿದಿಗಿಂದು
ವರುಷ ನಾಲ್ಕು ಕಳೆದರೂ,
ಜನ್ಮಾಂತರದ ಬಂಧವಿದು
ಪ್ರೇಮವೆಂದೂ ಕಳೆಯದು.
ಸೀತೆಗೊಬ್ಬ ರಾಮನಂತೆ,
ರಾಧೆಗೊಲಿದ ಕೃಷ್ಣನಂತೆ,
ನನ್ನೊಳಗೆ ರಾಮಕೃಷ್ಣನು.."
ನನ್ ಕಡೆಯಿಂದ ಅಕ್ಕನಿಗೊಂದು ಪ್ರೀತಿ ತುಂಬಿದ ಶುಭ ಹಾರೈಕೆ
-ಚಿತ್ರಾ

ಚಂದ್ರಕಾಂತ ಎಸ್ ಹೇಳಿದರು...

ತೇಜಸ್ವಿನಿಯವರೇ

ಮೊಟ್ಟಮೊದಲನೆಯದಾಗಿ ನಿಮ್ಮ ಬ್ಲಾಗನ್ನು ಸುಂದರ ಶಿರೋಲೇಖದಿಂದ ಅಲಂಕರಿಸಿರುವುದಕ್ಕೆ ಧನ್ಯವಾದಗಳು.

‘ ಅರ್ಪಣೆ ’ ಕವನ ನಿಮ್ಮ ಹೃದಯದಾಳದಿಂದ ಮೂಡಿಬಂದಿರುವುದರಿಂದ ಹೃದ್ಯವಾಗಿದೆ.ರಾಮಕೃಷ್ಣರು ನಿಮ್ಮ ಬಾಳಿನಲ್ಲಿ ಪಡೆದುಕೊಂಡಿರುವ ವಿಷಿಷ್ಟ ಸ್ಥಾನವನ್ನು ಮಧುರವಾದ ಪದಗಳಿಂದ ವರ್ಣಿಸಿರುವಿರಿ.( ಅವು ಕೇವಲ ಪದಗಳಲ್ಲವೆಂದು ಗೊತ್ತು!!)

ನಿಮ್ಮ 50 ನೆಯ ಬರವಣಿಗೆ ಪ್ರಕಟವಾಗಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಇಷ್ಟೇ ಸುಂದರ ಬರವಣಿಗೆಗಳಿಂದ ಶತಕದ ಪೋಸ್ಟ್ ಬೇಗ ಮೂಡಿಬರಲೆಂದು ಹಾರೈಸುವೆ.

ನಿಮ್ಮ ನಾಲ್ಕನೆಯ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮದೊಂದು ಶುಭ ಹಾರೈಕೆ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜು...

ಈ ಶುಭದಿನದಂದು ನಿಮ್ಮಿಬ್ಬರಿಗೂ ಶುಭಾಶಯ.
ಐವತ್ತು ನೂರಾಗಿ, ನೂರು ಸಾವಿರವಾಗಲಿ.

ಚಂದದ ಕವನ.

ಚಿತ್ರಾ ಹೇಳಿದರು...

ಪ್ರಿಯ ತೇಜೂ,

ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು !

ನಿಮ್ಮ ಜೀವನ ,

ಪ್ರೇಮದ ಹೂವರಳುವ ಹೂಬನವಾಗಿರಲಿ,
ನೆಮ್ಮದಿಯ ತಂಗಾಳಿ ಸದಾ ಬೀಸುತ್ತಿರಲಿ
ಪ್ರೀತಿ ಬತ್ತದ ಸಾಗರವಾಗಿರಲಿ
ಒಲುಮೆಯೇ ಬದುಕಿನ ಚೈತನ್ಯವಾಗಿರಲಿ !

ತುಂಬು ಹೃದಯದ ಹಾರೈಕೆಗಳು ಮತ್ತೊಮ್ಮೆ

ವಿ.ರಾ.ಹೆ. ಹೇಳಿದರು...

ತೇಜಕ್ಕಾ,

ಶುಭದಿನಕ್ಕೆ ಶುಭಹಾರೈಕೆಗಳು. :)

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು....

ನಿಮ್ಮ ೫೦ ಮುಂದೆ ನೂರು....ಸಾವಿರವಾಗಲಿ.....

ಶರಶ್ಚಂದ್ರ ಕಲ್ಮನೆ ಹೇಳಿದರು...

ತೇಜಕ್ಕ,
ಐವತ್ತನೇ ಬರವಣಿಗೆಗೆ ಹೃತ್ಪೂರ್ವಕ ಶುಭಾಶಯಗಳು. ಹೀಗೆ ಬರಿತ ಇರು..."ನಿನ್ನ ಒಂದು ಹೊನ್ನ ಕಿರಣದಿಂದ ಬಾಳು ಸೂರ್ಯನ ಹಗಲಾಯಿತು" ತುಂಬ ಇಷ್ಟ ಆತು. ನಿಮ್ಮಿಬ್ರಿಗೂ ನನ್ ಕಡೆ ಇಂದ ಶುಭಾಶಯಗಳು. ಐವತ್ತು ನೂರರ ಕಡೆ ಬೇಗ ಓಡಲಿ....

ಭಾರ್ಗವಿ ಹೇಳಿದರು...

ತೇಜಸ್ವಿನಿಯವರೇ,
ಈ ಸುದಿನದಂದು ನನ್ನಿಂದೊಂದು ಪ್ರೀತಿಯ ಶುಭಾಶಯಗಳು. ಮನದ ಮಾತೆಲ್ಲ ಸುಂದರ ಸಾಲುಗಳಲ್ಲಿ ಹರಿದು ಬಂದಿವೆ.
ಸೀತೆಗೊಬ್ಬ ರಾಮನಂತೆ,
ರಾಧೆಗೊಲಿದ ಕೃಷ್ಣನಂತೆ,
ನನ್ನೊಳಗೆ ರಾಮಕೃಷ್ಣನು..(ಸೀತೆ,ರಾಧೆ ೨ ಅಕ್ಷರದವರು,ತೇಜಸ್ವಿನಿ ೪ ಅಕ್ಷರದವರು ಅದಕ್ಕೆ ರಾಮಕೃಷ್ಣರು ಸಿಕ್ಕಿರೋದು:). ಹೀಗೆ ನಿಮ್ಮ ಬರಹ ಶತಕ,ಸಹಸ್ರವಾಗಲಿ.

sunaath ಹೇಳಿದರು...

ತೇಜಸ್ವಿನಿ,
ನಿನಗೆ ಹಾಗು ನಿಮ್ಮವರಿಗೆ ಹಾರ್ದಿಕ ಶುಭಾಶಯಗಳು.
ರಾಮಕೃಷ್ಣ ಪರಮಹಂಸರ ವಚನಾಮೃತಗಳು ಅದ್ಭುತ ಕೃತಿಗಳಾಗಿವೆ. ಅವರ ಹರಕೆ ಪಡೆದ ನೀನು ಧನ್ಯೆ.
-ಕಾಕಾ

Ittigecement ಹೇಳಿದರು...

ತೇಜಸ್ವಿನಿಯವರೆ......

ನೂರಾರು ವರುಷ...
ತುಂಬಿರಲಿ ಹರುಷ...
ನಿಮ್ಮ ಪ್ರೇಮ ಬಾಂಧವ್ಯದಲಿ..
ನಗುವೊಂದೆ ಇರಲಿ ಅನುದಿನ...

ನಿಮ್ಮ ಬ್ಲೋಗ್..
ನೂರಾಗಿ..ಸಾವಿರವಾಗಲಿ...

ಶುಭ ಕಾಮನೆಗಳು...

ಅಭಿನಂದನೆಗಳು...

ತೇಜಸ್ವಿನಿ ಹೆಗಡೆ ಹೇಳಿದರು...

ಶುಭಾಶಯಗಳೊಂದಿಗೆ ನಮ್ಮನ್ನು ಹರಿಸಿದ ಹಿರಿಯರಿಗೆಲ್ಲಾ ತುಂಬು ಹೃದಯದ ಕೃತಜ್ಞತೆಗಳು. ಹಾಗೆಯೇ ಶುಭಕಾಮನೆಗಳ ಮೂಲಕ ಸಂತಸವನ್ನು ಹಂಚಿಕೊಂಡ ಸ್ನೇಹಿತರಿಗೆ, ಸಹೋದರರಿಗೆ, ಸಹೋದರಿಯರಿಗೆಲ್ಲಾ ತುಂಬು ಪ್ರೀತಿಯ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ, ಪ್ರೀತಿ ಮಾನಸದ ಮೇಲೆ ಹೀಗೇ ಸದಾ ಇರಲೆಂದು ಹಾರೈಸುವೆ.

ಮತ್ತೊಮ್ಮೆ ಎಲ್ಲರಿಗೂ ವಂದನೆಗಳು.

-ತೇಜಸ್ವಿನಿ ರಾಮಕೃಷ್ಣ ಹೆಗಡೆ.

Lakshmi Shashidhar Chaitanya ಹೇಳಿದರು...

ಶುಭದಿನಕ್ಕೆ ತುಂಬು ಹೃದಯದ ಶುಭ ಹಾರೈಕಗಳು.

ಅಮರ ಹೇಳಿದರು...

ಶುಭ ಹಾರೈಕೆಗಳು.... ಬದುಕಿನ ಪ್ರತಿ ಕ್ಷಣಗಳೂ ಅನನ್ಯ ಖುಶಿ ತರಲಿ.

-ಅಮರ

ಸುಧೇಶ್ ಶೆಟ್ಟಿ ಹೇಳಿದರು...

ತೇಜಕ್ಕ..

ತು೦ಬಾ ಅರ್ಥಪೂರ್ಣ ಅರ್ಪಣೆ. ನಿಮ್ಮ ಬದುಕು ಹೀಗೆ ನವಿರಾಗಿರಲಿ ಎ೦ದು ಹಾರೈಸುತ್ತೇನೆ.

೫೦ ಬಾರಿಸಿದ್ದಕ್ಕೆ ಕ೦ಗ್ರಾಟ್ಸು:)

ಕುಕೂಊ.. ಹೇಳಿದರು...

ತೇಜಸ್ವಿನಿಯವರೆ,
ನಲ್ಕೇಡಿನ(ನಾಲ್ಕನೇ ವರುಶ) ನಿಮ್ಮ ಹರಿಸದ ಜೊತೆ ಬಾಳಿಗೆ ಎದೆತುಂಬಿದ ನಲ್ ಹಾರೈಕೆಗಳು. ನೂರೇಡುಗಳು ಜೊತೆಯಲಿ ನಲಿಯುತಲಿರಲಿ ಈ ಜೋಡಿ ಎಂದು ಬೇಡುತಲಿ....


ಸ್ವಾಮಿ

Harisha - ಹರೀಶ ಹೇಳಿದರು...

ತೇಜಕ್ಕಾ, ಶುಭಾಶಯ... :-) ಬರಲೆ ಸ್ವಲ್ಪ ಲೇಟ್ ಆತು... :-(

ಬಿಸಿಲ ಹನಿ ಹೇಳಿದರು...

ತೇಜಸ್ವಿನಿಯವರೇ,
ನಿಮ್ಮ ಕವನ ಬರಿ ಕವನವಲ್ಲ.ಇವು ಅಂತರಂಗದ ಪಿಸುಮಾತುಗಳು.Cogratulations on the completion of your four years married life.Wish you all the best.
-ಉದಯ ಇಟಗಿ

bhadra ಹೇಳಿದರು...

ಶ್ರೀರ್ವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ|
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ||

ಬಾಳಬಂಡಿಯ ಚಕ್ರಗಳೆರಡೂ ಸಮ ಸಮವಾಗಿ ನೂರ್ಕಾಲ ಓಡುತಲಿರಲಿ

ಗುರುದೇವ ದಯಾ ಕರೊ ದೀನ ಜನೆ

ಸುಪ್ತದೀಪ್ತಿ suptadeepti ಹೇಳಿದರು...

ಹೊಸ ವರ್ಷದ ಹಾರೈಕೆಗಳ ಜೊತೆಗೆ, ಇದೇ ನೆವನದಲ್ಲೂ ಮತ್ತೊಂದಷ್ಟು ಶುಭಾಶಯಗಳು. ನಿಮ್ಮಿಬ್ಬರ ಜೀವನ ಜೇನಿನಂತಿರಲಿ. ಹನಿ-ಹನಿಯಾಗಿಯೇ ಹನಿಯುತಿರಲಿ. ಸದಾ ಸುಖ, ನೆಮ್ಮದಿ ನಿಮಗಿರಲಿ. ಮನೆ, ಮನಸ್ಸು ತುಂಬಿರಲಿ.

ಅಂತರ್ವಾಣಿ ಹೇಳಿದರು...

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.

ಪ್ರೇಮವೆಂದೂ ಕಳೆಯದು.
ಸೀತೆಗೊಬ್ಬ ರಾಮನಂತೆ,
ರಾಧೆಗೊಲಿದ ಕೃಷ್ಣನಂತೆ,
ನನ್ನೊಳಗೆ ರಾಮಕೃಷ್ಣನು. ತುಂಬಾ ಇಷ್ಟವಾದ ಹಾಗು ನಿಮಗೊಪ್ಪುವಂತ ಸಾಲುಗಳು..

ತೇಜಸ್ವಿನಿ ಹೆಗಡೆ ಹೇಳಿದರು...

ಲಕ್ಷ್ಮೀ, ಅಮರ್, ಸುಧೇಶ್, ಕಡಕೊಳ್ಳ, ಹರೀಶ್, ಉದಯ, ಜ್ಯೋತಿಯಕ್ಕ, ಶಂಕರ್ ಹಾಗೂ ಶ್ರೀನಿವಾಸ್ ಅವರೆ,

ನಿಮ್ಮೆಲ್ಲರ ಶುಭಾಶಯಗಳಿಗಾಗಿ ತುಂಬು ಹೃದಯದ ಕೃತಜ್ಞತೆಗಳು. ನಿಮ್ಮೆಲ್ಲರ ಸ್ನೇಹ ಹಾಗೂ ಪ್ರೋತ್ಸಾಹ ಹೀಗೇ ಸದಾ ಇರಲೆಂದು ಹಾರೈಸುವೆ.
ಧನ್ಯವಾದಗಳು.

ಯಜ್ಞೇಶ್ (yajnesh) ಹೇಳಿದರು...

"ರಾಮ" ನ "ತೇಜ"ಸ್ಸು ಇನ್ನು ಪ್ರಜ್ವಲವಾಗಲಿ.

ರಾಮ ಸೀತೆಯಂತೆ ಆದರ್ಶ ಜೀವನ ನಿಮ್ಮದಾಗಲಿ.

ತೇಜಸ್ವಿನಿ ಹೆಗಡೆ ಹೇಳಿದರು...

ತುಂಬಾ ಧನ್ಯವಾದಗಳು ಯಜ್ಞೇಶ್ ಅವರೆ. ನಿಮ್ಮ ಹಾರೈಕೆಗಳಿಗೆ ನಾನು ಆಭಾರಿ. :)

Kallare ಹೇಳಿದರು...

ಬದುಕು ಸದಾ ಸುಂದರವಾಗಿರಲಿ....

ಅನಾಮಧೇಯ ಹೇಳಿದರು...

neevendu santhoshavaagiri

ಅನಾಮಧೇಯ ಹೇಳಿದರು...

neevendu santhoshavaagiri