ಗುರುವಾರ, ಸೆಪ್ಟೆಂಬರ್ 10, 2009

ಇರುವುದೆಲ್ಲವ ಬಿಟ್ಟು...

ಅದೇಕೋ ಎಂತೋ!?
ಬಾನ ಚಂದಿರನೇ ನೊಸಲ ಬಿಂದಿಯಾಗಿದ್ದರೂ,
ನೀಲಾಕಾಶದ ತುಂಬೆಲ್ಲಾ ಚೆಲ್ಲಿ,
ಅಣಕಿಸುವಂತಿರುವ ತಾರೆಗಳಿಗಾಗಿ
ಕೈಚಾಚುತಿರುವೆ ನಾನು!

ಅದೇಕೋ ಎಂತೋ!?
ಋತುಗಳ ರಾಜ ವಸಂತನೇ ತಾನಾಗಿ
ನನ್ನರಸಿ ಬಳಿಬಂದರೂ,
ಶಿಶಿರನಾಸರೆಗಾಗಿ ಕಾಯುತ್ತಾ
ಬಳಲಿ ಬಾಡುತಿರುವೆ ನಾನು!

ಅದೇಕೋ ಎಂತೋ?!
ಸುತ್ತಲೂ ಸಿಹಿನೀರಗೊಳಗಳೇ
ತುಂಬಿ ತುಳುಕಾಡುತಿದ್ದರೂ,
ಶರಧಿಯೊಳಗೇ ಮುಳುಗೇಳಿ,
ದಾಹ ತಣಿಸ ಬಯಸುವೆ ನಾನು!!

(ಬಹುಕಾಲದ ಹಿಂದೆ ಎಲ್ಲೋ ಗೀಚಿ ಮರೆತುಬಿಟ್ಟಿದ್ದ ತುಣುಕೊಂದು ಸಿಗಲು, ಅವು ಇದ್ದಹಾಗೇ ಮಾನಸದಲ್ಲಿ ಮೂಡಿಸುತ್ತಿದ್ದೇನೆ.)

11 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Chennaagide...ಅದೇಕೋ ಎಂತೋ!?

ಕ್ಷಣ... ಚಿಂತನೆ... ಹೇಳಿದರು...

ಮೇಡಂ, ಎಂದೋ ಗೀಚಿದ್ದ ಕವನವಾದರೂ ಇಂದಿಗೂ ಪ್ರಸ್ತುತವಾಗಿದ್ದು ತುಂಬಾ ಸೊಗಸಾಗಿದೆ.

ಧನ್ಯವಾದಗಳು.

ದಿವ್ಯಾ ಮಲ್ಯ ಕಾಮತ್ ಹೇಳಿದರು...

ಎಲ್ಲರ ಕಥೆಯೂ ಇದೇ - "ಇರುವುದೆಲ್ಲವ ಬಿಟ್ಟು....."
ಕವನದಲ್ಲಿ ಬಳಸಿದ ಎಲ್ಲ ದೃಷ್ಟಾಂತಗಳೂ ಬಲು ಸುಂದರ :)

sunaath ಹೇಳಿದರು...

ಅದೇಕೋ ಎಂತೋ?!
ಎಂದೋ ಗೀಚಿದ್ದ ಕವನ
ಇಂದೂ ಹೃದಯವನು
ಮಿಡಿಯುತಿದೆ!

ಅದೇಕೋ ಎಂತೋ?!
ಎಂದೋ ಬೆಳಗಿಸಿದ ದೀಪ
ಇಂದೂ ಮನವ
ಬೆಳಗುತಿದೆ!

ಅದೇಕೋ ಎಂತೋ?!
ನೀ ಹಾಡಿದ ಹಾಡು
ನನ್ನಲಿನ್ನೂ
ಅನುರಣಿಸುತಿದೆ!

ಮನಸು ಹೇಳಿದರು...

ಎಂದೋ ಗೀಚಿದ ಸಾಲುಗಳು ಎಲ್ಲರ ಮನಮುಟ್ಟಿದೆ!!! ಮನುಷ್ಯನೇ ಹಾಗೆ ಇರುವುದೆಲ್ಲವನ್ನು ಬಿಟ್ಟು ಇಲ್ಲದಿರುವುದನ್ನು ಬಯಸುತ್ತಾ ಸಾಗುತ್ತೇವೆ....
ವಂದನೆಗಳು

ಶಿವಪ್ರಕಾಶ್ ಹೇಳಿದರು...

ನಮ್ಮ ಪರಿಸ್ಥಿಯನ್ನು ತುಂಬಾ ಚನ್ನಾಗಿ ಬಣ್ಣಿಸಿದ್ದಿರಿ. ನಾವೆಲ್ಲರೂ ಹಾಗೆ ಇರುವುದೆಲ್ಲವ ಬಿಟ್ಟು ಬೇರೆ ಏನೋ ಬೇಕು ಅಂತಿವಿ.
ಕವನ ತುಂಬಾ ಚನ್ನಾಗಿದೆ.

ತೇಜಸ್ವಿನಿ ಹೆಗಡೆ ಹೇಳಿದರು...

@ಮಹೇಶ್, ಚಂದ್ರಶೇಖರ್, ದಿವ್ಯ, ಮೃದು ಮನಸು ಹಾಗೂ ಶಿವಪ್ರಕಾಶ್,

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು.

@ಕಾಕಾ,

ನನ್ನ ಕವನಕ್ಕಿಂತಲೂ ನಿಮ್ಮ ಕವಿತೆಯೇ ತುಂಬಾ ಚೆನ್ನಾಗಿದೆ. :) ಧನ್ಯವಾದಗಳು.

ಚಿತ್ರಾ ಹೇಳಿದರು...

ತೇಜೂ,
ಎಷ್ಟೋ ಸಲ ಎಂದೋ ಗೀಚಿದ ಸಾಲುಗಳು ಎಂದಿಗೂ ಪ್ರಸ್ತುತವೆನಿಸುತ್ತವೆ ! ತುಂಬಾ ಚಂದದ ಕವನ . ರಾಶಿ ಇಷ್ಟ ಆತು .
ಅಂದ ಹಾಗೆ, ಸುನಾಥ್ ಕಾಕಾ ಅವರ ' ಕಾವ್ಯ ಪ್ರತಿಕ್ರಿಯೆ ' ಬಹು ಚಂದ ವಾಗಿದೆ ಎನ್ನುವುದನ್ನು ನಾನೂ ಸಮರ್ಥಿಸುತ್ತೇನೆ

ಸುಧೇಶ್ ಶೆಟ್ಟಿ ಹೇಳಿದರು...

aha... eshtu chenda ide I kavana....
yaavaagalu kaaduthade "Iruvudellava bittu iradudaredege" emba saalugalu..

[nee baruva daariyali update aagide... adeko goththillae baari yaara bloginallu update aagirodu kaanisilvanthe... adikke naane inform maadtha ideeni :)]

ಅಂತರ್ವಾಣಿ ಹೇಳಿದರು...

ತೇಜು ಅಕ್ಕ,
ಶೀರ್ಷಿಕೆಗೆ ಸೂಕ್ತವಾದ ಸಾಲುಗಳು. ರಾಗ ಸೇರಿಸಿ ಹಾಡ ಬೇಕು ಅನಿಸುತ್ತೆ.

ಸವಿಗನಸು ಹೇಳಿದರು...

"ಅದೇಕೋ ಎಂತೋ?..!"
ಬಹಳ ಚೆನ್ನಾಗಿದೆ...