ಗುರುವಾರ, ಮಾರ್ಚ್ 18, 2010

ವಿನಾಕಾರಣ....ಈ ನಿರಾಕರಣ


ಹೊಸ ಸ್ನೇಹವೊಂದು ತೇಲಿಬಂತು ಮನೋವೇಗದಲ್ಲಿ
ಕಡಲಾಚೆಯಿಂದ ಹಾರಿಬಂತು ನಸುನಗೆಯ ಹೂವು ಚೆಲ್ಲಿ

ಹೊಸಭಾವ ತಂತು, ಹೊಸರೀತಿಯಲ್ಲಿ ಹೊಸಬೆಳಕನ್ನು ಎನಗೆ ತೋರಿ
ನನ್ನೊಳಗಿನ ನನ್ನ ಹೊರತಂದು ಬೆಸೆದೆ, ತಾನೂ ಜೊತೆಗೆ ಸೇರಿ

ಸಾವಿರಾರು ಮೈಲು ದೂರವಿದ್ದೂ ನೋಡು, ಬೆಸೆದಿತ್ತು ನನ್ನ ನಿನ್ನ
ಈ ಸ್ನೇಹವೆಂದೂ, ಘಮಘಮಿಸಲೆಂದು ಪ್ರಾರ್ಥಿಸಿದ್ದೆ ಆ ದೇವನನ್ನ

ತಿಳಿಮುಗಿಲ ತುಂಬಾ ಕರಿಮೋಡ ಕವಿದು ಕಾಣಲಿಲ್ಲವೇಕೋ ಏನೂ!
ಕಣ್ತೆರೆದು ನೋಡೆ, ಕಟು ವಾಸ್ತವದ ಛಾಯೆ, ಕೃಷ್ಣಪಕ್ಷವೀಗ ಬಾನು

ನೀ ಹೇಳಲಿಲ್ಲ, ನಾ ಕೇಳಲಿಲ್ಲ ಕಾರಣವು ಏನು ಎಂದು
ತಪ್ಪಿಲ್ಲ ನಂದು, ತಪ್ಪೆಲ್ಲ ನಿಂದು ಎನ್ನುತಲೇ ಕಳೆದೆವೆಂದೂ

ಸ್ನೇಹಕ್ಕೆ ಸಾವಿಲ್ಲ, ನಿನ್ನೆಯ ನೋವಿಲ್ಲ, ಸಾಂತ್ವನವಿಹುದೀ ಮನಕೆ
ಏಕೋ ಏನೋ ಕಾಣೆ, ನಿನ್ನದೇ ನೆನಪು, ಮರೆತಷ್ಟೂ ನನ್ನ ಒಳಗೆ

24 ಕಾಮೆಂಟ್‌ಗಳು:

ಸೀತಾರಾಮ. ಕೆ. ಹೇಳಿದರು...

nice

ದಿನಕರ ಮೊಗೇರ.. ಹೇಳಿದರು...

navanaveena bhaava tumbida kavana........... chennaagide.......

ವಿ.ಆರ್.ಭಟ್ ಹೇಳಿದರು...

Chennaagideri

ಚುಕ್ಕಿಚಿತ್ತಾರ ಹೇಳಿದರು...

channaagide...

ಸಾಗರದಾಚೆಯ ಇಂಚರ ಹೇಳಿದರು...

ತುಂಬಾ ತುಂಬಾ ಚೆಂದ ಇದ್ದು
ಆ ಸಾಲುಗಳು ರಾಶಿ ಅರ್ಥ ತುಂಬಿಕ್ಯಂದು ಇದ್ದು
ರಾಗ ಹಾಕಿ ಹಾಡಲೇ ಅಡ್ಡಿಲ್ಲೆ

ಸುಧೇಶ್ ಶೆಟ್ಟಿ ಹೇಳಿದರು...

ತೇಜಕ್ಕ....

ಪಧ್ಯ ಇಷ್ಟ ಆಯಿತು... ಕೆಲವು ಸ್ನೇಹಗಳೇ ಹಾಗೇ... ಪ್ರಾರ೦ಭದಲ್ಲಿ ತು೦ಬಾ ಚೆನ್ನಾಗಿರುತ್ತದೆ... ಕ್ರಮೇಣ ಏನಾದರೂ ಕಾರಣಗಳಿ೦ದ ಅದು ಮುರುಟಿ ಹೋಗಿ ನೋವು ಕೊಡುತ್ತದೆ....

ಜಲನಯನ ಹೇಳಿದರು...

ತೇಜಸ್ವಿನಿ,...ಮಾನಸದ ಚಿತ್ರ ಹಿನ್ನೆಲೆ ಬಹಲ ಚನ್ನಾಗಿದೆ..ಶ್ವೇತಹಂಸೆಯ ಬಲು ಮನೋಹರ ಚಿತ್ರ....ಕವನ...ಸೂಪರ್...some one's physical absence is trying to show its presence...
ಈ ಸಾಲುಗಳಲ್ಲಿ
ಮನಕೆಏಕೋ ಏನೋ ಕಾಣೆ, ನಿನ್ನದೇ ನೆನಪು, ಮರೆತಷ್ಟೂ ನನ್ನ ಒಳಗೆ

ಶಂಭುಲಿಂಗ ಹೇಳಿದರು...

ವಿನಾಕಾರಣ ...ಚೆನ್ನಾಗಿದೆ ಕವನ..:)

ಕ್ಷಣ... ಚಿಂತನೆ... bhchandru ಹೇಳಿದರು...

ತೇಜಸ್ವಿನಿಯವರೆ,

ವಿನಾಕಾರಣ... ಈ ಕವನವನ್ನು ನಿರಾಕರಿಸಲಾಗದು. ಏಕೆಂದರೆ, ಅದರಲ್ಲಿ ಎಲ್ಲ ಸ್ನೇಹದ ಮಜಲುಗಳೂ ಸಹ ತುಂಬಿಕೊಂಡು ಅರ್ಥಗರ್ಭಿತವಾಗಿವೆ. ರಾಗ ತುಂಬಿ ಹಾಡಲೂ ಬಹುದು. ಚೆನ್ನಾಗಿದೆ, ಕವರನ.

ಸ್ನೇಹದಿಂದ,

sunaath ಹೇಳಿದರು...

ತೇಜಸ್ವಿನಿ,
ನಿಮ್ಮ ವಿಷಾದ ಭಾವನೆಯು ಕವನರೂಪದಲ್ಲಿ ಹೊರಹೊಮ್ಮಿದೆ.
ನಿಮ್ಮ ಗೆಳೆತನದ ಚಂದಿರನಿಗೆ ಮುಸುಕಿದ ಮೋಡ ಬೇಗನೇ ಸರಿದು, ಸ್ನೇಹದ ಬೆಳದಿಂಗಳು ಮತ್ತೆ ಬೆಳಗಲಿ ಎಂದು ಹಾರೈಸುತ್ತೇನೆ.

ಸಾಗರಿ.. ಹೇಳಿದರು...

ವಿನಾಕಾರಣ ಬೆಸೆದ ಸ್ನೇಹ ಏನನ್ನೂ ನಿರೀಕ್ಷಿಸದು, ನಿರೀಕ್ಷೆಗೂ ಮೀರಿ ಅದು ಕೊಡುವ ಖುಷಿ, ಸಾಂತ್ವನ ತುಂಬಾ ಅಪ್ಯಾಯಮಾನ ಎನ್ನಿಸಿಬಿಡುತ್ತದೆ. ಕವನ ಬಹಳ ಸುಂದರವಾಗಿದೆ.

Ramesha ಹೇಳಿದರು...

Tejaswini avare.. modala bheti nimma blog ge.. tumba chennagide nimma kavana..

Kelavomme naavu maretu kuda mareyalagadanthaha sambandhagalu srishtiyaguttave.. adu maayeyo athava namma manasina chaayeyo thiliyuvudilla..haLathaadashtu adu mattashtu geluvannu padedukolluttade.. idu nimma manassina dugudave agiddalli, adakke sheeghradalli parihaara sigali anta arshistene..

samaya sikkaaga nanna blog kade omme banni..

http://hrudayantharaala.blogspot.com/

arya_forU ಹೇಳಿದರು...

ತುಂಬಾ ಚೆನ್ನಾಗಿದೆ ಅಕ್ಕ :)

ದಿವ್ಯಾ ಹೇಳಿದರು...

very nice!!!

ಮನಸು ಹೇಳಿದರು...

tumba chennagide kavana

ಸವಿಗನಸು ಹೇಳಿದರು...

ಚೆನ್ನಾಗಿದೆ ಕವನ....

ಗುರು-ದೆಸೆ !! ಹೇಳಿದರು...

'ತೇಜಸ್ವಿನಿ ಹೆಗಡೆ-' ಅವ್ರೆ..,

'ಏಕೋ ಏನೋ ಕಾಣೆ, ನಿನ್ನದೇ ನೆನಪು, ಮರೆತಷ್ಟೂ ನನ್ನ ಒಳಗೆ':ಸೊಗಸಾಗಿದೆ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

ಅಂತರ್ವಾಣಿ ಹೇಳಿದರು...

ಇದನ್ನು ಭಾವ ಗೀತೆ ಮಾಡ ಬಹುದು... :)
ನಿಮ್ಮ ಲೇಖನಿಯಲ್ಲಿ ಈ ರೀತಿಯಾದ ಮತ್ತಷ್ಟು ಕವನಗಳು ಬರಲಿ.

ಒಂದು ಸಾಲನ್ನು ಹೊಗಳಿದರೆ ಮತ್ತೊಂದು ಸಾಲು ಕೋಪಿಸಿಕೊಳ್ಳುತ್ತವೆ.

AntharangadaMaathugalu ಹೇಳಿದರು...

ತೇಜಸ್ವಿನೀ...
ನನ್ನ ಬ್ಲಾಗ್ ಗಾಗಿ ಸ್ನೇಹದ ಕಡಲಲ್ಲಿ ತೇಲಲು ಪ್ರಯತ್ನಿಸುತ್ತಿರುವ ನಾನು, ನಿಮ್ಮ ಪದಗಳ ಜೋಡಣೆಯಲ್ಲಿ ತೇಲಿಹೋದೆ... ವಿನಾಕಾರಣದ ನಿರಾಕರಣ ಬೇಸರ ತಂದರೂ ಕೂಡ, ಅದನ್ನು ನೀವು ಅನಾವರಣ ಮಾಡಿರುವ ರೀತಿ ಅತ್ಯಂತ ಆಪ್ತವಾಗಿದೆ....

ಮನದಾಳದಿಂದ ಹೇಳಿದರು...

ಸುಂದರ ಕವನ. ಹೀಗೆ ಬರೆಯುತ್ತಿರಿ.

ಚಿತ್ರಾ ಹೇಳಿದರು...

ತೇಜೂ,
ಚೆಂದದ ಕವನ , ಇಷ್ಟವಾಯಿತು .
" ಸ್ನೇಹಕ್ಕೆ ಸಾವಿಲ್ಲ, ನಿನ್ನೆಯ ನೋವಿಲ್ಲ, ಸಾಂತ್ವನವಿಹುದೀ ಮನಕೆ
ಏಕೋ ಏನೋ ಕಾಣೆ, ನಿನ್ನದೇ ನೆನಪು, ಮರೆತಷ್ಟೂ ನನ್ನ ಒಳಗೆ "

ಸುಂದರ ಸಾಲುಗಳು

Dr.D.T.KrishnaMurthy ಹೇಳಿದರು...

Tejasviniyavare tamma kavanadalli saakastu tejasside.innastu tejassina kavanagalu barali.

ತೇಜಸ್ವಿನಿ ಹೆಗಡೆ ಹೇಳಿದರು...

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರತಿಕ್ರಿಯೆಗಳೇ ನನ್ನ ಬರಹಗಳಿಗೆ ಸ್ಪೂರ್ತಿಯಾಗಿದೆ. ಕಾರಣವಿಲ್ಲದೇ ಬಹು ಹತ್ತಿರವಾದ ಗೆಳೆತನವೊಂದು ವಿನಾಕಾರಣವಾಗಿ ಕಳೆದುಹೋದುದರ ನೋವು ಬಹಳ ಘಾಸಿಸುತ್ತಿತ್ತು. ಆದರೆ ಆ ತೀವ್ರತೆ ಈಗ ಕಡಿಮೆಯಾಗಿದೆ. ನಿಜ....ಬರವಣಿಗೆಗಿಂತ ದೊಡ್ಡ ಮದ್ದು ಬೇರೊಂದಿಲ್ಲ.

ಎಲ್ಲರ ಆತ್ಮೀಯತೆಗೆ ಮತ್ತೊಮ್ಮೆ ಧನ್ಯವಾದಗಳು.

-ತೇಜಸ್ವಿನಿ.

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಬರೆದಿರುವ ವಿನಾಕಾರಣ ಪದ್ಯ ಸ್ನೇಹದ ಅನೇಕ ಹಂತಗಳನ್ನು ಕೊಡುತ್ತದೆ. ಇಷ್ಟವಾಗದಿರಲು ಕಾರಣಗಳಿಲ್ಲ...