ಗುರುವಾರ, ಜುಲೈ 7, 2011

ತಾಯಿಬೇರನರಸಿ...

ಹೊರಗಿನ ಧೋ ಮಳೆಯ ಪೈಪೋಟಿಗೆ ನಿಂತ
ಒಳಗಿನ ದೊಡ್ಡ ಗಂಟೆಯ ಸದ್ದು,
ಹೊರಬಿದ್ದರೆ ಸಾಕು ನಿಂತ ಕೆನ್ನೀರಿನೊಳಗೆ
ಪುಟ್ಟ ಪುಟ್ಟ ಚುಕ್ಕಿಗಳ ಸಾಲು..

ಒಂದು ಹೊಂಡದೊಳಗೊಂದು ಕಾಲು
ಮತ್ತೊಂದರಲ್ಲೊಂದು ಚಪ್ಪಲ್ಲು
ಬಟ್ಟೆ ತುಂಬಾ ಕೆಂಪು ಚುಕ್ಕಿ
ಮೊಗದ ತುಂಬಾ ನಗೆಯ ಹುಕ್ಕಿ

ಅಪ್ಪನ ಗದರುವಿಕೆಗೆ ಬೆದರಿ,
ಬಿಮ್ಮನೆ ಧರಿಸಿ ಕುಳಿತ ರೈನ್‌ಕೊಟು,
ಕದ್ದು ಮೆಲ್ಲನೆ ಮೊಗವ ಮೇಲನೆತ್ತಿ
ಮಳೆಗೆ ಒಡ್ಡುವ ಹುಚ್ಚು ಮನಸು

‘ಅ, ಆ, ಇ, ಈ’ ಎನ್ನುವ ಆ ಪಾಠ
‘ಎ, ಬಿ, ಸಿ ಡಿ’ ಎನ್ನುತಿವೆ ಈ ಪಾಠ
ನೋಟ ಬೇರೆ, ಆಟ ಬೇರೆ, ಮನದೊಳಗಿನ-
ನಸುನಗೆಯ ತುಂಬಾ ಕರಿಮೋಡಗಳ ಛಾಯೆ!

ಬೇಕಾಗಿದೆ ನನ್ನಂತಹ ಪುಟ್ಟ ಶಾಲೆಯೊಂದು
ನಲಿಯುತ ಕಲಿಯಲು, ಕಲಿತು ಕುಣಿಯಲು
ಹೂವಿನ ನಗುವನರಸಿ ಅರಳಲು,
ಬೇರು ಒಳ ಇಳಿದು ಮೇಲ್ ಜಿಗಿಯಲು...

-ತೇಜಸ್ವಿನಿ ಹೆಗಡೆ.

10 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಚೆನಾಗಿದ್ದು ತೇಜಸ್ವಿನೀ.
ಆ ಶಾಲೆ ಆ ಶಾಲೆಯೇ. ಈ ಶಾಲೆ ಈ ಶಾಲೆಯೇ.
ಈಗ ಆ ಶಾಲೆನೂ ಈ ಥರ ಮಾಡಕ್ಕೂ ಹೇಳದೇ ದಿನಾ ಪೇಪರ್ರಲ್ಲಿ ದೊಡ್ ವಿಷ್ಯ.
ಹಳೇದು ಮುಗತ್ತು. ನೆನಪಲ್ಲಿ ಮಾತ್ರ ಹಚ್ಚ ಹಸಿರಾಗಿರ್ತು.
ಕವಿತೆ ಚೆನಾಗಿದ್ದು. ಮತ್ತು ನಿನ್ನ ಮುಗ್ಧ ಆಶಯವೂ.

ಬೇರು ಒಳ ಇಳಿದು ಮೇಲ್ ಜಿಗಿಯಲು - ನಂಗೆ ರೂಟ್ಸ್ ಟು ವಿಂಗ್ಸ್ ನೆನ್ಪಾಗ್ತಾ ಇದ್ದು. :)
-ಪ್ರೀತಿಯಿಂದ,ಸಿಂಧು

Subrahmanya ಹೇಳಿದರು...

ಮನದ ಭಾವನೆಗಳನ್ನು ಕವನದ ರೂಪದಲ್ಲಿ ವ್ಯಕ್ತಪಡಿಸಿರುವ ಪರಿ ಚೆನ್ನಾಗಿದೆ.

ಜಲನಯನ ಹೇಳಿದರು...

ಮಳೆಯ ಹಳೆಯ ನೆನಪುಗಳ ಮೆಲುಕು..ನಿಮ್ಮ ಕವನದ ಪಲುಕು ..ಭಾವವನ್ನು ಪದಗಳಲ್ಲಿ ಸೋಸಿಬಿಟ್ಟ ಸಾಲುಗಳು ಇಷ್ಟವಾದವು ಅವುಗಳಲ್ಲಿ
ಅಪ್ಪನ ಗದರುವಿಕೆಗೆ ಬೆದರಿ,
ಬಿಮ್ಮನೆ ಧರಿಸಿ ಕುಳಿತ ರೈನ್‌ಕೊಟು,
.....ಬಹಳ ಇಷ್ಟವಾದ ಸಾಲುಗಳು
ತೇಜಸ್ವಿನಿ...ಬಾಲ್ಯಕ್ಕೆ ಕೊಂಡ್ಯೊಯ್ದ ನಿಮ್ಮ ಕವನಕ್ಕೆ ಧನ್ಯವಾದ

sunaath ಹೇಳಿದರು...

ತುಂಬ ಚೆನ್ನಾಗಿದೆ ಕವನ. ಆದರೆ ಆ ಕಾಲವೀಗ ಮುಗಿದು ಹೋಗಿದೆ. ಹೊಸ ಕಾಲ ಹೇಗಿದ್ದರೂ, ಈ ಕಾಲದಲ್ಲಿಯೇ ಬದುಕಬೇಕು!

KalavathiMadhusudan ಹೇಳಿದರು...

tejasviniyavare,nimma
kavana chennaagide,
haage nimma blog seen
tumbaa ishtavaayitu.

ಚುಕ್ಕಿಚಿತ್ತಾರ ಹೇಳಿದರು...

tumbaa ishtavaaytu..kavite..

nsru ಹೇಳಿದರು...

ಅರ್ಥಪೂರ್ಣ ಸಾಲುಗಳು ತೇಜಕ್ಕ....ಕಳಕಳಿ, ಆಶಯ ನಿಚ್ಚಳವಾಗಿದೆ...
ನಮ್ಮ ಶ್ರೀಮಂತ ಸಂಸ್ಕೃತಿ, ನಮ್ಮ ಅಭಿಮಾನದ ದ್ಯೋತಕವಾದ ಕನ್ನಡ ಶಾಲೆಗೆ ಜೈ...ಈಗ ಶಾಲೆಯಲ್ಲಿ ಸಾಧ್ಯವಾಗದಿದ್ದರೂ ಮನೆಯಲ್ಲಿ ಅಂಥ ವಾತಾವರಣ ಇರಬೇಕಿದೆ....

Pramod P T ಹೇಳಿದರು...

ತುಂಬಾನೆ ಚೆನ್ನಾಗಿದೆ ಕವನ. ಸರಿ ನೀವ್ ಹೇಳಿದ್ದು ಬೇಕು ಅಂತ ಪುಟ್ಟ ಶಾಲೆ!

ತೇಜಸ್ವಿನಿ ಹೆಗಡೆ ಹೇಳಿದರು...

ಕವಿತೆಯನ್ನು ಮೆಚ್ಚಿ ಸ್ಪಂದಿಸಿ, ಪ್ರೀತ್ಸಾಹಿಸಿದ ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು.
-ತೇಜಸ್ವಿನಿ ಹೆಗಡೆ.

ಸೀತಾರಾಮ. ಕೆ. / SITARAM.K ಹೇಳಿದರು...

ತಮ್ಮ ಬಾಲ್ಯದ ಅನುಭೂತಿ ಇನ್ನು ಬೆಚ್ಚಗಿಟ್ಟು ಹಂಚುತ್ತಿರುವ ಪರಿ ನಿಜಕ್ಕೂ ಅದ್ಭುತ. ತಮ್ಮ ಶಾಲೆಯ ನೆನಪನ್ನು ಪುತ್ತಿಯನ್ನು ಶಾಲೆಗೇ ಕಲಿಸುವ ಸಂಧರ್ಭದಲ್ಲಿ ಎರಡನ್ನು ಸಮೀಕರಿಸುತ್ತಾ ತಮ್ಮ ನೆನಪನ್ನು ಹರುಹಿದ ಪರಿ ನಿಜಕ್ಕೂ ಅದ್ಭುತ.