ಬೇಕಿಲ್ಲ-
ಕಾಣದ ಸಂಕೋಲೆ-
ಗಳ ಹಿಡಿದು ಕಣ್ಮುಚ್ಚಿ ನಡೆ
ನಡೆದು ನಡುವೆ ಹಿಂತಿರುಗಿ
ನೋಡಿದರೂ ಏನೊಂದೂ ಕಾಣದ
ಆ ನನ್ನ ಭೂತಗಳು
ಸಾಕಾಗಿದೆ-
ಮುಂದಿರುವ ನಿನ್ನ-
ನಿನ್ನೆಗಳ ನನ್ನದಾಗಿಸಿಕೊಂಡು
ಹುಸಿನಕ್ಕು ನಗಿಸುತ ಸವೆದ ಆ
ದಾರಿಗಳೇ ಮತ್ತೆ ತಿರು ತಿರುಗಿ
ನನ್ನ ಭವಿತವ್ಯದಲೂ ಕಾಡುವುದು
ಹಿಡಿಯಬೇಕಾಗಿದೆ-
ಗುಟುಕು ಉಸಿರ ಹಿಡಿದಿರುವ-
ನಿನ್ನೊಳಗಿನ ನಾನು, ನನ್ನ
ಒಳಗಿನ ನೀನು, ಕುಟುಕು
ಜೀವವ ಹಿಡಿದು ಜೋತಾಡುತಿರುವ
ನಮ್ಮ ವರ್ತಮಾನವನು...
-ತೇಜಸ್ವಿನಿ ಹೆಗಡೆ

ತುಂಬಾ ಚೆನ್ನಾಗಿದೆ.
ಪ್ರತ್ಯುತ್ತರಅಳಿಸುಹಿ೦ತಿರುಗಿ ನೋಡಿದರೂ ಕಾಣದ ಭೂತಕಾಲ, ಕಾಡುವ ಭವಿಷ್ಯತ್ ಕಾಲದ ಚಿ೦ತೆಯ ನಡುವೆ ವರ್ತಮಾನದ ತುಡಿತ. ಚೆನ್ನಾಗಿದೆ. different one .
ಪ್ರತ್ಯುತ್ತರಅಳಿಸುkavana tumba meaningful ide.. dhanyavaadagalu.
ಪ್ರತ್ಯುತ್ತರಅಳಿಸುnimmella kavan mattu lekhanagalannu mechchuvahaagive.
madam, kaalagala kaanada tuLita + tudita chennagide.
ಪ್ರತ್ಯುತ್ತರಅಳಿಸುನಡೆ ನಡೆದು ನಡುವೆ ತಿರುಗಿ
ಪ್ರತ್ಯುತ್ತರಅಳಿಸುನಿನ್ನ ನಿನ್ನೆಗಳ ನನ್ನದಾಗಿಸಿಕೊಂಡು
ನಿನ್ನೊಳಗಿನ ನಾನು ನನ್ನೊಳಗಿನ ನೀನು...
ಈ ಸಾಲುಗಳಲ್ಲಿನ ಪದಪ್ರಯೋಗ ಮತ್ತು ಅರ್ಥವನ್ನು ಹೆಣೆದ ಬಗೆ ಇಷ್ಟವಾಯ್ತು,,,ಚನಾಗಿದೆ...ತೇಜಸ್ವಿನಿ ಕವನ- ಮಂಥನ
ತೇಜಸ್ವಿನಿ,
ಪ್ರತ್ಯುತ್ತರಅಳಿಸುತುಂಬ ಚೆನ್ನಾಗಿದೆ ಕವಿತೆ.
ಸೊಗಸಾದ ಅರ್ಥಪೂರ್ಣ ಕವನ ಚೆನ್ನಾಗಿದೆ.
ಪ್ರತ್ಯುತ್ತರಅಳಿಸುಗುಟುಕು ಉಸಿರ ಹಿಡಿದಿರುವ-
ನಿನ್ನೊಳಗಿನ ನಾನು, ನನ್ನ
ಒಳಗಿನ ನೀನು,
ಈ ಪದಗಳು ಮತ್ತು ಜೋಡಣೆ ಇಷ್ಟವಾಯಿತು.
ತು೦ಬಾ ಚೆನ್ನಾಗಿದೆ... ಮತ್ತೆ ಮತ್ತೆ ಓದಿದೆ..
ಪ್ರತ್ಯುತ್ತರಅಳಿಸು' ಹುಸಿನಕ್ಕು ನಗಿಸುತ ಸವೆದ ' ಆ ದಾರಿಗಳೆ .....ಕವನ ತನ್ನ ಅ೦ತರ೦ಗದೊಳಗೆ ಹುದಗಿಸಿ ಕೊಂಡಿರುವ ವಾಸ್ತವದ ಕರಾಳ ಮುಖವನ್ನ... ಸಲಿಸಾಗಿ ಹೇಳಿದ್ದಿರಿ ,ವಂದನೆಗಳು
ಪ್ರತ್ಯುತ್ತರಅಳಿಸುSundara kavite
ಪ್ರತ್ಯುತ್ತರಅಳಿಸುsorutiruva manasugalu,
manassina bannagalu
soruttiruva sambhndhagalu
soruttiruva nagu
ellavoo soruttide
ಚುಟುಕಗಳು ಗುಟುಕು ನೀಡಿದವು!
ಪ್ರತ್ಯುತ್ತರಅಳಿಸುThumba ishta aayithu kavana tejakka.... onthara classic kavana... prathiyondu saalugaLu sogasaagive... haageye sheershike chithra saha...halavu sala kavana odhidhe...
ಪ್ರತ್ಯುತ್ತರಅಳಿಸುnice one tejakka :) ishta aatu :)
ಪ್ರತ್ಯುತ್ತರಅಳಿಸುಕವಿತೆಯನ್ನು ಮೆಚ್ಚಿ ಸ್ಪಂದಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹವೇ ನನ್ನ ಬರವಣಿಗೆಗೆ ಪ್ರೇರಣೆ.
ಪ್ರತ್ಯುತ್ತರಅಳಿಸು-ತೇಜಸ್ವಿನಿ.
kavana chennaagide. onde shabdagalannu eradu sanniveshakke balasuva navyada jaanme tantra bahala dinada mele nodide.
ಪ್ರತ್ಯುತ್ತರಅಳಿಸು"sankolegala - gala hididu"
"ninna ninne- ninne"
"hididiruva -hididiruva ninnolagina -ninnolagina"
illi jodisi odidare ondu artha bidisi odidare innondu. ii tantra nanna mitrana kavanadalli tumbaa iruttittu. bahala dinada nantara ee tantrada adbhuta rasaswaadaneyaayitu. bendreyavara mechchina praakaara bahusha avare shuru maadirabahudu. adigara kavanadallu ive.
Sitaram avare,
ಪ್ರತ್ಯುತ್ತರಅಳಿಸುTumba dhanyavadagaLu :)