ಬುಧವಾರ, ಅಕ್ಟೋಬರ್ 7, 2009

ಕವನ

ವಿಶ್ವಾಸ

ಸಿಗಲಾರದು ಯಾರಿಗೂ ಅದು
ಒಂದೇ ಕ್ಷಣದಲಿ,
ಕಳೆದುಕೊಳ್ಳುವರು ಅದನ
ಒಂದೇ ನಿಮಿಷದಲಿ!

ಕಸಿಯಲಾಗದು ಅದನ,
ನಶಿಸಬಹುದು ನಿಧಾನ....
ಸ್ನೇಹದಿಂದ ನಡೆ,
ಪ್ರೀತಿಯಿಂದ ಪಡೆ,
ಆದರೂ ಅದು....

ಗಾಳಿಗೋಪುರದಂತೆ,
ತೂರಿ ಹೋಗಬಹುದು!?
ಮರೀಚಿಕೆಯಂತೆ,
ದೂರವಾಗಬಹುದು!
ಮಂಜುಕರಗುವಂತೆ,
ನೀರಾಗಬಹುದು!
ನನ್ನಿಂದ, ನಿನ್ನಿಂದ,
ಈ ಜಗದಿಂದ...!!!!

(ಕೆಲವು ವರ್ಷಗಳ ಹಿಂದೆ ತರಂಗದಲ್ಲಿ ಪ್ರಕಟವಾಗಿದ್ದ ನನ್ನ ಕವನ...)

21 ಕಾಮೆಂಟ್‌ಗಳು:

sunaath ಹೇಳಿದರು...

ವಿಶ್ವಾಸದ ಗುಣಧರ್ಮಗಳನ್ನು ಎಷ್ಟು ಚೆನ್ನಾಗಿ ಬಣ್ಣಿಸಿದ್ದೀರಿ!
’ಕಿರಿದರೊಳ್ ಪಿರಿದರ್ಥವಂ’ ಕವನಿಸಿದ್ದೀರಿ.

ಮುತ್ತುಮಣಿ ಹೇಳಿದರು...

kadea stanza bahala kavyamayavaagi bandide :)

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿ ಮೇಡಂ,
ಹೌದು, ವಿಶ್ವಾಸವೇ ಹಾಗೆ ಅಲ್ಲವೇ,
..............ಕಸಿಯಲಾಗದು ಅದನ,
ನಶಿಸಬಹುದು ನಿಧಾನ....
ಸ್ನೇಹದಿಂದ ನಡೆ,
ಪ್ರೀತಿಯಿಂದ ಪಡೆ,................

ಎಂಥಹ ಅಧ್ಭುತ ಸಾಲುಗಳು
ಸೊಗಸಾದ ಕವನ

ಶಿವಪ್ರಕಾಶ್ ಹೇಳಿದರು...

Nice one madam

ಜಲನಯನ ಹೇಳಿದರು...

ತೇಜಸ್ವಿನಿ, ವಿಶ್ವಾಸ...ಶೀರ್ಷಿಕೆ..ಮತ್ತು ಅದರ ವಿಸ್ತಾರದೊಳಕ್ಕೆ ನುಸುಳಿಬಂದ ಆಯಾಮಗಳು...ಅವುಗಳನ್ನಲಂಕರಿಸಿದ ಪದಪ್ರಯೋಗ ಎಲ್ಲ ಇಷ್ಟವಾದವು..ನಿಜ...ವಿಶ್ವಾಸಘಾತುಕತೆಗೆ ಬಲಿಯಾದ ಬಹು ಸೂಕ್ತ ಮತ್ತು ಕುಪ್ರಸಿದ್ಧ ಉದಾಹರಣೆ....ನಮ್ಮ ಹೆಣ್ಣುಮಕ್ಕಳ ಹೆಸರಿಗೇ ತಿಲಕಪ್ರಾಯರಾಗಿದ್ದ ಧೀರ ಮಹಿಳೆ ಇಂದಿರಾಗಾಂಧಿಯವರದ್ದು...
ಹೆಕ್ಕಿ ತೆಗೆದ ಮತ್ತು ಹಂಚ್ಕವನಕ್ಕಿಕೊಂಡ ಕವನಕ್ಕೆ ಧನ್ಯವಾದಗಳು

ಸುಧೇಶ್ ಶೆಟ್ಟಿ ಹೇಳಿದರು...

ತೇಜಕ್ಕ....

ಕೆಳಗಿನ ಬರಹಕ್ಕೂ ಈ ಕವನಕ್ಕೂ ಸರಿಯಾಗಿ ಹೊ೦ದಿಕೊ೦ಡಿದೆ ನೋಡಿದಿರಾ....

ವಿಶ್ವಾಸ ಅನ್ನುವುದು ಎಷ್ಟು ದೊಡ್ಡ ಪದವಲ್ಲವೇ...? ನಿಮ್ಮ ಈ ಕವನ ತು೦ಬಾ ಹಿಡಿಸಿತು...

umesh desai ಹೇಳಿದರು...

ಮೇಡಮ್ ಮೊದಲಬಾರಿ ನಿಮ್ಮ ಬ್ಲಾಗ್ ಗೆ ಬಂದೇನಿ. ವಿಶ್ವಾಸ ಕವಿತಾ ಬಹಳ ಛಲೋಅದ. "ಮಂಜು ಕರಗುವಂತೆ ನೀರಾಗಬಹುದು..ನನ್ನಿಂದ ,ನಿನ್ನಿಂದ ಈ ಜಗದಿಂದ..." ಸಾಲುಗಳಲ್ಲಿ ಸತ್ವವಿದೆ....

ಮನಸು ಹೇಳಿದರು...

tumba chennagide...
vishvaasa annode haage...

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿ ಮೇಡಂ, ವಿಶ್ವಾಸ, ನಂಬಿಕೆ ಇವನ್ನು ಗಳಿಸುವುದೂ ಹಾಗೂ ಉಳಿಸಿಕೊಳ್ಳುವುದೂ ಬಹಳ ಕಷ್ಟ.
ಕವನ ಸೊಗಸಾಗಿದೆ.

ಸಸ್ನೇಹಗಳೊಡನೆ,

ಚಂದ್ರು

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

ತೇಜಸ್ವಿನಿ ರವರೆ
ನೀವು ವಿಶ್ವಾಸದ ಮೇಲೆ ಇಟ್ಟ ವಿಶ್ವಾಸ ಬಹಳ.
ಈಗೀನ ಜಗದಲ್ಲಿ ವಿಶ್ವಾಸದ ಮೇಲೆ ವಿಶ್ವಾಸ,
ನಂಬಿಕೆಯ ಮೇಲೆ ನಂಬಿಕೆ ಇಲ್ಲದಂತಾಗಿದೆ ಅಲ್ವಾ.
ಹತ್ತು ವಿಶ್ವಾಸಗಳನ್ನು ಒಂದು ಅವಿಶ್ವಾಸ,
ಹತ್ತು ನಂಬಿಕೆಗಳನ್ನ ಒಂದು ಅಪನಂಬಿಕೆ
ಅಳಿಸಬಾರದು ಅಲ್ವಾ.
ಕವನ ತುಂಬಾ ಚೆನ್ನಾಗಿದೆ.

ಭೇಟಿ ಕೋಡಿ
ಹೊಸ ಲೇಖನ
www.nanisaha.blogspot.com

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಕವನ ತುಂಬಾ ಚೆನ್ನಾಗಿದೆ...ಪದಪ್ರಯೋಗಗಳು ಕೂಡ ಇಷ್ಟವಾಯಿತು...

Dileep Hegde ಹೇಳಿದರು...

ತೇಜಸ್ವಿನಿಯವರೇ...
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅನ್ನೋ ಹಾಗೆ ಒಬ್ಬರ ವಿಶ್ವಾಸ ಗಳಿಸೋಕೆ ಎಷ್ಟೋ ದಿನ ಹಿಡಿಯತ್ತೆ.. ಆದರೆ ಆ ವಿಶ್ವಾಸ ಕಳೆದುಕೊಳ್ಳೋಕೆ ಕೆಲವೇ ಕ್ಷಣಗಳು ಸಾಕು... ವಿಶ್ವಾಸದ ಮೇಲಿನ ಕವನ ಚೆನ್ನಾಗಿದೆ...

ಸವಿಗನಸು ಹೇಳಿದರು...

ವಿಶ್ವಾಸದ ಕವನ ಅರ್ಥಪೂರ್ಣ...
ಅಧ್ಭುತವಾಗಿದೆ ....

jomon varghese ಹೇಳಿದರು...

ಚೆನ್ನಾಗಿದೆ....

ದಿನಕರ ಮೊಗೇರ ಹೇಳಿದರು...

ಅರ್ಥಪೂರ್ಣ ಲೇಖನ , ದಯವಿಟ್ಟು ಈ ಮನಸ್ತಿತಿಯಿಂದ ಹೊರಗೆ ಬಂದು ಲವಲವಿಕೆಯ ಕವನ ಬರೆಯಿರಿ......... ಯಾರು ನಿಮ್ಮ ವಿಶ್ವಾಸ ಮುರಿದಿದ್ದಾರೋ ಅವರಿಗೆ ಅದು ನಿಮ್ಮ ಪಾಠವಾಗಲಿ ................

ತೇಜಸ್ವಿನಿ ಹೆಗಡೆ ಹೇಳಿದರು...

@ಕಾಕಾ, ಮುತ್ತುಮಣಿ, ಸಾಗರದಾಚೆಯ ಇಂಚರ, ಶಿವಪ್ರಕಾಶ್, ಜಲನಯನ, ಸುಧೇಶ್, ಉಮೇಶ್, ಮನಸು, ಚಂದ್ರಶೇಖರ್, ಲಕ್ಷ್ಮಣ್ ಬಿರಾದಾರ, ಶಿವು, ದಿಲೀಪ್, ಸವಿಗನಸು, ಜೋಮನ್... ಅವರೆ,

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರತಿಕ್ರಿಯೆಯೇ ನನ್ನ ಬರವಣಿಗೆಗೆ ಪ್ರೇರಣೆ. ಬರುತ್ತಿರಿ. ಬರೆಯುತ್ತಿರುವೆ.

@ ದಿನಕರ ಅವರೆ,

ಮಾನಸಕ್ಕೆ ಸ್ವಾಗತ. ಹಿಂದಿನ ಲೇಖನಕ್ಕೆ ಹಾಗೂ ಕವನಕ್ಕೆ ನೀವು ಹಾಕಿದ ಪ್ರತಿಕ್ರಿಯೆಗಳಿಗಾಗಿ ತುಂಬಾ ಧನ್ಯವಾದಗಳು. "ಎಚ್ಚರಿಕೆ!!" ಲೇಖನಕ್ಕೋಸ್ಕರ ಈ ಕವನ ಬರೆದದ್ದಲ್ಲ. ಬಹು ಹಿಂದೆಯೇ ನಾ ಈ ಕವನವನ್ನು ಬರೆದಿದ್ದು, ನನ್ನ ಕವನ ಸಂಕಲನದಲ್ಲೂ ಇದೆ ಈ "ವಿಶ್ವಾಸ" ಕವನ. ಹೊಸ ಪೋಸ್ಟ್ ಒಂದನ್ನು ಬಹು ಬೇಗ ಹಾಕಿ ಹಳೆಯ ಲೇಖನವನ್ನು ಹೊರಹಾಕಲುಗೋಸ್ಕರ ಹೀಗೆ ಮಾಡಿದೆ ಅಷ್ಟೇ :) ಆ ಗುಂಗಿನಲ್ಲೇ ನಾನೀಗ ಇಲ್ಲವೇ ಇಲ್ಲ. ನಿಮ್ಮ ಬೆಂಬಲಕ್ಕೆ ಬಹು ಧನ್ಯವಾದಗಳು.

ಗೌತಮ್ ಹೆಗಡೆ ಹೇಳಿದರು...

:)cholo bardye.

ದಿನಕರ ಮೊಗೇರ ಹೇಳಿದರು...

ಅದೇನೇ ಇರಲಿ, ಬೇಗ ಬೇಗನೆ ಒಂದು ಪ್ರೂರ್ತಿ ತುಂಬುವ ಕವನ ಬರೆದು ಎಲ್ಲರಿಗೂ ಸ್ಫೂರ್ತಿ ತುಂಬಿ.....

ಸೀತಾರಾಮ. ಕೆ. / SITARAM.K ಹೇಳಿದರು...

nice one

bhavana lookha ಹೇಳಿದರು...

tumba chennagide nivu vishwasa da barediruvudu

hema ಹೇಳಿದರು...

chennagide madam