ಗುರುವಾರ, ಡಿಸೆಂಬರ್ 23, 2010

ಯಾರಿವರು?......ಆತ್ಮರಹಿತರು?!


ಇವರಿಗೆ ಸ್ವಂತ ಉಸಿರಾಟದ ಶಕ್ತಿಯಿಲ್ಲ
ಪಾಪ, ಸ್ವತಃ ದುಡಿಮೆಗೆ ಕಸುವೂ ಇಲ್ಲ
ಅಲ್ಲಿ ಇಲ್ಲಿ ಬಿದ್ದಿರುವುದನೆಲ್ಲಾ ಹೊತ್ತು
ಅಧರ್ಮವ ಕಟ್ಟಿ, ಧರ್ಮವ ಸುಟ್ಟು
ಬರೀ ಕೊಳಕು ಕಶ್ಮಲಗಳನ್ನಷ್ಟೇ ಗುಡ್ಡೆ ಹಾಕಿ
ಅವುಗಳೊಳಗೇ ಮುಳುಗಿ ಸಂಭ್ರಮಿಸುವ
ಬಳಕುವ ಆಕಶೇರುಕಗಳಂತೇ
ಬದುಕುವ ಇವರಿಗೆ ಅಸ್ತಿತ್ವವೇ ಇಲ್ಲ!

ತನ್ನ ಹುಟ್ಟಿಗೆ ಅತ್ತು, ಪರರ ಹುಟ್ಟಿಗೆ ನಕ್ಕು
ಇಲ್ಲೇ ಹುಟ್ಟಿ, ಇಲ್ಲೇ ಮಣ್ಣಾಗೋ ನೆಲವ ಮಾರಿ
ಹಬ್ಬಿಕೊಂಡ ಬದುಕನೇ ಚಿಂದಿಯಾಗಿಸಿಕೊಂಡು
ಸಭ್ಯತೆಯ ಮುಖವಾಡದೊಳಗೆ ಅವಿತು
ಗಹಿ ಗಹಿಸಿ ನಗುವ ಮನೋವಿಕಲರು?
ಬುಡವಿರದ ಗೆದ್ದಲು ಮರವ ನೆಟ್ಟು,
ಓಲಾಡುತ್ತಾ ಆಗಸಕೇ ಕೈಚಾಚುವ ಇವರು
ಸ್ವಂತ ನೆಲೆಯಿಲ್ಲದ ಪರದೇಶಿಗಳು!

ಕುರುಡು ಕಾಂಚಣದ ಹಿಂದೆ ಬಿದ್ದು
ಮರುಳು ಕೀರ್ತಿಯನೇ ಹೊದ್ದು
ಜೊಳ್ಳು ಹೆಕ್ಕಿ, ಎಲ್ಲಾ ಕಾಳ ತೂರಿ,
ತನ್ನ ಪ್ರತಿಬಿಂಬವನೇ ಮೋಹಿಸುತ
ತನ್ನ ಹೆಸರಿನ ರಾಗವನೇ ಹಾಡುತ
ಬೇತಾಳ ನೃತ್ಯವನು ಮಾಡುತಿಹ
ಈ ಬುದ್ಧಿಹೀನರ ಸೋಗಿನಾಟಕೆ
ಭೂತ, ಪಿಶಾಚಿಗಳೂ ಬೆದರಿಹವು!

-  ತೇಜಸ್ವಿನಿ ಹೆಗಡೆ

10 ಕಾಮೆಂಟ್‌ಗಳು:

Unknown ಹೇಳಿದರು...

ಕವನ ಚೆನ್ನಾಗಿದೆ ತೇಜಕ್ಕ :)
ಆದರೆ ಯಾರನ್ನೋ ತೆಗಳಲು ಇಷ್ಟು ಚಂದದ ಪದಗಳ ಬಳಕೆ ಬೇಕಿರಲಿಲ್ಲ ಅನ್ನಿಸುತ್ತೆ .
ಕವನಕ್ಕೆ ಅವು ಮೆರಗು ತಂದರೂ ,ಕವನದ ಒಟ್ಟು ಅರ್ಥಕ್ಕೆ ಅವು ಅಷ್ಟು ಹೊಂದುವುದಿಲ್ಲ ,ಇದು ನನ್ನ ಅನಿಸಿಕೆ .

PARAANJAPE K.N. ಹೇಳಿದರು...

ಇನ್ನೊಬ್ಬರನ್ನು ಸದಾ ಗೇಲಿ ಮಾಡುತ್ತಾ, ಕುರುಡು ಕಾ೦ಚಾಣದ ಆಸೆಯಲ್ಲಿ ಕೀರ್ತಿ ಶನಿಯ ಬೆನ್ನತ್ತಿ ಗೋಸು೦ಬೆಗಳ೦ತೆ ವರ್ತಿಸುವ, ತಾವೇನು ಎ೦ಬುದನ್ನು ಅರಿಯದ ಮನುಜರಿಗೆ ಇ೦ದಿನ ಜಗತ್ತು "ಬುದ್ಧಿಜೀವಿಗಳು" ಎ೦ಬ ಉಪಾಧಿ ಕೊಟ್ಟ೦ತಿದೆ. ನಿಮ್ಮ ಈ ಕವನ ಅವರನ್ನೇ ಕುರಿತ೦ತಿದೆ ಅನಿಸುತ್ತಿದೆ. ಅಲ್ಲವೇ?

ಮನಸು ಹೇಳಿದರು...

tumba chennagide....

sunaath ಹೇಳಿದರು...

ತೇಜಸ್ವಿನಿ,
ಈ ಆತ್ಮರಹಿತ ಪಾಪಿಗಳು ನಮ್ಮ ದೇಶದ ದೌರ್ಭಾಗ್ಯ.

Dr.D.T.Krishna Murthy. ಹೇಳಿದರು...

ನಿಮ್ಮ ಕವನ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.ಕವನ ಇಷ್ಟವಾಯಿತು.

ಸಾಗರದಾಚೆಯ ಇಂಚರ ಹೇಳಿದರು...

manujana innondu mukhave pararannu teekisi taanu sukha kaanuvudu,

nimma saalugalu ade reetiya swabhaava ulla manujarige taagidantide allave?

ಸುಧೇಶ್ ಶೆಟ್ಟಿ ಹೇಳಿದರು...

yaarivaru :P

kavana chennagide... ;)

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರತಿಕ್ರಿಯೆಯ ಮೂಲಕ ಸ್ಪಂದಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.

ಆರ್ಯ,

ಇಲ್ಲಿ ನಾನು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ತೆಗಳಲು ಈ ಕವನ ಬರೆದಿಲ್ಲ. ನನ್ನ ಉದ್ದೇಶವೂ ಅದಲ್ಲ. ಒಂದು ರೀತಿಯ ವಿಕ್ಷಿಪ್ತ ಮನಃಸ್ಥಿತಿಯುಳ್ಳವರನ್ನು, ಅಂತಹ ವಿಚಿತ್ರ ವ್ಯಕ್ತಿತ್ವವನ್ನು ಉದ್ದೇಶಿಸಿ ಬರೆದದ್ದು.

ಧನ್ಯವಾದಗಳು :)

ಶಿವಪ್ರಕಾಶ್ ಹೇಳಿದರು...

ಇವರೇಕೆ ಹೀಗೆ ? ಎನ್ನುವುದೇ ಯಕ್ಷಪ್ರಶ್ನೆ...

ಸೀತಾರಾಮ. ಕೆ. / SITARAM.K ಹೇಳಿದರು...

navyadallu tamma hidita praasasaahityadalliruvante ide. chendada kavana sunaathare abhiprayave nannadu.