ಶುಕ್ರವಾರ, ಫೆಬ್ರವರಿ 5, 2010

ಧಿಕ್ಕಾರ!!!!!

ಧಿಕ್ಕಾರ!!!!!
ಇವತ್ತು ಮಧ್ಯಾಹ್ನ ನನ್ನವರಿಂದ ನನಗೊಂದು forward mail ಬಂತು. ಆಗಷ್ಟೇ ಊಟ ಮುಗಿಸಿ ಬಂದಿದ್ದ ನಾನು, ನೋಡುತ್ತಾ ಹೋದಂತೆ, ಅಕ್ಷರಶಃ ದಿಗ್ಭ್ರಾಂತಳಾದೆ. ತಿಂದ ಅನ್ನವೆಲ್ಲಾ ಒಮ್ಮೆಲೇ ಗಂಟಲಿಗೆ ಬಂದ ಅನುಭವವಾಗಿ, ತಲೆತಿರುಗಿದಂತಾಯಿತು. ನಾನ್ಯಾವತ್ತೂ ಇಷ್ಟೊಂದು ಭಾವೋದ್ರೇಕಕ್ಕೆ ಒಳಗಾದವಳಲ್ಲ. ಇಲ್ಲಿಯ ಚಿತ್ರಗಳನ್ನು, ಅದರ ಕೆಳಗಿರುವ ವಿವರಣೆಗಳನ್ನು ನೋಡಿ ಕಣ್ಣೀರು ತುಂಬಿತು...
ಈ ಚಿತ್ರಗಳನ್ನು ನೋಡಿದಾಗ ಅನಿಸಿದ್ದು ಒಂದೇ..... ಮಾನವನಿಗಿಂತ ಕ್ರೂರ ಪ್ರಾಣಿ ಖಂಡಿತ ಮತ್ತೊಂದಿಲ್ಲ. ಭೂತ, ಪ್ರೇತ, ಪಿಶಾಚಿಗಳೂ ಹೆದರುವುದು ಈ ಮಾನವನಿಗೇ ಎಂದು. ನರರೂಪಿ ರಾಕ್ಷಸರನ್ನು ಮತ್ತಷ್ಟು ಪೈಶಾಚಿಕರನ್ನಾಗಿಮಾಡುವುದು ಜನರ ಹೊಟ್ಟೆಬಾಕತನ ಹಾಗೂ ನಿಲ್ಲದ ಚಪಲತೆ. ದಯವಿಟ್ಟು ಇದನ್ನು ನಿಲ್ಲಿಸಲು ಯತ್ನಿಸಿ. ನಿಮ್ಮೊಳಗಿನ ಮಾನವಿಯತೆಯನ್ನು ತುಸುವಾದರೂ ಉಳಿಸಿಕೊಳ್ಳಿ.

ಬೇಡದ, ಮೂರುಕಾಸಿಗೂ ಬೆಲೆಯಿಲ್ಲದ ವಿಷಯಕ್ಕೆಲ್ಲಾ ಹೋರಾಟ ಮಾಡುವ ಸಂಘಟನೆಗಳು ಈ ಒಂದು ಅಮಾನವೀಯತೆಯನ್ನು ತಡೆಯಲು ಯಾಕೆ ಮುಂದಾಗುತ್ತಿಲ್ಲ? ಇಂತಹ ಒಂದು ಪಾಪಕೃತ್ಯವನ್ನು ಮಾಡಿಸುತ್ತಿರುವವನು, ಮಾಡುತ್ತಿರುವವ ಎಷ್ಟು ದುಷ್ಟನೋ, ಅವನಿಗಿಂತ ದುಷ್ಟ ಹಾಗೂ ಅಮಾನವೀಯ ಮನುಷ್ಯ(??) ಇದನ್ನು ಚಪ್ಪರಿಸುತ್ತಾ ತಿನ್ನುವವ!! ಇಂತಹ ಪೈಶಾಚಿಕತೆಯನ್ನು ನಡೆಸುತ್ತಿರುವ, ನಡೆಸಲು ಪರೋಕ್ಷ ಹಾಗೂ ಪ್ರತ್ಯಕ್ಷ ಸಹಕಾರವನ್ನು ನೀಡುವ ಪ್ರತಿಯೊಬ್ಬನಿಗೂ ನನ್ನ ಧಿಕ್ಕಾರ!! ನರಕವೆಂಬುದಿದೆಯೆಂದಾದರೆ, ಖಂಡಿತ ಇಂಥವರಿಗೆ ಈ ಜನುಮದಲ್ಲೇ ಅದು ಸಿಗಲೆಂದು ಪ್ರಾರ್ಥಿಸುವೆ.
ಇಂಗ್ಲೀಷಿನಲ್ಲಿದ್ದ e-mail‌ ಅನ್ನು ಇದ್ದ ಹಾಗೇ ನನ್ನ ಬ್ಲಾಗಿನಲ್ಲಿ ಕಾಣಿಸಿದ್ದೇನೆ. ಭಾಷಾಂತರಿಸಲು ನನ್ನ ಕೈಗಳೂ ಸಹಕರಿಸಲಿಲ್ಲ. ಹುಡುಕಿದರೆ ಪದಗಳೆಲ್ಲಾ ಖಾಲಿ!! :(

ಸುಂದರ, ಮುಗ್ಧ, ಅಮಾಯಕ ಬಾತುಕೋಳಿಗಳಿಗೆ ನನ್ನ ಎದೆಯಾಳದ ಶ್ರದ್ಧಾಂಜಲಿ!
:(:( :(
- ತೇಜಸ್ವಿನಿ ಹೆಗಡೆ
--------------------------------------

Foie Gras
Foie Gras Foie Gras means "Fat Liver"It's very very luxury menu that originates from France But this dish comes from FORCE FEEDING a goose to make them develope FATTY LIVER DISEASE.
Let's see the source of this wonderful dish


Let's see the source of this wonderful dish
The geese are forced to eat.. even if it does not desire to


The metal pipe pass through the throat to stomach ...even if it does not want to eat anything To make the liver bigger and fatter

Cages are very small and they force the geese to stay in one position to avoid using energy, thus converting all food into fat.



How sad their eyes show up

Their legs were bloated from long standing everyday. No need to sleep because they will be caught to eat again

Although they try to defend themselves But it is useless


How sad this life is..



They are forced to eat until they are dead or their bodies cant stand with this You see... the food is over its mouth


The left who survive have crapped to be inflamed asses...blood easily come up with the shit Not only mouth hurt, throat hurt , all time stomach ache from the food , Fat to bloated legs , no sleep , no excercise But also no free movement for life to see the sky or river


This your Healthy Liver like those Chicken (!!!!??)

To get the beautiful and white liver that becomes unusually big like this As Liver-canned from aboard




STOP THE DAILY TORTURE AND CRUELTY TO THE POOR ANIMAL. STOP TAKING THIS DISH OR PRODUCT NOW.


STOP THE DEMAND AND
THE SUPPLY WILL END.



PLEASE....

(Tejaswini.)

36 ಕಾಮೆಂಟ್‌ಗಳು:

ಸುಧೇಶ್ ಶೆಟ್ಟಿ ಹೇಳಿದರು...

ಕ್ರೂರ ಅತಿ ಕ್ರೂರ :(:(:( ಆಫೀಸಿನಲ್ಲಿ ಈ ಮೇಲ್ ನೋಡಿ ಮನಸು ಕೆಟ್ಟು ಹೋಯಿತು.... ಯಾವತ್ತೂ ಕೆ.ಎಫ್.ಸಿ ಗೆ ಹೋಗಲ್ಲ ಅ೦ತ ನಿರ್ಧಾರ ಮಾಡಿದೆ...

ಕ್ಷಣ... ಚಿಂತನೆ... ಹೇಳಿದರು...

ನಮಸ್ಕಾರ ತೇಜಸ್ವಿನಿಯವರೆ,

ಇದೀಗ ತಾನೇ 'ಧಿಕ್ಕಾರ' ದ ಬಗ್ಗೆ ಓದಿದೆ. ಇದು ನನಗೆ ಕಳೆದವಾರವಷ್ಟೇ ನನ್ನ ಸ್ನೇಹಿತರು ತೋರಿಸಿದ್ದರು. ಇವುಗಳನ್ನು ನೋಡುವಾಗಲೇ ತುಂಬಾ ಬೇಸರವಾಯಿತು. ಎಂತಹ ಕ್ರೂರತೆ ಇಲ್ಲಿದೆ ಎನಿಸಿತು. ನಿಜಕ್ಕೂ ಇಂತಹವನ್ನು ಭಕ್ಷಿಸುವವರೇ ಮೊತ್ತ ಮೊದಲ ರಾಕ್ಷಸರು ಎನ್ನಬಹುದು.

ಇಂತಹವನ್ನು ಫಾರ್ವಡ್‌ ಮಾಡಿ ಸುಮ್ಮನಾಗುವವರೇ ಜಾಸ್ತಿ. ಆದರೆ, ಇದನ್ನು ಬ್ಲಾಗಿನಲ್ಲಿ ಬರೆದು 'ಧಿಕ್ಕಾರ' ಸೂಚಿಸಿರುವುದು, ಇನ್ನಾದರೂ ಮಾಂಸಭಕ್ಷಕರು ಯೋಚಿಸಲಿ, ತಾವೆಂತಹ ವಿಕೃತಿ ಮನಸ್ಸುಳ್ಳವಾರಗುತ್ತಿದ್ದೇವೆಂದು.

ಸಂಘಟನೆಗಳೂ ಸಹ ಕೇವಲ ಬೂಟಾಟಿಕೆ ಮಾಡುತ್ತವೆಯೇ ಹೊರತು, ನಿಜವಾಗಿಯೂ ಕಾರ್ಯತತ್ಪರವಾಗಿ ಇಂತಹ ಹೀನ ಕೃತ್ಯಗಳನ್ನು ತಡೆಯುವಲ್ಲಿ ಆಸಕ್ತಿ ತೋರುವುದಿಲ್ಲ ಎನಿಸುತ್ತದೆ. ನೀವು ಹೇಳಿದಂತೆ, ಭಾಷಾಂತರ ಮಾಡುವ ಮನಸ್ಸು ಖಂಡಿತಾ ಆಗುವುದಿಲ್ಲ.

ಇಂತಹುದಕ್ಕೆ, ನನ್ನ ಕಡೆಯಿಂದಲೂ ಧಿಕ್ಕಾರವಿದೆ.
ಸಕಲ ಪ್ರಾಣಿಗಳಲ್ಲೂ ದೇವರನ್ನು ಕಾಣು ಎಂಬುದನ್ನು ಇಂತಹ ಜನರು (ಕಟುಕರು) ನಿಜಕ್ಕೂ ಸೈತಾನರೇ ಹೌದು.

ವಿ.ರಾ.ಹೆ. ಹೇಳಿದರು...

KFCನಲ್ಲಿ ಸಿಗುವ ಚಿಕನ್ ಪದಾರ್ಥಗಳನ್ನು ತಯಾರಿಸಲು ಇದೇ ರೀತಿ ಕೋಳಿಗಳನ್ನು ಬರೀ ಮಾಂಸದ ಮುದ್ದೆಯಂತೆ ಬೆಳೆಸುತ್ತಾರಂತೆ. googleನಲ್ಲಿ ಹುಡುಕಿದರೆ ಅದರ ಚಿತ್ರಗಳೂ ಸಿಗುತ್ತವೆ. ಮಾಂಸ ತಿನ್ನುವುದು ಬೇಡ ಎನ್ನುವುದಕ್ಕಾಗುವುದಿಲ್ಲವೇನೋ, ಆದರೆ ಈ ರೀತಿ ಮಾಡಬೇಕಾ! ತಟ್ಟೆಯ ಹಿಂದೆ ಎಷ್ಟೆಲ್ಲಾ ಕ್ರೌರ್ಯ !disgusting.

ವಿ.ರಾ.ಹೆ. ಹೇಳಿದರು...

<>

PETA, CUPA ಮುಂತಾದ ಸಂಘಟನೆಗಳು ಇಂತದ್ದನ್ನು ವಿರೋಧಿಸಿಕೊಂಡು ಬರುತ್ತಿವೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೋರಾಡುತ್ತಿವೆ. ಔಷಧಿ ಕಂಪನಿಗಳು, ಕಾಸ್ಮೆಟಿಕ್ ಕಂಪನಿಗಳು ತಮ್ಮ ಪ್ರಯೋಗಗಳಿಗೆ ಪ್ರಾಣಿಗಳನ್ನು ಬಳಸಿಕೊಳ್ಳುವ ರೀತಿ ಕೂಡ ಘೋರವಾಗಿದೆ. ಏನೇ ಮಾಡಿದರೂ ಜನ ಅರಿತುಕೊಂಡರಷ್ಟೆ ಇಂತದ್ದನ್ನೆಲ್ಲಾ ನಿಲ್ಲಿಸಲು ಸಾಧ್ಯ.

ಚುಕ್ಕಿಚಿತ್ತಾರ ಹೇಳಿದರು...

ಧಿಕ್ಕಾರ'
ತಿನ್ನಲು ಪ್ರಾಣಿಗಳನ್ನು ಕೊಲ್ಲುವುದು...ತು೦ಬಾ ಬೇಜಾರಾಗುತ್ತೆ..
ತನ್ನ ಉಳಿವಿಗೆ ಇನ್ನೊ೦ದು ಪ್ರಾಣಿಯ ಜೀವ ಭಕ್ಶಿಸುವುದು ಯಾವ ನ್ಯಾಯ...? ಅದೂ ಇಷ್ಟೊ೦ದು ಹಿ೦ಸೆ ಕೊಟ್ಟು....?
'ಧಿಕ್ಕಾರ' 'ಧಿಕ್ಕಾರ'

ಸೀತಾರಾಮ. ಕೆ. / SITARAM.K ಹೇಳಿದರು...

ಮಾನವನ ಚಪಲದ ತೀಟೆಗೆ ಪ್ರಾಣಿಗಳನ್ನು ಇಷ್ಟೊ೦ದು ಹಿ೦ಸಿಸುವದ ಕೇಳಿ ಮೈ ನಡುಕಗೊ೦ಡಿತು. ಬದುಕಲು ತಿನ್ನಬೇಕು. ತಿನ್ನಲು ಇನ್ನೊ೦ದು ಜೀವಿಯ ಬದುಕನ್ನು ತೆಗೆಯುವದು ಸುಸ೦ಸ್ಕೃತ ಮಾನವಜೀವಿಗೆ ಶೋಭೆಯಲ್ಲ. ಅದರಲ್ಲೂ ರುಚಿಗಾಗಿ ಅವುಗಳನ್ನು ಹಿ೦ಸಿಸಿ ಕೊ೦ದು ತಿನ್ನುವದು ಇನ್ನೂ ಅಮಾನವೀಯ. ನಿಜಕ್ಕೂ ಇದು ಧಿಕ್ಕರಿಸಬೇಕಾದ ವಿಷಯವೇ.
ಮಾನವನ ಈ ಪೈಶಾಚಿಕ ಕೃತ್ಯಗಳಿಗೆ ಅ೦ತ್ಯ ಅವಶ್ಯವಾಗಿದೆ.

ತೇಜಸ್ವಿನಿ ಹೆಗಡೆ ಹೇಳಿದರು...

@ಸುಧೇಶ್,

ನನಗೂ ಮೈಲ್ ನೋಡಿ ತುಂಬಾ ದುಃಖವಾಯಿತು.ಕ್ರೂರತೆಗೆ ಯಾವ ಸೀಮೆಯೂ ಇಲ್ಲ ಎಂದೆನಿಸುತ್ತದೆ ಇದನ್ನು ನೋಡಿದಾಗ :( ಸುಮ್ಮನೇ ದುಃಖಿಸಿ, ಒಂದಿಬ್ಬರಿಗೆ ಕಳುಹಿಸಿದರೆ ಏನೂ ಮಾಡಿದಂತಾಗದು ಎಂದೆಣಿಸಿಯೇ ಪೋಸ್ಟ್ ಹಾಕಿದೆ. ಆದಷ್ಟು ಜನರು ಇದನ್ನು ಓದಿ, ತಮ್ಮ ರುಚಿಯ ಹಿಂದೆ ಯಾವ ನೋವಿನ ಕಥೆ ಅಡಿಗಿದೆ ಎಂದು ತಿಳಿಯಲಿ ಎಂಬುದೇ ನನ್ನ ಉದ್ದೇಶ. ಕೆಲವರಾದರೂ ತಿಳಿದ ಮೇಲೆ ನಿಲ್ಲಿಸಿದರೆ ಅಷ್ಟೇ ಸಾರ್ಥಕ. ಒಂದಾದರೂ ಬಾತುಕೋಳಿಯ ಬದುಕು ಸಹನೀಯವಾಗಬಹುದು ಇದರಿಂದ!

ನಿಮ್ಮ ಉತ್ತಮ ನಿರ್ಧಾರಕ್ಕೆ ತುಂಬಾ ಧನ್ಯವಾದಗಳು.

@ ಚಂದ್ರಶೇಖರ್ ಅವರೆ,

ಆತ್ಮಸಾಕ್ಷಿಯುಳ್ಳವರು ಯಾರೂ ಇಂತಹದ್ದನ್ನು ತಿನ್ನರು. ಒಂದೇ ಉಸಿರಿಗೆ ಕೊಂದು ತಿಂದರೆ ಅಷ್ಟೊಂದು ಪಾಪ ಬರಬಹುದೇನೋ.. ಆದರೆ ಈ ರೀತಿ ಇಂಚಿಂಚಾಗಿ ಹಿಂಸಿಸಿ, ಕೊಂದು, ಅವುಗಳ ಮಾಂಸದಿಂದ ತಮ್ಮ ಚಪಲತೆಯನ್ನು ಪೂರೈಸಿಕೊಳ್ಳುವುದು ಅತಿ ಅಮಾನುಷ. ಎಷ್ಟೋ ಜನರಿಗೆ ಹಿಂದಿನ ವಿಷಯ ತಿಳಿದೇ ಇರದು. ತಿಳಿಸಿದರೆ ಕೆಲವರಾದರೂ ಆದ ತಪ್ಪನ್ನು ಸರಿಪಡಿಸಬಹುದೇನೋ ಎಂಬ ದೂರದ ಆಶಯ ಅಷ್ಟೇ!

@ ವಿಕಾಸ್,

ಮಾಂಸಾಹಾರ ಸೇವನೆ ಅವರವರ ಇಚ್ಛೆ ಅಷ್ಟೇ. ಆದರೆ ತಿನ್ನುವ ಆಹಾರದ ಹಿಂದೆ ಎಷ್ಟು ಕ್ರೂರತೆ ಅಡಗಿದೆ ಎಂದರಿತು ತಿಂದರೆ ತುಸು ಸಮಾಧಾನ. ಹೊಟ್ಟೆ ಬಿರಿದು, ರಕ್ತ ಸೋರಿ, ನರಳಿ ನರಳಿ ಸತ್ತ ಮುಗ್ಧ ಬಾತುಕೋಳಿಗಳ ಲಿವರ್ ಅನ್ನು ತಿನ್ನುವುದರಿಂದ ಏನು ಸಂತೋಷ ಸಿಗುವುದೋ ಕಾಣೆ?! ಚಪಲತೆ ಬದುಕಿಗಿಂತ ದೊಡ್ಡದೇ? ಆ ಪಕ್ಷಿಗಳ ರಕ್ತ, ಕಣ್ಣೀರು, ನರಳಿಕೆ ಇವರನ್ನು ತಟ್ಟದೇ?

ತಟ್ಟೆಯ ಹಿಂದಿನ ಹೃದಯವಿದ್ರಾವಕ ಕಥೆ ಎಷ್ಟು ಜನರಿಗೆ ಗೊತ್ತು? ಗೊತ್ತಾದರೆ ಕೆಲವರಾದರೂ ನಿಲ್ಲಿಸದೇ ಹೋಗರು. ಬೇಡಿಕೆ ಕಡಿಮೆ ಆದಂತೇ ಪೂರೈಕೆಯೂ ಕಡೀಮೆಯಾಗುವುದು. ಆಗ ಕ್ರಮೇಣ ಈ ಕ್ರೌರ್ಯ ನಿಲ್ಲಬಹುದೇನೋ?! ಹೋರಾಟ ಬರಿ ಕಾಗದಗಳಲ್ಲಿ, ವಾಗ್ವಾದಗಳಲ್ಲಿ ನಡೆಸಿದರೆ ಏನೂ ಆಗದು! ಕೆ.ಎಫ್.ಸಿಯ ಮುಂದೆ ಕಾರ್ಯಕರ್ತರು ನಿಂತು ಒಳಹೋಗುವವರಿಗೆ ಈ ಬಾತುಕೋಳಿಗಳ ಕರುಣಾಜನಕ ಕಥೆಯನ್ನು ಸಚಿತ್ರವಾಗಿ ತೋರಿದರೆ ಹಲವರು ಈ ಒಂದು ದರಿದ್ರ ತಿನಿಸನು ತಿನ್ನರು. ಅಂತರ್ಜಾಲ, ಮೈಲ್-ಇವೆಲ್ಲಾ ಸಾಮಾನ್ಯರ ಬಳಿ ತಲುಪವು. ಜನಜಾಗೃತಿಯಾಗಲು ಜನರಿಗೆ ಮೊದಲು ನಿಜ ತಿಳಿಸಬೇಕು. ಇದಕ್ಕೆ ಸಕ್ರಿಯ ಪ್ರತಿಭಟನೆಯೊಂದೇ ಮದ್ದು.

@ವಿಜಯಶ್ರೀ ಅವರೆ,

ಇಲ್ಲಿ ಉಳಿವಿನ ಪ್ರಶ್ನೆಯಿಲ್ಲ. ಈ ಒಂದು ಮಾಂಸವನ್ನು ತಿನ್ನದಿದ್ದರೆ ಯಾರೂ ಸಾಯೋದಿಲ್ಲ. ಅಮಾಯಕ ಬಾತುಕೋಳಿಗಳನ್ನು ಇಷ್ಟೊಂದು ವಿಧದಲ್ಲಿ ಹಿಂಸಿಸಿ, ತಾವು ಸಂತೋಷ ಹೊಂದುವುದು ವಿಕೃತಿ. ನಾನು ಮಾಂಸಾಹಾರವನ್ನೇ ನಿಲ್ಲಿಸಲು ಹೇಳುತ್ತಿಲ್ಲ. ಅದು ಎಲ್ಲರಿಂದ ಸಾಧ್ಯವೂ ಅಲ್ಲ. ಆದರೆ ಇಷ್ಟೊಂದು ಕ್ರೌರ್ಯವನ್ನು ತೋರಿ ಪಡೆದ ಮಾಂಸದ ಭಕ್ಷಣೆ ಸಹ್ಯವೇ ಎಂದಷ್ಟೇ ಕೇಳುತ್ತಿದ್ದೇನೆ.

ಅಸಂಖ್ಯಾತ ಮೊಸಳೆಗಳನ್ನು, ಹಾವುಗಳನ್ನು ನಿರ್ದಯವಾಗಿ ಕೊಂದು ಅವುಗಳ ಚರ್ಮದಿಂದ ತಯಾರಿಸುವ ಬೆಲೆಬಾಳುವ ಪರ್ಸ್‌ಗಳು, ಬಾತುಕೋಳಿಗಳ ಮಾರಣಹೋಮದಿಂದ ತಯಾರಿಸುವ ಮೇಲಿನ ಮಾಂಸದ ತಿಂಡಿ, ಇವುಗಳಲ್ಲಿ ಮನುಜನ ವಿಕೃತಿಗೆ, ಶೋಕಿತನಕ್ಕೆ, ಚಾಪಲ್ಯಕ್ಕೆ ಕನ್ನಡಿ ಹಿಡಿಯುತ್ತವೆ.

ಇಂತಹ ಅಮಾನುಷ್ಯ ಕೃತ್ಯಗಳಿಗೆ ನನ್ನ ಧಿಕ್ಕಾರ!

@ಸೀತಾರಾಮ್ ಅವರೆ,

ಚಿತ್ರಗಳಲ್ಲಿರುವ ಬಾತುಕೋಳಿಗಳ ವೇದನೆಭರಿತ ಕಣ್ಗಳನ್ನೇ ನೋಡಿದರೆ ಸಾಕು, ಮನಸ್ಸು ತುಂಬಾ ಭಾರವಾಗುತ್ತದೆ.. ಸಂಕಟವಾಗುತ್ತದೆ. ಇಷ್ಟೊಂದು ಅಮಾನವೀಯತೆಯನ್ನು ಯಾವ ಕ್ರೂರ ಪ್ರಾಣಿಯೂ ತೋರದು. ಮನುಷ್ಯನನ್ನೊಂದು ಬಿಟ್ಟು!

PARAANJAPE K.N. ಹೇಳಿದರು...

ತಿನ್ನುವ ತಟ್ಟೆಯ ಹಿ೦ದಿನ ಕ್ರೌರ್ಯದ ಚಿತ್ರಗಳು ಹೃದಯ ವಿದ್ರಾವಕ. ಯಾವುದೇ ಜೀವವನ್ನು ಈ ಪರಿ ಹಿ೦ಸಿಸಲು ಯಾರಿಗೂ ಹಕ್ಕಿಲ್ಲ. ನಿಮ್ಮ ಧಿಕ್ಕಾರಕ್ಕೆ ನನ್ನ ಬೆ೦ಬಲವಿದೆ. ಮಾ೦ಸಾಹಾರ ತಪ್ಪು ಎ೦ದು ಹೇಳಲಾಗದು, ಆದರೆ ಯಾವುದೇ ಪ್ರಾಣಿಗೆ ಅಸಹನೀಯ ಹಿ೦ಸೆ ಕೊಡುವುದು ಮಾತ್ರ ಅತ್ಯ೦ತ ಹೇಯ. ಬಹುಶಃ ಮನುಷ್ಯನಷ್ಟು ಕ್ರೂರ ಪ್ರಾಣಿ ಬೇರಿಲ್ಲ ಅನಿಸುತ್ತದೆ.

ಸುಮ ಹೇಳಿದರು...

ಛೇ .. ಮಾನವನಷ್ಟು ಕೆಟ್ಟ ಪ್ರಾಣಿ ಜಿವಜಗತ್ತಿನಲ್ಲಾವುದೂ ಇಲ್ಲ. ಕ್ರೂರಮೃಗಗಳೆಂದು ನಾವು ಕರೆಯುವ ಪ್ರಾಣಿಗಳೂ ಸಹ ಕೇವಲ ತಮ್ಮ ಆಹಾರಕ್ಕಾಗಿ , ರಕ್ಷಣೆಗಾಗಿ ಬೇರೆ ಪ್ರಾಣಿಗಳನ್ನು ಕೊಲ್ಲುತ್ತವೆ. ಆದರೆ ಮಾನವ ಶೋಕಿಗೆ , ವಿಹಾರಕ್ಕೆ , ದುರಾಸೆಗೆಂದು ಜೀವಿಗಳನ್ನು ಹಿಂಸಿಸುತ್ತಾನೆ. ಪ್ರಕೃತಿಯ ಮೇಲೆ ಸತತವಾಗಿ ಅತ್ಯಾಚಾರವೆಸಗುತ್ತಿದ್ದಾನೆ.ಇದು ಕೊನೆಯಾಗುವುದೆಂತೋ..

sunaath ಹೇಳಿದರು...

Horrible! ನೋಡುತ್ತಿದ್ದಂತೆ ಹೊಟ್ಟೆ ತೊಳಸಿ ಬಂತು.

ಜಲನಯನ ಹೇಳಿದರು...

ಆದಿಮಾನವ ತನ್ನ ಹೊಟ್ಟೆಗಯನ್ನ ಪ್ರಾಣಿಗಳನ್ನು ಕೊಂದು ತಿನ್ನುವಮೂಲಕ ಪ್ರಾರಂಭಿಸಿದ ಬೇಟೆ ಪ್ರವೃತ್ತಿಯಲ್ಲೂ ಹಿಂಸಿಸಿ ಕೊಲ್ಲುವ ಬಗ್ಗೆ ಕೇಳಿಲ್ಲ...ನಂತರ ಬೆಳೆಗಳನ್ನು ಬೆಳೆಯುವ ಪ್ರಾಣಿಗಳನ್ನು ಸಾಕುವ ಸೌಜನ್ಯತೆಯನ್ನ ಬೆಳೆಸಿಕೊಂಡು ಮತ್ತೇಕೋ ಅದಕ್ಕಿಂತಲೂ ಹೀನಾಯ ಕೃತ್ಯದತ್ತ ಹೋಗುತ್ತಿರುವುದು ವಿಷಾದನೀಯ...ಖಂಡನೀಯ...ಬಾತುಗಳ ಈ ರೀತಿಯ ಚಿತ್ರಹಿಂಸೆ..!!!
ತೇಜಸ್ವಿನಿ...ಇದೇ ರೀತಿಯ ಮಾರಣಹೋಮ ಇತರ ಪ್ರಾಣಿಗಲಮೇಲೂ ..ಅದೂ ಕೇವಲ ಶೋಕಿ ವಸ್ತು (ಬೆಲ್ಟ್, ಪರ್ಸ್, ಜಾಕೆಟ್) ಗಳ ತಯಾರಿಕೆಗಾಗಿ ನಡೆಯುತ್ತಿರುವುದು ತಿಳಿದದ್ದೇ... ಇದರ ವಿರೋಧ ಆಗದಿರುವುದೂ ಬೇಸರ ತರಿಸುತ್ತೆ.

ಕುಕೂಊ.. ಹೇಳಿದರು...

ಮಾನವನ ಜನ್ಮ ದೊಡ್ಡದು, ಮೋಕ್ಶಕ್ಕೆ ಮಾನವ ಯೋನಿಯಲ್ಲೇ ಹುಟ್ಟಬೇಕು ಅಂತ ದೊಡ್ಡವರೆಲ್ಲ ಹೇಳಿದ್ದಾರೆ... ಆದರೆ ಅದೊಂದು ಮಹಾ ಸುಳ್ಳು ಅಂತ ನನಗನ್ನಿಸುತ್ತಿದೆ.ಕೂಳ ಪಾಪಗಳನ್ನೆಲ್ಲ ಮಾಡಲು ಮಾನವನಾಗಿ ಹುಟ್ಟಬೇಕು...

ಇಂತಹುದೇ ಒಂದು ಕ್ರೂರತೆ ಹಸುವಿಗೆ ಇದೆ.ಹೈನುಗಾರಿಕೆಯ ಹೆಸರಿನಲ್ಲಿ ಸಾಕುವ ಹಸುವಿಗೆ ಎಂತಹ ಕಿರುಕುಳ ಇದೆ ಎಂದು ಬಲ್ಲಿದಿರ? ಹಸು ಜೀವಮಾನವೆಲ್ಲ ಕೊಳೆವ ಸಗಣಿಯಲ್ಲಿ ನಿಂತಲ್ಲೇ ನಿಂತು ಕೊನೆಯುಸಿರೆಳೆಯಬೇಕು. ಹಾಲು ಹೆಚ್ಚಿಸಲು ಕೊಡುವ ಬ್ರೋವಿನೋ ಗ್ರೋತ್ ಹಾರ್ಮೋನ್ ಸೂಜಿ ಸುಚ್ಚಿಸಿಕೊಂಡು ಹಿಂಸೆಯಿಂದ ನರಳಾಡ ಬೇಕು. ಓ ಹಾಲು ಕುಡಿಯು ಚಾಕಲೇಟ್ ತಿನ್ನುವವರೇ ಇಗೋ ಇಲ್ಲಿ ನೋಡಿ
http://www.milksucks.com/index2.asp
http://restless14.wordpress.com/2009/06/26/factory-farming-horrifying-truth/
ಹಾಲು ಕುಡಿಯುವುದು, ಹಾಲಿನಿಂದ ಮಾಡಿದ ಚಾಕಲೆಟ್ ತಿನ್ನುವುದು ಬಿಡು ಎಂದರೆ ಎಶ್ಟು ಮಂದಿ ಬಿಟ್ಟಾರು :-( :-( ?
ಹಾಲು, ಹಾಲಿನ ಚಾಕ್ಲೇಟ್ ತಿನ್ನುವರನ್ನೂ ದಿಕ್ಕರಿಸಬೇಕಲ್ಲವೆ?
ಹೆಚ್ಚಿನ ಮಾಹಿತಿಗೆ ಗೂಗ್ಲಿಂಗ್ ಮಾಡಿ ನೋಡಿ, ನಿಮ್ಮ ಊರಿನ ಸುತ್ತಮುತ್ತ ಇರುವ ಯಾವುದಾದರು ದೊಡ್ಡ ಡೈರಿಗೆ ಬೇಟಿ ಕೊಡಿ.

ಮನಮುಕ್ತಾ ಹೇಳಿದರು...

ಓದಿ ರಾಶಿ ತ್ರಾಸಾತು...ಖರೆ..ಇ೦ಥ ಕೆಲಸಕ್ಕೆ ಧಿಕ್ಕಾರ.

ಚಿತ್ರಾ ಹೇಳಿದರು...

ತೇಜೂ,
ನನಗೂ ಇದು ಬಂದಿತ್ತು ! ಕಳಿಸಿದವರ ಉದ್ದೇಶ ಏನೇ ಇರಲಿ , ನನ್ನಿಂದ ಅದನ್ನು ಪೂರ್ತಿಯಾಗಿ ಓದಲು ಸಾಧ್ಯವಾಗಲೇ ಇಲ್ಲ ! ಮೊದಲು ಡಿಲೀಟ್ ಮಾಡಿಬಿಟ್ಟೆ.
ಇಂಥದ್ದೇ ಇನ್ನೆಷ್ಟೋ ಈ -ಮೇಲ್ ಗಳು ಬರುತ್ತವೆ . ಹೆಚ್ಚಿನವು ನನ್ನ ಮೇಲ್ ಬಾಕ್ಸಿನಿಂದ ಹೊರಗೆ ಹೋಗವು . ನೋಡಿದ್ದೆಲ್ಲ ತಲೆಯೊಳಗೆ ಸುತ್ತುತ್ತಾ ಕೆಲದಿನಗಳು ಕಾಡುತ್ತವೆ !
ಹೊಟ್ಟೆಯಲ್ಲಿ ಸಂಕಟ ತುಂಬಿ ಬಿಡುತ್ತವೆ

ತೇಜಸ್ವಿನಿ ಹೆಗಡೆ ಹೇಳಿದರು...

ಕುಕೂಊ ಅವರೆ,

ಇಲ್ಲಿ ನೀವು ನನ್ನ ನಿಜವಾದ ಕಾಳಜಿ ಅಭಿಪ್ರಾಯನ್ನು ಸರಿಯಾಗಿ ಅರ್ಥೈಸಿಯೇಕೊಂಡಿಲ್ಲಾ ಎನ್ನುವುದು ಸ್ಪಷ್ಟ.

ಪ್ರಾಣಿ ಪಕ್ಷಿಗಳಿಗೆ ಹಿಂಸೆಯನ್ನಿತ್ತು ತಾನು ಸುಖ ಅನುಭವಿಸುವುದು ವಿಕೃತವೇ. ಅಂತಹದ್ದಕ್ಕೆ ಧಿಕ್ಕಾರ ಸದಾ ಇದ್ದೇ ಇರುತ್ತದೆ ನನ್ನ ಕಡೆಯಿಂದ. ದನದ ಹಾಲಿಗೆ/ಚಾಕೊಲೇಟಿಗೆ ಧಿಕ್ಕಾರ ಯಾಕಿಲ್ಲ? ಎಂದಿರುವಿರಿ. ದನದ ಹಾಲನ್ನು ದನಕ್ಕೆ ನೋವನ್ನೀಯದೇ, ಪ್ರೀತಿ ಮಮಕಾರದ ಮೂಲಕ ಪಡೆದು ಸೇವಿಸಬಹುದು. ದನಗಳಿಗೆ ಹಿಂಸೆಯನ್ನೇ ಕೊಟ್ಟು ಹಾಲನ್ನು ಪಡೆಯುವುದು ಸಲ್ಲ. ಖಂಡನೀಯ ಕೂಡ. ಆದರೆ ಬಾತುಕೋಳಿಗಳನ್ನು ಒಂದಿನಿತೂ ನೋಯಿಸದೇ ಪ್ರೀತಿಯಿಂದ ಬೆಳೆಸಿ ಕೊಬ್ಬಿನಿಂದ ತುಂಬಿದ ಲಿವರ್ ಅನ್ನು ಪಡೆಯಲು ಅಸಾಧ್ಯ. ಬಾತುಕೋಳಿಗಳನ್ನು ಆರೀತಿ ಹಿಂಸಿಸಿದರೆ ಮಾತ್ರ ಅಂತಹ ಮಾಂಸ ದೊರೆಯುವುದು. ಅದನ್ನು ತಿಂದು ಮನುಜ ಚಾಪಲ್ಯ ತಣಿಸಿಕೊಳ್ಳುವುದು. ಆದರೆ ದನಗಳನ್ನು ಕೊಲ್ಲದೇ, ಹಿಂಸಿಸದೇ, ಕಡಿಯದೇ ಹಾಲನ್ನು ಎಷ್ಟುಬೇಕಾದರೂ ಪಡೆಯಬಹುದು. ಇದು ನಿಮಗೂ ಗೊತ್ತಿದೆ ಎಂದು ಭಾವಿಸುವೆ. ಹಾಗಾಗಿ ಹಾಲಿಗೆ ಧಿಕ್ಕಾರ ಹಾಕುವುದನ್ನು ನಾನು ಒಪ್ಪೊಲ್ಲ.

ಅಪಾಯಕಾರಿ ಹಾರ್ಮೋನ್‌ಗಳನ್ನು ನೀಡಿಯೋ ಇಲ್ಲಾ ಇನ್ನಾವುದೋ ಹಿಂಸಾತ್ಮಕ ನಡೆಗಳಿಂದ ಡೈರಿಗಳನ್ನು ನಡೆಸುವವರಿಗೆ/ಅಂತಹ ಅಮಾನವೀಯತೆಗೆ ನನ್ನ ಧಿಕ್ಕಾರವಿದೆ. ಹೊರತು ಹಾಲಿಗೆ/ಡೈರಿ ಫಾರ್ಮಗಳಿಗೇ ಖಂಡಿತ ಇಲ್ಲ. ಈಗಾದರೂ ನಿಮಗೆ ಇದು ಅರ್ಥವಾಗಿದೆ ಎಂದು ಭಾವಿಸುವೆ.

ನೀವು ಕೊಟ್ಟಿರುವ ಲಿಂಕ್ ನೋಡಿರುವೆ. ಅಮೇರಿಕನ್ನರು ನಮಗಿಂತ ಹಿಂಸಾತ್ಮಕ ನಡೆಗಳಲ್ಲಿ ಬಹು ಮುಂದಿದ್ದಾರೆ ಎಂದು ತಿಳಿಯಿತು! ತುಂಬಾ ಅಮಾನವೀಯವಾಗಿದೆ ವಿಡಿಯೋ ಹಾಗೂ ಚಿತ್ರಗಳು. :(

V.R.BHAT ಹೇಳಿದರು...

ತಿನ್ನುವುದಕ್ಕಾಗಿ ಮತ್ತು ತನಗಾಗಿ ಮನುಷ್ಯ ಎಷ್ಟೆಲ್ಲಾ ಕ್ರೂರಿ ಆಗುತ್ತಾನೆಂದು ಇದು ತೋರಿಸುತ್ತದೆ, ನೀವಿತ್ತ ತಲೆಬರಹ ಸರಿಯಾಗಿದೆ

Guruprasad ಹೇಳಿದರು...

ಇದೆ ಮೇಲ್ ನನಗೂ ಬಂದಿತ್ತು,,, very shame ,,,
atleast ಮಾಂಸಹಾರಿ ಗಳು ಇದನ್ನು ನೋಡಿ ಯಾದರು,, ತಿನ್ನುವುದನ್ನು ಬಿಡಲಿ..... ತುಂಬ ನಾಚಿಕೆ ಗೇಡು.....ಇಸ್ಟೆಲ್ಲಾ ಹಿಂಸೆ ಕೊಟ್ಟು ಮಾಂಸಹಾರವನ್ನು ತಿನ್ನಬೇಕ.?

Guru

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಂ,
ಅತೀ ಕ್ರೂರ....... ಎಂದಷ್ಟೇ ಹೇಳಬಹುದು.... ಯಾಕಂದ್ರೆ ಏನಾದರೂ ಮಾಡಕ್ಕೆ ನಮ್ಮಿಂದ ಸಾದ್ಯಾನಾ ಅಂತ ಅನುಮಾನ..... ಬೆಕ್ಕಿಗೆ ಗಂಟೆ ಕಟ್ಟೋರ್ಯಾರು ...... '' ಮೀನು, ಕೋಳಿ, ಕುರಿ ಸಾಯಿಸಿದರೆ ಜೀವಬಲಿ ಅಂತೇವೆ ಹಾಗಿದ್ರೆ ಸಸ್ಯಕ್ಕೂ ಸಹ ಜೀವವಿದೆ ... ಅದನ್ನು ತಿಂದರೆ ಸಸ್ಯಕ್ಕೆ ನೋವಾಗಲ್ವಾ ಅಂತ..... ಆದರೆ ಸಸ್ಯ ವನ್ನು ಹಿಡಿಯಲು ಹೋದರೆ ಅಥವಾ ಕಿತ್ತರೆ ಅದು ಪ್ರತಿಕ್ರೀಯೆ ಕೊಡಲ್ಲಾ, ಅದೇ ಮೀನು, ಕೋಳಿ, ಕುರಿ ಹಿಡಿಯಲು ಹೋದರೆ ನೋವನ್ನು ತೋರಿಸತ್ತೆ , ಪ್ರತಿಕ್ರೀಯೆ ತೋರಿಸತ್ತೆ...... ( ಇದನ್ನ ಎಲ್ಲೋ ಓದಿದ್ದನ್ನ ಹೇಳಿದ್ದೇನೆ, ತಪ್ಪಿದ್ದರೆ ತಿದ್ದಿ ) ಮನುಷ್ಯ ತನ್ನ ಬಾಯಿ ತೀಟೆ ತೀರಿಸಲು ಯಾವುದೇ ಮಟ್ಟಕ್ಕಾದರೂ ಇಳಿಯುತ್ತಾನೆ ಎಂದು ಈ ಚಿತ್ರಗಳು ತೋರಿಸುತ್ತವೆ..... ನಾನೆಂದೂ K . F . C ಗೆ ಹೋಗಿಲ್ಲ...ಹೋಗೋದೂ ಇಲ್ಲ......

Subrahmanya ಹೇಳಿದರು...

PVR ಗೆ ಹೋದಾಗಲೆಲ್ಲಾ KFC ಯನ್ನು ದರ್ಶನ ಮಾಡಿಕೊಂಡೆ ಹೋಗಬೇಕು ! ಅಲ್ಲಿ ಓಳಗೆ ಕೂತು ತಿನ್ನುವವರೆನ್ನು ನೋಡಿಯೇ ಅಸಹ್ಯವಾಗುತ್ತಿತ್ತು. ಈ ಚಿತ್ರಗಳನ್ನು ನೋಡಿದಮೇಲಂತೂ ತಿನ್ನುವವರ ಬಗ್ಗೆಯೇ ಅಸಹ್ಯ ಉಟ್ಟುತ್ತಿದೆ..ಪಾಪ ಬಾತುಕೋಳಿಗಳು...ಧಿಕ್ಕಾರ..ಧಿಕ್ಕಾರ..ಧಿಕ್ಕಾರ...

Uma Bhat ಹೇಳಿದರು...

ನಿಜವಾಗಿಯೂ ಇದು ಎಂಥಾ ಕ್ರೌರ್ಯಾ. ನೋಡಿದರೇ ಮನಸ್ಸಿಗೆ ನೋವಾಗುತ್ತದೆ.

ಸಾಗರದಾಚೆಯ ಇಂಚರ ಹೇಳಿದರು...

ಬಹುಶ ಇದೊಂದು ಪ್ರಕ್ರತಿಯ ಸಮತೋಲನದ ವಿಧಾನ ಇರಬಹುದಲ್ವಾ
ಎಲ್ಲರೂ ಬದುಕಬೇಕು ನಿಜ, ಆದರೆ ಆಹಾರ ಸರಪಳಿಯಲ್ಲಿ ಕೆಲವು ಸಾಯಬೇಕು, ಸತ್ತು ಇನ್ನೊಬ್ಬರಿಗೆ ಆಹಾರವಾಗಬೇಕು
ಆಗ ಮಾತ್ರ ಪ್ರಕ್ರತಿ ಸಮತೋಲನ ಸಾದ್ಯ
ಮೀನನ್ನು ನಾವು ತಿನ್ನಬಾರದು ಅಂದರೆ ಇನ್ಯಾವುದೋ ಪ್ರಾಣಿಗಳು ಅವನ್ನು ತಿನ್ನುತ್ತವೆ, ಮೀನಗಳು ಮತ್ಯಾರನ್ನೋ ತಿನ್ನುತ್ತವೆ
ಆದರೆ ನಿಮ್ಮ ಫೋಟೋದಲ್ಲಿ ಆ ಮುಗ್ಧ ಜೀವಗಳ ಹತ್ಯೆ ಮಾತ್ರ ಕರುಳು ಹಿಂಡುತ್ತದೆ
ಎಲ್ಲದಕ್ಕೂ ಕಾಲವೇ ಪರಿಹಾರ ನೀಡಬೇಕು

Unknown ಹೇಳಿದರು...

hu idonde alla , manasuhya tanage dakkisikollabeku anisidare enannu madalu sidda annodu modale namage tilida vichara , iddiddaralli nanu sashyhaari anta helikollabahudu ashte

ಕುಕೂಊ.. ಹೇಳಿದರು...

ತೇಜಸ್ವಿನಿಯವರೆ,
ನನ್ನ ಮೊದಲ ಅನಿಸಿಕೆಯನ್ನು ತಪ್ಪಾಗಿ ತಿಳಿದುಕೊಂಡಿದಿರಿ.
ಹಾಲು ಎಂದು ಮಾರಾಟದ ವಸ್ತುವಾಯಿತೋ ಅಂದೇ ಹಸು/ಯಮ್ಮೆಯ ಮೇಲಿನ ಒಲವು ಸತ್ತು ಹೋಯಿತು. ಯಾರು ಹಸುವನ್ನು ಹಾಲಿಗಾಗಿ, ಹಾಲಿನ ಮಾರಾಟಕ್ಕಾಗಿ ಸಾಕುತ್ತಾರೊ ಅವರು ಎಂದೂ ಹಸುವನ್ನು ಒಲವಿಂದ ಕಾಣಲಾರರು. ಅವರಿಗೆ ಹಾಲೇ ಮುಕ್ಯ. ಅದಕ್ಕಾಗಿ ಯಾವ ಹಾರ್ಮೋನ್ನಾದರು ಚುಚ್ಚುತ್ತಾರೆ, ಯಾವತರಹದ ಬೂಸ, ತಿಂಡಿಯನ್ನಾದರು ಕೊಡುತ್ತಾರೆ. ನಿಮ್ಮ ಮಾತು ದಿಟ, ಅಮೇರಿಕದವರು ಹಿಂಸೆ ಮಾಡಲಿಕ್ಕೇ ಹುಟ್ಟಿದ್ದಾರೆ ಅನ್ನಿಸುವಶ್ಟು ಕೂಳ ನಡವಳಿಕೆ ಅವರದು. ಅವರದೇನಿದ್ದರೂ ಮೊದಲು ವ್ಯಾಪಾರ ಮಿಕ್ಕಿದ್ದು ಕಡೆಗೆ. ಅದೇ ನಿಟ್ಟಿನಲ್ಲಿ ನಮ್ಮ ದೇಶವು ಸಾಗಿದೆ. ನಮ್ಮ ದೇಶದಲ್ಲಿ ನಾಯಿಕೊಡೆಗಳಂತೆ ಎದ್ದಿರುವ ಕೋಳಿ ಫಾರ್ಮಗೂ ಈ ಬಾತುಕೋಳಿ ಫಾರ್ಮಗೂ ಯಾವುದೇ ಇಬ್ಬಗೆ ಇಲ್ಲ. ಅದರಂತೆ ಹೈನುಗಾರಿಕೆ. ಇಂದು ನಾವು ಬಳಸುವ ಹಾಲಿನ ಹಿಂದೆ ಇಂತಹುದೇ ಹಿಂಸೆ ಇದೆ. ಹೈನುಗಾರಿಕೆ ಮಾಡುವ ಬಹಳಶ್ಟು ಮಂದಿ (ನೂರಕ್ಕೆ ತೊಂಬತ್ತರಶ್ಟು) ಹಸುವಿಗೆ ಹಾರ್ಮೋನ್ ಕೊಡುತ್ತಾರೆ. ವಿಚಿತ್ರ ಮೇವು ಉಣಿಸುತ್ತಾರೆ. ಹಸುವನ್ನು ಹಗಲಿರುಳು ನಿಂತಲ್ಲೇ ನಿಲ್ಲಿಸುತ್ತಾರೆ. ಹಸು ಜೀವಮಾನವೆಲ್ಲ ಚಿತ್ರ ಹಿಂಸೆಯಲ್ಲಿ ಬದುಕುತ್ತದೆ. ಇದಕ್ಕೆ ಹೊಣೆ ಬಾಯಿ ಚಪಲದ ಚಾಕಲೇಟ್, ಚೀಜ್, ಹಾಲನ್ನು ಆಹಾರವೆಂದುಕೊಂಡಿರುವ ನಮ್ಮ ಸಂಸ್ಕೃತಿ. ಅದಕ್ಕೆ ಈ ಹಿಂಸೆ.
ನಾನು ಹಾಲನ್ನು ದಿಕ್ಕರಿಸಿ ಮಾತನಾಡಿಲ್ಲ. ಹಾಲು ಒಳ್ಳೆಯ ಮದ್ದು. ಆಹಾರವಲ್ಲ. ನಾವು ಹಸುವನ್ನು ಎಶ್ಟೇ ಒಲವಿಂದ ಸಾಕಿದರೂ ಹಾಲನ್ನು ಆಹಾರವೆಂದುಕೊಂಡು ಬಳಸಿದರೆ ಅದು ಕರುವಿನ ಶೋಶಣೆ. ನಾನು ದಿಕ್ಕರಿಸುತ್ತಿರುವುದು ಮಾಂಸಕ್ಕಾಗಿ,ಹಾಲಿಗಾಗಿ ಪ್ರಾಣಿಗಳನ್ನ ಹಿಂಸಿಸುವ ಸಂಸ್ಕೃತಿಯನ್ನ. ಈ ಸಂಸ್ಕೃತಿಯನ್ನು ಬೆಳೆಸುವ ಮಂದಿಯನ್ನ.

ಮನಸಿನಮನೆಯವನು ಹೇಳಿದರು...

'ತೇಜಸ್ವಿನಿ ಹೆಗಡೆ' ಅವರೇ..,

ಸುಲೋಚನದೊಳಗಿಂದಲೇ ದೃಶ್ಯಗಳನ್ನು ಇಣುಕಿ ನೋಡಿದ ನನ್ನ ಕಣ್ಣುಗಳು ತೇವವಾದವು..
ಆದರೇನು ಮಾಡಲಿ ನಾನು ಅಸಹಾಯಕ..


ನನ್ನ 'ಮನಸಿನಮನೆ'ಗೆ...:http//manasinamane.blogspot.com

ಬಿಸಿಲ ಹನಿ ಹೇಳಿದರು...

ಇಂಥ ಅಮಾನುಷ ಕೃತ್ಯಕ್ಕಾಗಿ ನಿಮ್ಮ ಜೊತೆ ನನ್ನದೂ ಒಂದು ಧಿಕ್ಕಾರವಿದೆ.

shivu.k ಹೇಳಿದರು...

ನನಗೂ ಇದನ್ನು ನೋಡಿ ಮನಸ್ಸಿಗೆ ಒಂಥರ ಕಸಿವಿಸಿಯಾಯಿತು. ನಾನು ಮೊದಲಿನಿಂದಲು KFC ವಿರೋದಿ. ಆ ದಿಕ್ಕಿನೆಡೆಗೆ ಕಣ್ಣೆತ್ತಿ ಕೂಡ ನೋಡೊಲ್ಲ.. ಇದಕ್ಕೆ ನನ್ನ ದಿಕ್ಕಾರವಿದೆ.

ನಮ್ಮ ಸಂಘಟನೆಗಳೆಲ್ಲಾ "ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ" ಅನ್ನುವಂತೆ ನಡೆದುಕೊಳ್ಳುತ್ತಿವೆ.

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನ ಧಿಕ್ಕಾರದ ಜೊತೆ ದನಿಗೂಡಿಸಿ, ಕಳಕಳಿಯಿಂದ ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಈ ಬರಹ ಉದ್ದೇಶ ಒಂದೇ. ಒಳಗಿನ ಕಟು ಸತ್ಯ ತಿಳಿಯದವರಿಗೆಲ್ಲಾ ತಿಳಿಸಿ, ತನ್ಮೂಲಕ ಆದಷ್ಟು ಈ ಒಂದು ಅಮಾನುಷತೆಯನ್ನು ಕಡಿಮೆಗೊಳಿಸುವುದು. ಅದು ಸ್ವಲ್ಪವಾದರೂ ಈಡೇರಿದರೆ ಅಷ್ಟೇ ಸಾಕು.

@ ಸಾಗರದಾಚೆಯ ಇಂಚರ,

ನೀವು ಹೇಳಿದ್ದು ಒಂದು ರೀತಿಯಲ್ಲಿ ಸತ್ಯವಾದರೂ ಅದು ಇಲ್ಲಿ ಅಷ್ಟು ಸರಿಹೊಂದುವುದಿಲ್ಲ. ಕಾಡಿನ ಪ್ರಾಣಿಗಳಿಗೆ ಬೇಟೆಯೊಂದರಿಂದ ಮಾತ್ರ ಬದುಕಲಾಗುವುದು. ಬೇಟೆಯೇ ಅವರ ಬದುಕಿನ ಉದ್ದೇಶ. ಹೊಟ್ಟೆ ತುಂಬಿಕೊಳ್ಳಲು ಮಾತ್ರ ಅವು ಬೇಟೆಯಾಡಿ, ತೃಪ್ತಿಯಾದ ಕೂಡಲೇ ಸುಮ್ಮನೆ ಮಲಗಿ ಬಿಡುತ್ತವೆ. ಆದರೆ ಇಲ್ಲಿ..

ಆ ಮುಗ್ಧ ಪಕ್ಷಿಗಳನ್ನು ಅಷ್ಟೊಂದು ರೀತಿಯಲ್ಲಿ ಹಿಂಸಿಸಿ ಕೊಂದು ತಿನ್ನುವುದು ಯಾವ ಪುರುಷಾರ್ಥಕ್ಕಾಗಿ? ಕೇವಲ ಚಾಂಚಲ್ಯಕ್ಕಾಗಿ ಮಾತ್ರ. ಎಲುಬಿಲ್ಲದ ನಾಲಿಗೆಯ ತೃಪ್ತಿಪಡಿಸಲೋಸುಗ ಇಂತಹ ಒಂದು ಅಮಾನುಷತೆ ನಡೆಯುತ್ತಿದ್ದೆಯೇ ಹೊರತು ಬದುಕಿನ ಪ್ರಶ್ನೆಗಾಗಿ ಸರ್ವಥಾ ಅಲ್ಲ! ಅಷ್ಟೊಂದು ತಿಂದು ಪಾವನರಾಗಬೇಕೆಂದಿದ್ದರೆ ಒಂದೇ ಉಸುರಿಗೆ ಕೊಂದಾದರೂ ತಿನ್ನಬಹುದಿತ್ತು. ಆಗಲಾದರೂ ಪಾಪ ಸ್ವಲ್ಪ ಕಡಿಮೆಯಾಗುತ್ತಿತ್ತೇನೋ!!? ಸರಪಳಿಯ ಅನ್ನೇ ಬುಡಮೇಲು ಮಾಡುವ ಕೃತ್ಯಗಳು ಇವು ಅಲ್ಲವೇ? ಮೀನನನ್ನು ಮೀನುಗಳನ್ನು ತಿಂದೇ ಬದುಕಬೇಕಾಗಿರುವ ಪ್ರಾಣಿಗಳು ತಿಂದರೆ ಸಮತೋಲನ. ಕೇವಲ ಔಷಧೀಯಕ್ಕಾಗಿ ಬಳಸಿಕೊಂಡರು ಒಂದು ಹಂತದವರೆಗೆ ಸರಿ ಎನ್ನಬಹುದು. ಆದರೆ ಕೇವಲ ತಮ್ಮ ದುರಾಸೆಗಾಗಿ ಅಸಂಖ್ಯಾತ ಮೀನುಗಳ ಮಾರಣಹೋಮ ನಡೆಸಿದರೆ ಅದು ಅಸಮತೋಲನವೇ ಸರಿ!

ನೀವು ಅಂದಿರುವುದು ನಿಜ. ನೋಡಿದರೆ ಕರುಳೇ ಹಿಂಡಿದಂತಾಗುವುದು. ಮನುಷ್ಯನಾದವನಿಗೆ ಇಂತಹ ಕೃತ್ಯವನ್ನು ಸಹಿಸಲಾಗದು.

ತುಂಬಾ ಧನ್ಯವಾದಗಳು.

ಮನಸು ಹೇಳಿದರು...

naanu nimma para, namagu ee reetiya himse istavaaguvudilla.

ಸವಿಗನಸು ಹೇಳಿದರು...

ನಮಸ್ಕಾರ,
ಪ್ರಾಣಿಗಳನ್ನು ಹಿ೦ಸಿಸಿ ಕೊ೦ದು ತಿನ್ನುವದು ಅಮಾನವೀಯ.....
ನಿಜಕ್ಕೂ ಇದು ಧಿಕ್ಕರಿಸಬೇಕಾದ ವಿಷಯವೇ.....
ಇದಕ್ಕೆ ನನ್ನ ದಿಕ್ಕಾರ....

Pramod P T ಹೇಳಿದರು...

:(:(

umesh desai ಹೇಳಿದರು...

ಮೇಡಮ್ ಓದಿ ಭಾಳ ಕೆಟ್ಟ ಅನಿಸ್ತು ಭಾವೊದ್ರೇಕಕ್ಕೊಳಗಾದೆ..ಉದಯಶಂಕರ್ ಹೇಳಿದಹಾಗೆ.."ಮಾನವನ ಆಸೆಗೆ ಕೊನೆ ಎಲ್ಲಿ.."

Thippeswamy ಹೇಳಿದರು...

ತೇಜಸ್ವಿನಿ ಯವ್ರ ಲೇಖನ, ಹಾಗೂ ಲಗತ್ತಿಸಿರುವ ತಿಟ್ಟಗಳನ್ನು ನೋಡಿ ನನ್ನ ಪತ್ತಕೋಶವೇ ಬಾಯಿಗೆ ಬಂದಂತಾಯಿತು. ಇದರ ಬಗ್ಗೆ ಎರಡು ಮಾತಿಲ್ಲ.

ಬ್ಲಾಗ್‌ನಲ್ಲಿ ಭಾಗಿಯಾದವರೆಲ್ಲ ಮೊಸಳೆ ಕಣ್ಣೇರು ಸುರಿಸುತ್ತಿರುವಂತೆ ಕಂಡು ಬರುತ್ತಿದೆ.
ಅಡಿಕೆ ಕದ್ದರೂ ಕಳ್ಳ ಆನೆ ಕದ್ದರೂ ಕಳ್ಳ ಎನ್ನುವ ಹಾಗೆ, ಇಲ್ಲಿ ಯಾರೂ ಹಾಲನ್ನು ಮತ್ತು ಅದರ ಉತ್ಪನ್ನಗಳನ್ನು ಬಿಡುವದಿಲ್ಲ.. ನಮ್ಮ ತಟ್ಟೆಗಳಲ್ಲಿ ಮೊದಲು ಬಿದ್ದ ನೊಣಗಳನ್ನು ಓಡಿಸಿಕೊಳ್ಳುವುದನ್ನು ಬಿಟ್ಟು ಬೇರೆಯವರ ತಟ್ಟೆ ನೋಡಿದಂತಾಯಿತು.
ಬೇವಿನಕಟ್ಟೆಗಳ ಮೇಲೆ ಕುಂತು ಮಂಡಕ್ಕಿ ತಿಂದು ಚಪಲ ತೀರುವಾಹಾಗೆ ಮಾತಾಡಿ ಎದ್ದುಹೋಗ್ತಿರೋಹಾಗೆ ಕಾಣಿಸ್ತಿದೆ. ಐಡೆಂಟಿಟೀ ಕ್ರೈಸಿಸ್ ಗೋಸ್ಕರನೋ ? ಅನ್ನಿಸ್ತಿದೆ. ಈ ಕಗ್ಗ ಇಲ್ಲಿ ಸೂಕ್ತ.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ ಮಂಕುತಿಮ್ಮ ।।


ಹಾಗಾದರೆ ಕಂಕ್ಲೂಷನ್ ಅಥ್ವಾ ಕಮಿಟ್‌ಮೆಂಟ್ ಇಲ್ಲದ ಮಾತುಗಳು ಯಾಕೆ ಬೇಕು ?

-ತಿಪ್ಪೇಸ್ವಾಮಿ
-ಬಂಡಾಯ ಸಾಹಿತಿ

ತೇಜಸ್ವಿನಿ ಹೆಗಡೆ ಹೇಳಿದರು...

ಬಂಡಾಯ ಸಾಹಿತಿಯವರೇ,

ನಿಮ್ಮ ಅಭಿಪ್ರಾಯಕ್ಕೆ ಉತ್ತರವನ್ನು ಈ ಮೊದಲೇ ನಾನು ಕುಕೂಊ ಅವರಿಗೆ ಪ್ರತಿಕ್ರಿಯಿಸುವಾಗ ನೀಡಿದ್ದೇನೆ. ಅದನ್ನೊಮ್ಮೆ ಓದಿಕೊಳ್ಳಿ.
ಇನ್ನು ಯಾರ ಕಣ್ಣು ಮೊಸಳೆಯದ್ದು, ಯಾರದ್ದು ನಿಜ ಮನುಷ್ಯರದ್ದು ಎಂದು ಅರಿಯುವ ಅವಶ್ಯಕತೆ ನನಗಿಲ್ಲ. ಅವರವರೇ ಅದನ್ನು ನಿರ್ಧರಿಸಿಕೊಂಡರೆ ಉತ್ತಮ. ಯಾರ ಕಣ್ಣೀರನ್ನೂ ಫಿಲ್ಟರ್ ಮಾಡಿ ನಾನು ನೋಡಿಲ್ಲ.

ಧನ್ಯವಾದಗಳು.

ಕುಕೂಊ.. ಹೇಳಿದರು...

ತೇಜಸ್ವಿನಿಯವರೆ...
ಬಿಡುವಿದ್ದಾಗ ಈ ಕೊಂಡಿಯನ್ನೂ ತೆರೆದು ನೋಡಿ...

http://www.peta.org/feat/ChineseFurFarms/index.asp

ಕುಕೂಊ....

ಮನಸಿನ ಮಾತುಗಳು ಹೇಳಿದರು...

ತೆಜಕ್ಕಾ ,
ನಾನೂ ನಿಮ್ಮ ಜೊತೆಗಿದ್ದೇನೆ.......ನನ್ನದು ಒಂದು ದಿಕ್ಕಾರ!!!
ಪಾಪದ ಪ್ರಾಣಿಗಳು.... :( :(

ಕೃಷ್ಣ ಶಾಸ್ತ್ರಿ - Krishna Shastry ಹೇಳಿದರು...

ಕುಕೂಊ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ. ಇಂದಿನ ಯಾಂತ್ರಿಕ ಯುಗದಲ್ಲಿ ಹೈನುಗಾರಿಕೆ ಖಂಡಿತವಾಗಿಯೂ ಸಾತ್ವಿಕವಾಗಿ ಉಳಿದಿಲ್ಲ. ಭಾರತ ಇಂದು ಜಗತ್ತಿನ ನಂಬರ್ ೧ ಬೀಫ್ ರಫ್ತುದಾರ ಎಂಬುದು ನಿಮಗೆ ತಿಳಿದಿದೆಯೇ? ಬಹುತೇಕ ಸಂದರ್ಭಗಳಲ್ಲಿ ಹಾಲು ಕುಡಿಯುವುದು ಮಾಂಸ ಸೇವನೆಗೆ ಸಮಾನ ಎಂಬುದು ಅತಿಶಯೋಕ್ತಿ ಖಂಡಿತವಾಗಿಯೂ ಅಲ್ಲ.

ಮಾತ್ರವಲ್ಲ ನೈಸರ್ಗಿಕ ದೃಷ್ಟಿಯಿಂದ ನೋಡಿದರೂ ಕೂಡ, ಇನ್ನೊಂದು ಜೀವಿಯ ಹಾಲು ಖಂಡಿತವಾಗಿಯೂ ನಮ್ಮ ಆಹಾರವಲ್ಲ. ಹಾಲಾಗಲೀ, ಮೊಟ್ಟೆಯಾಗಲೀ, ಮೀನು-ಮಾಂಸವಾಗಲೀ - ಇವ್ಯಾವುವೂ ನಮ್ಮ ಆರೋಗ್ಯಕ್ಕೆ ಅತ್ಯಂತ ಸೂಕ್ತಕರ ಅಲ್ಲ ಎಂಬುದನ್ನು ಇಂದಿನ ವಿಜ್ಞಾನ ಸ್ಪಷ್ಟವಾಗಿ ತೋರಿಸುತ್ತದೆ.

ಕೊನೆಯದಾಗಿ, ಪರಿಸರದ ದೃಷ್ಟಿಯಿಂದಲೂ ಪ್ರಾಣಿಗಳ ಸಾಕಣೆ ಪ್ರಶ್ನಾರ್ಥಕವಾದುದು. ನಮ್ಮ ಅಗತ್ಯಗಳನ್ನು ಹೆಚ್ಚು ಹೆಚ್ಚಾಗಿ ಸಸ್ಯಗಳ ಮೂಲಕ ಪೂರೈಸಿದಷ್ಟೂ ಪರಿಸರಕ್ಕೆ ಒಳಿತು.

ಒಟ್ಟಾರೆ, ಇತರ ಜೀವಿಗಳ ಬಗ್ಗೆ, ಪರಿಸರದ ಬಗ್ಗೆ ಹಾಗೂ ನಮ್ಮದೇ ಆರೋಗ್ಯದ ಬಗ್ಗೆ ನಮಗೆ ನಿಜವಾದ ಕಾಳಜಿಯಿದ್ದಲ್ಲಿ ವೀಗನ್ ಆಗುವುದೇ ಅತ್ಯಂತ ಸೂಕ್ತಕರ ಮೊದಲ ಹೆಜ್ಜೆ.