ಬುಧವಾರ, ಸೆಪ್ಟೆಂಬರ್ 1, 2010

ಶಕ್ತಿಯ ಕೊಡು ಹೇ ಪ್ರಭು...

ನಿನಗೆ ಉತ್ತಮರೆಂದರೆ ಬಲು ಇಷ್ಟವಂತೆ
ನಾಲ್ಕು ಮಂದಿಗೆ ಅನ್ನ ಹಾಕುವವರು,
ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವವರು,
ಸದಾ ಹಸನ್ಮುಖಿಗಳು, ಮೃದು ಮಾತುಗಾರರು,
ಅನ್ಯಾಯ ಬಗೆಯದವರು, ಅಕ್ರಮ ಸಹಿಸದವರು,
ನಿನ್ನ ನಾಮವ ಜಪಿಸುತ, ನಿನ್ನ ನಂಬಿದವರು,
ಇಂಥವರೇ ನಿನಗೆ ಬಲು ಇಷ್ಟವಂತೆ....

ಆದರೆ...

ನಿನಗಿಂತಲೂ ಪ್ರೀತಿಸುವ, ಅವರ ಸ್ವಂತದವರು
ನಿನಗೇಕೆ ಕಾಣಲಿಲ್ಲವೋ? ನೀ ಸ್ವಾರ್ಥಿಯೋ?!
ಕರುಣಾಳು ಬಾ ಬೆಳಕೆ... ಎಂದು
ಸದಾ ನಿನ್ನ ಕರೆಯಬೇಕೆಂದಿದ್ದರೆ ಹೇಳು..
ನಿನ್ನಿಷ್ಟದವರ ಬಾಯಿಂದಲೇ
ಒಂದೇನು! ನೂರು ಬಾರಿ ಹೇಳಿಸಿಯೇನು....

ಆದರೆ....

ದಯಮಾಡಿ ಕೊಟ್ಟುಬಿಡು ಮತ್ತೆ
ಅವರ ಸ್ವತ್ತ ಅವರಿಗೆ ನೀ ಹೇ ದೇವ
ನಿನ್ನಿಷ್ಟದ ಆತ್ಮ ಅವರ ಅಂತರಾತ್ಮವೂ ಹೌದು
ಕಸಿದುಕೊಂಡು ನೀ ಏನು ಪಡಿದೀಯೇ?
ಕೊಟ್ಟು ಬಿಡು ನಿಜ ಧೈರ್ಯ-ಸ್ಥೈರ್ಯವ
ಬಾಳಬೇಕಿದೆ ಉಳಿದು ಹೋದವರು,
ನಿನ್ನ ಮೇಲಿರುವ ನಂಬಿಕೆಗಾಗಿ....

[ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ತೀರಿ ಹೋದ ನನ್ನ ಆತ್ಮೀಯ, ಅತ್ಯಂತ ಆಪ್ತ ಹಾಗೂ ಪ್ರೀತಿಯ ಚಿಕ್ಕಪ್ಪ ಜಿ.ಎನ್.ಭಟ್(ನನ್ನ ತಂದೆಯವರ ಕಿರಿಯ ತಮ್ಮ) ಅವರಿಗಾಗಿ ಅರ್ಪಿತ ಈ ಕವನ...:( ಸಾವು ಅನಿವಾರ್ಯ, ಆದರೆ ದುರ್ಮರಣ ಅನ್ಯಾಯ...ಅದರ ನೋವೂ ಅಷ್ಟೇ ತೀವ್ರ ಹಾಗೂ ನಿರಂತರ.....:( ]

-ತೇಜಸ್ವಿನಿ ಹೆಗಡೆ.

3 ಕಾಮೆಂಟ್‌ಗಳು:

Ashok.V.Shetty, Kodlady ಹೇಳಿದರು...

Tejashwini avre,

Kavana tumbaa arthagarbhitavaagide. Nimma chikkappanavara durmarnada suddi keli besaravaayitu...avra aatmakke deveru shantiyannu kodali.....


http://ashokkodlady.blogspot.com/

SATISH N GOWDA ಹೇಳಿದರು...

ಮೇಡಂ ಈ ಕವನದಲ್ಲಿ ತುಂಬಾ ಅರ್ಥವಿದೆ ಹಾಗು ತುಂಬಾ ನೋವಿನಿಂದ ಕೊಡಿದೆ.
ಕವನದ ಸಾಲುಗಳನ್ನು ಓದುತ್ತಿದ್ದರೆ ಕಣ್ಣಿನ ತುದಿಯಲ್ಲಿ ಸಣ್ಣದಾದ ನೀರು ಹನಿಯುತ್ತಿದೆ
ಸತ್ತವರ ಆತ್ಮಕ್ಕೆ ಶಾಂತಿ ಸಿಗಲೆಂದು ಆ ದೇವರಲ್ಲಿ ಪ್ರಾರ್ತಿಸೋಣ...

ಸೀತಾರಾಮ. ಕೆ. / SITARAM.K ಹೇಳಿದರು...

ತಮ್ಮ ಚಿಕ್ಕಪ್ಪನವರ ಅಕಾಲಮರಣದ ಆಘಾತ ತಮ್ಮನ್ನೂ ತೀವ್ರ ಘಾಸಿ ಮಾಡಿದೆ. ಮನ ಈ ಕವನ ಓದಿ ಅರ್ದ್ರವವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ತಮ್ಮ ಕುತುಮ್ಬವರ್ಗದವರೆಲ್ಲರಿಗೂ ಆಘಾತದಿಂದ ಮೇಲೆದ್ದು ಮುನ್ನುಗ್ಗೋ ಶಕ್ತಿ ಕೊಡಲಿ. ಅವರ ಆದರ್ಶದಲ್ಲಿನ ತಮ್ಮೆಲ್ಲರ ಬಾಳು ಅವರನ್ನು ಜೀವಂತವಾಗಿಸಿರಲಿ.