ತಿಳಿ ನೀಲಾಗಸದಿ ಚಂದಿರನು ಬಂದಾಗ,
ಹುಣ್ಣಿಮೆಯು ಸುರಿವಂತೆ ನಿನ್ನ ನೆನಪು..
ತಾರೆಗಳ ಗುಂಪಿಂದ ಅರುಂಧತಿ ನಕ್ಕಾಗ,
ಸಪ್ತಪದಿ ತುಳಿದಂತೆ ನಿನ್ನ ಕನಸು...
ಚುಮು ಚುಮು ಬೆಳಗಲಿ ಇಬ್ಬನಿ ಸೋಕಲು,
ಚಿಲಿ ಪಿಲಿ ಗಾನದೊಳು ನಿನ್ನ ಹೆಸರು..
ಸಾಗರದೊಳಗಿಂದ ಅಲೆಗಳು ಎದ್ದಾಗ,
ಉಕ್ಕುವ ನೊರೆಯೊಳು ನಿನ್ನ ನಗುವು...
ಮುಗಿಲನು ಮುಟ್ಟಿದ ಮರವನು ತಬ್ಬಿದ,
ಲತೆಯೊಳು ಬಿರಿದ ಹೂ ನಮ್ಮ ಒಲವು...
-ತೇಜಸ್ವಿನಿ ಹೆಗಡೆ
12 ಕಾಮೆಂಟ್‌ಗಳು:
ನೀಲಾ ಗಗನ್ ಔರ್ ಸಾಂಜ್ ಢಲೆ
ನಿಕಲೀ ಐಸೆ ಮುಸ್ಕಾತೀ ಚಂದಾ
ಪೂನಮ್ ಹೋ ಖುಲೆ ಜೈಸೆ ದೂಧ್ ಮಲೆ
ಭಲೆ ಕ್ಯೂಂ ನ ಹೋ ಮದ್ ಹೋಶೀ ಜಿಂದಾ..
ಸುಂದರ ಸಾಲುಗಳು ತೇಜಸ್ವಿನಿ....
chennagide saalugalu...
ಸುಂದರವಾದ ಕವನ, ತೇಜಸ್ವಿನಿ.
ಚ೦ದ ಇದೆ ಕವನ ತೇಜಕ್ಕ.... ಚಿಕ್ಕದಾದ ಚೊಕ್ಕ ಕವನ :)
nice -sitaram
nice !
ಕವಿತೆ ಇಷ್ಟಾ ಆಯ್ತು
ಸುಂದರವಾದ ಭಾವ....
ಶ್ಯಾಮಲ
ತೇಜಕ್ಕ,
ನೆನಪು, ಕನಸು, ಒಲವು, ನಗು, ಹೆಸರು - ಹೋಲಿಕೆಗಳು ತುಂಬ ಚೆನ್ನಾಗಿವೆ
ಕವನ ನೇರ ಹಾಗು ಸರಳವಾಗಿದೆ.
ನಿಮ್ಮ ಬರಹಕ್ಕೆ ಒಂದು ಸೂಕ್ತ ಚಿತ್ರ ಇದ್ದರೆ ಅದರೆ ಅಂದ ಇನ್ನೂ ಹೆಚ್ಚುತ್ತದೆ. ಇದು ನಿಮ್ಮ ಹಿಂದಿನ ಕವನಕ್ಕೂ(ಗ್ರೀಷ್ಮದ ಹೊಸ್ತಿಲಲ್ಲಿ) ಅನ್ವಯಿಸುತ್ತೆ.
ಬ್ಲಾಗ್ ಬಗ್ಗೆ ನಾನು ಹೆಚ್ಚು ತಿಳಿದವನಲ್ಲ, ಇದು ನನ್ನ ಅನಿಸಿಕೆ ಮಾತ್ರ.
ನೀರಡಿಕೆಯಾದಾಗ ನಿರ್ಮಲವಾದ ನೀರಿನಲ್ಲಿ ಬೊಗಸೆ ನೀರು ಕುಡಿದಸ್ಟು ಹಿತವಾಗಿತ್ತು ನಿಮ್ಮ ಕವನ
ಕವಿತೆಯನ್ನು ಮೆಚ್ಚಿ ಸ್ಪಂದಿಸಿದ ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹವೇ ಬರಹಕ್ಕೆ ಪ್ರೇರಣೆ.
@nsru,
ಹೂಂ... ನನಗೂ ಎಷ್ಟೋ ಸಲ ಅನಿಸಿದ್ದಿದೆ.. ಕವನದೊಂದಿದೆ ಸೂಕ್ತ ಚಿತ್ರವಿದ್ದರೆ ಉತ್ತಮ ಎಂದು. ಹಾಗೇ ಹಾಕಿರುವೆ ನಾನು ನನ್ನ ಅದೆಷ್ಟೋ ಕವನ/ಬರಹಗಳಿಗೆ. ಆದರೆ ಒಮ್ಮೊಮ್ಮೆ.. ಕವನಕ್ಕೆ ತಕ್ಕುದಾದ ಚಿತ್ರ ಸಿಗದು. ಕೆಲವು ಕವನಗಳು ಚಿತ್ರದ ಸೀಮೆಗೆ, ಸೌಕಟ್ಟಿಗೆ ಒಳಪಡವು. ಚಿತ್ರವನ್ನು ಕೊಟ್ಟರೆ ಕವಿತೆಪರಿಮಿತಿ ಸೀಮಿತವಾಗುವ ಅಪಾಯವೂ ಇದೆ ಅಲ್ಲವೇ? ಹೀಗೇ ಅನ್ನೋ ಚಿತ್ರಣ ಕಟ್ಟಿ ಕೊಡುವುದರ ಬದಲು.. ಅವರವರ ಕಲ್ಪನೆಗೆ ಬಿಡುವುದೇ ಉತ್ತಮ. ಕವಿತೆ ಎಂದರೆ ಅವರವರ ಭಾವಕ್ಕೆ...
ನಿಮ್ಮ ಕಾಳಜಿ, ಸ್ನೇಹಕ್ಕೆ ತುಂಬಾ ಧನ್ಯವಾದಗಳು. ಹೀಗೇ ಬರುತ್ತಿರಿ. ಪ್ರೋತ್ಸಾಹ ಇರಲಿ.
---
ಪ್ರೀತ್ಯಾದರಗಳೊಂದಿಗೆ,
ತೇಜಸ್ವಿನಿ ಹೆಗಡೆ
ನಿಮ್ಮ ಮಾತನ್ನು ಒಪ್ಪುತ್ತೇನೆ ಅಕ್ಕ, ಪೂರಕ ಚಿತ್ರ ಹುಡುಕುವುದು ಕಷ್ಟದ ಕೆಲಸ..
ಕೆಲವು ಸಲ ಬರಹಕ್ಕೆ ಸೂಕ್ತ ಶೀರ್ಷಿಕೆ ಸೂಚಿಸುವುದೂ ಕಷ್ಟ....ಶೀರ್ಷಿಕೆ ಒಳ್ಳೆ ಚಿತ್ರಕ್ಕೆ ಪ್ರೇರಣೆ ನೀಡಬಹುದು
ಕಾಮೆಂಟ್ ಪೋಸ್ಟ್ ಮಾಡಿ