ಭಾನುವಾರ, ಜನವರಿ 13, 2008

ಸುಪ್ತಾಗ್ನಿ


ಪ್ರತಿಯೊಬ್ಬನೊಳಗೂ ಸುಪ್ತಾಗ್ನಿಯು ಇದ್ದೇ ಇರುತ್ತದೆ (ಅದು ಬೇರೆ ಬೇರೆ ಭಾವದಲ್ಲಿಯೇ ಆಗಿರಬಹುದು). ಸುಪ್ತಾಗ್ನಿಯ ಅನುಭವ ಅನುಭವಿಸುವವನಿಗೇ ಗೊತ್ತು. ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದಾದರೂ ಕವನ ರೂಪದಲ್ಲಿ ಆಂಶಿಕವಾಗಿ ಕಾಣಿಸುವ ಒಂದು ಚಿಕ್ಕ ಯತ್ನ.

2 ಕಾಮೆಂಟ್‌ಗಳು:

ಶಿವಪ್ರಕಾಶ್ ಹೇಳಿದರು...

ದಯವಿಟ್ಟು ಕ್ಷಮಿಷಿ. ನನಗೆ ಕನ್ನಡದ ಬಹಳ ಪದಗಳು ಗೊತ್ತಿಲ್ಲ.
"ಸುಪ್ತಾಗ್ನಿ" ಎಂದರೆ ಏನು?

ತೇಜಸ್ವಿನಿ ಹೆಗಡೆ ಹೇಳಿದರು...

ಶಿವಪ್ರಕಾಶ್ ಅವರೆ,

ಮೊದಲಿಗೆ, ನನ್ನ ಕವಿತೆಗಳನ್ನು ಓದಿ ಪ್ರತಿಯೊಂದಕ್ಕೂ ಮೆಚ್ಚಿ ಪ್ರತಿಕ್ರಿಯೆ ಹಾಕಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.(ಅದಿತಿಯ ಪರವಾಗಿಯೂ ಕುಡಾ :) )

"ಸುಪ್ತಾಗ್ನಿ" ಎಂದರೆ ಒಳಗಿನ ಕಿಚ್ಚು. ಮರದೊಳಗೂ ಸುಪ್ತಾಗ್ನಿ ಇರುತ್ತದೆ. ಆದರೆ ಅದು ಪ್ರಕಟವಾಗಲು ಒಂದು ಕಿಡಿಯೋ ಇಲ್ಲಾ ಇನ್ನಾವುದೋ ಘರ್ಷಣೆಯೋ ಬೇಕಾಗುತ್ತದೆ. ಅಲ್ಲಿಯವರೆಗೂ ಅದು ಬೂದಿ ಮುಚ್ಚಿದ ಕೆಂಡದಂತಿರುತ್ತದೆ. ಇದೇ ರೀತಿ ನಮ್ಮೊಳಗೂ ಅಂದರೆ ಮನುಷ್ಯನೊಳಗೂ ಒಡಲಾಳದಲ್ಲಿ ಹಲವಾರು ಭಾವನೆಗಳ ತಾಕಲಾಟದ ನಡುವೆ ಒಂದು ಕಿಚ್ಚು ಮುಚ್ಚಿರುತ್ತದೆ. ಎಂದಾದರೂ ಅದು ಹೊರ ಬರುವಂತಿದ್ದರೂ ಒಳಗೊಳಗೆ ನಮ್ಮನ್ನು ಸುಡುತ್ತಿರುತ್ತದೆ. ಇಂತಹ ಒಂದು ವರ್ಣಿಸಲದಳ ಅನುಭೂತಿಗೇ ಸುಪ್ತಾಗ್ನಿ ಎನ್ನುವುದು.

ನಿಮಗೆ ಅರ್ಥವಾಗಿದೆ ಎಂದೆಣಿಸುವೆ. ಮತ್ತೊಮ್ಮೆ ಧನ್ಯವಾದಗಳು.