ಸೋಮವಾರ, ಜನವರಿ 16, 2012

ಬಾ ತಂಗಿ ಊರಿಗೆ ಬರಗಿದ್ದೆ ಇರಡ....


ಸೋಗೆಮನೆ ಶೀನುಮಾವಂಗೊಂದೇ ಚಿಂತೆ ಮನ್ಸೊಳ್ಗೆ
ಗನಾದೊಂದು ಕೂಸು ಬೇಕು ಮನೇಲಿಪ್ಪ ಮಗಂಗೆ

ಕಾಲೇಜ್ ಮುಖ ಕಂಡವ್ಕೆಲ್ಲಾ ಬರೀ ಕನ್ಸು ಪ್ಯಾಟಿದೇ
ಊರು ಬ್ಯಾಡ, ಕೇರಿ ಬ್ಯಾಡ, ಕಾಣುದೊಂದು ಬೆಂಗ್ಳೂರೇ!

ಲವ್ವು-ಗಿವ್ವು ಮಾಡೋ ಯೋಚ್ನೆ ಇದ್ದವೆಲ್ಲಾ ಕೇಳ್ಕಳಿ
ಮೊದ್ಲೇ ಎಲ್ಲಾ ಸ್ಕೆಚ್ ಹಾಯ್ಕಂಡು ಹುಡ್ಗಿ ನೋಡಿ ಇಟ್ಕಳಿ

ಬರ್ಗಾಲ್ ಬಂದ್ರೂ ತೊಂದ್ರೆಯಿಲ್ಲೆ ಬಾವಿ ತೋಡಿ ಬದ್ಕಲಕ್ಕು
ಹೆಣ್ಣ್ ಸಿಗದೇ ಕಷ್ಟ ಆದ್ರೆ ಹೇಂಗೆ ವಂಶ ಬೆಳೆಸಕ್ಕು?

ಯಂಗ್ಳ ಕಾಲದ್ ಗಂಡಿಗೇನು ಕಡ್ಮೆ ಡೌಲು ಇದ್ದಿತ್ತಾ?
ಈಗ್ಮೇಲೆ ಕೆಳ್ಗೆ ನೋಡ್ತೋ, ಮೊದ್ಲು ಸೊಕ್ಕು ಕಡ್ಮಿತ್ತಾ?

ಅದ್ಕೊಂದ್ಕಾಲ, ಇದ್ಕೊಂದ್ಕಾಲ ಸುಮ್ನೆ ದೇವ್ರು ಮಾಡಿದ್ನಾ?
ಹಿಂದಿದ್ ತಿಳ್ಕಂಡ್ ಮುಂದಿದ್ ಯೋಚ್ಸಿ ಚೆನ್ನಾಗ್ ಬಾಳ್ಸಿ ಜೀವ್ನನಾ

-ತೇಜಸ್ವಿನಿ ಹೆಗಡೆ.

------


ಈ ಕವಿತೆಯನ್ನು ಪ್ರತಿಬಿಂಬ ೨೦೧೨- ಏಪ್ರಡಿಸಿದ್ದ ಹವಿಗವನ ಸ್ಪರ್ಧೆಗಾಗಿ ಬರೆದು ಕಳಿಸಿದ್ದು... ಹವ್ಯಕದಲ್ಲಿ ಕವಿತೆ ಬರೆಯುತ್ತಿರುವುದು ಇದೇ ಮೊದಲ ಪ್ರಯತ್ನ.... ನೂತನ ಅನುಭವವನ್ನು ನೀಡಿತು :)


ಹವಿಗಥಾ ಸ್ಪರ್ಧೆಯಲ್ಲಿ ನನ್ನ "ಇದ್ದಲ್ಲೇ ಇಡು ದೇವ್ರೆ" ಕಥೆಗೆ ಪ್ರಥಮ ಬಹುಮಾನ ದೊರಕಿದೆ :)



ಜನವರಿ ೧೩ಕ್ಕೆ ನನ್ನ ಬ್ಲಾಗ್ ಮರಿ "ಮಾನಸ" ಹುಟ್ಟಿ ವರುಷಗಳಾದವು :)



17 ಕಾಮೆಂಟ್‌ಗಳು:

sunaath ಹೇಳಿದರು...

ತೇಜಸ್ವಿನಿ,
ನಿಮ್ಮ ಕವನ ಬಹಳ ಮಜಾ ಕೊಟ್ಟಿತು. ಹವ್ಯಕ ಆಡುನುಡಿಯಾದರೂ ಸಹ, ಎಲ್ಲರಿಗೂ ಅರ್ಥವಾಗುವಂತಿದೆ.ಕವನದ ರಿದಮ್ ಚೆನ್ನಾಗಿದೆ. ಖುಶಿಯಿಂದ ಹಾಡಿಕೊಂಡು ಓದಿದೆ.
ನೀವು ಪ್ರಥಮ ಬಹುಮಾನ ಪಡೆದದ್ದಕ್ಕೆ ಅಭಿನಂದನೆಗಳು. ಆ ಕತೆಯನ್ನೂ ಸಹ, ಎಲ್ಲರಿಗೂ ತಿಳಿಯುವಂತೆ, ಸ್ವಲ್ಪ ತಿಳಿಗೊಳಿಸಿ ಇಲ್ಲಿ ಪ್ರಕಟಿಸಲು ಕೋರುತ್ತೇನೆ.
ಸಂಕ್ರಮಣದ ಶುಭಾಶಯಗಳು.

ಚಿತ್ರಾ ಹೇಳಿದರು...

ಪ್ರಥಮ ಪ್ರಯತ್ನ ಅದ್ರೆಂತ ಆತು ? ರಾಶಿನೇ ಚೊಲೋ ಇದ್ದು. ಸದ್ಯದ ಪರಿಸ್ಥಿತಿಗೆ ಹಿಡಿದ ಕನ್ನಡಿ .

ತೇಜು ,ಹೃದಯಪೂರ್ವಕ ಅಭಿನಂದನೆಗಳು . ಬಹುಮಾನಕ್ಕೂ ಹಾಗೂ ಮಾನಸಕ್ಕೂ !

Swarna ಹೇಳಿದರು...

ಪದ್ಯ ಲಾಯಕ್ಕಿದ್ದು ಮೇಡಂ.
ಅಭಿನಂದನೆಗಳು
Swarna

ಮನಸು ಹೇಳಿದರು...

ಕವನ ತುಂಬಾ ಚೆನ್ನಾಗಿದೆ ಹೊಸ ಶೈಲಿ ಅನ್ನಿಸಿತು ... ಅಭಿನಂದನೆಗಳು ಸ್ಪರ್ಧಾ ಕಥೆ ಓದುವ ಅವಕಾಶ ಕಲ್ಪಿಸಿಕೊಡಿ

ಚುಕ್ಕಿಚಿತ್ತಾರ ಹೇಳಿದರು...

ತೇಜಸ್ವಿನಿ..

ಕವಿತೆ ಚೊಲೋ ಇದ್ದು..
ಅಭಿನ೦ದನೆಗಳು.. ಮಾನಸದ ಹುಟ್ಟುಹಬ್ಬ ಮತ್ತು ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕೆ..:))

ಸುಮ ಹೇಳಿದರು...

ಕವಿತೆ ಇಷ್ಟ ಆತು...ಅಭಿನಂದನೆಗಳು :)

Badarinath Palavalli ಹೇಳಿದರು...

ಮೇಡಂ, ಅಭಿನಂದನೆಗಳು.

ದಯಮಾಡಿ ನಮಗಾಗಿ ಇದನ್ನು ಕನ್ನಡೀಕರಿಸಿ ಕೊಡ್ತೀರಾ/

ನನ್ನ ಬ್ಲಾಗಿಗೂ ಸ್ವಾಗತ...

ಸಿಂಧು sindhu ಹೇಳಿದರು...

:) ganaagiddu.

preetiyinda,sin

ಪ್ರವರ ಕೊಟ್ಟೂರು ಹೇಳಿದರು...

ನಮ್ಗಂತು ಅರ್ಥ ಆಯ್ತಲ್ಲ........ ನಿಮ್ಮ ಕವಿತೆ ಬಹಳ ಚಂದ ಉಂಟು ಮಾರಾಯರೆ..... ಓದುತ್ತಾ ಹೋದರೆ ಖುಷಿಯಾಗ್ತದೆ....

ಜಲನಯನ ಹೇಳಿದರು...

ತೇಜಸ್ವಿನಿ ಚಲೋ ಇದ್ದು..
ಪ್ಯಾಟಿಕಡೀಕ್ ಓಗ್ಮಾ
ಅನ್ನೋ ಪ್ಯಾಟೆ ಹುಚ್ಚಿನ ಬಗ್ಗೆ ಹವ್ಯಕ(ಹಳ್ಳಿಕ) ಆಡು ಭಾಷೆ ಕವ್ನ ಬೋ ಪಸಂದಾಗೈತ್ಕಣೇಳಿ....

ಸಾಗರದಾಚೆಯ ಇಂಚರ ಹೇಳಿದರು...

Hey cholo baradye, olle padya

havyaka bhaashe cholo use maadidde khushi atu

aadare samasyege uttara maatra sigadu yavagalo alda?

V.R.BHAT ಹೇಳಿದರು...

ಹವ್ಯಕ ಸಮಾಜ ಪ್ರಸಕ್ತ ಎದುರಿಸುತ್ತಿರುವ ಪ್ರಬಲ ಸಮಸ್ಯೆಯೊಂದನ್ನು ಕವನ ಬಿಂಬಿಸಿದೆ, ನಾಲ್ಕನೇ ವರ್ಷ ಪೂರೈಸಿದ ’ಮಾನಸ’ಳಿಗೆ ಹಾಗೂ ಸ್ಪರ್ಧೆಗಳಲ್ಲಿ ವಿಜಯಿಯಾಗಿದ್ದಕ್ಕೆ ಅಭಿನಂದನೆಗಳು.

Shruthi B S ಹೇಳಿದರು...

ಹವ್ಯಕದಲ್ಲಿ ಕವಿತೆ ಬರೆದಿದ್ದು ತು೦ಬಾ ಇಷ್ಟ ಆತು.........

nsru ಹೇಳಿದರು...

ತುಂಬ ಚೆನ್ನಾಗಿದೆ ಅಕ್ಕ..ಒಳ್ಳೆ ಪ್ರಯೋಗ..ಸೊಗಡಿನ ಭಾಷೆ..
ವಸ್ತುಸ್ಥಿತಿಯನ್ನು ಚೆನ್ನಾಗಿ ಬಿಂಬಿಸಿದೆ...
Double Congratzz ನಿಮ್ಮ ಸಾಧನೆಗೆ :)
'ಮಾನಸ' ನಮ್ಮ ಮನ್ನಸ್ಸಿನಲ್ಲಿ ನೆಲೆಸಿದೆ..ಶುಭವಾಗಲಿ!!

ವಿ.ರಾ.ಹೆ. ಹೇಳಿದರು...

:)

Pramod P T ಹೇಳಿದರು...

MaanasaLigoo, nimagoo abhinandanegaLu. padya sooper:)

Sushma Sindhu ಹೇಳಿದರು...

@ ತೇಜಸ್ವಿನಿ ಮೇಡಮ್ ಚೆನ್ನಾಗಿದೆ. ಭಾಷೆಯೇ ಮುದ ನೀಡುವ೦ತಿದೆ. ನಿಮ್ಮ ಬ್ಲಾಗ್ ಹುಟ್ಟಿದ ಹಬ್ಬಕ್ಕೆ ತಡವಾಗಿ ಶುಭಾಶಯಗಳು :)