ನೀ ತೋರಿದ್ದು ಸಾಗರವನ್ನೇ
ಆದರೆ ನಾ ಕಂಡಿದ್ದು,
ಅಡಗಿರುವ ಮುತ್ತು ಹವಳಗಳನ್ನ
ನೀ ಕಾಣಿಸಿದ್ದು ನೀಲಾಗಸವನ್ನೇ
ಆದರೆ ನಾ ಬಯಸಿದ್ದು,
ಸಪ್ತವರ್ಣಗಳ ಮಳೆಬಿಲ್ಲನ್ನ
ನೀ ನೀಡಿದ್ದು ಚೆಂಗುಲಾಬಿಯನ್ನೇ
ಆದರೆ ನಾ ಎಣಿಸಿದ್ದು,
ಘಮ್ಮೆನ್ನುವ ಜಾಜಿ ಮೊಗ್ಗುಗಳನ್ನ
ಪಡೆದದ್ದೇನೂ ಕಡಿಮೆಯದ್ದಲ್ಲ..
ಆದರೆ ಬಯಸಿದ್ದೂ ಕೈಗೆಟುಕದ್ದಲ್ಲ!
ತಪ್ಪು ನನ್ನದಲ್ಲ ನಲ್ಲ,
ಈ ನನ್ನ ಹುಚ್ಚು ಮನಸಿನದು....
ರವಿ ಕಾಣದ್ದು ಕವಿ ಕಂಡಂತೇ
ಕಂಡಿದ್ದು ಕಾಣದ್ದು, ಇದ್ದದ್ದು ಇಲ್ಲದ್ದು,
ಎಲ್ಲವನೂ ಬಯಸಿ,
ನಿದ್ದೆಗೆಡಿಸುತಿದೆ ನಿನ್ನ ನಲ್ಲೆಯ!
- ತೇಜಸ್ವಿನಿ
(ಚಿತ್ರ ಕೃಪೆ : ಗೂಗಲ್)
29 ಕಾಮೆಂಟ್ಗಳು:
ಹುಚ್ಚು ಮನಸಿನ ತಪ್ಪುಗಳನ್ನ ಚೆನ್ನಾಗಿ ಪದವಾಗಿಸಿದ್ದೀರ....
ಭಾವ ತುಂಬೆದ ಸಾಲುಗಳು...
ಕೊನೆಯಲ್ಲಿನ ಸಾಲು ಬಹಳ ಇಷ್ಟವಾಯಿತು. ತಪ್ಪು ಯಾರದ್ದೂ ಅಲ್ಲ, ಇಲ್ಲಿ. ಏಕೆಂದರೆ, ಅವರವರ ಭಾವಕ್ಕೆ ತಕ್ಕಂತೆ....
ಚೆನ್ನಾಗಿದೆ.
ಏನು ಸಿಕ್ಕರೂ ಸಹ, ಮನದ ಬಯಕೆ ಬೇರೆಯೇ ಆಗಿರುವದೇ!
ಕವನ ತುಂಬ ಚೆನ್ನಾಗಿದೆ.
ತೇಜೂ,
ಚಂದ ಇದ್ದು ! ನಲ್ಲ ತಂದದ್ದನ್ನು ನಲ್ಲೆ ಕಂಡ ಬಗೆಯೇ ಬೇರೆ ! ಅದು ಯಾವಾಗಲೂ ಹಾಗೇ ಅಲ್ಲವೇ? ನೋಟ ಬೇರೆ ಬೇರೆ ಯಾದರೂ ಅದರೊಳಗಿನ ಪ್ರೀತಿ ಒಂದೇ .
ಇಷ್ಟವಾಯ್ತು !
ಭಾವಪೂರ್ಣ ಕವನ, ಚೆನ್ನಾಗಿದೆ
ಸಾಗರ ಮುತ್ತು ಹೊ೦ದಿದ್ದರು ಅದನ್ನು ಪಡೆಯುವದು ಸುಲಭವಲ್ಲ. ಮುತ್ತು ಬೇಡಿದವರಿಗೆ ಸಾಗರ ತ೦ದು ಕೊಟ್ಟರೇ?
ಆಕಾಶ್ ಕಾಮನಬಿಲ್ಲು ಹೊ೦ದಿದ್ದರೂ ಅದರ ನೋಟ ಸರ್ವಕಾಲ ಸಾಧ್ಯವೇ? ಕಾಮನಬಿಲ್ಲಿಗಾಗಿ ಪರಿತಪಿಸಿದವರಿಗೆ ನೀಲಾಕಾಶ ತ೦ದು ಕೊಟ್ಟರೇ?
ಸಣ್ಣ ಸಣ್ಣ ಬೇಡಿಕೆಗಳಿದ್ದರೂ ಅವುಗಳ ಪಡೆವಿಕೆ ಅಪರೂಪ ಆದರೇ ನೈಸರ್ಗಿಕ ಮತ್ತು ತ೦ದು ಕೊಡುವವರಿಗೆ ಕಷ್ಟ-ಅಸಾಧ್ಯ.
ಚೆನ್ನಾಗಿ ವಿವರಿಸಿದ್ದಿರಾ... ಒಳ್ಳೇ ಕವನ.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ... ಕವನ ಎಲ್ಲರ ಮನಸ್ಸಿನ ಕನ್ನಡಿಯಂತಿದೆ.
ಕೈಗೆಟುಕದ್ದನ್ನು ಬಯಸುವ ಹುಚ್ಚುಮನಸ್ಸಿನ ನಾಗಾಲೋಟದದುದ್ದಕ್ಕೂ ನಮ್ಮನ್ನು ಕರದೊಯ್ದಿರಿ..ಪಡೆದದ್ದು ಕಡಿಮೆಯಲ್ಲ....ಎನ್ನುವ ಸಾಂತ್ವನ ಮನಸಿಗೆ..ಅಲ್ಲವೇ..? ತೇಜಸ್ವಿನಿ..ಚನ್ನಾಗಿದೆ,
ನೀವು ಕೇಳಿದ್ದೂ ಸರಿ..ಅವರು ಕೊಟ್ಟದ್ದೂ ಸರಿ ! ಮನಸ್ಸಿನ ಬಯಕೆಯೇ ಹಾಗೇನೋ ..! ಕವನ ಚೆನ್ನಾಗಿದೆ.
ಚೆನ್ನಾಗಿ ಬರೆದಿದ್ದೀರಿ ! keep writing
ತೇಜಸ್ವಿನಿ madam,
ಕನಸಿಗೆ ಕಟ್ಟೆ ಹಾಕಲು ಬರದ ಕಷ್ಟದ ಬಗ್ಗೆ ಬರೆದಿದ್ದೀರಾ.... ಚೆನ್ನಾಗಿದೆ.......
tumba chennagide kavana, illadanna bittu illade irodanna bayasutteve alalve.
ತೇಜಸ್ವಿನಿ ಮೇಡಮ್..
ಕವನ ತುಂಬಾ ಇಷ್ಟವಾಯಿತು. ಮೇಲೆ ಕಾಣುವುದು ಎಷ್ಟೇ ಅಗಾಧವಾಗಿ ಸುಂದರವಾಗಿದ್ದರೂ, ಅದನ್ನು ಬಿಟ್ಟು, ಒಳಗಿನ ಸತ್ವವನ್ನೇ ಬೇಡುವ ಭಾವುಕ ಮನಸಿನ ಮಾತುಗಳು....
tumba adre tumba chennagide, idaralliruvudu ellavoo satya.. nechchide nimm manasannu.
ಮೇಡಂ
ಕವಿತೆ ಚೆನ್ನಾಗಿದೆ.
ಧನ್ಯವಾದಗಳು
ಕವಿತೆ ಚೆನ್ನಾಗಿದೆ
ನನಗೆ ಪೂರ್ತಿಯಾಗೇ ಅರ್ಥ ಆಯಿತು...
ನಲ್ಲ ಕೊಡಿಸಿದರಲ್ಲೇ ಖುಷಿ ಆಗಿರಲಿ ಹೇಳಿ ನಲ್ಲೆಗೆ... ಆಗ ಯಾರ ತಪ್ಪು ಇರುವುದಿಲ್ಲ :)
ಹೊಸ ಹೊಸ ರೀತಿಯ ಕವನಗಳನ್ನು ಕೊಡುತ್ತಿದ್ದೀರಿ...ಇನ್ನೂ ಇನ್ನೂ ಬರಲಿ ಇ೦ತಹ ಸು೦ದರ ಕವನಗಳು....
nice poem...
ತೇಜಸ್ವಿನಿಯವರೇ,
ತುಂಬಾ ಸುಂದರ ಕವನ,
ಕಂಡಿದ್ದು ಕಾಣದ್ದು ಎಲ್ಲವುಗಳ ಮಿಲನ ಸೊಗಸಾಗಿದೆ
ಬಹಳಷ್ಟು ಅರ್ಥ ಕವನದ ಒಳಗಿದೆ
ಇಷ್ಟವಾಯಿತು
ಕವನವನ್ನು ಮೆಚ್ಚಿಕೊಂಡು ಸ್ಪೂರ್ತಿ ತುಂಬುವ ಪ್ರತಿಕ್ರಿಯೆಗಳ ಮೂಲಕ ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.
@ ಶ್ಯಾಮಲಾ ಅವರೆ,
ನನ್ನ ಕವನದ ಒಳಾಶಯವನ್ನು ನೀವು ಬಹು ಚೆನ್ನಾಗಿ ಅರ್ಥೈಸಿಕೊಂಡಿರುವಿರೆ. ಹಾಗೆ ನೋಡಿದರೆ ಚಂದ್ರಶೇಖರ್ ಅವರು ಹೇಳಿದಂತೆ ಕವನ ಎನ್ನುವುದು ಅವರವರ ಭಾವಕ್ಕೆ ಬಿಟ್ಟಿದ್ದು.
ಈ ಕವನವನ್ನು ಓದಿದಾಗ ಅಡಿಗರ "ಇರುವುದೆಲ್ಲವ ಬಿಟ್ಟು..." ಕವನದ ಸಾಲು ನೆನಪಾದರೂ ನನ್ನ ಆಶಯ ಇದಲ್ಲ.
ನೀವು ಹೇಳಿದಂತೆ.. ಇದು ಒಳಗಿನ ಸತ್ವವನ್ನು ಬೇಡುವ ಭಾವುಕ ಮನಸಿನ ಮಾತುಗಳು.
ಧನ್ಯವಾದಗಳು.
ತೇಜು ಅಕ್ಕ,
ಕವನ ಚೆನ್ನಾಗಿತ್ತು. :)
ಆದರೆ ನನಗೆ ಅನುಮಾನ.. ಗುಲಾಬಿಗೂ ಜಾಜಿಗೂ ನಂಟು ಹೇಗೆ..?
ಶಂಕರ್,
ಮೆಚ್ಚುಗೆಗೆ ಧನ್ಯವಾದಗಳು. ಇನ್ನು ಗುಲಾಬಿ, ಜಾಜಿಯ ನಡುವಿನ ಅಂತರ - ಸರಳವಾಗಿ ಹೇಳಬೇಕೆಂದರೆ, ಗುಲಾಬಿ ನೋಡಲು ಸುಂದರ ಆದರೆ ಅದರ ಪರಿಮಳ ಜಾಜಿಗೆ ಸಮನಾಗದು. ಗುಲಾಬಿ ಮುಗುಳ್ನಗುವಾದರೆ, ಜಾಜಿ ಹೂ ನಗೆಬುಗ್ಗೆ :)
ಪಡೆದದ್ದೇನೂ ಕಡಿಮೆಯದ್ದಲ್ಲ..
ಆದರೆ ಬಯಸಿದ್ದೂ ಕೈಗೆಟುಕದ್ದಲ್ಲ!
ತಪ್ಪು ನನ್ನದಲ್ಲ ನಲ್ಲ,
ಈ ನನ್ನ ಹುಚ್ಚು ಮನಸಿನದು....
ಈ ಸಾಲುಗಳು ಸಕತ್ ಇಷ್ಟ ಆಯ್ತು ತೇಜಕ್ಕ... :-)
ನಿಜ.... ಎಷ್ಟೋ ವಿಷಯಗಳು ನಮಗರಿವಿಲ್ಲದಂತೆ ನಮ್ಮ ಮನಸ್ಸಿಗೆ ಇಷ್ಟವಾಗಿಬಿದುತ್ತದೆ .....
ಅದು ಕೈಗೆ ಎಟುಕದಿದ್ದಾಗ "ತಪ್ಪು ಯಾರದ್ದು " ಅಂತ ನಮ್ಮನ್ನ ನಾವು ಕೇಳಿಕೊಂಡಾಗ ಹೊಳೆಯುವ ಉತ್ತರ " ತಪ್ಪು ನನ್ನದಲ್ಲ " ಅಂತಾನೆ ಅಲ್ಲವ??... :-)
Madam,
hego yavado link mulak nimma blog bantuu... tumbaa chenagive saluGalu :)
ತುಂಬಾ ಚೆನ್ನಾಗಿದೆ ಕಾವ್ಯ!
'ತೇಜಸ್ವಿನಿ ಹೆಗಡೆ' ಅವ್ರೆ..,
ಚೆನ್ನಾಗಿದೆ...
Blog is Updated: http:/manasinamane.blogspot.com
ತೇಜಸ್ವಿನಿ ಮೇಡಂ,
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ಅನ್ನೋದು ಇದ್ದಕ್ಕೆ ಅನ್ಸುತ್ತೆ ಅಲ್ವ. ಕಾವ್ಯ ಝರಿ ಅವರ್ಣನೀಯ. ಸೊಗಸಾದ ಕವನ.
ಕವನ ತುಂಬಾ ಇಷ್ಟ ಆಯಿತು... :)
ನಿಮ್ಮವ,
ರಾಘು.
tumba chennagide...
ಕಾಮೆಂಟ್ ಪೋಸ್ಟ್ ಮಾಡಿ