ಬುಧವಾರ, ಆಗಸ್ಟ್ 3, 2011

ನಾಲ್ಕು ತುಂಬಿತು ಹರುಷಕೆ

Aditi Hegde

ಮುಷ್ಠಿಯಾಗಿದ್ದ ಪುಟ್ಟ ಕೈಬೆರಳುಗಳ ಬಿಡಿಸೆ,
ಥಟ್ಟೆಂದು ನನ್ನ ಬೆರಳೊಂದನು ಹಿಡಿದ ನಿನ್ನ ಸ್ಪರ್ಶಕೆ
ತುಂಬಿದವಿಂದು ನಾಲ್ಕು ವರುಷಗಳು!

ನೆತ್ತಿಯ ಮೃದು ಭಾಗವ ಮೂಸಿ, ಆಸ್ವಾದಿಸಿ
ಕಡಲೇ ಹಿಟ್ಟಿನ ಪರಿಮಳವ ಒಳ ತುಂಬಿಕೊಂಡ
ಆ ಘಳಿಗೆಗೆ ಇಂದು ನಾಲ್ಕು ವರುಷಗಳು!

ಕೋಣೆಯ ತುಂಬಿದ ಸಾಂಬ್ರಾಣಿ ಹೊಗೆಯ ಘಾಟಿಗೆ
ಕಣ್ಮುಚ್ಚಿ ಬೋರೆಂದು ಅತ್ತ ನಿನ್ನ ಹಿಡಿದಪ್ಪಿದಾಗ
ಹಾಗೇ ನಿದ್ದೆಗೆಳೆದ ಗೊಂಬೆಗಿಂದು ನಾಲ್ಕು ವರುಷಗಳು!

ಬಂಧು ಬಳಗವೆಲ್ಲಾ ನಿನ್ನ ಅಪ್ಪಿ ಮುದ್ದಾಡುತ್ತಿದ್ದರೂ,
‘ಅಮ್ಮಾ’ ಎಂದು ಮೊದಲ ಬಾರಿ ಕರೆದು ನನ್ನೊಳಗಿನ ತಾಯ್ತನಕ್ಕೆ
ಸಾಕ್ಷಿಯೊದಗಿಸಿದ ಕಿನ್ನರಿಗೀಗ ನಾಲ್ಕು ವರುಷಗಳು!

ನನ್ನೊಳಗಿನ ನೀನು, ನಿನ್ನನೊಳಗಿನ ನಾನು ಒಳಗೊಳಗೆ ವಿಕಸಿತಗೊಂಡು,
ಮೊದಲ ನೋಟ, ಮೊದಲ ಸ್ಪರ್ಶ, ಸುಧೆಯ ಹನಿಯ ತುಟಿಗಿತ್ತ
ಆ ದಿನದಗಳ ನೆನಪಿಗಿಂದು ನಾಲ್ಕು ವರುಷಗಳು!

‘ಅದಿತಿಗಾಗಿ’ :)


-ತೇಜಸ್ವಿನಿ ಹೆಗಡೆ.

17 ಕಾಮೆಂಟ್‌ಗಳು:

ಮನಸಿನ ಮಾತುಗಳು ಹೇಳಿದರು...

Happy Birthday To Aditi...:-)

Ambika ಹೇಳಿದರು...

Happy birthday Aditi :)
Kavana chennagide :)

ಮನಸಿನಮನೆಯವನು ಹೇಳಿದರು...

ಶುಭಾಷಯಗಳು

_ನನ್ನ 'ಮನಸಿನಮನೆ'ಗೂ ಬನ್ನಿ

krutthivaasapriya ಹೇಳಿದರು...

happy birthday aditi :)

sunaath ಹೇಳಿದರು...

ಮಗುವಿನ ಬಗೆಗಿರುವ ತಾಯಿಯ ಮಮತೆಯನ್ನು ಬಿಂಬಿಸುವ ಕವನ. ಅದಿತಿಗೆ ಹುಟ್ಟುಹಬ್ಬದ ಶುಭಾಶಯಗಳು.

shivu.k ಹೇಳಿದರು...

ಮೇಡಮ್,

ತಾಯಿ ಮಮತೆಯನ್ನು ಬಿಂಬಿಸುವ ನಿಮ್ಮ ಕವನ ಇಷ್ಟವಾಯಿತು. ಅದಿತಿಗೆ ಹುಟ್ಟುಹಬ್ಬದ ಶುಭಾಶಯಗಳು

Dr.D.T.Krishna Murthy. ಹೇಳಿದರು...

ನಿಮ್ಮಪುಟ್ಟ ಅದಿತಿಗೆ ಹುಟ್ಟು ಹಬ್ಬದ ಶುಭಾಶಯಗಳು.ಕವನ ತುಂಬಾ ಚಂದವಿದೆ.

ಸಾಗರದಾಚೆಯ ಇಂಚರ ಹೇಳಿದರು...

Happy Birthday Putti:)

ವಾಣಿಶ್ರೀ ಭಟ್ ಹೇಳಿದರು...

Happy Bday Adthi:)

Subrahmanya ಹೇಳಿದರು...

ಅದಿತಿಗೆ ಭಾವಪೂರ್ಣ ಶುಭಾಶಯಗಳನ್ನು ಹೇಳಿದ್ದೀರಿ. ನನ್ನ ಕಡೆಯಿಂದಲೂ ಪುಟಾಣಿಗೆ ಶುಭಾಶಯಗಳು.

Harisha - ಹರೀಶ ಹೇಳಿದರು...

ಅದಿತಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ :-)

nsru ಹೇಳಿದರು...

ವಾತ್ಸಲ್ಯಪೂರ್ಣ ಕವನ ಅಕ್ಕ..ಪ್ರೀತಿಯ ಪುಟ್ಟಿಗೆ ಶುಭ ಹಾರೈಕೆಗಳು :)
ಅಬ್ದುಲ್ ಕಲಾಂ ಅವರು 'ಹುಟ್ಟಿದ ದಿನ' ದ ಬಗ್ಗೆ ಹೇಳಿದ ಮಾತು ನೆನಪಾಯ್ತು..
BIRTHDAY- "The Only day in your life when you cried and your mother was smiling"

ಅನಾಮಧೇಯ ಹೇಳಿದರು...

ತಡವಾಗಿ ಆದ್ರೂ,

ತುಂಬು ಹಾರೈಕೆಗಳು ಮುದ್ದು ಅದಿತಿಗೆ.

ಕವಿತೆ ಚೆನಾಗಿದ್ದು. ಅಮ್ಮನ ಹಾಡು!

ಪ್ರೀತಿಯಿಂದ,ಸಿಂಧು

ಅನಾಮಧೇಯ ಹೇಳಿದರು...

ಮನ ತು೦ಬಿದ ಅದಿತಿಗೆ ಹುಟ್ಟುಹಬ್ಬದ ಶುಭಾಶಯಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನ ಪುಟ್ಟಿಗೆ ಪ್ರೀತಿಯಿಂದ ಆಶೀರ್ವದಿಸಿದ, ಶುಭಾಶಯಗಳನ್ನಿತ್ತ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು. :)

-ತೇಜಸ್ವಿನಿ ಹೆಗಡೆ.

ಸೀತಾರಾಮ. ಕೆ. / SITARAM.K ಹೇಳಿದರು...

Belated wishes to Putti(Aditi)-many many happy returns of the day.
ಪದರ ಪದರವಾಗಿ ತಾಯ್ತನದ ಸೊಬಗ ಅನುಭವಿಸಿದ ಕ್ಷಣಗಳ ಹೆಕ್ಕಿ ಮಗುವಿಗೆ ಸಮರ್ಪಿಸಿ ಅಭಿನಂದಿಸಿದ್ದು ತುಂಬಾ ಇಷ್ಟವಾಯಿತು.

Unknown ಹೇಳಿದರು...

ಅದಿತಿ Belated wishes ಹುಟ್ಟು ಹಬ್ಬದ ಶುಭಾಶಯಗಳು.
ಹುಟ್ಟು ಹಬ್ಬದ ಶುಭಾಶಯಗಳು
ತೇಜಸ್ವಿನ ಮೇಡಮ್ ನಿಮ್ಮ ಕವನ ನಿಜಕ್ಕೂ ಚನ್ನಾಗಿದೆ
ತಾಯ್ತನದ ವಿವರಣೆ ಅದ್ಬುತ.
ದಯವಿಟ್ಟು ನನ್ನ ಬ್ಲಾಗ್ ನೋಡಿ
http://rakeshashapur.blogspot.com
ಕವಿಜಗತ್ತಿನ ಮಗುವಿಗೆ ನಿಮ್ಮ ಸಲಹೆ ಕೊಡಿ
ಧನ್ಯವಾದಗಳು