ಭಾನುವಾರ, ಡಿಸೆಂಬರ್ 26, 2010

ಆಹತ

Courtesy - http://ecx.images-amazon.com

ಕಡುಗಪ್ಪು ಕತ್ತಲೆಯ ಸ್ನೇಹ ಮಾಡ ಹೋದೆ,
ಕಿರು ಬೆಳಕಿನ ಕೋಲೂ ಬೆನ್ನು ಮಾಡಿತು
ಕಟ್ಟ ಕಡೆಯ ನಿನ್ನ ನೆನಪನೂ ಮರೆಯ ಹೊರಟೆ,
ಕಣ್ಣೀರ ಹನಿಗಳು ಕಣ್‌ರೆಪ್ಪೆಗಳ ತೊರೆದವು

ಇಳೆಯ ಬಂಜೆತನ ಕಳೆಯಲು
ಆಶಾಢನು ಕಿರು ಹನಿಯುತ ಬಂದರೆ,
ನನ್ನೊಳಗಿನ ಒಣಗಿದ ಕನಸುಗಳೆಲ್ಲಾ
ಹರಿದು, ಮನದ ನೆಲವೀಗ ಭಣ ಭಣ

ನನ್ನದಾದ ಒಂದು ಕಿರು ಬೆಳಕಿಗಾಗಿ
ಒಂದೊಂದು ಹೆಜ್ಜೆಯನೂ ಅಡವಿಡುತ್ತಾ ಬಂದೆ
ನೂರು ನೆನಪುಗಳ ಭಾರದಿಂದ ಅಡಿಯಿಡಲಾಗದೇ
ಒಂದಿರುಳಿನಲೇ ನೂರು ವರುಷಗಳ ಕಳೆದೆ

ನೂರು ಮಾತುಗಳು ಹೇಳಲಾಗದ್ದು
ಒಂದು ನೋಟ ಬಯಲಾಗಿಸಬಲ್ಲದು..
ಕಣ್ಣೋಟವ ಓದ ಹೊರಟರೆ ನಾನು
ಶಾಶ್ವತ ಕುರುಡನಾಗಿ ಹೋದೆಯಲ್ಲಾ ನೀನು!

ಒಂದೊಂದು ಕ್ಷಣಗಳನೂ ಸೆರೆ ಹಿಡಿದು
ಅದರೊಳಗೆ ಬಂಧಿಯಾಗ ಹೊರಟೆ,
ಬದುಕು ನೂರು ಮೈಲಿ ವೇಗದಲಿ ಸಾಗಲು,
ಉಸಿರಿಗಾಗಿ ಕಾದ ಅಹಲ್ಯೆಯಾಗಿ ಹೋದೆ!

-ತೇಜಸ್ವಿನಿ ಹೆಗಡೆ

22 ಕಾಮೆಂಟ್‌ಗಳು:

Digwas Bellemane ಹೇಳಿದರು...

ಮಸ್ತ್ ಬರದ್ಯೆ ಅಕ್ಕಯ್ಯ

ಚುಕ್ಕಿಚಿತ್ತಾರ ಹೇಳಿದರು...

ಆಹತ ಕವಿತೆಗೆ ಜನ್ಮ ಕೊಟ್ಟಿತು...:)

PARAANJAPE K.N. ಹೇಳಿದರು...

ನನ್ನದಾದ ಒಂದು ಕಿರು ಬೆಳಕಿಗಾಗಿ, ಒಂದೊಂದು ಹೆಜ್ಜೆಯನೂ ಅಡವಿಡುತ್ತಾ ಬಂದೆ
ನೂರು ನೆನಪುಗಳ ಭಾರದಿಂದ ಅಡಿಯಿಡಲಾಗದೇ ಒಂದಿರುಳಿನಲೇ ನೂರು ವರುಷಗಳ ಕಳೆದೆ - ಈ ಸಾಲು ಇಷ್ಟವಾಯ್ತು

Raghu G H ಹೇಳಿದರು...

ತುಂಬಾ ಚೆನ್ನಾಗಿದೆ.

ಕ್ಷಣ... ಚಿಂತನೆ... ಹೇಳಿದರು...

ಮೇಡಂ, ಕವನ ಮೊದಲಿನಿಂದ ಕೊನೆಯವರೆಗೂ ತನ್ನೊಳಗೆ ಸೇರಿಸಿಕೊಳ್ಳೂತ್ತಾ ಹೋಗುತ್ತದೆ. ತುಂಬಾ ಚೆನ್ನಾಗಿದೆ.

Dr.D.T.Krishna Murthy. ಹೇಳಿದರು...

ಒಳ್ಳೆಯ ಕವನ.ಇಷ್ಟವಾಯಿತು.ಅಭಿನಂದನೆಗಳು.

sunaath ಹೇಳಿದರು...

ತೇಜಸ್ವಿನಿ,
ತುಂಬ ಉತ್ತಮ ಕವನ.

Soumya. Bhagwat ಹೇಳಿದರು...

tejakka just WAAAAAW ...!!!!! liked each nad every line of your poem.

Ashok Shettar (ಅಶೋಕ ಶೆಟ್ಟರ್) ಹೇಳಿದರು...

ಕಣ್ಣೋಟವ ಓದ ಹೊರಟರೆ ನಾನು
ಶಾಶ್ವತ ಕುರುಡನಾಗಿ ಹೋದೆಯಲ್ಲಾ ನೀನು..
ಫಕ್ಕನೆ ಕಾವ್ಯ ಮಿಂಚಿದಂತಾಯಿತು ಈ ಸಾಲುಗಳಲ್ಲಿ..

ಮನದಾಳದಿಂದ............ ಹೇಳಿದರು...

ಚಂದದ ಸಾಲುಗಳು.........
ಮನಸ್ಸಿಗೆ ಮದನೀಡುವ ಕವನ........

ಅನಾಮಧೇಯ ಹೇಳಿದರು...

ಇದು ಪ್ರೇಮದ ಆಧ್ಯತ್ಮವಾ....ತೇಜಸ್ವಿನಿ ಯವರೆ ?

ಸುಧೇಶ್ ಶೆಟ್ಟಿ ಹೇಳಿದರು...

chennagidhe kavana tejakka....nanage e para thumba hidisithu :)

ನೂರು ಮಾತುಗಳು ಹೇಳಲಾಗದ್ದು
ಒಂದು ನೋಟ ಬಯಲಾಗಿಸಬಲ್ಲದು..
ಕಣ್ಣೋಟವ ಓದ ಹೊರಟರೆ ನಾನು
ಶಾಶ್ವತ ಕುರುಡನಾಗಿ ಹೋದೆಯಲ್ಲಾ ನೀನು!

Pataragitti (ಪಾತರಗಿತ್ತಿ) ಹೇಳಿದರು...

ಇಷ್ಟವಾಯ್ತು ಸಾಲುಗಳು..ವಂದನೆಗಳು

ಶಿವಪ್ರಕಾಶ್ ಹೇಳಿದರು...

very nice one... :)

Pramod P T ಹೇಳಿದರು...

ಚೆನ್ನಾಗಿದೆ ಕವನ :)

maanasa saarovra ಹೇಳಿದರು...

ಅರ್ಥಗರ್ಭಿತ ಕವನ ಇಷ್ಟವಾಯ್ತು ತುಂಬಾ.........

ಜಲನಯನ ಹೇಳಿದರು...

ತೇಜಸ್ವಿನಿ..ನನಗೆ ಇಷ್ಟವಾದ ಪ್ರಯೋಗ....
ಒಂದೊಂದು ಕ್ಷಣಗಳನೂ ಸೆರೆ ಹಿಡಿದು
ಅದರೊಳಗೆ ಬಂಧಿಯಾಗ ಹೊರಟೆ,
ಸಮಯವ ಸೆರೆಹಿಡಿಯೋದು ಅದರಲ್ಲಿ ಬಂಧಿಯಾಗೋಕೆ..ಅನ್ನೋದು...

ಮನಸಿನಮನೆಯವನು ಹೇಳಿದರು...

ನನ್ನದಾದ ಒಂದು ಕಿರು ಬೆಳಕಿಗಾಗಿ
ಒಂದೊಂದು ಹೆಜ್ಜೆಯನೂ ಅಡವಿಡುತ್ತಾ ಬಂದೆ
ನೂರು ನೆನಪುಗಳ ಭಾರದಿಂದ ಅಡಿಯಿಡಲಾಗದೇ
ಒಂದಿರುಳಿನಲೇ ನೂರು ವರುಷಗಳ ಕಳೆದೆ..: ಈ ಸಾಲುಗಳು ಇಷ್ಟವಾದವು...
೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ...

ತೇಜಸ್ವಿನಿ ಹೆಗಡೆ ಹೇಳಿದರು...

ಕವನ ಮೆಚ್ಚಿ ಸ್ಪಂದಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು.

-ತೇಜಸ್ವಿನಿ.

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ತುಂಬಾ ಅರ್ಥಗರ್ಭಿತವಾದ ಕವನವನ್ನು ಬರೆದಿದ್ದೀರಿ..ಅಂತ್ಯದ ಎರಡು ಸಾಲುಗಳು ಮಾತ್ರ ಸೂಪರ್ ಅನ್ನಿಸಿತು...

ಸೀತಾರಾಮ. ಕೆ. / SITARAM.K ಹೇಳಿದರು...

tumbaa chendada kavana. ondondu padaprayogagalu artha vistaaravanna haravuttave.
ahatavendare swagatave?

ತೇಜಸ್ವಿನಿ ಹೆಗಡೆ ಹೇಳಿದರು...

Shivu avare,
DhanyavadagaLu...

Sitaram Sir,

Tumba dhanyavadagaLu.. "Ahata" andre "hoDeta, Aghata..."