ಮಂಗಳವಾರ, ನವೆಂಬರ್ 4, 2008

ನಾ ಮೆಚ್ಚಿದ ಕವಿತೆ - ೩

ಕವಿ : ಡಾ ದ.ರಾ.ಬೇಂದ್ರೆ (ಅಂಬಿಕಾತನಯದತ್ತ)


ನಾನು ಬಡವಿ ಆತ ಬಡವ

ಒಲವೇ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದುಕು ಇದುಕು ಎದುಕು.

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣುಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ.

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರುಬಟ್ಟೆ.

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು.


**ಬೇಂದ್ರೆಯವರ ಈ ಕವನ ನನ್ನ ಅಚ್ಚುಮೆಚ್ಚಿನ ಕವನಗಳಲ್ಲೊಂದಾಗಿದೆ. ಪ್ರೀತಿಯ ಸಾರ್ಥಕತೆ, ಅದರ ಸರಳತೆ, ಪರಿಪಕ್ವತೆಯನ್ನು ತುಂಬಾ ಸರಳವಾಗಿ, ಸುಂದರವಾಗಿ ಸದಾ ಮನಸಿನಲ್ಲಿ ಹಸಿರಾಗಿರುವಂತೆ ಚಿತ್ರಿಸಿದ್ದಾರೆ ಈ ಕವನದಲ್ಲಿ. ಪ್ರೀತಿಯನ್ನು ಕೊಡುವುದರಲ್ಲಿ, ಪಡೆಯುವುದರಲ್ಲಿ ಇರಬೇಕಾದದ್ದು ಮನಸಿನೊಳಗಿನ ಶ್ರೀಮಂತಿಕೆಯೇ ವಿನಃ ಲೌಕಿಕ ಸಿರಿತನವಲ್ಲ ಎನ್ನುವುದನ್ನು ಅದೆಷ್ಟು ಸ್ಪಷ್ಟವಾಗಿ, ಕಾವ್ಯಮಯವಾಗಿ ಹೇಳಿದ್ದಾರೆ ಅಲ್ಲವೇ? ಈ ಕವನದ ಸುಮಧುರ ಹಾಡೂ ಲಭ್ಯವಿದೆ.**

10 ಕಾಮೆಂಟ್‌ಗಳು:

ಭಾರ್ಗವಿ ಹೇಳಿದರು...

ಸಿರಿತನದ ಬಗ್ಗೆ ಮಾತು ಬಂದಾಗ ಖಂಡಿತವಾಗಿ ಹೇಳಲೇ ಬೇಕಾದ ಗೀತೆ, ನಾನು ಯಾವಾಗಲು ಅದಕು ಇದಕು ಎದಕು (ಈಗ ದ ಅನ್ನು ದು ಮಾಡ್ಕೋಬೇಕು:-)) ಅಂತಿದ್ದೆ.ಧನ್ಯವಾದಗಳು.

ಚಂದ್ರಕಾಂತ ಎಸ್ ಹೇಳಿದರು...

ತೇಜಸ್ವಿನಿ ಹಾಗು ಭಾರ್ಗವಿಯವರಿಬ್ಬರಿಗೂ ನಮಸ್ತೆ. ಭಾರ್ಗವಿ, ನೀವು ತಿಳಿದಿರುವುದೇ ಸರಿಯಾದ ಪ್ರಯೋಗ. " ಅದಕು,ಇದಕು,ಎದಕು" ಇದೇ ಸರಿಯಾದ ಪ್ರಯೋಗ.

shivu.k ಹೇಳಿದರು...

ದ ರಾ ಬೇಂದ್ರೆ ಯವರ ಈ ಕವನ ನನಗೂ ಅಚ್ಚುಮೆಚ್ಚು.
ಮೇಡಮ್, ನನ್ನ ಬ್ಲಾಗಿನಲ್ಲಿ ಹೊಸ ಟೋಪಿಗಳು ಬಂದಿವೆ ಬನ್ನಿ. ನೋಡಿ.

ಯಜ್ಞೇಶ್ (yajnesh) ಹೇಳಿದರು...

ನನಗೂ ತುಂಬಾ ಇಷ್ಟವಾದ ಕವನ.

"ಸಂಗ್ರಹ" ಇದು ಕನ್ನಡ ಭಾವ ಗೀತೆ, ಚಿತ್ರ ಗೀತೆ, ಭಕ್ತಿ ಗೀತೆ, ಕವನ, ಜಾನಪದ ಗೀತೆಗಳನ್ನು ಕ್ರೂಡೀಕರಿಸುವ ಒಂದು ಪ್ರಯತ್ನ. ನಿಮಗೆ ಇಷ್ಟವಾದ ಕವನ ಇಲ್ಲೂ ಸೇರಿಸಿ.
http://nammasangraha.blogspot.com/

ಪಲ್ಲವಿ ಎಸ್‌. ಹೇಳಿದರು...

ಬಡತನಕ್ಕೂ ನೆಮ್ಮದಿಗೂ ಸಂಬಂಧವಿಲ್ಲ ಎಂಬುದು ಮಾರುಕಟ್ಟೆಯ ಹೇಳಿಕೆ. ಹೀಗಾಗಿ, ಬೇಂದ್ರೆಯವರ ಈ ಕವನ ಪದೆ ಪದೆ ಪ್ರಸ್ತುತವಾಗುತ್ತ ಹೋಗುತ್ತದೆ. ಆರ್ಥಿಕ ಬಡತನ ನೆಮ್ಮದಿಯನ್ನು ಕೊಡುವುದಿಲ್ಲ ಎಂಬುವವರಿಗೆ ನೆಮ್ಮದಿ ಎಂದರೆ ಏನೆಂಬುದೇ ಗೊತ್ತಿಲ್ಲ ಅನ್ನಬೇಕಾಗುತ್ತದೆ.

ನನ್ನ ತುಂಬ ಪ್ರೀತಿಯ ಕವನವನ್ನು ಮತ್ತೆ ಓದಿ ಮೆಲುಕು ಹಾಕುವ ಅವಕಾಶ ಕೊಟ್ಟಿದ್ದೀರಿ. ಥ್ಯಾಂಕ್ಸ್‌.

- ಪಲ್ಲವಿ ಎಸ್‌.

ತೇಜಸ್ವಿನಿ ಹೆಗಡೆ ಹೇಳಿದರು...

ಭಾರ್ಗವಿ ಅವರೆ,

ಅಂತೂ "ಸಾಟಿಯಾರು" ನಿಜವಾಗಿ ಯಾರು? ಎಂದು ಈಗ ತಿಳಿಯಿತು ಬಿಡಿ :) ಇಷ್ಟು ಸುಂದರ ಹೆಸರನ್ನಿಟ್ಟುಕೊಂಡು ಯಾಕೆ ಮುಚ್ಚಿಟ್ಟಿದ್ದಿರಿ ಇಷ್ಟು ದಿನ? :) ಪ್ರತಿಕ್ರಿಯೆಗೆ ಧನ್ಯವಾದಗಳು.

ಚಂದ್ರಕಾಂತ ಅವರೆ,

ಹೌದು "ದ" ಪ್ರಯೋಗವೇ ಸರಿಯಾದದ್ದು. ಧನ್ಯವಾದಗಳು.

ಶಿವು ಅವರೆ,

ನಿಮ್ಮ ಬ್ಲಾಗ್ ವೈವಿಧ್ಯಮಯವಾಗಿದೆ. ಖಂಡಿತ ನೋಡ್ತೀನಿ. ಧನ್ಯವಾದಗಳು.

ಯಜ್ಞೇಶ್ ಅವರೆ,

"ಸಂಗ್ರಹ" ತುಂಬಾ ಚೆನ್ನಾಗಿದೆ. ನೀವು ಬೇಕಿದ್ದರೆ ಇಲ್ಲಿಯ ಕವನಗಳನ್ನು ಸಂಗ್ರಹದಲ್ಲೂ ಹಾಕಿಕೊಳ್ಳಬಹುದು. ನಾನೂ ಸೇರಿಸುವೆ.

ಧನ್ಯವಾದಗಳು.

ಪಲ್ಲವಿ,

ಬೇಂದ್ರೆಯವರ ಕವನಗಳನ್ನು ಮೆಚ್ಚದಿರುವವರಾರು? ನಿಮಗೆ ಸಂತೋಷವಾಯಿತೆಂದು ತಿಳಿದು ನನಗೂ ತುಂಬಾ ಸಂತೋಷವಾಯಿತು :)

ತೇಜಸ್ವಿನಿ ಹೆಗಡೆ ಹೇಳಿದರು...

ಭಾರ್ಗವಿ ಅವರೆ,

ಅಂತೂ "ಸಾಟಿಯಾರು" ನಿಜವಾಗಿ ಯಾರು? ಎಂದು ಈಗ ತಿಳಿಯಿತು ಬಿಡಿ :) ಇಷ್ಟು ಸುಂದರ ಹೆಸರನ್ನಿಟ್ಟುಕೊಂಡು ಯಾಕೆ ಮುಚ್ಚಿಟ್ಟಿದ್ದಿರಿ ಇಷ್ಟು ದಿನ? :) ಪ್ರತಿಕ್ರಿಯೆಗೆ ಧನ್ಯವಾದಗಳು.

ಚಂದ್ರಕಾಂತ ಅವರೆ,

ಹೌದು "ದ" ಪ್ರಯೋಗವೇ ಸರಿಯಾದದ್ದು. ಧನ್ಯವಾದಗಳು.

ಶಿವು ಅವರೆ,

ನಿಮ್ಮ ಬ್ಲಾಗ್ ವೈವಿಧ್ಯಮಯವಾಗಿದೆ. ಖಂಡಿತ ನೋಡ್ತೀನಿ. ಧನ್ಯವಾದಗಳು.

ಯಜ್ಞೇಶ್ ಅವರೆ,

"ಸಂಗ್ರಹ" ತುಂಬಾ ಚೆನ್ನಾಗಿದೆ. ನೀವು ಬೇಕಿದ್ದರೆ ಇಲ್ಲಿಯ ಕವನಗಳನ್ನು ಸಂಗ್ರಹದಲ್ಲೂ ಹಾಕಿಕೊಳ್ಳಬಹುದು. ನಾನೂ ಸೇರಿಸುವೆ.

ಧನ್ಯವಾದಗಳು.

ಪಲ್ಲವಿ,

ಬೇಂದ್ರೆಯವರ ಕವನಗಳನ್ನು ಮೆಚ್ಚದಿರುವವರಾರು? ನಿಮಗೆ ಸಂತೋಷವಾಯಿತೆಂದು ತಿಳಿದು ನನಗೂ ತುಂಬಾ ಸಂತೋಷವಾಯಿತು :)

ಚಂದ್ರಕಾಂತ ಎಸ್ ಹೇಳಿದರು...

ತೇಜಸ್ವಿನಿಯವರೆ,
ಭಾರ್ಗವಿಯವರ ಹೆಸರು ಹೊರಬಂದದ್ದು ನನ್ನಿಂದ:))
ನನ್ನ ಪ್ರೀತಿಯ ಬೇಡಿಕೆಯನ್ನು ಅವರು ಈಡೇರಿಸಿದ್ದಕ್ಕೆ ಮತ್ತೊಮ್ಮೆ ಅವರಿಗೆ ಧನ್ಯವಾದಗಳು.ಬೇಂದ್ರೆಯವರ ಈ ಕವನ ಅವರ ಅತ್ಯುತ್ತಮ ಕವನಗಳಲ್ಲೊಂದು.( ಮನದನ್ನೆ, ನೀ ಹೀಂಗ ನೋಡಬ್ಯಾಡ ನನ್ನ ..ಮುಂತಾದುವು)

ತೇಜಸ್ವಿನಿ ಹೆಗಡೆ ಹೇಳಿದರು...

ಚಂದ್ರಕಾಂತ ಅವರೆ,

ಹಾಗಿದ್ದರೆ ನಿಮಗೂ ಧನ್ಯವಾದಗಳು :)

Unknown ಹೇಳಿದರು...

ತುಂಬಾ ಅರ್ಥ ಪೂರ್ಣವಾಗಿದೆ..