ಗುರುವಾರ, ಜುಲೈ 14, 2011

ಇಳಿಸಂಜೆಯ ಕನವರಿಕೆ

ಮುಚ್ಚಿರುವ ಎವೆಗಳ ಹಿಂದೆ
ಗತದಿನಗಳದ್ದೇ ಸಿಹಿ-ಕಹಿ ನೆನಪು
ಸಿಗದ ಸಂತಸದ ಕ್ಷಣಗಳ ಮೆಲುಕು,
ಮುಪ್ಪಲ್ಲೂ ಕಾಡುವುದು ಸವಿಗನಸು

ಸುಕ್ಕುಗಟ್ಟಿದ ಚರ್ಮ, ದೇಹಕ್ಕಂಟಿಹುದು
ವಯಸಿನ ಲೆಕ್ಕಾಚಾರ ಒಮ್ಮೊಮ್ಮೆ
ಈ ಮನಸಿಗಂತೂ ಸಿಗದು..

ನೆರೆತ ಕೂದಲುಗಳ ಸಿಕ್ಕು
ಬಿಡಿಸುವಾಗೆಲ್ಲಾ ಮಬ್ಬು ಮಬ್ಬು
ಕೊರಳೊಳಗಿನ ಒಂಟಿ ಸರದೊಳು
ಹುಡುಕುತಿವೆ ಕಪ್ಪು ಮಣಿಗಳನೇ
ಅದುರುವ ಕೈಬೆರಳುಗಳು.

ಹಿಂತಿರುಗಿದಷ್ಟೂ ಭೂತಗಳದೇ ಕಾಟ
ಭವಿತವ್ಯದ ಕೊನೆಹೆಜ್ಜೆಯತ್ತ
ಸಾಗುತಿದೆ ಇಳಿಸಂಜೆಯ ಈ ಪಯಣ...
ಇಂದು ಮಾತ್ರ ಒಳ ಹೊರಗೆಲ್ಲಾ,
ತುಂಬಿಹುದು ಬರೀ ಶೂನ್ಯ.

--ತೇಜಸ್ವಿನಿ ಹೆಗಡೆ.

10 ಕಾಮೆಂಟ್‌ಗಳು:

dinesh ಹೇಳಿದರು...

ನಿಮ್ಮ ಇತ್ತೀಚಿನ ಕವನಗಳು ತುಂಬಾ ಚೆನ್ನಾಗಿವೆ....

ಮನಸು ಹೇಳಿದರು...

ತುಂಬಾ ಚೆನ್ನಾಗಿದೆ ಕವನ... ಬದುಕೇ ಹಾಗೆ ಕನವರಿಸಲೇ ಬೇಕಾಗುತ್ತೆ...

ವಾಣಿಶ್ರೀ ಭಟ್ ಹೇಳಿದರು...

chandiddu :)

ಸುಮ ಹೇಳಿದರು...

ಚೆನ್ನಾಗಿದೆ ಕವನ ತೇಜಸ್ವಿನಿ.

ಪ್ರವರ ಕೊಟ್ಟೂರು ಹೇಳಿದರು...

chennagide kavana....

Subrahmanya ಹೇಳಿದರು...

ಸರಳ ಭಾವದಲ್ಲಿ ವ್ಯಕ್ತಪಡಿಸಿದ್ದು ಚೆನ್ನಾಗಿದೆ, ಕವನದ ಮಟ್ಟಿಗೆ. ಬದುಕಿಗೆ ಈ ನಿರಾಸೆ ಸಲ್ಲ !

sunaath ಹೇಳಿದರು...

Wonderful poem!

ತೇಜಸ್ವಿನಿ ಹೆಗಡೆ ಹೇಳಿದರು...

ದಿನೇಶ್ ಅವರೆ,

ತುಂಬಾ ಧನ್ಯವಾದಗಳು.

ಮನಸು,

ಹೌದು... ಬದುಕೊಂದು ಕನವರಿಕೇ ಸರಿ ಒಮ್ಮೊಮ್ಮೆ... ತುಂಬಾ ಧನ್ಯವಾದಗಳು :)

ವಾಣಿ,

ಥ್ಯಾಂಕ್ಸು :)

ಸುಮ, ಪ್ರವರ ಕೆ.ವಿ.,

ತುಂಬಾ ಧನ್ಯವಾದಗಳು.

ಸುಬ್ರಹ್ಮಣ್ಯ ಅವರೆ,

ಸ್ಪಂದನೆಗೆ ತುಂಬಾ ಧನ್ಯವಾದಗಳು. ಇದು ನಿರಾಸೆಯಲ್ಲಾ.. ನಿರ್ಲಿಪ್ತತೆ. ಆಶಾಕಿರಣವೂ ಜೊತೆಯಲ್ಲಿದೆ.. ಆದರೆ ಅಂತಿಮ ಪಯಣದತ್ತ ಒಂಟಿ ಹೆಜ್ಜೆ ಇಡುವಾಗ ಮೂಡುವ ಒಂದು ತರಹದ ಶೂನ್ಯಭಾವದ ಕನವರಿಕೆಯಷ್ಟೇ.. ಕಲ್ಪನೆ/ವಾಸ್ತವ ಎರಡೂ :)

Raghu ಹೇಳಿದರು...

Chennagide kavana.
:)

-Raghu

ಸೀತಾರಾಮ. ಕೆ. / SITARAM.K ಹೇಳಿದರು...

ಇಳಿಸಂಜೆಯ ಮನದ ದುಗುಡ ಚೆನ್ನಾಗಿ ಚಿತ್ರೀಸ್ದ್ದಿರಾ... ಬೂತದ ಭೂತಗಳ ಕನವರಿಕೆ ಜೊತೆ ಇಹಿ ನೆನಪುಗಳು ಸೇರಿದ್ದಾರೆ ಚೆಂದಿತ್ತು...