ಬೇಕಿಲ್ಲ...
ತಿರುಗಿ ನೋಡಬೇಕಾಗಿಲ್ಲ..
ಅಡ್ಡ ತಿಡ್ಡ, ತಿರುವು ಮುರುವು, ಕೊರಕಲು ದಾರಿಯನ್ನು,
ಬತ್ತಿದ, ಒರತೆಯ ಒಸರನ್ನೂ ಕಾಣಿಸದ
ಹಳ್ಳ, ತೊರೆ, ಕೆರೆ, ನದಿ ಕಾಲುವೆಗಳನ್ನು
ಸೋತಿಲ್ಲ...
ಸೋಲಬೇಕಾಗಿಲ್ಲ ಭಾರ ಹೊತ್ತು ಹತ್ತು,
ನೀರು ಕುಡಿದು ದಪ್ಪಗಾದ ಹತ್ತಿಯೂ
ತೂಗಿದರೆ ತೋರಬಲ್ಲದು ಮಣ ಭಾರವನ್ನು
ಹಿಂಜಿ ಹಗುರಾದರೆ ತಲುಪಬಲ್ಲದು ಆಗಸವನ್ನು!
ಕಂಡಿಲ್ಲ...
ಕಾಣಲೇಬೇಕೆಂದಿಲ್ಲ ನಾನು-ನೀನು,
ಎಲ್ಲರನೂ ಕುಣಿಸುತಿಹ ಸೂತ್ರಧಾರನನ್ನು
ಕಂಡರೆ ಸಾಕು ಮಿಡಿವ ಎದೆಬಡಿತದಲಿ,
ಮನದ ತಿಳಿಗೊಳದಲವನ ಪ್ರತಿಬಿಂಬವನು
-ತೇಜಸ್ವಿನಿ ಹೆಗಡೆ
10 ಕಾಮೆಂಟ್‌ಗಳು:
ಕವನ ತುಂಬಾ ಚೆನ್ನಾಗಿದ್ದೆ..............
excellent !. ಸರಳವಾದ ಪದಗಳಲ್ಲಿ ಹೆಚ್ಚು ಅರ್ಥಪೂರ್ಣವಾದ ಕವನವೊಂದನ್ನು ಕೊಟ್ಟಿದ್ದೀರಿ. ಚೆನ್ನಾಗಿದೆ.
nice lines :)
ಯಾಕೋ ಯಾರ ಬಗೆಯೋ ಅವ್ಯಕ್ತ ಕೋಪ, ನಿರಾಸೆ ಮತ್ತು ಮರುಕ ಇದೆ ಅನಿಸಿತು. ಭಾವನೆಗಳ ಪ್ಯಾಕೇಜ್ ಇಲ್ಲಿದೆ.
ತೀವ್ರವಾಗಿ ಬರೆಯುವ ನಿಮ್ಮ ಮ್ರತಿಭೆಗೆ ನನ್ನ ಜೋಹಾರುಗಳು ಮೇಡಂ.
ತೇಜಸ್ವಿನಿ,
ಬದುಕಿಗೆ ಅಗತ್ಯವಾದ ಜೀವನಧರ್ಮವನ್ನು ಸುಂದರವಾದ ಸಾಲುಗಳಲ್ಲಿ ಹೊಸೆದಿದ್ದೀರಿ. ಅಭಿನಂದನೆಗಳು.
'ಜೀವನ ಧರ್ಮ ಯೋಗ'ದ ತಿರುಳಿರುವ,ತಿಳಿವಿರುವ ಸಾರಪೂರ್ಣ ಕವಿತೆ.
nice lines
Sundara Salugalu madam...Nice....
tumbaa ishtavaaytu madam illadolagina iruvike....
ಬೇಕಿಲ್ಲ...ಸೋತಿಲ್ಲ...ಕಂಡಿಲ್ಲ...ನೋಡಬೇಕಿಲ್ಲ, ಸೋಲಬೇಕಾಗಿಲ್ಲ...ಕಾಣಬೇಕೆಂದಿಲ್ಲ... ಇವುಗಳ ಸುತ್ತ ಸಾಧ್ಯಾಸಧ್ಯತೆಗಳನ್ನು ಬಿಂಬಿಸುವ ಸಾಲುಗಳು ಇಷ್ಟವಾದದ್ದು..ಶೈಲಿ
ಕಾಮೆಂಟ್ ಪೋಸ್ಟ್ ಮಾಡಿ