ಮಂಗಳವಾರ, ಫೆಬ್ರವರಿ 5, 2008

ಹೆಜ್ಜೆಗಳು

(ಈ ಕವಿತೆಗೆ ಸ್ಪೂರ್ತಿ ಕಪ್ಪು-ಬಿಳುಪು ಬ್ಲಾಗಿನಲ್ಲಿದ್ದ ಈ ಕೆಳಗಿನ ಸುಂದರವಾದ ಚಿತ್ರ. ಈ ಚಿತ್ರ ಬಳಸಲು ಅನುಮತಿಸಿದ್ದಕ್ಕೆ ನನ್ನ ಧನ್ಯವಾದಗಳು.)

ಹೆಜ್ಜೆಗಳು




ಪಸೆಯಾರದ ಮರಳಿನೊಳು ಬೆರೆತು
ಒಂದಾಗಿ ಹುದುಗಿಯೂ ಅಡಗಿ ಅಳಿಸದೆ
ಹಸಿಯಾದ ಮನದೊಳು ಮೂಡಿದ ಭಾವದಂತೆ
ಹಸನಾಗಿ ಮೂಡಿವೆ ಯಾರ ಹೆಜ್ಜೆಗಳು?
------
ನಲುಗೆವು ಆರ ಕಾಲ್ತುಳಿತಕೂ
ಹರಡೆವು ಹೊಡೆವ ಗಾಳಿಗೂ
ಮಾಸೆವು ತೆರೆಗಳಾರ್ಭಟಕೂ
ಎನ್ನುತಿವೆ ಯಾರ ಪಾದುಕೆಗಳು?!
------
ಒಂದೆಂದರೆ ನಾ ಒಂಟಿ
ಎರಡಾದರೆ ನಾವ್ ಜಂಟಿ
ಒಂದಾದ ಮೇಲೊಂದರಂತೆ ಹುಟ್ಟಿ
ಸಾಗುವೆವು ನಮ್ಮ ಗುರುತನಿಟ್ಟಿ



25 ಕಾಮೆಂಟ್‌ಗಳು:

ಶ್ರೀನಿಧಿ.ಡಿ.ಎಸ್ ಹೇಳಿದರು...

solidala!:) mast kavana...

ತೇಜಸ್ವಿನಿ ಹೆಗಡೆ ಹೇಳಿದರು...

ತುಂಬಾ ಧನ್ಯವಾದ.. ಪ್ರೋತ್ಸಾಹಕ್ಕೆ ಹಗೂ ಉತ್ತಮ ಚಿತ್ರಕ್ಕೆ ;-)

ಶ್ಯಾಮಾ ಹೇಳಿದರು...

sundara kavana!

-Shyama

ತೇಜಸ್ವಿನಿ ಹೆಗಡೆ ಹೇಳಿದರು...

Dhanyavadagalu Shyama

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜಸ್ವಿನಿ...
ಚೆಂದ ಕವನ.

"ಒಂದೆಂದರೆ ನಾ ಒಂಟಿ
ಎರಡಾದರೆ ನಾವ್ ಜಂಟಿ
ಒಂದಾದ ಮೇಲೊಂದರಂತೆ ಹುಟ್ಟಿ
ಸಾಗುವೆವು ನಮ್ಮ ಗುರುತನಿಟ್ಟಿ" ಈ ಸಾಲುಗಳು ತುಂಬಾ ಇಷ್ಟವಾದವು.

ತೇಜಸ್ವಿನಿ ಹೆಗಡೆ ಹೇಳಿದರು...

ತುಂಬಾ ಧವ್ಯವಾದಗಳು ಶಾಂತಲ.. ಪ್ರೋತ್ಸಾಹ ಹೀಗೇ ಇರಲಿ.

ಪಯಣಿಗ ಹೇಳಿದರು...

ಮಣ್ಣ ಮೆಟ್ಟಿದ ನಿಮ್ಮ ಜ೦ಟಿ ಹೆಜ್ಜೆಯ ಗುರುತು ಗಟ್ಟಿಯಾಗಿಯೆ ಮನವ ಮುಟ್ಟಿನಿ೦ತಿದೆ...

ತೇಜಸ್ವಿನಿ ಹೆಗಡೆ ಹೇಳಿದರು...

ಧನ್ಯವಾದಗಳು ಪಯಣಿಗರೆ... ತಮ್ಮ ಪಯಣ ನನ್ನ ಬ್ಲಾಗಿನ ಕಡೆ ಸದಾ ಹೀಗೇ ಬರುತ್ತಿರಲಿ.

Shashi Dodderi ಹೇಳಿದರು...

Good one. More than that , first time I am coming acorss some one who loves most of the novels I liked, keep writing , I will make it a point to read it.

ತೇಜಸ್ವಿನಿ ಹೆಗಡೆ ಹೇಳಿದರು...

Thanks a lot Nostalgia ;-)

ಮನಸ್ವಿನಿ ಹೇಳಿದರು...

ಚಂದ ಉಂಟು ಹಾಡು.

ಅಂತರ್ವಾಣಿ ಹೇಳಿದರು...

ಅದಾರ ಹಜ್ಜೆ ಗುರುತೆಂದು ನಾ ಬಲ್ಲೆ. ನಿಮ್ಮ ಮಿತ್ರ "ಸಾಗರ" ನಿಮ್ಮೊಂದಿಗೆ ಮಾತಾಡಿ ಹೋಗುವಾಗ ಮೂಡಿದ ಹೆಜ್ಜೆ ಗುರುತು.

ತೇಜಸ್ವಿನಿ ಹೆಗಡೆ ಹೇಳಿದರು...

ಮನಸ್ವಿನಿ

ತುಂಬಾ ಧನ್ಯವಾದಗಳು.

ಜಯಶಂಕರ್

ಇರಬಹುದೇನೋ...ಅದರೂ ಖಚಿತವಾಗಿ ಹೇಳಲಾಗದು ;-) ಬರುತ್ತಿರಿ.

ಬೆಳಗು! ಹೇಳಿದರು...

ಚಂದದ ಕವನ.... :)

ಬದುಕಿನ ಪುಟಗಳಲಿ ಮೂಡಿಹ ಹೆಜ್ಜೆಯ ಗುರುತುಗಳು ಮಾಸದಿರಲಿ...

ತೇಜಸ್ವಿನಿ ಹೆಗಡೆ ಹೇಳಿದರು...

ಬೆಳಗು!
ಪ್ರೋತ್ಸಾಹಕ್ಕೆ ಧನ್ಯವಾದಗಳು.

ರಾಧಾಕೃಷ್ಣ ಆನೆಗುಂಡಿ. ಹೇಳಿದರು...

ಅಳಿಯದೆ ಉಳಿದಿದ್ದರೆ ಎಷ್ಟು ಚೆನ್ನಾಗಿತ್ತು.....
ಅಲೆಯ ಅಬ್ಬರದ ಆತಂಕ
ಅಲಿದರೆ ಇಬ್ಬರೂ ಅಲಿಯಬೇಕು
ಆಳಿದರೂ ಅಷ್ಟೇ...

sunaath ಹೇಳಿದರು...

ತುಂಬ ಸುಂದರ ಕವನ; ಅಷ್ಟೇ ಸುಂದರವಾದ ಚಿತ್ರ.

ತೇಜಸ್ವಿನಿ ಹೆಗಡೆ ಹೇಳಿದರು...

@ ಸನತ್ ಅವರೆ,

ತುಂಬಾ ಧನ್ಯವಾದಗಳು. ಪ್ರೋತ್ಸಾಹ ಹೀಗೇ ಇರಲಿ. ನಿಜ..ಸುಂದರವಾದ ಚಿತ್ರ. ಇದನ್ನು ಸೆರೆಹಿಡಿದ ಛಾಯಾಗ್ರಾಹಕನನ್ನು ಅಭಿನಂದಿಸಬೇಕು.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜು...
ಆವತ್ತು ಓದಿದ ಇದೇ ಕವನ ಇವತ್ತೂ ಓದುವಾಗ ಮತ್ತೇನನ್ನೋ ಹೇಳಿದವು. ಮುಖ ತೊಳೆದ ನೀರನ್ನಾರಿಸಿದಷ್ಟೂ ಕೆನ್ನೆಗಳು ಆರ್ದ್ರ.

Yogesh Bhat ಹೇಳಿದರು...

E kavana tumba ista aytu, chikkadu but barthi yochne mado hange madthu.
Nange Ramakrishna Hegde avru link kotru(same officuuu:))...

ತೇಜಸ್ವಿನಿ ಹೆಗಡೆ ಹೇಳಿದರು...

@ಶಾಂತಲ,

ಎಂತ ಹೇಳವು ಹೇಳೇ ಗೊತ್ತಗ್ತಿಲ್ಲೆ!

@ಯೋಗೇಶ್ ಅವರೆ,

ಮಾನಸಕ್ಕೆ ಸ್ವಾಗತ. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಆಗಾಗ ಮಾನಸಕ್ಕೆ ಬರುತ್ತಿರಿ. ಪ್ರೋತ್ಸಾಹ ಹೀಗೇ ಇರಲಿ...

Sudi ಹೇಳಿದರು...

ಸುಂದರವಾದ ವರ್ಣನೆ "ಹಸಿಯಾದ ಮನದೊಳು ಮೂಡಿದ ಭಾವದಂತೆ" ಈ ಸಾಲುಗಳು ಹೆಜ್ಜೆಗಳು ಮೂಡುವ ಪರಿಯನ್ನು ಮನದಲಿ ಮೂಡುವ ಬಾವನೆಗೆ ಹೋಲಿಕೆ..

- ಸುಧಿ

ತೇಜಸ್ವಿನಿ ಹೆಗಡೆ ಹೇಳಿದರು...

@ಸುಧಿ,
ತುಂಬಾ ಧನ್ಯವಾದಗಳು. ಭೇಟಿ ಕೊಡುತ್ತಿರಿ.

ಅನಾಮಧೇಯ ಹೇಳಿದರು...

very nice poem

ತೇಜಸ್ವಿನಿ ಹೆಗಡೆ ಹೇಳಿದರು...

@ವಿಜಯ್ ರಾಜ್ ಅವರೆ,

ಮಾನಸಕ್ಕೆ ಸ್ವಾಗತ. ತುಂಬಾ ಧನ್ಯವಾದಗಳು. ಭೇಟಿ ಕೊಡುತ್ತಿರಿ.