ಶುಕ್ರವಾರ, ಜನವರಿ 30, 2015

ತಪ್ತ

ಹನಿಯಲೆಂದೇ ಸಿದ್ಧವಾಗಿಹ ತುಂಬಿದ ಮನ,
ಬಿಳಿ ಮೋಡಗಳ ನಡುವೆ ರಾಟೆ ತಿರುಗಿಸುವ ಕರಿ ಚಂದ್ರ....
ಅಂಚಿಂದೆದ್ದು ಬರುತಿವೆ ಕೆಂಬಣ್ಣದ ಕೋಲ್ಮಿಂಚುಗಳು,
ಸಿಡಿಲು-ಗುಡುಗುಗಳೆಲ್ಲಾ ಮೌನದೊಳು ಮಗುಮ್ಮಾ!

ಆರೋಹಣದಲ್ಲಿಹ ಎದೆಬಡಿತ,
ಅವರೋಹಣದಲ್ಲಿರುವ ಉಸಿರು,
ಒಳಸರಿದ ಕೆಳ್ದುಟಿ, ಮಂದ್ರಕ್ಕಿಳಿದ ಕಸುವು.

ಕರವಸ್ತ್ರವಾಗದ ಕವಿತೆ,
ಕಂಡಷ್ಟೇ ಕಾಣಿಸಿದ ಕಡಲು,
ಅಪಸ್ವರ ನುಡಿಸುತಿದೆ ಮುರಿದು ಬಿದ್ದ ಕೊಳಲು...

ಕತ್ತಲ ಹುಡುಕಿ ಹೊರಟರೆ,
ಬೆಳಕೇ ಕಣ್ಮುಚ್ಚುವುದು..!
ಇರದುದರೆಡೆ ತುಡುಯುವುದು
ಎರಡು ದೋಣಿ ಪಯಣವು!

~ತೇಜಸ್ವಿನಿ




3 ಕಾಮೆಂಟ್‌ಗಳು:

sunaath ಹೇಳಿದರು...

ತಪ್ತ ಮನಃಸ್ಥಿತಿಯನ್ನು ಸಮರ್ಪಕವಾಗಿ ಚಿತ್ರಿಸಿದ್ದೀರಿ!

Unknown ಹೇಳಿದರು...

Nice one...!!!

could you please visit ammanahaadugalu.blogspot.com

and share your opinion/Guide me.

ಇಬ್ಬನಿ ಹೇಳಿದರು...

ಬಿಳಿ ಮೋಡಗಳ ನಡುವೆ ರಾಟೆ ತಿರುಗಿಸುವ ಕರಿ ಚಂದ್ರ.... ಕರವಸ್ತ್ರವಾಗದ ಕವಿತೆ,
ಕಂಡಷ್ಟೇ ಕಾಣಿಸಿದ ಕಡಲು,
ಅಪಸ್ವರ ನುಡಿಸುತಿದೆ ಮುರಿದು ಬಿದ್ದ ಕೊಳಲು...
tumbaa ishTavaaguva saalugaLu.. :)