ಶುಕ್ರವಾರ, ಏಪ್ರಿಲ್ 8, 2011

ಒಂದು ಪುಟ್ಟ ವಿನಮ್ರ ವಿನಂತಿ.....

ಜವರಿ ೧೪ ೧೯೪೦ರಂದು ಹುಟ್ಟಿ.. ಸಾಮಾನ್ಯನಂತೇ ಬೆಳೆದು...ಮುಂದೆ ಭಾರತೀಯ ಸೈನ್ಯಕ್ಕೆ ಸೇರಿ, ಅಲ್ಲಿ ಚಾಲಕನಾಗಿ ದುಡಿದು.. ದೇಶಪ್ರೇಮವನ್ನು ಬೆಳೆಸುಕೊಂಡು.. ಉಳಿಸುಕೊಂಡು.. ಈ ಮಣ್ಣಿಗಾಗಿ, ಇಲ್ಲಿನ ಜನರಿಗಾಗಿ ಹೋರಾಡಿದ... ಹೋರಾಡುತ್ತಿರುವ ಆ ಚೇತನವೇ ಕಿಶನ್ ಬಾಪಟ್ ಬಾಬೂರಾವ್ ಹಜಾರೆ... ಎಲ್ಲರ ಮನದೊಳಗೆ ಮನೆಮಾಡಿರುವ ಶ್ರೀ ಅಣ್ಣಾ ಹಜಾರೆ. 

Courtesy : http://www.trendingindia.com 

೧೯೬೫ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರನ್ನು ಹೊತ್ತು ಹೋಗುತ್ತಿದ್ದ ಟ್ರಕ್ ಒಂದರ ಮೇಲೆ ಧಾಳಿ ನಡೆದಾಗ ಅದರೊಳಗೆ ಬದುಕಿ ಬಂದಿದ್ದ ಏಕೈಕ ವೈಕ್ತಿಯೇ ಅಣ್ಣಾ ಹಜಾರೆ! ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ - ಇಂತಹ ಮಾನುಭಾವರ ಆತ್ಮ ಚರಿತ್ರೆಗಳನ್ನು ಓದುತ್ತಾ ಪ್ರಭಾವಿತರಾಗಿ ದೇಶ ಸೇವೆಗೆಂದೇ ತಮ್ಮನ್ನು ಮುಡಿಪಿಟ್ಟ ಅವರು ತಮ್ಮ ಸಮಾಜಸೇವೆಯನ್ನು ಪ್ರಾರಂಭಿಸಿದ್ದು ಮಹಾರಾಷ್ಟ್ರದ ಅಹಮದ್ ನಗರದ "ರಾಲೆಗಾಂವ್ ಸಿದ್ದಿ" ಎನ್ನುವ ಪುಟ್ಟ ಕುಗ್ರಾಮದಿಂದ.

ಕುಡಿತ, ಬಡತನ, ಅನಕ್ಷರತೆಯ ದಾಸ್ಯಕ್ಕೆ ಸಿಲುಕಿ ನರುಳುತ್ತಿದ್ದ ಅಲ್ಲಿಯ ಜನರೊಳಗೆ, ಸಾಕ್ಷರತೆ, ನೈರ್ಮಲ್ಯ, ಮೌಲ್ಯಗಳನ್ನು ತುಂಬಿದ್ದಲ್ಲದೇ ಕುಡಿತದ ಚಟ ಇರುವವರನ್ನು ನಯದಿಂದ ತಿದ್ದಿ.. ಬಗ್ಗದವರನ್ನು ಶಿಕ್ಷೆಯಿಂದ ದಾರಿಗೆ ತಂದು ಆದರ್ಶ ಗ್ರಾಮವನ್ನಾಗಿಸಲು ದುಡಿದವರು. ಈಗ ಈ ಪುಟ್ಟ ಗ್ರಾಮ ದೇಶದಲ್ಲೇ ಶ್ರೀಮಂತ ಹಾಗೂ ಮಾದರಿ ಗ್ರಾಮವಾಗಿ ಪ್ರಚಲಿತಗೊಂಡಿದೆ. ಸೌರಶಕ್ತಿಯ ಬಳಕೆಯ ಮೂಲಕ ಇಂಧನ ಉಳಿತಾಯದಂತಹ ಸದುದ್ದೇಶಗಳನ್ನು ಪ್ರೇರೇಪಿಸಿದ ಈ ಸಮಾಜ ಸೇವಕ ಸದಾ ದೇಶದ ಸರ್ವತೋಮುಖ ಏಳಿಗೆಯನ್ನು ಬಯಸಿದವರು. ಅವರ ಮಹತ್ಸಾಧನೆಗಾಗಿ ಭಾರತ ಸರಕಾರ "ಪದ್ಮ ಭೂಷಣ", "ಪದ್ಮಶ್ರೀ ಪ್ರಶಸ್ತಿಯನ್ನು" ಕೊಟ್ಟು ಗೌರವಿಸಿದೆ. 

ಆದರೆ ಇದೇ ಸರಕಾರ ಜನಪರವಾಗಿರುವ ಅವರ  ಜನ ಲೋಕಪಾಲ್ ಬಿಲ್ ಅನ್ನು ಒಪ್ಪಿಕೊಳ್ಳಲು ಸತ್ವವಿಲ್ಲದ ಕಾರಣಗಳನ್ನು ನೀಡಿ ನಿರಾಕರಿಸುತ್ತಿದೆ. ಸೋಲೊಪ್ಪದ ಅಣ್ಣಾ ಹಜಾರೆ ಅವರು ಈ ಮಸೂದೆಯನ್ನು ಜಾರಿಗೆ ತರಲು ಪಟ್ಟು ಹಿಡಿದು, ಏಪ್ರಿಲ್ ೫ರಿಂದ ನಿರಾಹಾರಿಯಾಗಿ ಸತ್ಯಾಗ್ರಾಹಕ್ಕೆ ಕುಳಿತಿದ್ದಾರೆ. ಮಸೂದೆಯಲ್ಲಿರುವ ಕೆಲವೊಂದು ಸೂಚನೆಗಳು.. ಸಲಹೆಗಳು ಸರಕಾರಕ್ಕೆ ಅಪಥ್ಯವಾಗಿದೆ. ಕಾರಣ... ಭ್ರಷ್ಟಾಚಾರ ಅಷ್ಟು ಆಳವಾಗಿ ಬೇರೂರಿದೆ. ಯಾರೂ ಪರಿಶುದ್ಧರಲ್ಲ. ಹಾಗಾಗಿ ಯಾವ ಪಾರ್ಟಿಯವರಿಗೂ ಇದರ ಮಂಡನೆ ಬೇಕಾಗಿಲ್ಲ. ಕೇವಲ ಬಾಯಿ ಮಾತಿಗಾಗಿ ತಮ್ಮ ಬೆಂಬಲವಿದೆ ಎಂದು ಸಾರುತ್ತಿದ್ದಾರೆ...ಇಲ್ಲದ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ. ಆದರೆ ಯಾರ ಕೋರಿಕೆಗೂ, ಬೆದರಿಕೆಗೂ, ಪ್ರಲೋಭನೆಗೂ ಬಗ್ಗದ ಅಣ್ಣ ಹಜಾರೆ, ಯಾವ ಪಾರ್ಟಿಯನ್ನೂ ಮೊರೆ ಹೋಗದೇ ತಮ್ಮ ಸ್ವಂತ ಬಲದ ಮೇಲೆ... ಜನ ಬೆಂಬಲದೊಂದಿಗೆ ಸತ್ಯಾಗ್ರಹದ ಮೂಲಕ ಮಂಡನೆಗಾಗಿ ಆಗ್ರಹಿಸುತ್ತಿದ್ದಾರೆ. 

ಇವರು ಹೋರಾಡುತ್ತಿರುವುದು ನಮಗಾಗಿ.. ನಮ್ಮ ಮುಂದಿನ ಭವಿಷ್ಯತ್ತಿಗಾಗಿ. ಭ್ರಷ್ಟಾಚಾರವನ್ನು ಸಂಪೂರ್ಣವಾಗಿಯಲ್ಲವಾದರೂ ತುಸುವಾದರೂ ಈ ಮಸೂದೆಯಿಂದ ನಿಯಂತ್ರಿಸಲು ಸಾಧ್ಯವಾದರೆ ಅಷ್ಟೇ ಸಾರ್ಥಕ. 

ವಿನಮ್ರ ವಿನಂತಿ
ಬನ್ನಿ ನಮಗಾಗಿ ಹೋರಾಡುತ್ತಿರುವ ಅವರ ಈ ಶಾಂತಿಯುತ, ಸತ್ವಯುತ ಹೋರಾಟದಲ್ಲಿ ನಾವೂ ನಮಗಾದಂತೇ ಪಾಲ್ಗೊಳ್ಳೋಣ. ಒಂದು ದಿನ ನಾವೆಲ್ಲರೂ ನಿರಾಹಾರಿಗಳಾದಿದ್ದು ಮೌನವಾಗಿ ಆ ಭಗವಂತನಲ್ಲಿ ಅವರ ಹಾಗೂ ನಮ್ಮ ಜಯಕ್ಕಾಗಿ ಪ್ರಾರ್ಥಿಸೋಣ. ನಿರಾಹಾರಿಗಳಾಗಿರಲು ಆರೋಗ್ಯ ಸಮಸ್ಯೆ ಇದ್ದವರು ಹಣ್ಣು-ಹಂಪಲು, ಪೇಯಗಳ ಮೂಲಕವಾದರೂ ಪಾಲ್ಗೊಳ್ಳಬಹುದು. ನಿರ್ಮಲ ಮನಸಿನ ಪ್ರಾರ್ಥನೆ, ಸಂಕಲ್ಪ ಅತ್ಯವಶ್ಯಕ. ಪ್ರಾರ್ಥನೆಯಲ್ಲಿ ಶಕ್ತಿಯಿದೆ. ಸಾತ್ವಿಕತೆಯಲ್ಲಿ ಬಲವಿದೆ... ಈ ಮೂಲಕವಾದರೂ ಸರಕಾರಕ್ಕೆ ಸದ್ಬುದ್ಧಿ ಬಂದು ಜನ ಲೋಕಪಾಲ್ ಮಸೂದೆಗೆ ಹಸಿರು ನಿಶಾನೆ ಸಿಗಬಹುದು.

ನೆನಪಿಡಿ ಒಗ್ಗಟ್ಟಿನಲ್ಲಿ ಬಲವಿದೆ.. ಒಗ್ಗಟ್ಟಿನಲ್ಲಿ ಮಾತ್ರ ಬಲವಿರುವುದು!

ನಿಮ್ಮ ಸೂಚನೆಗಾಗಿ: ಸರಕಾರ ತಿದ್ದುಪಡಿ ಮಾಡಿರುವ ಲೋಕಪಾಲ್ ಬಿಲ್ ಹಾಗೂ ಹಜಾರೆ ಅವರು ಮಂಡಿಸಿರುವ ಮಸೂದೆಯ ನಡುವಿನ ಅಂತರ ನೋಡಿ.. ನೀವೇ ನಿರ್ಧರಿಸಿ ಯಾವುದು ಜನಪರ ಹಾಗೂ ಯಾವುದು ರಾಜಕೀಯಪರವೆಂದು!

Differences between Draft Lokpal Bill 2010 and Jan Lokpal Bill
Draft Lokpal Bill 2010Jan Lokpal Bill
Lokpal will have no power to initiate suo moto action or receive complaints of corruption from the general public. It can only probe complaints forwarded by LS Speaker or RS Chairman.Lokpal will have powers to initiate suo moto action or receive complaints of corruption from the general public.
Lokpal will only be an Advisory Body. Its part is only limited to forwarding its report to the "Competent Authority"Lokpal will be much more than an Advisory Body. It should be granted powers to initiate Prosecution against anyone found guilty.
Lokpal will not have any police powers. It can not register FIRs or proceed with criminal investigations.Lokpal will have police powers. To say that it will be able to register FIRs.
CBI and Lokpal will have no connection with each other.Lokpal and anti corruption wing of CBI will be one Independent body.
Punishment for corruption will be minimum 6 months and maximum up-to 7 years.The punishment should be minimum 7 years and maximum up-to life imprisonment.
Lokpal will not be a monopoly for particular area.

(ಕೃಪೆ: http://en.wikipedia.org)

ನಾನು ಭ್ರಷ್ಟಾಚಾರವನ್ನು ತೀವ್ರವಾಗಿ ವಿರೋಧಿಸುತ್ತೇನೆ. ಅದರ ದಮನಕ್ಕಾಗಿ ಹೋರಾಡುತ್ತಿರುವ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ನನ್ನ ಬೆಂಬಲಿದೆ. ಒಂದು ದಿನದ ಉಪವಾಸ ಮಾಡುವುದರ ಮೂಲಕ ನನ್ನ ಬೆಂಬಲವನ್ನು ನೀಡುತ್ತಿದ್ದೇನೆ.


-ತೇಜಸ್ವಿನಿ ಹೆಗಡೆ.

13 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

Yes.. I am in.

ಅನಾಮಧೇಯ ಹೇಳಿದರು...

Namagintha Mukhandara agatyavide.. I agree with u. Avarige aayur arOgyavannu bhagavantha dayapaalisali.

-Payaswini Hegde.

Subrahmanya ಹೇಳಿದರು...

ಇದೊಂದು ಕ್ರಾಂತಿಯಾಗಬೇಕು. ನಾನೂ ಜೊತೆಗಿದ್ದೇನೆ, ಭೃಷ್ಟಾಚಾರವನ್ನು ವಿರೋಧಿಸುತ್ತೇನೆ.

Lakshmi Shashidhar Chaitanya ಹೇಳಿದರು...

I too am in.

Ittigecement ಹೇಳಿದರು...

I was there today..

ಪರಂಜಪೆಯವರೂ ಬಂದಿದ್ರು...
ಅಲ್ಲಿ ಹೋದರೆ ವಿಶಿಷ್ಟವಾದ ಅನುಭವ..
ದೇಶಪ್ರೇಮ ತುಳುಕುತ್ತಿತ್ತು...
ವಿವರಗಳನ್ನು ಪರಾಂಜಪೆಯವರು ಬರೆಯುತ್ತಾರೆ..

ದಯವಿಟ್ಟು ಎಲ್ಲರೂ ಹೋಗಿ ಬನ್ನಿ...

ನಮ್ಮಿಂದ ಮತ್ತೇನೂ ಮಾಡಲಿಕ್ಕೆ ಆಗುವದಿಲ್ಲ...
ಅಲ್ಲಿ ಉಪವಾಸ ಮಾಡುತ್ತಿರುವ ದೇಶಪ್ರೇಮಿಗಳಿಗೆ ಜೈ ಅಂದರೆ ಎಲ್ಲೋ ಒಂದು ಸ್ವಲ್ಪ ಕೃತಾರ್ಥಬಾವನೆ ಮೂಡುತ್ತದೆ...

Ashok.V.Shetty, Kodlady ಹೇಳಿದರು...

Prati galliyallu obbobba 'Hajaare' hutti barabeku....definately we are with him...

Harisha - ಹರೀಶ ಹೇಳಿದರು...

ತೇಜಕ್ಕಾ, ಕೊನೆಗೂ ಸರ್ಕಾರ ಒಪ್ಪಿದ್ದು :-) ಭ್ರಷ್ಟಾಚಾರದ ವಿರುದ್ಧದ ಚಳವಳಿಯಲ್ಲಿ ಮೊದಲ ಜಯ ಸಿಕ್ಕಿದ್ದು.. ಜೈ ಅಣ್ಣಾ ಹಜಾರೆ..

ಅಂದಂಗೆ ವಿಕಿಪೀಡಿಯದಲ್ಲಿ ಆ ಟೇಬಲ್ ಹಾಕಿದವ್ವ ನಾನೇ ಆಗಿತ್ತು :)

sunaath ಹೇಳಿದರು...

ಅಣ್ಣಾ ಹಜಾರೆಯವರು ಗೆದ್ದಿದ್ದಾರೆ, ದೇಶ ಗೆದ್ದಿದೆ.

ಸಾಗರದಾಚೆಯ ಇಂಚರ ಹೇಳಿದರು...

Anna avara horaatakke jaya sikkide

laksha laksha anna avaranta janaru barabekide eaga

Pramod P T ಹೇಳಿದರು...

Freedom Park ge hogokkagillaa :(
aadaroo ee disheyalli nanna toDagisikoLLuva bharavase neeDuve.
btw, Hajaareyavara bagge kelave saalugaLalli chennaagi varNisiddeeri.

ದೀಪಸ್ಮಿತಾ ಹೇಳಿದರು...

ನಾನೂ ಫ್ರೀಡಮ್ ಪಾರ್ಕಿಗೆ ಹೋಗಿದ್ದೆ. ಇಷ್ಟು ದೊಡ್ಡ ಜನ ಬೆಂಬಲ ಸಿಕ್ಕಿದ್ದು ನಿಜಕ್ಕೂ ಅದ್ಭುತ. ಇದು ದೊಡ್ಡ ಕ್ರಾಂತಿಯಾಗಬೇಕು. ನನ್ನ ಬೆಂಬಲವಿದೆ

shivu.k ಹೇಳಿದರು...

ಮೇಡಮ್,

ನನಗೆ ಅಲ್ಲಿಗೆ ಹೋಗಲಾಗಲಿಲ್ಲ. ಆದ್ರೆ ಇದೊಂತರ ಅದ್ಬುತ ಕ್ರಾಂತಿಯಾಗುವ ಸಾಧ್ಯತೆಯಿದೆ. ಅದಕ್ಕಾಗಿ ನನ್ನ ಬೆಂಬಲವಿದೆ..

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನ ವಿನಂತಿಗೆ ಸ್ಪಂದಿಸಿ, ಬೆಂಬಲಿಸಿದ.. ಪ್ರೋತ್ಸಾಹಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು.

ಪ್ರೀತಿತ್ಯಾದರಗಳೊಂದಿಗೆ,
ತೇಜಸ್ವಿನಿ.