ಮಂಗಳವಾರ, ಸೆಪ್ಟೆಂಬರ್ 23, 2008

ನಾ ಮೆಚ್ಚಿದ ಕವಿತೆ-೨


ಕವಿ : ಜಿ. ಎಸ್. ಶಿವರುದ್ರಪ್ಪ

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
**ಇಲ್ಲಿ ಕವಿ ಪ್ರಕೃತಿಯಲ್ಲೇ ಸ್ತ್ರೀತ್ವವನ್ನು ಕಾಣುತ್ತಾ, ಹೆಣ್ಣು ಹಾಗೂ ಪ್ರಕೃತಿಯೊಳಗಿನ ಅವಿನಾಭಾವ ಸಂಬಂಧವನ್ನು ಕಾಣಿಸಿದ್ದಾರೆ. ತನ್ನ ಸೃಷ್ಟಿಯನ್ನು ಮಮತೆಯಿಂದ ಪೋಷಿಸುವ, ತುತ್ತನಿತ್ತು ಬೆಳೆಸುವ, ತಂಗಾಳಿಯ ಬೀಸಿ ಆಶ್ರಯ ನೀಡುವ, ವಾತ್ಸಲ್ಯ ಮಯಿ, ಜನನಿಯಾದ ಪ್ರಕೃತಿಯೇ ಒಂದು ಸ್ತ್ರೀ. ಇಂತಹ ಸ್ತ್ರೀಗೆ ಬೇರೆ ಹೆಸರು ಬೇಕೇ? ಸ್ತ್ರೀ ಅಂದರೆ ಅಷ್ಟೇ ಸಾಕೆ?**
ಈ ಕವಿತೆಯನ್ನು ಸಿ.ಅಶ್ವಥ್ ಅವರು ತುಂಬಾ ಸುಂದರವಾಗಿ ಹಾಗೂ ಭಾವಪೂರ್ಣವಾಗಿ ಹಾಡಿದ್ದಾರೆ.
ವಿ.ಸೂ : ಈ ಕವಿತೆಯನ್ನು ಬರೆದದ್ದು ಬಿ.ಆರ್.ಲಕ್ಷ್ಮಣ ರಾವ್ ಅಂತ ತಿಳಿದಿದ್ದೆ. ಒಂದಿಬ್ಬರನ್ನು ವಿಚಾರಿಸದಾಗ ಅವರೂ ಇದನ್ನೇ ಪುಷ್ಟೀಕರಿಸಿದ್ದರು. ಆದರೆ "ಬಾಲವನ" ಬ್ಲಾಗ್ ಅವರು ಜಿ.ಎಸ್.ಶಿವರುದ್ರಪ್ಪ ಎಂದು ಹೇಳಿದಾಗ ಪುನರ್‌ ಪರಿಶೀಲಿಸಲು, ನನ್ನ ತಪ್ಪಿನ ಅರಿವಾಯಿತು. ಆದ ತಪ್ಪನ್ನು ಸರಿಪಡಿಸಿಕೊಂಡು ಹಾಕಿರುವೆ.
-ತೇಜಸ್ವಿನಿ ಹೆಗಡೆ

10 ಕಾಮೆಂಟ್‌ಗಳು:

ಬಾಲವನ ಹೇಳಿದರು...

This poem is written by G.S.Shivarudrappa and not by B.R.LakshmanaRao

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನಿಂದಾಗಿದ್ದ ತಪ್ಪನ್ನು ತಿದ್ದಿರುವುದಕ್ಕಾಗಿ ತುಂಬಾ ಧನ್ಯವಾದಗಳು. ತಪ್ಪನ್ನು ಸರಿಪಡಿಸಲಾಗಿದೆ. ಮಾನಸಕ್ಕೆ ಹೀಗೇ ಭೇಟಿಕೊಟ್ಟು ತಪ್ಪಾಗಿದ್ದರೆ ತಿದ್ದುತ್ತಿರಿ :)

ಸಿಮ್ಮಾ ಹೇಳಿದರು...

ತೇಜಸ್ವಿನಿಯವರೇ ಈ ಹಾಡು ನಾವು ಹುಡುಗ್ರಿದ್ದಾಗ ನಮ್ಗೆ ಪಠ್ಯವಾಗಿತ್ತು. ಇದನ್ನ ಅಶ್ವಥ್ ರವರು ತುಂಬಾ ಭಾವ ಪೂರ್ಣವಾಗಿ ಹಾಡಿದ್ದಾರೆ, ನೀವೊಮ್ಮೆ ಕೇಳಲೇ ಬೇಕು. ಅದರಲ್ಲಿ ಅವರು "ಸ್ತ್ರೀ ಎಂದರೆ ಅಷ್ಟೇ ಸಾಕೇ?" ಈ ಸಾಲಿನಲ್ಲಿನ "ಸ್ತ್ರೀ" ಎಂಬ ಪದವನ್ನ ಹ್ಯಾಗೆ ಎಳೆದಿದ್ದಾರೆ ಗೊತ್ತಾ! ತುಂಬಾ ಚೆನ್ನಾಗಿದೆ.

ಬಾಲವನ ಹೇಳಿದರು...

ತೇಜಸ್ವಿನಿಯವರೇ,
ಸ್ತ್ರೀ ಕವಿತೆ ನನ್ನ ಮೆಚ್ಚಿನ ಕವಿತೆ ಕೂಡ.
ಬಾಲವನದಲ್ಲಿನ ಶ್ಲೋಕಗಳಲ್ಲಿ ಕೆಲವು ತಪ್ಪಿರುವುದಾಗಿ ತಿಳಿಸಿದ್ದೀರಿ, ದಯವಿಟ್ಟು ಅವು ಯಾವುದು ಎಂದು ತಿಳಿಸಿದರೆ ಅವನ್ನು ಸರಿಪಡಿಸುತ್ತೇನೆ.

ಧನ್ಯವಾದಗಳು
ಬಾಲ.

ಅಂತರ್ವಾಣಿ ಹೇಳಿದರು...

GSS bagge naanEnu maataaDalla :)

sunaath ಹೇಳಿದರು...

ತೇಜಸ್ವಿನಿ,
ಸ್ತ್ರೀಯ ಬಗೆಗೆ ಅತಿ ಸುಂದರವಾದ ಕವನ. ನಮಗೆಲ್ಲ ಉಣಬಡಿಸಿದ್ದಕ್ಕೆ ಧನ್ಯವಾದಗಳು.
-ಸುನಾಥ ಕಾಕಾ

ಶರಶ್ಚಂದ್ರ ಕಲ್ಮನೆ ಹೇಳಿದರು...

ಅಕ್ಕಯ್ಯ,
ಈ ಕವನ ನಾನು ಬರಹಗಳನ್ನ ಬರ್ಯಕ್ಕೆ ಸ್ಪೂರ್ತಿ ನೀಡಿದ್ದು ಅಂದ್ರೆ ನಂಬುತ್ಯ?? ಈ ಕವನದ ಬಗ್ಗೆನೇ ಒಂದು ಬರಹ ಬರ್ದಿದ್ದಿ ಬ್ಲಾಗ್ ಶುರು ಮಾಡದ್ಕಿಂತ ಮುಂಚೆ. ಅದನ್ನ ಯವಗದ್ರು ಬ್ಲಾಗ್ ಅಲ್ಲಿ ಪಬ್ಲಿಶ್ ಮಾಡ್ತಿ. ಈ ಕವನದ ಬಗ್ಗೆ ಎರಡು ಮಾತು ಇಲ್ಲೇ. ನಂಗು ತುಂಬ ಇಷ್ಟ ಈ ಕವನ.

ತೇಜಸ್ವಿನಿ ಹೆಗಡೆ ಹೇಳಿದರು...

@ಸಿಮ್ಮಾ ಅವರೆ,

ಹೌದು ತುಂಬಾ ಭಾವ ಪೂರ್ಣವಾಗಿ ಹಡಿದ್ದಾರೆ ಅಶ್ವತ್ಥ್ ಅವರು. ಸದಾ ಕೇಳುತ್ತಿರುತ್ತೇನೆ. ನನ್ನ ಬಲು ನೆಚ್ಚಿನ ಹಾಡಿದು.

@ಬಾಲವನ,

ಧನ್ಯವಾದಗಳು.

@ಅಂತರ್ವಾಣಿ,

ಅವರ ಬಗ್ಗೆ ಯಾರಿಗೂ ಸುಲಭದಲ್ಲಿ ಮಾತಾಡಲಾಗದು ಶಂಕರ್ :)

@ಸುನಾಥ ಕಾಕಾ,

ಇಂತಹ ಸುಂದರ ಸರಳ ಕವನ ರಚಿಸಿ ನಮ್ಮೆಲ್ಲರ ಮನತಣಿಸಿದ ಶಿವರುದ್ರಪ್ಪನವರಿಗೆ ನಾವೆಲ್ಲಾ ಧನ್ಯವಾದ ಹೇಳಬೇಕು.
ವಂದನೆಗಳು.

@ಶರಶ್ಚಂದ್ರ ಕಲ್ಮನೆ,

ಖಂಡಿತ ನಂಬ್ತಿ.. ಇಂತಹ ಕವನ ಎಲ್ಲರಿಗೂ ಸ್ಫೂರ್ತಿ ನಿಡುವಂತದ್ದೇಯಾ.. ನಿನ್ನ ಆ ಬರಹಕ್ಕಾಗೇ ಕಾಯ್ತಾ ಇರ್ತಿ. ಆದಷ್ಟು ಬೇಗ ಹಾಕು. ಹೆಚ್ಚು ಕಾಯ್ಸಡ :)

ಸಿಂಧು sindhu ಹೇಳಿದರು...

ತೇಜಸ್ವಿನಿ,

ತುಂಬ ಒಳ್ಳೆಯ ಕವಿತೆಯನ್ನ ನೆನಪು ಮಾಡಿಕೊಟ್ಟಿದ್ದಕ್ಕೆ, ಕವಿಯ ವಿಷಯವಾಗಿ ಸರಿಯಾದ ಮಾಹಿತಿ ದೊರಕಿಸಿದ್ದಕ್ಕೆ, ಮತ್ತು ಜಿ.ಎಸ್.ಎಸ್ ಅವರ ಭಾವಚಿತ್ರಕ್ಕೆ ಧನ್ಯವಾದಗಳು.

ಆಮೇಲೆ ಅದಿತಿಯ ಸ್ವಗತ ಚೆನ್ನಾಗಿದೆ. ಖುಶಿಯಾಯ್ತು ಓದಿ.

ಪ್ರೀತಿಯಿಂದ
ಸಿಂಧು

ಭಾರ್ಗವಿ ಹೇಳಿದರು...

ತೇಜಸ್ವಿನಿಯವರೇ.
ಈ ಕವನಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು. ಈ ಮೊದಲು ನನಗೆ ಗೊತ್ತಿದ್ದ ೨ ಸಾಲುಗಳನ್ನೇ ಪದೇ ಪದೇ ಹಾಡ್ತಾ ಇದ್ದೆ(ನಿನಗೆ ಬೇರೆ ಹೆಸರು ಬೇಕೇ,ಸ್ತ್ರೀ ಎಂದರೆ ಅಷ್ಟೇ ಸಾಕೆ?). ನಿಮಗೆ ಗೊತ್ತಿದ್ದರೆ ಈ ಹಾಡು ಇರುವ ಸಿಡಿ ಅಥವಾ ಕ್ಯಾಸೆಟ್ ಹೆಸರು ಹೇಳ್ತೀರಾ ಪ್ಲೀಸ್.