ಶನಿವಾರ, ಡಿಸೆಂಬರ್ 18, 2010

ಹಿಡಿ ಹಿಡಿದಷ್ಟು ಸೋರುತಿದೆ ಕಾಲ...

ಬೇಕಿಲ್ಲ-
ಕಾಣದ ಸಂಕೋಲೆ-
ಗಳ ಹಿಡಿದು ಕಣ್ಮುಚ್ಚಿ ನಡೆ
ನಡೆದು ನಡುವೆ ಹಿಂತಿರುಗಿ
ನೋಡಿದರೂ ಏನೊಂದೂ ಕಾಣದ
ಆ ನನ್ನ ಭೂತಗಳು

ಸಾಕಾಗಿದೆ-
ಮುಂದಿರುವ ನಿನ್ನ-
ನಿನ್ನೆಗಳ ನನ್ನದಾಗಿಸಿಕೊಂಡು
ಹುಸಿನಕ್ಕು ನಗಿಸುತ ಸವೆದ ಆ
ದಾರಿಗಳೇ ಮತ್ತೆ ತಿರು ತಿರುಗಿ
ನನ್ನ ಭವಿತವ್ಯದಲೂ ಕಾಡುವುದು

ಹಿಡಿಯಬೇಕಾಗಿದೆ-
ಗುಟುಕು ಉಸಿರ ಹಿಡಿದಿರುವ-
ನಿನ್ನೊಳಗಿನ ನಾನು, ನನ್ನ
ಒಳಗಿನ ನೀನು, ಕುಟುಕು
ಜೀವವ ಹಿಡಿದು ಜೋತಾಡುತಿರುವ
ನಮ್ಮ ವರ್ತಮಾನವನು...

-ತೇಜಸ್ವಿನಿ ಹೆಗಡೆ

16 ಕಾಮೆಂಟ್‌ಗಳು:

ಮಹೇಶ ಹೇಳಿದರು...

ತುಂಬಾ ಚೆನ್ನಾಗಿದೆ.

PARAANJAPE K.N. ಹೇಳಿದರು...

ಹಿ೦ತಿರುಗಿ ನೋಡಿದರೂ ಕಾಣದ ಭೂತಕಾಲ, ಕಾಡುವ ಭವಿಷ್ಯತ್ ಕಾಲದ ಚಿ೦ತೆಯ ನಡುವೆ ವರ್ತಮಾನದ ತುಡಿತ. ಚೆನ್ನಾಗಿದೆ. different one .

Kirti ಹೇಳಿದರು...

kavana tumba meaningful ide.. dhanyavaadagalu.
nimmella kavan mattu lekhanagalannu mechchuvahaagive.

ಕ್ಷಣ... ಚಿಂತನೆ... ಹೇಳಿದರು...

madam, kaalagala kaanada tuLita + tudita chennagide.

ಜಲನಯನ ಹೇಳಿದರು...

ನಡೆ ನಡೆದು ನಡುವೆ ತಿರುಗಿ
ನಿನ್ನ ನಿನ್ನೆಗಳ ನನ್ನದಾಗಿಸಿಕೊಂಡು
ನಿನ್ನೊಳಗಿನ ನಾನು ನನ್ನೊಳಗಿನ ನೀನು...

ಈ ಸಾಲುಗಳಲ್ಲಿನ ಪದಪ್ರಯೋಗ ಮತ್ತು ಅರ್ಥವನ್ನು ಹೆಣೆದ ಬಗೆ ಇಷ್ಟವಾಯ್ತು,,,ಚನಾಗಿದೆ...ತೇಜಸ್ವಿನಿ ಕವನ- ಮಂಥನ

sunaath ಹೇಳಿದರು...

ತೇಜಸ್ವಿನಿ,
ತುಂಬ ಚೆನ್ನಾಗಿದೆ ಕವಿತೆ.

shivu.k ಹೇಳಿದರು...

ಸೊಗಸಾದ ಅರ್ಥಪೂರ್ಣ ಕವನ ಚೆನ್ನಾಗಿದೆ.

ಗುಟುಕು ಉಸಿರ ಹಿಡಿದಿರುವ-
ನಿನ್ನೊಳಗಿನ ನಾನು, ನನ್ನ
ಒಳಗಿನ ನೀನು,
ಈ ಪದಗಳು ಮತ್ತು ಜೋಡಣೆ ಇಷ್ಟವಾಯಿತು.

Ambika ಹೇಳಿದರು...

ತು೦ಬಾ ಚೆನ್ನಾಗಿದೆ... ಮತ್ತೆ ಮತ್ತೆ ಓದಿದೆ..

ಅನಾಮಧೇಯ ಹೇಳಿದರು...

' ಹುಸಿನಕ್ಕು ನಗಿಸುತ ಸವೆದ ' ಆ ದಾರಿಗಳೆ .....ಕವನ ತನ್ನ ಅ೦ತರ೦ಗದೊಳಗೆ ಹುದಗಿಸಿ ಕೊಂಡಿರುವ ವಾಸ್ತವದ ಕರಾಳ ಮುಖವನ್ನ... ಸಲಿಸಾಗಿ ಹೇಳಿದ್ದಿರಿ ,ವಂದನೆಗಳು

ಸಾಗರದಾಚೆಯ ಇಂಚರ ಹೇಳಿದರು...

Sundara kavite
sorutiruva manasugalu,
manassina bannagalu
soruttiruva sambhndhagalu
soruttiruva nagu
ellavoo soruttide

V.R.BHAT ಹೇಳಿದರು...

ಚುಟುಕಗಳು ಗುಟುಕು ನೀಡಿದವು!

ಸುಧೇಶ್ ಶೆಟ್ಟಿ ಹೇಳಿದರು...

Thumba ishta aayithu kavana tejakka.... onthara classic kavana... prathiyondu saalugaLu sogasaagive... haageye sheershike chithra saha...halavu sala kavana odhidhe...

Soumya. Bhagwat ಹೇಳಿದರು...

nice one tejakka :) ishta aatu :)

ತೇಜಸ್ವಿನಿ ಹೆಗಡೆ ಹೇಳಿದರು...

ಕವಿತೆಯನ್ನು ಮೆಚ್ಚಿ ಸ್ಪಂದಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹವೇ ನನ್ನ ಬರವಣಿಗೆಗೆ ಪ್ರೇರಣೆ.

-ತೇಜಸ್ವಿನಿ.

ಸೀತಾರಾಮ. ಕೆ. / SITARAM.K ಹೇಳಿದರು...

kavana chennaagide. onde shabdagalannu eradu sanniveshakke balasuva navyada jaanme tantra bahala dinada mele nodide.
"sankolegala - gala hididu"
"ninna ninne- ninne"
"hididiruva -hididiruva ninnolagina -ninnolagina"
illi jodisi odidare ondu artha bidisi odidare innondu. ii tantra nanna mitrana kavanadalli tumbaa iruttittu. bahala dinada nantara ee tantrada adbhuta rasaswaadaneyaayitu. bendreyavara mechchina praakaara bahusha avare shuru maadirabahudu. adigara kavanadallu ive.

ತೇಜಸ್ವಿನಿ ಹೆಗಡೆ ಹೇಳಿದರು...

Sitaram avare,

Tumba dhanyavadagaLu :)