ಅಂದೊಮ್ಮೆ ಆತ ಎಲ್ಲರಿಗೂ ದೇವರಾಗಿದ್ದ
ಕ್ರಮೇಣ ಹಲವರಿಗೆ ದೇವದೂತನಾಗಿ ಕಂಡ
ಮತ್ತೆ ಕೆಲವರು ಶಾಂತಿದೂತನೆಂದು ಕರೆದರೆ...
ಖಳನಾಯಕನೇ ಆದ ಒಂದು ಗುಂಪಿಗೆ!
ಒಮ್ಮೆ ಪ್ರಶ್ನೆಯಾಗಿ, ಮಗದೊಮ್ಮೆ ಉತ್ತರವಾಗಿ,
ಒಮ್ಮೆ ಸಂಕೀರ್ಣ, ಮಗದೊಮ್ಮೆ ಅತಿ ಸರಳ
ಒಮ್ಮೆ ಅಸಹಾಯಕ, ಮಗದೊಮ್ಮೆ ಜನನಾಯಕ
ಸಾಬರಮತಿಯ ಸಂತನಾದ, ಅಹಿಂಸೆಯ ಪ್ರವಾದಿಯಾದ
ಜನ್ಮಭೂಮಿಯ ಇಬ್ಭಾಗಕೆ ಮಾತ್ರ
ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು,
ಮೌನದ ಸಹಿ ಹಾಕಿ ಬಿಟ್ಟ!!
ಸಂತನೆಂದರೂ ಸೈ, ಧೂರ್ತನೆಂದರೂ ಸೈ
ನಾನಾರೆಂದು ನಾ ಮಾತ್ರ ಬಲ್ಲೆ ಎಂಬಂತೆ
ಅರವತ್ಮೂರು ವರುಷಗಳಿಂದಲೂ,
ಆತ ಮುಗುಳು ನಗುತಲೇ ಇರುವ-
ಹೂದೋಟದ ನಡುವೆ, ಕಟ್ಟಡಗಳ ಮುಂದೆ,
ಪೋಸ್ಟರ್‌ಗಳಲ್ಲಿ, ಆಫೀಸಿನ ಫೋಟೋದೊಳಗೆ,
ನೋಟಿನಲ್ಲಿ, ನೋಟ್ ಪುಸ್ತಕದೊಳಗೆ...
ತುಂಡು ಪಂಚೆಯನುಟ್ಟು, ಊರುಗೋಲನು ಹಿಡಿದು
ಕನ್ನಡಕದಂಚಿನಿಂದಲೇ ಎಲ್ಲಾ ಅಧರ್ಮಗಳ ಕಾಣುತ್ತಾ,
ರಘುಪತಿ, ರಾಘವ, ಈಶ್ವರ, ಅಲ್ಲಾರನ್ನು ಕರೆಯುತ್ತಿರುವ....
ಆತನೋರ್ವ ಮಹಾತ್ಮನೇ ಸರಿ!
-ತೇಜಸ್ವಿನಿ
(ಫೋಟೋ ಕೃಪೆ : http://photos.merinews.com/newPhotoLanding.jsp?imageID=12116)
8 ಕಾಮೆಂಟ್‌ಗಳು:
Sooper... gandhi innu naguttale iddane..
ಇದು ಗಾ೦ಧೀಜಿಯ ಬಗ್ಗೆ ನೀವು ಸುಮ್ಮನೆ ಬರೆದ ಕವನ ಅ೦ದುಕೊಳ್ಳುತ್ತೇನೆ ತೇಜಕ್ಕ...ಯಾಕೆ೦ದರೆ ಗಾ೦ಧೀಜಿಯ ಬಗೆಗಿನ ನಿಮ್ಮ ಅಭಿಪ್ರಾಯ ಕವನದಲ್ಲಿ ಕಾಣಿಸುವುದಿಲ್ಲ...
ಕವನ ಚೆನ್ನಾಗಿ ಮೂಡಿಬ೦ದಿದೆ ತೇಜಕ್ಕ. ಇಷ್ಟ ಆಯಿತು.
ಗಾಂಧಿಯವರ ಈ ಮಾತು ತುಂಬಾ ಇಷ್ಟ: "ನನ್ನ ಜೀವನವೇ ನನ್ನ ಸಂದೇಶ.."
ಚೆನ್ನಾಗಿವೆ ಸಾಲುಗಳು...
ಕನ್ನಡಕದ ಅಂಚಿನಿಂದ ಅಧರ್ಮವನ್ನು ದಿಟ್ಟಿಸುತ್ತ ಕೂರುವದಷ್ಟೇ ಈಗ ಮಹಾತ್ಮ ಮಾಡಬಲ್ಲ ಕೆಲಸ!
super teju.... tumba chennagide kaviteya oLa artha..
Tejaswiniyavare,
avara tatvagalannu naavu indu durupayoga padisikondiddeve
aatana dyeya aadarsha holeyalli toledu hoguttide
ತೇಜಸ್ವಿನಿ..
ಆ ಮಹಾಮಹಿಮ ತ೦ದುಕೊಟ್ಟ ಸ್ವಾತ೦ತ್ರ್ಯದ ಅವಸ್ತೆ ಹೀಗಾದದ್ದನ್ನು ಕ೦ಡು ಮೇಲಿನಿ೦ದಲೆ ಅದೆಷ್ಟು ದು:ಖಿಸುತ್ತಾನೊ ಏನೋ...
super akka....no words to comment....
ಕಾಮೆಂಟ್ ಪೋಸ್ಟ್ ಮಾಡಿ