ಮಂಗಳವಾರ, ಜುಲೈ 6, 2010

ಅವ್ಯಕ್ತ

ಸುತ್ತಮುತ್ತಲೆಲ್ಲಾ ಕಡು 
ಹಸಿರು ತುಂಬಿದಾ ಕಾಡು
ಮಳೆಹನಿಗಳ ತಂಪಿಂದ
ಬಿಸಿಯಾಗಿದ್ದ ಭುವಿ
ತನ್ನೆಲ್ಲಾ ಧಗೆಯನ್ನು
ಹೊಗೆಯಾಗಿಸಿ, ಆಗಸಕ್ಕೆ
ಹಾರಿ ಬಿಡುತಿತ್ತು ಬೆಳ್ಮುಗಿಲಾಗಿ....

ಹಾಸಿದ್ದ ಡಾಮರು ರಸ್ತೆಯ ಮೇಲೆ
ಉರುಳುತಲಿದ್ದ ನಾಲ್ಕು ಗಾಲಿಗಳೂ
ನಿಸರ್ಗದ ಸೊಬಗ ಕಣ್ತುಂಬಿಕೊಂಡು
ನಿಧಾನವಾಗಿ ಹಿಂಬಿಡುತ್ತಿರಲು,
ತಟ್ಟೆಂದು ನನ್ನ ನೋಟ
ಪಚ್ಚೆ ಹಸಿರು ಗದ್ದೆಯ
ನಟ್ಟ ನಡುವೆ ನಿಂತಿದ್ದ
ಒಂಟಿ ಮರದಲ್ಲೇ ನೆಟ್ಟಿತೇಕೋ....!


- ತೇಜಸ್ವಿನಿ ಹೆಗಡೆ

21 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ಗೂಗಲ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ಅನಂತ್ ಅವರ ಹಾಗೂ ವಸಂತ್ ಅವರ ಕಮೆಂಟ್ ಅನ್ನು ಪ್ರಕಟಿಸಲಾಗಲಿಲ್ಲ. ಅವರ ಕಮೆಂಟ್‌ಗಳು ಹೀಗಿವೆ... -

ಸ್ಥಿತಪ್ರಜ್ಞತೆ ಇರಬಹುದೆ೦ದು ನಾನು ಅರ್ಥೈಸಿಕೊ೦ಡೆ.ಪಯಣದಲ್ಲಿ ಜೊತೆಗಾರರು ಇದ್ದರೂ ನಮ್ಮ ಪಯಣ ಒಬ್ಬ೦ಟಿಯಾಗಿಯೇ ಎ೦ದು ನಾನು ಅರ್ಥೈಸಿಕೊ೦ಡೆ..
ಕವನ-ಚಿತ್ರ ಎರಡೂ ಚೆ೦ದವಿದೆ..

ಅನ೦ತ್

--
ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಕವನ ಮತ್ತು ಲೇಖನಗಳು. ನಾನು ನಿಮ್ಮ ಬ್ಲಾಗನ್ನು ಮಾದಲ ಬಾರಿಗೆ ನೊಡಿದ್ದು ಚೆನ್ನಾಗಿದೆ.

ವಸಂತ್

-----

ತುಂಬಾ ಧನ್ಯವಾದಗಳು ಅನಂತ್ ಅವರಿಗೆ ಹಾಗೂ ವಸಂತ್ ಅವರಿಗೆ. ನಿಮಗಿಬ್ಬರಿಗೂ ಮಾನಸಕ್ಕೆ ಸ್ವಾಗತ.

-ತೇಜಸ್ವಿನಿ.

ಸೀತಾರಾಮ. ಕೆ. / SITARAM.K ಹೇಳಿದರು...

ಮನದಲ್ಲಿನ ಅವ್ಯಕ್ತತೆಯ ಹುಡುಕಾಟದ ಪರಿಣಾಮ!
ಚೆ೦ದದ ಕವನ

sunaath ಹೇಳಿದರು...

ಸುಂದರವಾದ ಕವನ.

Subrahmanya ಹೇಳಿದರು...

ಒಂಟಿ ಮರದೆಡೆಗೆ ನೋಟ ನೆಟ್ಟಿದ್ದು ಸಾಂಕೇತಿಕವೆ ? ಇರಲಿ...ನಕ್ಷತ್ರಗಳು ದಂಡಿಯಾಗಿದ್ದರೂ ಧ್ರುವ ನಕ್ಷತ್ರಕ್ಕೆ ಅದರದೇ ಆದ ಸ್ಥಾನವಿದೆಯಲ್ಲವೆ ? ಬೇಗ ಗೋಚರವಾಗುವುದೂ ಅದೆ !. ಚೆನ್ನಾಗಿದೆ.

Raghu ಹೇಳಿದರು...

ಕವಿತೆ ತುಂಬಾ ಚೆನ್ನಾಗಿದೆ. ಪ್ರಕೃತಿ ರಹಸ್ಯ ಹಲವು...
ನಿಮ್ಮವ,
ರಾಘು.

Subrahmanya ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಚುಕ್ಕಿಚಿತ್ತಾರ ಹೇಳಿದರು...

chennaagide..

vyaktavaagada bhaavagale kelavomme manassige muda koduttave...!!

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಅವ್ಯಕ್ತವನ್ನು ವ್ಯಕ್ತವಾಗಿಸುತ್ತಾ ನಮಗೂ ಹಚ್ಚಹಸುರಿನ ನಡುವೆ ಕಾಣಿಸಿದ ಒಂಟಿಮರದ ಕಲ್ಪನೆಯನ್ನೂ ತಂದಿದ್ದೀರಿ.
ಸ್ನೇಹದಿಂದ,

Narayan Bhat ಹೇಳಿದರು...

ಭಾವವನ್ನು ತುಂಬಾ ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದೀರಿ.

ತೇಜಸ್ವಿನಿ ಹೆಗಡೆ ಹೇಳಿದರು...

From Praveen,
ಮನದಾಳದಿಂದ............

ತೇಜಕ್ಕ,
ತನ್ನವರೇ ಇಲ್ಲದ ಹಸಿರು ಗದ್ದೆಯ ಮಧ್ಯೆ ಧೈರ್ಯದಿಂದ ನಿಂತ ಒಂಟಿಮರದ ಭಾವನೆಗಳೆನಿರಬಹುದು?
ಚಂದದ ಕವನ!

ತೇಜಸ್ವಿನಿ ಹೆಗಡೆ ಹೇಳಿದರು...

From ಸವಿಗನಸು,

ಹನಿಗಳ ತಂಪನ್ನು ಚೆನ್ನಾಗಿ ಹೇಳಿದೆ ಕವನ....

kanasu ಹೇಳಿದರು...

ಭಾವಪೂರ್ಣ ಕವಿತೆ :)

ಜಲನಯನ ಹೇಳಿದರು...

ತೇಜಸ್ವಿನಿಯವರೇ..ನಿಮಗೆ ಕಂಡಿತಾ ಆ ಒಂಟಿ ಮರ...? ನನಗೇಕೋ ಬರೀ ಒಂಟೆಗಳೇ ಕಾಣಿಸಿತ್ತಿವೆ...
ನಮ್ಮ ಹಸಿರುಸಿರಾಡುವ ಮಲೆನಾಡೇ ಬಿಕೋ ಎನ್ನುವಂತಾಗಿರುವಾಗ ಇನ್ನು ಕೋಲಾರ, ಗುಲ್ಬರ್ಗಾ, ರಾಯಚೂರುಗಳ ಪಾಡೇನು..?? ಬಹಳ ಅರ್ಥಭರಿತ ವಾಸ್ತವದ ಚಿತ್ರಣ ನಿಮ್ಮ ಕವನದ ಮೂಲಕ ನೀಡಿದ್ದೀರಿ.

ಸಾಗರದಾಚೆಯ ಇಂಚರ ಹೇಳಿದರು...

ಮನಸ್ಸಿನ ಅವ್ಯಕ್ತತೆ ತುಂಬಾ ಚೆನ್ನಾಗಿ ಮೂಡಿದೆ

V.R.BHAT ಹೇಳಿದರು...

ಮರದಮೇಲೆ ನೆಟ್ಟ ನಿಮ್ಮ ನೋಟ ಮತ್ತೇನೋ ಹೇಳಿದರೆ ಇನ್ನೂ ಚೆನಾಗಿರುತ್ತಿತ್ತೇನೋ,ಇನ್ನೂ ಅವ್ಯಕ್ತವಾಗಿರುತ್ತಿತ್ತೇನೋ ! ಈಗಲೂ ಚೆನ್ನಾಗೇ ಇದೆ, nice! thanks

Karthik Kamanna ಹೇಳಿದರು...

aah! koneya eraDu saalugaLu adbhuta! oLLeya kavite :)

ಮನಸಿನಮನೆಯವನು ಹೇಳಿದರು...

ತೇಜಸ್ವಿನಿ ಹೆಗಡೆ- ,
ಭಟ್ಟರೇ ಹೇಳಿದಂತೆ ನಿಮ್ಮಆ ನೋಟ ಬೇರೆ ರೀತಿ ಇರಬೇಕಿತ್ತೆಂದು ನಂಗೂ ಅನಿಸುತ್ತಿದೆ....

AntharangadaMaathugalu ಹೇಳಿದರು...

ತೇಜಸ್ವಿನಿ...
ನಂಗೇನೋ ಒಂಟಿ ಮರ ಸಾಂಕೇತಿಕ ಅಂತಲೇ ಅನ್ನಿಸಿತು. ಎಷ್ಟು ಜನರು ಸುತ್ತುವರಿದಿದ್ದರೇನೂ... ಮನುಷ್ಯ್ ಒಂಟಿಯೇ ಎಂಬ ಅರ್ಥ ಬಿಂಬಿಸತ್ತೆ ಅಲ್ವಾ? ಕವನ ಚೆನ್ನಾಗಿದೆ.

ಶ್ಯಾಮಲ

ಕಿರಣ್ ಜಯಂತ್ ಹೇಳಿದರು...

ಸೊಗಸಾಗಿ ವರ್ಣಿಸಿದ್ದೀರಿ ವ್ಯಕ್ತವಾಗದ ಭಾವನೆಗಳನ್ನು. ನಿಮ್ಮ ಕವನ ಸಂಕಲನ ಓದಲು ಬಹಳ ಕಾತುರ ತೇಜಸ್ವಿನಿಯವರೆ. ಎಲ್ಲಿ ಸಿಗತ್ತೆ ಅಂತ ತಿಳಿಸಿ ಪ್ಲೀಸ್.

ತೇಜಸ್ವಿನಿ ಹೆಗಡೆ ಹೇಳಿದರು...

ನಮಗೆ ವ್ಯಕ್ತವಾಗದ ಭಾವಗಳು ಬೇರೆ. ವ್ಯಕ್ತ ನಮಗಾದರೂ ಬೇರೊಬ್ಬರಿಗೆ ವ್ಯಕ್ತಪಡಿಸಲಾಗದ ಭಾವಗಳು ಬೇರೆ. ಯಾರಿಗೂ ನಿಲುಕದ ಭಾವಗಳೂ ಇವೆ.... ಆದರೆ ಯಾವುದೇ ರೀತಿಯಾಗಿರಲಿ.... ಅವೆಲ್ಲಾ ಅವ್ಯಕ್ತ ಭಾವಗಳೇ ಸರಿ. ಕವನ ಎಂದಿದ್ದರೂ ಅವರವರ ಭಾವಕ್ಕೇ ಬಿಟ್ಟಿದ್ದು.... ವ್ಯಕ್ತವಾದಷ್ಟು ನನ್ನದು, ನಿಮ್ಮದು..... ಉಳಿದಿದ್ದೆಲ್ಲಾ "ಅವ್ಯಕ್ತ" :)

ವಿಶ್ವಾಸದಿಂದ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ತುಂಬು ಹೃದಯದ ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತಿದ್ದೇನೆ.

@ಕಿರಣ್ ಅವರೆ,

ಧನ್ಯವಾದಗಳು. ನನ್ನ ಕವನಸಂಕಲನ ಸದ್ಯ ನನ್ನಲ್ಲೇ ಇವೆ. ವಿಳಾಸ ಮೈಲ್ ಮಾಡಿದರೆ ಕಳುಹಿಸುವೆ. ಯಾವ ಪುಸ್ತಕ ಮಳಿಗೆಗೂ ಕೊಟ್ಟಿಲ್ಲ... :)

Dr.D.T.Krishna Murthy. ಹೇಳಿದರು...

ಒಳ್ಳೆಯ ಕವನ.ಒಳ್ಳೆಯ ಅಭಿವ್ಯಕ್ತಿ.ನಮಗೂ ಆಗಾಗ ಸಿಗುತ್ತಾರೆ ಈ ಆಡಂಬರ ಬದುಕಿನ,ಐಹಿಕ ಜೀವನದ ಕಾಡುಗಳಲ್ಲಿ ಸರಳ ಬದುಕು ನಡೆಸುತ್ತಿರುವ ಒಂಟಿ ಮರಗಳು!ಧನ್ಯವಾದಗಳು.