ಬುಧವಾರ, ಫೆಬ್ರವರಿ 17, 2010

ಹೆಸರಿಲ್ಲದ ಭಾವಗಳು...

ಸುರಗಿ ಮರದ ನೆರಳಲ್ಲಿ ಕುಳಿತು,
ಕೆಳಗೆ ಬಿದ್ದ ಹೂವುಗಳನ್ನು ಹೆಕ್ಕಿ
ಒಂದೊಂದಾಗಿ ಮಡಿಲೊಳು ತುಂಬುವಾಗ,
ಕಳೆದುಹೋದ ಸವಿ ನೆನಪುಗಳನ್ನೇ
ಕಂಪನ್ನಾಗಿಸಿ, ಉಸಿರೊಳಗೆಳೆದು, ಮತ್ತೆ
ಮನದೊಳಗೆ ಒಂದೊಂದಾಗಿ ತುಂಬಿಕೊಳ್ಳುವ,
ಹುಚ್ಚು ಹಂಬಲ

**

ತೂಗುಯ್ಯಾಲೆಯಲಿ ಕೂತು,
ಜೋರಾಗಿ ಜೀಕುತ್ತಾ ಕಣ್ಮುಚ್ಚಿದರೆ,
ಒಮ್ಮೆ ನಾನು ಭೂತದಲ್ಲಿರುವೆ,
ಮಗದೂಮ್ಮೆ ಭವಿಷ್ಯತ್ತಿನಲ್ಲಿ...
ಕಣ್ಬಿಟ್ಟರೆ ಸಾಕು, ಕಾಣುವುದು
ವರ್ತಮಾನದಲ್ಲಿ ನಿಂತಿರುವ,
ನನ್ನ ಜೋಕಾಲಿ.

**

ಅತ್ತ ಸಾಗರದ ಮೊರೆತ,
ಇತ್ತ ನದಿಯ ಜುಳು ಜುಳು...
ನಡುವಿರುವ ಬಿಸಿ ಡಾಮರಿನಲ್ಲಿ
ನಾ ಸಾಗುವಾಗ,
ನಿನ್ನ ನೆನಪಾಗಿ ಮುಗುಳ್ನಗಲು,
ಥಟ್ಟನೆ ಹೊಳೆಯಿತು, ನಾನಿರುವುದೀಗ
ಮರವಂತೆಯಲ್ಲಿ

22 ಕಾಮೆಂಟ್‌ಗಳು:

ಚುಕ್ಕಿಚಿತ್ತಾರ ಹೇಳಿದರು...

ಹೆಸರಿಲ್ಲದಿದ್ದರೂ ಭಾವಗಳು ಸು೦ದರವಾಗಿವೆ...
ಕೆಲವೊಮ್ಮೆ ಹಾಗೆಯೇ..
ಮಿ೦ಚಿ ಮರೆಯಾಗುವ ಕಲ್ಪನೆಗಳನ್ನು ಹಿಡಿಯುವುದು ಕಷ್ಟ...

Subrahmanya ಹೇಳಿದರು...

ಹಂಬಲ ಹುಚ್ಚೇನಲ್ಲ ಬಿಡಿ ! ಸವಿಯಾದದ್ದೇ ಅದು..
ಹಾಗೊಮ್ಮೆ , ಹೀಗೊಮ್ಮೆ ಜೀಕುವುದೇ ಜೀವನ...
ಮರವಂತೆಯಲ್ಲಿ ನೆನಪಾಗದಿದ್ದರೆ ಹೇಗೆ ಹೇಳಿ ...? :)

ಸೊಗಸಾದ ಪುಟ್ಟ-ಭಾವ ತುಂಬಿದ ಕವನಗಳು.

ಸೀತಾರಾಮ. ಕೆ. / SITARAM.K ಹೇಳಿದರು...

ನೆನಪುಗಳ ಮೆಲುಕಿಗೂ -ಬಿದ್ದ ಹೂಗಳೆತ್ತಿ ತು೦ಬುವದಕ್ಕೂ ತಮ್ಮ ಹೋಲಿಕೆ ತು೦ಬಾ ಹಿಡಿಸಿತು. ಸುರಗಿ ಹೂ ಎ೦ದರೆ ಪಾರಿಜಾತ ಹೂವೇ? ಮರವ೦ತೆ ಬಗೆಗಿನ ಚುಟುಕು ಚೆನ್ನಾಗಿದೆ. ಜೋಕಾಲಿ ವಾಸ್ತವದ ಚಿತ್ರಣವೂ ಮುದ ನೀಡಿತು. ಚೆ೦ದದ ಚುಟುಕುಗಳು.

sunaath ಹೇಳಿದರು...

ನೆನಪುಗಳ ಸಿಹಿಯನ್ನು ಕವನವಾಗಿಸಿ ನಮಗೆ ಕೊಟ್ಟಿದ್ದೀರಿ. ಮೆಲ್ಲಲು ಖುಶಿಯಾಗುತ್ತದೆ.

ಜಲನಯನ ಹೇಳಿದರು...

ತೇಜಸ್ವಿನಿ ಒಮ್ಮೆಗೇ ಎರಡು ಪೋಸ್ಟ್ ನೋಡ್ತಿದ್ದೇನೆ....ಅದಿತಿಯ ಮುದ್ದು ಚಿತ್ರಲೇಖನ..ಈಗ ನೀವೇಹೆ ಜೋಕಾಲಿ..?!! ಹೌದು..ಜೋಕಾಲಿಯೇ ಹಾಗಲ್ಲವೇ..ಹಿಂದಕ್ಕೆ ಹೋಗುತ್ತೆ...ನಿಲ್ಲುವುದು ವರ್ತಮಾನಕ್ಕೆ ಬಂದೇ..ಸ್ವಲ್ಪಹೊತ್ತು ಭವಿಷತ್ತಿಗೂ ಹೋಗಬಹುದು...ಒಳ್ಳೆಯ ಕಲ್ಪನೆಯ ಪರಿ.

V.R.BHAT ಹೇಳಿದರು...

ಚೆನ್ನಾಗಿ ಕೊಡಲು ಪ್ರಯತ್ನಿಸಿದ್ದೀರಿ, ಧನ್ಯವಾದ

ದಿನಕರ ಮೊಗೇರ ಹೇಳಿದರು...

ಅತ್ತ ಸಾಗರದ ಮೊರೆತ,
ಇತ್ತ ನದಿಯ ಜುಳು ಜುಳು...
ನಡುವಿರುವ ಬಿಸಿ ಡಾಮರಿನಲ್ಲಿ
ನಾ ಸಾಗುವಾಗ,
ನಿನ್ನ ನೆನಪಾಗಿ ಮುಗುಳ್ನಗಲು,
ಥಟ್ಟನೆ ಹೊಳೆಯಿತು, ನಾನಿರುವುದೀಗ
ಮರವಂತೆಯಲ್ಲಿ
ಹ್ಹಾ ಹ್ಹಾ..... ಸಕತ್ತಾಗಿದೆ ... ನಾನು ಬೈಕಿನಲ್ಲಿ ಹೋಗುವಾಗಿನ ದ್ರಶ್ಯ ನೆನಪಿಗೆ ಬಂತು..... ಎಲ್ಲಾ ಕವನಗಳೂ ತುಂಬಾ ಚೆನ್ನಾಗಿದೆ.....

ಮನಸಿನ ಮಾತುಗಳು ಹೇಳಿದರು...

chanaagiddu... :)

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ,

ಹೆಸರಿಲ್ಲದ ಭಾವಗಳು - ಓದುತ್ತ ಹೋದಂತೆ ಹೊಸತನವೆನಿಸಿತು. ಉಪಮೆಗಳು ನೆನಪಿನಲ್ಲಿಳಿಯುವಂತಹವು. ಖುಷಿಯಾಯಿತು. ಪುಟ್ಟದಾಗಿ ಹೊರಹೊಮ್ಮುವ ಭಾವನೆಗಳನ್ನು ಚುಟುಕಾಗಿ ಅಕ್ಷರರೂಪಕ್ಕಿಳಿಸಿದ್ದೀರಿ.

ಇನ್ನಷ್ಟು ಇಂತಹ ಭಾವಚುಟುಕಗಳು ಮತ್ತಷ್ಟು ಹೊಮ್ಮಿಬರಲಿ.

ಸ್ನೇಹದಿಂದ,

ಸವಿಗನಸು ಹೇಳಿದರು...

ಭಾವಗಳಿಗೆ ಹೆಸರಿಲ್ಲದಿದ್ದರೂ ಸೊಗಸಾಗಿವೆ...
ಇನ್ನಷ್ಟು ಬರಲಿ....

Unknown ಹೇಳಿದರು...

ಆಹಾ ಚೆನ್ನಾಗಿವೆ... ಮರವಂತೆ ಮತ್ತೆ ನೆನಪು ಮಾಡಿಸಿದ್ದೀರಿ.. ಹೋಗಬೇಕು ಅಲ್ಲಿಗೆ...

ಸುಧೇಶ್ ಶೆಟ್ಟಿ ಹೇಳಿದರು...

vaa.. vaa... vaa....

nimma kavanavannu odidhaaga nanage anisiddu :)

"hesarilladha bhaavagaLu" sheershike mattu padhya eradu ishta aayithu....

ಮನಸು ಹೇಳಿದರು...

super!! oLLe holike chennagide

ಶರಶ್ಚಂದ್ರ ಕಲ್ಮನೆ ಹೇಳಿದರು...

ತೇಜಕ್ಕ,
"ಸುರಗಿ ಮರದ ನೆರಳಲ್ಲಿ ಕುಳಿತು..." ತುಂಬಾ ಇಷ್ಟವಾಯಿತು... ಕಳೆದು ಹೋದ ಸವಿನೆನಪುಗಳನ್ನು ಉದ್ದೀಪನಗೊಳಿಸಿತು. ತೂಗುಯ್ಯಾಲೆಯ ಬಗ್ಗೆ ನಿಮ್ಮಲ್ಲಿ ಮೂಡಿದ ಕಲ್ಪನೆಗೆ ಹ್ಯಾಟ್ಸ್ ಆಫ್. ಒಟ್ಟಿನಲ್ಲಿ ಮೂರೂ ತುಣುಕುಗಳು ಇಷ್ಟವಾದವು :)

ದಿವ್ಯಾ ಮಲ್ಯ ಕಾಮತ್ ಹೇಳಿದರು...

ನವಿರಾಗಿವೆ ಹೆಸರಿಲ್ಲ ಭಾವಗಳು..

PARAANJAPE K.N. ಹೇಳಿದರು...

ಎರಡನೆಯದು ತು೦ಬಾ ಚೆನ್ನಾಗಿದೆ. ಮಿಕ್ಕವು ಕೂಡ ಬೆಸ್ಟ್. ಇಷ್ಟವಾಯ್ತು.

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನ ಹೆಸರಿಲ್ಲದ ಭಾವಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದವರಿಗೆಲ್ಲಾ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಸ್ನೇಹ, ಪ್ರೋತ್ಸಾಹ ಹೀಗೆ ನನ್ನ ಮಾನಸದೊಂದಿಗಿರಲೆಂದು ಆಶಿಸುವೆ.

@ ಸೀತಾರಾಮ್ ಅವರೆ,

ಸುರಗಿ ಹೂವೇ ಬೇರೆ ಪಾರಿಜಾವೇ ಬೇರೆ. ಸುರಗಿ ಹೂವು ತುಂಬಾ ಚಿಕ್ಕದಾಗಿದ್ದು ಬಹು ಸುಗಂಧವನ್ನು ಹೊಂದಿರುವ ಪುಷ್ಪ. ಇದರ ಮಾಲೆ ಒಣಗಿದ ಮೇಲೂ ತುಂಬಾ ಘಮಘಮಿಸುತ್ತಿರುತ್ತದೆ.

Pramod P T ಹೇಳಿದರು...

ಹಾಯ್ ತೇಜು ಮೇಡಮ್,

ಮೂರೂ ಟೂ ಗೂಡ್ :)

Kirti ಹೇಳಿದರು...

very nice

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿಯವರೇ,
''ತೂಗುಯ್ಯಾಲೆಯಲಿ ಕೂತು,
ಜೋರಾಗಿ ಜೀಕುತ್ತಾ ಕಣ್ಮುಚ್ಚಿದರೆ,
ಒಮ್ಮೆ ನಾನು ಭೂತದಲ್ಲಿರುವೆ,
ಮಗದೂಮ್ಮೆ ಭವಿಷ್ಯತ್ತಿನಲ್ಲಿ...
ಕಣ್ಬಿಟ್ಟರೆ ಸಾಕು, ಕಾಣುವುದು
ವರ್ತಮಾನದಲ್ಲಿ ನಿಂತಿರುವ,
ನನ್ನ ಜೋಕಾಲಿ.;;

ಎಂಥಹ ಸಾಲುಗಳು
ಬಹಳ ಸೊಗಸಾಗಿದೆ

vanihegde blog ಹೇಳಿದರು...

Good one,visit my site
www.vanihegde.wordpress.com

ಅನಾಮಧೇಯ ಹೇಳಿದರು...

Hi,
Kshamisi, Nanage kannada typing barolla.
Nimma baraha tumba chennagide. AA eradane para 'Jokaali' tumba adbutavaada kalpane.

Heege munduvareyali nimma kalatmaka chintane.

- Bhanu