ಇರಲೆನ್ನ ಮೇಲೆ ನಿನ್ನ ಪ್ರೇಮ
ಬಾಲ್ಯದಲ್ಲಿ ನನ್ನನ್ನು ಹುರಿದುಂಬಿಸಿ... ಸ್ಟೇಜ್ ಹತ್ತಿಸಿ, ಎಲ್ಲರಂತೇ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುವಂತೇ ಪ್ರೇರೇಪಿಸಿದ... ಈಕೆ ನರ್ತಿಸಬಲ್ಲಳೇ? ಎಂದು ಅನುಮಾನಿಸಿ ಹಿಂದೇಟು ಹಾಕಿದ ಗುರುಗಳಿಗೂ ಗುರುವಾಗಿ ನಿಂತು ಸ್ವತಃ ತಾನೇ ಹಾಡು ಕಟ್ಟಿ, ಸಂಗೀತ ಸಂಯೋಜಿಸಿ ನನಗೆ ಬೇಕಾದ ರೀತಿಯಲ್ಲೇ, ಕುಳಿತಲ್ಲೇ ಹೇಗೆ ಕೇವಲ ಕೈಗಳನ್ನಷ್ಟೇ ಉಪಯೋಗಿಸಿಯೂ, ಹಾವ ಭಾವಗಳ ಮೂಲಕವೂ ನೃತ್ಯವನ್ನು ಅಭಿವ್ಯಕ್ತಿಸಬಹುದೆಂದು ಎಲ್ಲರಿಗೂ (ನನಗೂ) ತೋರಿಸಿಕೊಟ್ಟ ನನ್ನ ಮೊತ್ತ ಮೊದಲ ಗುರು "ತಾಯಿ"ಗೆ (ಶ್ರೀಮತಿ ಜಯಲಕ್ಷ್ಮೀ ಭಟ್)....
Appa, Ammana naduve... :) |
ಒಂದನೆ ತರೆಗತಿಯಲ್ಲಿ ನನ್ನನ್ನು ಬಲುವಾಗಿ ಪ್ರೀತಿಸಿ ಎಲ್ಲವನ್ನೂ ಅರಿತು ಪ್ರೋತ್ಸಾಹಿಸಿ ನನ್ನ ತಾಯಿಗೆ ಬೆಂಬಲವಾಗಿ ನಿಂತ ನನ್ನ ಕ್ಲಾಸ್ ಟೀಚರ್ ಶ್ರೀಮತಿ "ಲಿಂಗು ಟೀಚರ್"ಗೆ,
ಹೈಸ್ಕೂಲ್‌ನಲ್ಲಿ ಎಲ್ಲೋ ಗೀಚಿ ಅಪ್ಪನಿಗಷ್ಟೇ ತೋರಿಸಿ ಸುಮ್ಮನಾಗಿದ್ದ ನನ್ನ ಕವಿತೆಗಳನ್ನೆಲ್ಲಾ ಹೊರತೆಗೆದು ಓದಿ ತಿದ್ದಿ, ಹತ್ತನೆಯ ತರಗತಿಯಲ್ಲೇ ಮೊದಲ ಕವನಸಂಕಲನ ಪ್ರಕಟಿಸುವಂತೇ ಪ್ರೋತ್ಸಾಹಿಸಿ ಪ್ರೀತಿಯಿಂದ ಮುನ್ನುಡಿಯನ್ನೂ ಬರೆದ ನನ್ನ ಕನ್ನಡ ಪ್ರಾಧ್ಯಾಪಕರೂ ಅತ್ಯುತ್ತಮ ಲೇಖಕರೂ ಆಗಿರುವ ಶ್ರೀಯುತ "ಸುಮುಖಾನಂದ ಜಲವಳ್ಳಿ"ಯವರಿಗೆ....
ಕಾಲೇಜಿನಲ್ಲಿ ಕೆಮಿಸ್ಟ್ರಿ ಎಂದರೆ ಯಾಕಿಷ್ಟು ಮಿಸ್ಟ್ರಿಯಪ್ಪಾ ಎಂದು ತಲೆಬಿಸಿಮಾಡಿಕೊಂಡಾಗ, ಫಾರ್ಮುಲಾಗಳೆಲ್ಲಾ ಹೇಗೆ ಬದುಕೊಳಗೆ ಹಾಸುಹೊಕ್ಕಾಗಿವೆ ಎಂದು ಸರಳವಾಗಿ, ಸುಲಭವಾಗಿ ನನಗೆ ಪರಿಚಯಿಸಿ ಮುಂದೆ ಅದೇ ನನ್ನ ಅಚ್ಚುಮೆಚ್ಚಿನ ವಿಷಯವಾಗಲು ಕಾರಣರಾದ ಶ್ರೀಯುತ ಪ್ರೊಫೆಸರ್ "ಡಾ. ಬಿ.ಎಸ್.ಮೂಡಿತ್ತಾಯ" ಅವರಿಗೆ....
ಬದುಕು ಹೇಗೆ? ಎನು? ಎತ್ತ? ನಾನೆಷ್ಟು ನಿಮಿತ್ತ? ತಿಳಿದಷ್ಟೂ ತಿಳಿಯಲು ಸಾಕಷ್ಟಿದೆ.... ಪ್ರತಿ ದಿವಸವೂ ವಿನೂತನವೇ.... ನಗು ನಗುತ್ತಾ ಸಮಸ್ಯೆಯನ್ನು ಒಮ್ಮೆ ಎದುರಿಸತೊಡಗಿದರೆ ಅದೂ ನಮ್ಮನ್ನು ಮುಂದೆ ಬಿಟ್ಟು ಹಿಂಬಾಲಕನಾಗುತ್ತದೆ ಎನ್ನುವ ಸತ್ಯದರ್ಶನ ಮಾಡಿಸಿದ- ಗೀತೆಯ ಕೃಷ್ಣ, ರಾಮಕೃಷ್ಣ ಪರಮಹಂಸರು, ಶಂಕರಾಚಾರ್ಯರು - ಇಂತಹ ಪರಮಗುರುಗಳ ಪದತಲಕ್ಕೆ.....
ಹತ್ತು ಹಲವು ರೀತಿಯಲ್ಲಿ ನನಗೆ ಮಾದರಿಯಾದ, ಅನುಭವ ಕಲಿಸಿದ, ಪಕ್ವವಾಗುವ ಪ್ರಕ್ರಿಯೆಯಲ್ಲಿ ಸಹಕರಿಸಿದ ಎಲ್ಲಾ ಸ್ನೇಹಿತವರ್ಗಕ್ಕೆ, ಆತ್ಮೀಯರಿಗೆ... -
ಇವರೆಲ್ಲರಿಗೂ ಗುರು ಪೂರ್ಣಿಮೆಯ ಸಹಸ್ರ ನಮನಗಳು.
ಮನಃಪೂರ್ವಕವಾಗಿ ಎದೆದುಂಬಿ ತಲೆಬಾಗುವೆ.
-ತೇಜಸ್ವಿನಿ ಹೆಗಡೆ.
6 ಕಾಮೆಂಟ್‌ಗಳು:
ಇವತ್ತಿನ ಈ 'ಗುರುಪೂರ್ಣಿಮೆಯ' ದಿನಕ್ಕೆ ನಿಮ್ಮ ಮನತುಂಬಿದ ಪ್ರತಿಯೊಂದು ಸಾಲುಗಳು ಇಷ್ಟವಾಯ್ತು. :-)
ಒಂದು ವರ್ಣವ ಕಲಿಸಿದಾತ ಗುರು ಎಂಬ ಕುಮಾರವ್ಯಾಸನ ಉಕ್ತಿಯಂತೆ ಬದುಕ ಕಲಿಸಲು ಅದೆಷ್ಟು ಗುರುಗಳು ?
ನಿಮ್ಮ ಬರಹ ಎಲ್ಲರನ್ನೂ ಜ್ಞಾಪಿಸಿತು
ಚಿತ್ರ ಸುಂದರವಾಗಿದೆ
ಬದುಕುವದನ್ನು ತೋರಿಸಿಕೊಟ್ಟ ನೀವೂ ಸಹ ಗುರುಗಳೇ. ನಿಮಗೂ ವಂದನೆಗಳು.
nimma jeevanavu innobbarige maargadarshavaagide...spoorthiyaagide....
nimmagu GURUPOORNIME ya subhaashaya..
ಸಂದರ್ಭಕ್ಕೆ ಸರಿಯಾದ ಲೇಖನ. ಧನ್ಯವಾದಗಳು
Ellara badukallu idu baruvudu, aadare kelavara badukalli guru bandu baduku badalaagi jeevanada guri muttalu sulabhavaaguvudu.
Nanna badukalli Guru vaagi banda H.H.Sri Sri Ravishankar ravarige Nanna namana haagu ella reetilu paatha kalisida pratiyobbarigu
Happy Gurupoornima :)
ಕಾಮೆಂಟ್ ಪೋಸ್ಟ್ ಮಾಡಿ