ಬುಧವಾರ, ಅಕ್ಟೋಬರ್ 14, 2009

ಕತ್ತಲೆಯಿಂದ ಬೆಳಕಿನೆಡೆಗೆ....

ಹಚ್ಚೇವು ಸಂತಸದ ದೀಪ....

ಮನದ ಮೂಲೆಯ
ಕಡೆಯ ಕೊಳೆಯನೂ
ಕಳೆದು ಹಾಕುವ ಬನ್ನಿರಿ...
ಕನಸುಗಳ ರಂಗೋಲಿಯೆಳೆದು
ನಡುವೆ ದೀಪವ ಹಚ್ಚಿರಿ...


ನರನೊಳಿಹ ಅಸುರನನ್ನು
ನಶಿಸಿ ಬೆಳಗುವ ಹಣತೆಯು
ಬೆಳಗಬೇಕಿದೆ...
ಎಲ್ಲ ಮನದೊಳು
ಹೊಸತು ಆಕಾಶಬುಟ್ಟಿಯು.


ದಣಿದ ಮನಸಿಗೆ,
ಹಸಿದ ತನುವಿಗೆ,
ಅನ್ನ, ಸೂರು ಬೇಕಿದೆ...
ಅದನು ಇತ್ತು, ಆತ ನಕ್ಕರೆ,
ಹಗಲಲೂ ದೀಪಾವಳಿ...

-ತೇಜಸ್ವಿನಿ ಹೆಗಡೆ

-----------------------

ಜಲಪ್ರಳಯದಿಂದ ತತ್ತರಿಸಿದ ಜನತೆಯ ಮನದೊಳು ಹೊಸ ಆಶಾದೀಪವನ್ನು ಬೆಳಗುವ ದೀಪಾವಳಿ ಈ ವರುಷದ್ದಾಗಲೆಂದು ಹಾರೈಸುತ್ತೇನೆ. ಇದಕ್ಕಾಗಿ ನಮ್ಮಿಂದಾದಷ್ಟು...ನಮ್ಮಿಂದಾಗುವ ಸಹಾಯವನ್ನು ನಾವು ಮಾಡುವ ಸಂಕಲ್ಪದ ಜ್ಯೋತಿಯನ್ನು ಮನದೊಳಗೆ ಬೆಳಗಿಸಿ, ನನಗಾಗಿ... ನಾನು ಮಾತ್ರ ಎಂಬ ಸ್ವಾರ್ಥಪೂರಿತ ನರಕಾಸುರನ್ನು ಹೊಡೆದೋಡಿಸುವ.


ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಜೊತೆಗೆ ಜಿ.ಎಸ್.ಶಿವರುದ್ರಪ್ಪನವರ ಈ ಸುಂದರ ಕವಿತೆ ನಿಮ್ಮೆಲ್ಲರಿಗಾಗಿ...


ಹಣತೆ

ಹಣತೆ ಹಚ್ಚುತ್ತೇನೆ ನಾನೂ

ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ

ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ

ಇದರಲ್ಲಿ ಮುಳುಗಿರುವಾಗ

ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ...


ಹಣತೆ ಹಚ್ಚುತ್ತೇನೆ

ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ

ಇರುವಷ್ಟು ಹೊತ್ತು ನನ್ನ ಮುಖ ನೀನು

ನಿನ್ನ ಮುಖ ನಾನು

ನೋಡಬಹುದೆಂಬ ಒಂದೇ ಒಂದು ಆಸೆಯಿಂದ


-----------------------

21 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಶುಭಾಶಯಗಳು. :)

Ittigecement ಹೇಳಿದರು...

ತೇಜಸ್ವಿನಿಯವರೆ...

ತುಂಬಾ ಸೊಗಸಾಗಿದೆ ಕವನ...
ಅದರ ಆಶಯವೂ ಕೂಡ....

ನಿಮಗೂ..
ನಿಮ್ಮ ಬ್ಲಾಗ್ ಅಭಿಮಾನಿಗಳಿಗೂ ದೀಪದ ಹಬ್ಬದ ಶುಭಾಶಯಗಳು...

ಬೆಳಕಿನ ಹಬ್ಬ...
ಕತ್ತಲೆ ಓಡಿಸಿ...
ಬಾಳಲ್ಲಿ ಬೆಳಕು ತರಲಿ....

ಪ್ರಕಾಶಣ್ಣ...

Harisha - ಹರೀಶ ಹೇಳಿದರು...

ತೇಜಕ್ಕಾ, ನಿನಗೂ ದೀಪಾವಳಿಯ ಹಾರ್ದಿಕ ಶುಭಾಶಯ :-)

sunaath ಹೇಳಿದರು...

ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಮನಸು ಹೇಳಿದರು...

ದೀಪಾವಳಿಯ ಶುಭಾಶಯಗಳು

ಶಿವಪ್ರಕಾಶ್ ಹೇಳಿದರು...

Nice one madam.
Happy Diwali

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೇ,

ನಿಮಗೂ ನಿಮ್ಮ ಕುಟುಂಬದವರೆಲ್ಲರಿಗೂ 'ದೀಪಾವಳಿ ಶುಭಾಶಯಗಳು'.

ಕವಿತೆ ಚೆನ್ನಾಗಿದೆ ಹಾಗೂ ಜಿ.ಎಸ್. ಶಿವರುದ್ರಪ್ಪನವರ ಕವನವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ನೆರೆಯಿಂದ ನೊಂದವರಿಗೆ ಹೊಸ ಬಾಳಿನ ಬೆಳಕಾಗಿ ದೀಪಾವಳಿಯ ಹಬ್ಬವು ಬರಲಿ.

ಚಂದ್ರಶೇಖರ ಬಿ.ಎಚ್.

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಿಮ್ಮ ಕವನದ ಜೊತೆಗೆ ಜಿ.ಎಸ್.ಶಿವರುದ್ರಪ್ಪ ಕವನವನ್ನು ಕೊಟ್ಟಿದ್ದೀರಿ...
ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು.

Guruprasad ಹೇಳಿದರು...

ಕವನ ತುಂಬ ಸೊಗಸಾಗಿದೆ...
ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು

ಜಲನಯನ ಹೇಳಿದರು...

ನರನೊಳಿಹ ಅಸುರನನ್ನು
ನಶಿಸಿ ಬೆಳಗುವ ಹಣತೆಯು
ಬೆಳಗಬೇಕಿದೆ...
ಎಲ್ಲ ಮನದೊಳು
ಹೊಸತು ಆಕಾಶಬುಟ್ಟಿಯು.

ದೀಪಾವಳಿಯ ವಿಶೇಷ ಕೊಡುಗೆ ನಿಮ್ಮದು..ದೀಪಾಲಂಕೃತ ಕವಿತೆಗಳ ಅಲಂಕಾರ...ಭಲಾ..ಭಲಾ..
ದೀಪಾವಳಿಯ ಹಾರ್ದಿಕ ಶುಭಾಷಯಗಳು, ನಿಮಗೆ ಮುದ್ದು ಕುಟುಂಬಕ್ಕೆ.

ಸಾಗರದಾಚೆಯ ಇಂಚರ ಹೇಳಿದರು...

ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಬಿಸಿಲ ಹನಿ ಹೇಳಿದರು...

ದೀಪಾವಳಿಯ ಕವನದೊಂದಿಗೆ ದೀಪಾವಳಿಅಯ ಶುಭಾಶಯವನ್ನು ಹೇಳಿರುವಿರಿ. Thanks and wish you the same.

umesh desai ಹೇಳಿದರು...

ಮೇಡಮ್ ಕವನ ಚೆನ್ನಾಗಿದೆ ಜಿ.ಎಸ್ ಹೇಳಿದಮಾತು"ಹಣತೆ ಹಚ್ಚುತ್ತೇನೆ

ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ

ಇರುವಷ್ಟು ಹೊತ್ತು ನನ್ನ ಮುಖ ನೀನು

ನಿನ್ನ ಮುಖ ನಾನು

ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಎಷ್ಟು ಸೊಗಸಾಗಿದೆ ಅಲ್ವ ದೀಪಗಳ ಹಬ್ಬದ ಹಾರೈಕೆಗಳು

ಚಂದ್ರಕಾಂತ ಎಸ್ ಹೇಳಿದರು...

ನಿಮಗೂ ದೀಪಾವಳಿಯ ಶುಭ ಹಾರೈಕೆಗಳು

ಅಂತರ್ವಾಣಿ ಹೇಳಿದರು...

uttara karnataka nenesikondare.. "saMtasa" padavE maretu hOgutte. aa bhaagada janarige munde oLLedu aagali.

nimagoo kooDa deepavaLiya shubhaashayagaLu.

ಸುಧೇಶ್ ಶೆಟ್ಟಿ ಹೇಳಿದರು...

ಕವನ ಚೆನ್ನಾಗಿತ್ತು... ದೀಪಾವಳಿ ಚೆನ್ನಾಗಿತ್ತಾ?

ದಿನಕರ ಮೊಗೇರ ಹೇಳಿದರು...

ನಮಗೆಲ್ಲ ಡಬಲ್ ಬೋನಸ್ ಯಾಕಂದ್ರೆ, ನಿಮ್ಮ ಕವನದ ಜೊತೆ ಜಿ ಎಸ್ ಶಿವರುದ್ರಪ್ಪನವರ ಕವಿತೆ ಸಹ ಇತ್ತಲ್ಲ ಅದಕ್ಕೆ.... ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿಯ ಶುಭಾಶಯಗಳು....

Kirti ಹೇಳಿದರು...

hi tejaswini i felt ur a good poetess n writter too..i read many poems which r nice n even i wrote some poems read once so just check it out http://kirti-neenunannjeeva.blogspot.com/.. n help me to improve.thanks.

Kirti ಹೇಳಿದರು...

thanku teju for replying me.... keep in touch always..nice to see u..

Unknown ಹೇಳಿದರು...

ತುಂಬಾ ಚನ್ನಾಗಿವೆ ಕವನಗಳು

Unknown ಹೇಳಿದರು...

Beautiful and meaningful.