ಆಸೆ
ಮತ್ತೆ ಮತ್ತೆ ದಡವ ಬಡಿದು
ನುಗ್ಗಿ ನುಗ್ಗಿ ಸುಸ್ತಾಗಿ, ಸೋತರೂ
ಸೋಲೊಪ್ಪದೇ, ಹೊಸ ಹುರುಪಿಂದ
ಮತ್ತೆ ಮತ್ತೆ ತೆರಳಿ, ಹೊರಳಿ
ಮರಳುವ ಮರುಳು ತೆರೆಗಳಂತೆ
ನಿರಾಸೆ
ನಾಜೂಕಾಗಿ ನೇಯ್ದ ನುಣ್ಣನೆಯ
ಗೂಡೊಳಗೆ ಮೊಟ್ಟೆಯಿಟ್ಟು
ಹಗಲಿರುಳು ಕಾವುಕೊಟ್ಟು
ಇನ್ನೇನು ಮರಿ ಹೊರಬರುವಾಗ
ಮೊಟ್ಟೆ ಹಾವಿನ ಹೊಟ್ಟೆಸೇರಿದಂತೆ
ನಿರೀಕ್ಷೆ
ಅಂತಿಮ ಪರೀಕ್ಷೆಯ
ಕೊನೆಯ ಪ್ರಶ್ನೆಗೆ ಉತ್ತರಿಸಿದವ
ಹೊರಬಂದು, ಬರೆದ ಉತ್ತರ
ಸರಿಯೋ ತಪ್ಪೋ ಎಂದು ಚಡಪಡಿಸಿ
ಪುಸ್ತಕದ ಪ್ರತಿ ಹಾಳೆಯನ್ನೂ
ತೆರೆತೆರೆದು ಹುಡುಕಾಡಿದಂತೆ
ಕೆಲವು ಹಳೆಯ ತುಣುಕುಗಳು....
-ತೇಜಸ್ವಿನಿ ಹೆಗಡೆ.
15 ಕಾಮೆಂಟ್ಗಳು:
ತುಣುಕುಗಳು ಇಷ್ಟವಾದವು ಅಕ್ಕ..
ಚೆನ್ನಾಗಿವೆ :)
ತುಣುಕುಗಳನ್ನು ಸೇರಿಸುತ್ತಾ ಸೇರಿಸುತ್ತಾ ಹೋದರೆ ಚಿತ್ರವಾಗಿಬಿದುತ್ತದಲ್ಲಾ, ಅದೇ ಒಂದು ನಿರಂತರ ಅಚ್ಚರಿ.
thumba chennagive... koneyadu maatra ek dham sathya :P
ಹೊಸ ರೀತಿಯ ತುಣುಕುಗಳು ಹೊಸದೊಂದು ಆಹ್ಲಾದವನ್ನು ನೀಡುತ್ತಿವೆ.
chennaagive
tumba artha poornavagive..e thara tunukugalu nange tumba ishta..:)
ಎಲ್ಲಾ ತುಣುಕುಗಳೂ ನೈಸ್ ಅದ್ರಲ್ಲೂ
ಕಡೆಯ ತುಣುಕು...ನಮ್ಮೆಲ್ಲರ ಅನುಭವದ್ದು....
tuNukugaLu mangeddavu madam,
bhaaShe sulalita.
ತುಂಬಾ ಚೆನ್ನಾಗಿವೆ ಮಾನಸ ತುಣುಕುಗಳು.. ಇಷ್ಟವಾದವು
ತುಂಬಾ ಚೆನ್ನಾಗಿವೆ ಮಾನಸದ ಮನಸಿನ ತುಣುಕುಗಳು.. ಇಷ್ಟವಾದವು (ಕ್ಷಮಿಸಿ ಮೊದಲನೆ ಸರಿ ತಪ್ಪು ಬರೆದಿದ್ದೆ)
ಚಂದದ ಹನಿಗಳು ತೇಜೂ....
ತುಣುಕಾಟ ಚೆನ್ನಾಗಿದೆ.
ತುಣುಕಗಳ ತಿಣುಕಾಟವನ್ನು ಮೆಚ್ಚಿ ಸ್ಪಂದಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು. :)
-ತೇಜಸ್ವಿನಿ.
ನಿಮ್ಮ ವ್ಯಾಖ್ಯಾನ ಚೆನ್ನಾಗಿದೆ ಅಕ್ಕ...redefine ಮಾಡಿದಂತಿದೆ :)
"ಆಸೆ"tumbaa ista aatu.
"ಮತ್ತೆ ಮತ್ತೆ ದಡವ ಬಡಿದು
ನುಗ್ಗಿ ನುಗ್ಗಿ ಸುಸ್ತಾಗಿ, ಸೋತರೂ
ಸೋಲೊಪ್ಪದೇ, ಹೊಸ ಹುರುಪಿಂದ
ಮತ್ತೆ ಮತ್ತೆ ತೆರಳಿ, ಹೊರಳಿ
ಮರಳುವ ಮರುಳು ತೆರೆಗಳಂತೆ" odidaga onnamni sanchalana feel aagtu.
ಕಾಮೆಂಟ್ ಪೋಸ್ಟ್ ಮಾಡಿ