ಶುಕ್ರವಾರ, ಮಾರ್ಚ್ 7, 2014

ತೇನ ವಿನಾ

ಈ ಕ್ಷಣದ ನೋವಿಗೆ ಮರು ಕ್ಷಣದ ನಲಿವಿನ ಲೇಪ
ನಗುವರಳುವ ಮುನ್ನವೇ ಹನಿಯುವ ಕಣ್ಣಾದೀಪ
ಹೂಮಾಲೆಯೊಳಗವಿತಿರುವ ಮುಳ್ಳುಗಳ ಭೀತಿ
ಬಿಟ್ಟೂ ಬಿಡದಿರುವ ಮಾಯೆಯ ಪ್ರೀತಿ

ಮುಗ್ಗರಿಸಿ ಬಿದ್ದಾಗೆಲ್ಲಾ ಬಡಿದೆಬ್ಬಿಸುವ ಬಲವೇ
ಮುಳುಗೇಳುವ ಪರಿಯ ಕಲಿಸುವ ಗುರುವೇ
ವಿಮುಖಿಯಾದಾಗೆಲ್ಲಾ ಜೀವನ್ಮುಖಿಯಾಗಿಸಿ
ನನ್ನೊಳಗಿನಾ ಛಲವ ಉದ್ದೀಪನ ಗೊಳಿಸಿ

ನೀನಾರೆಂದರಿಯ ಹೊರಟವಗೆ ಕಗ್ಗಂಟಾಗಿ,
ತರ ತರ ವಿಧ ವಿಧ ಬಣ್ಣವ ಬದಲಿಸಿ,
ನಿನ್ನ ನೆಚ್ಚಿದವರ ಕೈ ಬೀಸಿ ಕರೆದಪ್ಪಿ
ಸಲಹುವ ಓ ಬದುಕೇ ನಾ ನಿನ್ನ ಶರಣಾರ್ಥಿ.

-ತೇಜಸ್ವಿನಿ.

4 ಕಾಮೆಂಟ್‌ಗಳು:

Dileep Hegde ಹೇಳಿದರು...

ಚೆನ್ನಾಗಿದೆ ಕವಿತೆ..

Swarna ಹೇಳಿದರು...

e sindagi gale lagaa le....chennagide nimma kavana

sunaath ಹೇಳಿದರು...

ಬದುಕಿನ ಛಲ, ಗುರುವಿನಲ್ಲಿರುವ ಶ್ರದ್ಧೆ ಇವೆರಡರ ಸಮವಾದ ಸಮಾಗಮವು ಈ ಚಿಕ್ಕ, ಚೊಕ್ಕ ಪ್ರಾಥನೆಯಲ್ಲಿ ಬಿಂಬಿತವಾಗಿದೆ.

Sanju ಹೇಳಿದರು...

ಕಾಣದ ಶಕ್ತಿಗೆ ತೊಳಲಾಟ ಇಷ್ಟವಾಯಿತು ..