ಸೋಮವಾರ, ಮಾರ್ಚ್ 7, 2011

ನನ್ನ ಇನಿಯನ ನೆಲೆಯ ಬಲ್ಲೆ ಏನೆ....

ತುಂಬಾ ಸುಂದರ ಅರ್ಥವನ್ನು ಸ್ಫುರಿಸುವ ಈ ಕವಿತೆಯನ್ನು ಎಂ.ಡಿ. ಪಲ್ಲವಿಯವರು ಅಷ್ಟೇ ಸುಂದರವಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡನ್ನು ಕೆಳಗೆ ಕೊಟ್ಟಿರುವ ಲಿಂಕ್‌ನಲ್ಲಿ ಕೇಳಬಹುದು. ಈ ಹಾಡಿನ Mp3 Formate ಬೇಕಾದವರು ತಮ್ಮ  ಮಿಂಚಂಚೆ ಕೊಡಬಹುದು. ಅವರಿಗೆ ಮೈಲ್ ಮಾಡಲಾಗುವುದು.

ಕವಿ        : ಎನ್. ಎಸ್. ಲಕ್ಷ್ಮಿನಾರಾಯಣ ಭಟ್  
ಸಂಗೀತ : ಸಿ. ಅಶ್ವಥ್
ಗಾಯನ : ಎಂ.ಡಿ. ಪಲ್ಲವಿ.

ನನ್ನ ಇನಿಯನ ನೆಲೆಯ ಬಲ್ಲೆ ಏನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ


ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳ ಬಲ್ಲ ||೨||
ನನ್ನ ಮೊರೆಯನು ಏಕೆ ಕೇಳಲೊಲ್ಲ


ಗಿರಿಯ ಎತ್ತಲು ಬಲ್ಲ
ಶರಧಿ ಬಗ್ಗಿಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲಿಸಬಲ್ಲ ||೨||
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ


ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆ ಬಿತ್ತು ತೆನೆಯೆದ್ದು ತೂಗುವವನು ||೨||
ನಲ್ಲೆ ಅಳಲನು ಏಕೆ ತಿಳಿಯದವನು

ಈ ಸುಂದರ ಹಾಡನ್ನು ಈ ಲಿಂಕ್‌ನಲ್ಲಿ ಕೇಳಿ ಆನಂದಿಸಿ. 


- ತೇಜಸ್ವಿನಿ ಹೆಗಡೆ

11 ಕಾಮೆಂಟ್‌ಗಳು:

ಶಿವಪ್ರಕಾಶ್ ಹೇಳಿದರು...

Thanks you madam :)

ಮನಸು ಹೇಳಿದರು...

tumba chennagide teju ee haaDu. naanu M.D pallavi haaDugaLanna dina keLteeni..

ರಾಘವೇಂದ್ರ ಗಣಪತಿ ಹೇಳಿದರು...

adbhutha geete mattu gayana. dayavittu mp3 song mail madi.
nanna id ragarohi@gmail.com
thanx

Badarinath Palavalli ಹೇಳಿದರು...

prema laalityada kavi mattu shaareera laalityada gaayaki samagamamada kaavya. Thanks, i will download it.

Pl. Visit my blogs:
www.badari-poems.blogspot.com
www.badari-notes.blogspot.com
www.badaripoems.wordpress.com

ಸುಮ ಹೇಳಿದರು...

one of my favorite Tejaswini :)

ಸುಧೇಶ್ ಶೆಟ್ಟಿ ಹೇಳಿದರು...

ಎಷ್ಟು ಚೆನ್ನಾಗಿದೆ ಹಾಡು.... ಅದನ್ನು ಅಷ್ಟೇ ಚೆನ್ನಾಗಿ ಹಾಡಿದ್ದಾರೆ ಪಲ್ಲವಿ ಅವರು... ತು೦ಬಾ ಥ್ಯಾ೦ಕ್ಸ್ ತೇಜಕ್ಕ ಸು೦ದರ ಹಾಡನ್ನು ಕೇಳಿಸಿದ್ದಕ್ಕೆ :)

sunaath ಹೇಳಿದರು...

ತೇಜಸ್ವಿನಿ,
ಸುಂದರ ಕವನಕ್ಕಾಗಿ ಧನ್ಯವಾದಗಳು.

ashokkodlady ಹೇಳಿದರು...

Sundaravada haadu...Dhanyavadgalu...

AntharangadaMaathugalu ಹೇಳಿದರು...

ತೇಜಸ್ವಿನಿ...
ಇದು ನನ್ನ all time favrt song.. ಪಲ್ಲವಿಯವರ ಧ್ವನಿಯಲ್ಲಿ ಕೇಳ್ತಿದ್ರೆ... ಬೇರೊಂದು ಲೋಕದಲ್ಲೇ ಇರ್ತೀನಿ.. ಅದೆಷ್ಟು ಬಾರಿ ಕೇಳಿದ್ದೇನೋ ಲೆಕ್ಕ ಇಲ್ಲ. ಆದ್ರೂ.. ನೀವು ಕೊಟ್ಟ ಕೊಂಡಿಯಲ್ಲಿ ಮತ್ತೆ ಕೇಳಿದೆ.. ಧನ್ಯವಾದಗಳು ತಂಗೀ...
ಶ್ಯಾಮಲ

Dr.D.T.krishna Murthy. ಹೇಳಿದರು...

ಸುಂದರ ಕವನ,ಸುಂದರ ಹಾಡು!

ತೇಜಸ್ವಿನಿ ಹೆಗಡೆ ಹೇಳಿದರು...

ಎಲ್ಲರಿಗೂ ತುಂಬಾ ಧನ್ಯವಾದಗಳು... ಹಾಡಿನ ಭಾವಾರ್ಥ ಹಾಗೂ ಸಂಗೀತ ಎರಡೂ ಎಲ್ಲರಿಗೂ ಇಷ್ಟವಾಯಿತೆಂದು ತಿಳಿದು ಸಂತೋಷವಾಯಿತು...:)- ತೇಜಸ್ವಿನಿ ಹೆಗಡೆ