ಧಿಕ್ಕಾರ!!!!!
ಇವತ್ತು ಮಧ್ಯಾಹ್ನ ನನ್ನವರಿಂದ ನನಗೊಂದು forward mail ಬಂತು. ಆಗಷ್ಟೇ ಊಟ ಮುಗಿಸಿ ಬಂದಿದ್ದ ನಾನು, ನೋಡುತ್ತಾ ಹೋದಂತೆ, ಅಕ್ಷರಶಃ ದಿಗ್ಭ್ರಾಂತಳಾದೆ. ತಿಂದ ಅನ್ನವೆಲ್ಲಾ ಒಮ್ಮೆಲೇ ಗಂಟಲಿಗೆ ಬಂದ ಅನುಭವವಾಗಿ, ತಲೆತಿರುಗಿದಂತಾಯಿತು. ನಾನ್ಯಾವತ್ತೂ ಇಷ್ಟೊಂದು ಭಾವೋದ್ರೇಕಕ್ಕೆ ಒಳಗಾದವಳಲ್ಲ. ಇಲ್ಲಿಯ ಚಿತ್ರಗಳನ್ನು, ಅದರ ಕೆಳಗಿರುವ ವಿವರಣೆಗಳನ್ನು ನೋಡಿ ಕಣ್ಣೀರು ತುಂಬಿತು...
ಈ ಚಿತ್ರಗಳನ್ನು ನೋಡಿದಾಗ ಅನಿಸಿದ್ದು ಒಂದೇ..... ಮಾನವನಿಗಿಂತ ಕ್ರೂರ ಪ್ರಾಣಿ ಖಂಡಿತ ಮತ್ತೊಂದಿಲ್ಲ. ಭೂತ, ಪ್ರೇತ, ಪಿಶಾಚಿಗಳೂ ಹೆದರುವುದು ಈ ಮಾನವನಿಗೇ ಎಂದು. ನರರೂಪಿ ರಾಕ್ಷಸರನ್ನು ಮತ್ತಷ್ಟು ಪೈಶಾಚಿಕರನ್ನಾಗಿಮಾಡುವುದು ಜನರ ಹೊಟ್ಟೆಬಾಕತನ ಹಾಗೂ ನಿಲ್ಲದ ಚಪಲತೆ. ದಯವಿಟ್ಟು ಇದನ್ನು ನಿಲ್ಲಿಸಲು ಯತ್ನಿಸಿ. ನಿಮ್ಮೊಳಗಿನ ಮಾನವಿಯತೆಯನ್ನು ತುಸುವಾದರೂ ಉಳಿಸಿಕೊಳ್ಳಿ.
ಬೇಡದ, ಮೂರುಕಾಸಿಗೂ ಬೆಲೆಯಿಲ್ಲದ ವಿಷಯಕ್ಕೆಲ್ಲಾ ಹೋರಾಟ ಮಾಡುವ ಸಂಘಟನೆಗಳು ಈ ಒಂದು ಅಮಾನವೀಯತೆಯನ್ನು ತಡೆಯಲು ಯಾಕೆ ಮುಂದಾಗುತ್ತಿಲ್ಲ? ಇಂತಹ ಒಂದು ಪಾಪಕೃತ್ಯವನ್ನು ಮಾಡಿಸುತ್ತಿರುವವನು, ಮಾಡುತ್ತಿರುವವ ಎಷ್ಟು ದುಷ್ಟನೋ, ಅವನಿಗಿಂತ ದುಷ್ಟ ಹಾಗೂ ಅಮಾನವೀಯ ಮನುಷ್ಯ(??) ಇದನ್ನು ಚಪ್ಪರಿಸುತ್ತಾ ತಿನ್ನುವವ!! ಇಂತಹ ಪೈಶಾಚಿಕತೆಯನ್ನು ನಡೆಸುತ್ತಿರುವ, ನಡೆಸಲು ಪರೋಕ್ಷ ಹಾಗೂ ಪ್ರತ್ಯಕ್ಷ ಸಹಕಾರವನ್ನು ನೀಡುವ ಪ್ರತಿಯೊಬ್ಬನಿಗೂ ನನ್ನ ಧಿಕ್ಕಾರ!! ನರಕವೆಂಬುದಿದೆಯೆಂದಾದರೆ, ಖಂಡಿತ ಇಂಥವರಿಗೆ ಈ ಜನುಮದಲ್ಲೇ ಅದು ಸಿಗಲೆಂದು ಪ್ರಾರ್ಥಿಸುವೆ.
ಇಂಗ್ಲೀಷಿನಲ್ಲಿದ್ದ e-mail ಅನ್ನು ಇದ್ದ ಹಾಗೇ ನನ್ನ ಬ್ಲಾಗಿನಲ್ಲಿ ಕಾಣಿಸಿದ್ದೇನೆ. ಭಾಷಾಂತರಿಸಲು ನನ್ನ ಕೈಗಳೂ ಸಹಕರಿಸಲಿಲ್ಲ. ಹುಡುಕಿದರೆ ಪದಗಳೆಲ್ಲಾ ಖಾಲಿ!! :(
ಸುಂದರ, ಮುಗ್ಧ, ಅಮಾಯಕ ಬಾತುಕೋಳಿಗಳಿಗೆ ನನ್ನ ಎದೆಯಾಳದ ಶ್ರದ್ಧಾಂಜಲಿ!
:(:( :(
- ತೇಜಸ್ವಿನಿ ಹೆಗಡೆ
--------------------------------------
Foie Gras

Let's see the source of this wonderful dish
Let's see the source of this wonderful dish


The metal pipe pass through the throat to stomach ...even if it does not want to eat anything To make the liver bigger and fatter


How sad their eyes show up



How sad this life is..


This your Healthy Liver like those Chicken (!!!!??)


STOP THE DAILY TORTURE AND CRUELTY TO THE POOR ANIMAL. STOP TAKING THIS DISH OR PRODUCT NOW.
STOP THE DEMAND AND
THE SUPPLY WILL END.
PLEASE....
(Tejaswini.)