ಬುಧವಾರ, ಜುಲೈ 2, 2008

ಕವನ

ಆ ದಿನಗಳು
-----------
ಹಾರೋ ಹಕ್ಕಿಯೇ ಅಂಗೈಯಲ್ಲಿ,
ಕುಣಿಯೋ ನವಿಲುಗಳೇ ಮನದಂಗಳದಲ್ಲಿ,
ಎಲ್ಲೆಲ್ಲೂ ವಸಂತನ ಹಾಡು, ಕುಣಿತ..
ಕಾಡುವ ಕನಸುಗಳಿಗೆಲ್ಲಾ
ನಿನ್ನದೇ ಮುಖಾರವಿಂದ

ಹರಿವ ಲಹರಿಗಳೆಲ್ಲ ಸೇರಿ
ಸೋನೆ ಮಳೆಯಾಗಿ ಸೋರಿ
ಮನದ ಧಗೆಯನೆಲ್ಲ ಹೀರಿ
ಎದೆಯೊಳಗಿಳಿದಾದಿನಗಳು..

ಯಾವುದೋ ಹಳೆಯ ಹಾಡು ಮತ್ತೆ
ಹೊಸ ಹಾಡಾಗಿ ಗುನುಗಲು,
ಮೊಗದ ತುಂಬೆಲ್ಲಾ ರಾಗರಂಜಿನಿ..
ಕದ್ದು ಕೊಟ್ಟ ಮುತ್ತುಗಳ ಸವಿ
ಮೆದ್ದು ಹೊದ್ದ ರೆಪ್ಪೆಗಳಡಿಯಲ್ಲಿ
ಸವಿಗನಸ ಬಿತ್ತಿದಾದಿನಗಳು

ಬರಲಾರವೇ ಮತ್ತೆ ತಿರುಗಿ
ಆ ನೆನಪುಗಳೇ ಚಿಗುರಿ, ಹಸಿರಾಗಿ
ನವ ವಸಂತದ ಗಾಳಿ ಬೀಸಿ
ಶಿಶಿರ ತುಂಬಿಹ ಬಾಳಲಿ
ನಗುವಾಗಿಸೋ ಆ ಸುದಿನಗಳು

18 ಕಾಮೆಂಟ್‌ಗಳು:

ಅಂತರ್ವಾಣಿ ಹೇಳಿದರು...

ಬೆರಳಂಚಿನಿಂದ, ಮನದಾಳದಿಂದ ಬಂದ ಮತ್ತೊಂದು ಮಾಣಿಕ್ಯ!

ಆಲಾಪಿನಿ ಹೇಳಿದರು...

ತೇಜಸ್ವಿನಿ......
ಲಹರಿ ಚೆನ್ನಾಗಿದೆ...ಇಷ್ಟವಾಯ್ತು.

ARUN MANIPAL ಹೇಳಿದರು...

tumba chennagide ...tune hakidre kandita tumba olle song agutte..;)

bhadra ಹೇಳಿದರು...

ಅನ್ನವನ್ನು ತಿಂದಾಗ ರುಚಿಸುವುದಕ್ಕಿಂತ, ತಿಂದು ಒಳ ಸೇರಿ ನಂತರ ಮೇಲ್ಬರುವ ಮೆಲುಕು
ಹೆಚ್ಚಿನ ರುಚಿ ಎಂದೆನಿಸುವುದು. ಈ ಕವನ ಅದೇ ರೀತಿ, ರುಚಿಭರಿತವಾಗಿದೆ.

ಬರಲಾರವೇ ಮತ್ತೆ ತಿರುಗಿ
ಆ ನೆನಪುಗಳೇ ಚಿಗುರಿ


ನೆನಪುಗಳು ಮತ್ತೆ ಮತ್ತೆ ಬರುವುವು - ಅನುಭವವೂ ಆಗುವುದು
ಆದರೆ ಆ ಕ್ಷಣ ಮಾತ್ರ ಮತ್ತೆ ಬರಲಾರದು, ಕ್ಷಣಕ್ಷಣಕ್ಕೂ ಅಂದಿನ ಸ್ಥಿತಿ
ಇಂದಿನ ಸ್ಥಿತಿ ದೂರ ದೂರವಾಗುತ್ತಿರುವುದು. ಆದರೆ, ಕವಿಸಮಯದಲ್ಲಿ
ಮಾತ್ರ ಎಲ್ಲವೂ ಸಾಧ್ಯ. ಮುದಿ ವಯಸ್ಸಿನಲ್ಲೂ ಬೆರಳು ಚೀಪಬಹುದು, ಗೋಲಿ ಆಡಬಹುದು
ಹಸಿವಿನಿಂದ ಅಳಬಹುದು ... :)

ಸುಂದರ ಕವನಕ್ಕೊಂದು ನವಿಲು ಗರಿ

ಗುರುದೇವ ದಯಾ ಕರೊ ದೀನ ಜನೆ

Unknown ಹೇಳಿದರು...

ತುಂಬಾ ಚೆನ್ನಾಗಿದೆ. ಎರಡನೇ ಚರಣ ತುಂಬಾ ಹಿಡಿಸಿತು.

ಕಿರಣ್ ಜಯಂತ್ ಹೇಳಿದರು...

ಚಿತ್ರಪಟ ಹೇಳಿಮಾಡಿಸಿದಂತಿದೆ ನಿಮ್ಮ ಕವನಕ್ಕೆ.

ಹಿಂದಿ ಮತ್ತು ಕನ್ನಡ ಎರಡರಲ್ಲೂ ನಿರರ್ಗಳವಾಗಿ ಬರೆಯುವ ನಿಮ್ಮ ಪ್ರತಿಭೆ ಬಣ್ಣಿಸಲಸದಳ. ಬರೀತಾ ಇರಿ.

ಹರಿವ ಲಹರಿಗಳೆಲ್ಲ ಸೇರಿ
ಸೋನೆ ಮಳೆಯಾಗಿ ಸೋರಿ
ಮನದ ಧಗೆಯನೆಲ್ಲ ಹೀರಿ
ಎದೆಯೊಳಗಿಳಿದಾದಿನಗಳು..

ಅಬ್ಬಬ್ಬಾ! ನೋ ಕಾಮೆಂಟ್ಸ್...

ತೇಜಸ್ವಿನಿ ಹೆಗಡೆ ಹೇಳಿದರು...

@ಶಂಕರ್, ಶ್ರೀದೇವಿ ಹಾಗೂ ಅರುಣ್ ಅವರೆ,

ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಮಾನಸಕ್ಕೆ ಭೇಟಿಕೊಡುತ್ತಿರಿ.

@ಶ್ರೀನಿವಾಸರೆ,

ನಿಜ. ಕವಿಸಮಯದಲ್ಲಿ ಮಾತ್ರ ಎಲ್ಲವೂ ಸಾಧ್ಯ. ವಾಸ್ತವಕ್ಕೆ ಕಲ್ಪನೆಯಮೆರುಗು ಕೊಡಲು ನಮ್ಮ ಮಾನಸದಲ್ಲಿ ಮಾತ್ರ ಸಾಧ್ಯ ಅಲ್ಲವೇ? ತುಂಬಾ ಧನ್ಯವಾದಳು.

@ಮಧು,

ಮೆಚ್ಚುಗೆಗೆ ಧನ್ಯವಾದಗಳು. ನನಗೂ ಎರಡನೆಯ ಚರಣವೇ ಹಿಡಿಸಿತು ;-)

@ಕಿರಣ್ ಜಯಂತ್,

ನನಗೂ ಹಾಗೇ ಅನಿಸಿತು ಹಾಗಾಗಿಯೇ ಆ ಚಿತ್ರಪಟ ಹಾಕಿದೆ. ನನ್ನ ಆತ್ಮ ತೃಪ್ತಿಗಾಗಿ ಈ ಬರವಣಿಗೆ ಅಷ್ಟೇ. ನಿಮ್ಮಂತವರ ಪ್ರೋತ್ಸಾಹವೇ ಇದಕೆ ಸ್ಫೂರ್ತಿ. ತುಂಬಾ ಧನ್ಯವಾದಗಳು. ಬರುತ್ತಿರಿ. "ಪಂಚಮಿ"ಯನ್ನೂ ಮರೆಯದಿರಿ..

ಮನಸ್ವಿ ಹೇಳಿದರು...

ಕವಿತೆ ತುಂಬಾ ಚನ್ನಾಗಿ ಮೂಡಿ ಬಂದಿದೆ

ಅನಾಮಧೇಯ ಹೇಳಿದರು...

ತೇಜಸ್ವಿನಿಯವರೆ,
ಕುಂಚ ಪ್ರಪಂಚ ಬ್ಲಾಗ್‍ನಲ್ಲಿ ‘ವಿಷಾದ ಕಾಲ’ ಕವನ ಮನ ಕಲಕಿತು ಎಂದು ಬರೆದಿದ್ದೀರಿ...
ನಿಜವಾಗ್ಲೂ ನಿಮಗೆ ಹಾಗನ್ನಿಸಿತಾ? ಇಲ್ಲಾ ಕಾಮೆಂಟ್ ಮಾಡುವ ಆ ಕ್ಷಣದಲ್ಲಿ ತೋಚಿದ ಎರಡು ಪದಗಳಾ? ಹೇಳಿ
ರವೀ...

ತೇಜಸ್ವಿನಿ ಹೆಗಡೆ ಹೇಳಿದರು...

@ಮನಸ್ವಿ ಅವರೆ,

ಮಾನಸಕ್ಕೆ ಸ್ವಾಗತ. ತುಂಬಾ ಧನ್ಯವಾದಗಳು.

@ ರವೀ ಅವರೆ,

ನಿಮಗೇಕೆ ಈ ಸಂಶಯ ಬಂತೆಂದು ತಿಳಿಯದು. ಓದಿದ ಮಾತ್ರಕ್ಕೆ ಪ್ರತಿಕ್ರಿಯಿಸಬೇಕೆಂದು ನಾನು ಬರೆದದ್ದಲ್ಲಿ. ಯಾವುದೇ ಬರಹವನ್ನಾಗಲೀ ಓದಿದ ಮೇಲೆ ಅದರಲ್ಲೇನಾದರೂ ಪ್ರತಿಕ್ರಿಯಿಸುವಂತಹದು ಇದ್ದರೆ ಮಾತ್ರ ಬರೆಯುವೆ. ಆ ಕ್ಷಣಕ್ಕೆ ಹಾಗೆ ಬರೆದದ್ದಲ್ಲ. ಧನ್ಯವಾದಗಳು.

ಗುರು [Guru] ಹೇಳಿದರು...

ತೇಜಸ್ವಿನಿಯವರೇ,
ನನ್ನ ನೂತನ ಬ್ಲಾಗ್ ಗೆ ಭೇಟಿ ಕೊಟ್ಟು ನೋಡಿ.
http://kannadaputhra.blogspot.com
ನಿಮ್ಮ ಅನಿಸಿಕೆ ತಿಳಿಸಿ

ನಾನು ಸ್ವಲ್ಪ ಖಡಕ್ ಮನುಷ್ಯ. ಎಲ್ಲ ಖಡಕ್ ಆಗಿ ಹೇಳುತ್ತೇನೆ. ಇಷ್ಟವಾದರೆ ಮತ್ತೆ ಭೇಟಿ ಕೊಡಿ. ನಿಮ್ಮ ಬ್ಲಾಗ್ ನಲ್ಲಿ ನನ್ನ ಬ್ಲಾಗ್ ಲಿಂಕಿಸಿ

MD ಹೇಳಿದರು...

ಸುಂದರ ಭಾವಗಳ ಕವನ. ಇಷ್ಟವಾಯಿತು. ಇನ್ನೊಂದೆರಡು ಸಾಲುಗಳನ್ನು ಸೇರಿಸಬಹುದಿತ್ತೇನೋ, ಹಾಗಾಗಿದ್ದರೆ ಓದುಗ ಇನ್ನೂ ಸ್ವಲ್ಪ ಮುಳುಗುತ್ತಿದ್ದ ಮತ್ತೆ ಕನವರಿಸುತ್ತಿದ್ದ ನೀವು ನೆನಪಿಸಿದ ಆ ದಿನಗಳ ಬಗ್ಗೆ ಕವಿತೆಯಿಂದಾಚೆ ಬಂದ ನಂತರವೂ.

sunaath ಹೇಳಿದರು...

ಮಾನಸದಲ್ಲೇ ಇರುವ ವಸಂತಕಾಲ ಬರಲಾರದಿರುವದೆ? ನಿಮ್ಮ ಕವನ ಓದಿದಂತೆ, ವಸಂತ ಬರುವ ಭರವಸೆ ಮೂಡುತ್ತದೆ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜಸ್ವಿನಿ...
ಎಲ್ಲ ಸಾಲುಗಳೂ ಇಷ್ಟವಾದ್ವು, ಅಂದದ ಸಾಲುಗಳ ಮೆರವಣಿಗೆ. ವಸಂತ ಬಂದಿದ್ದು ಗೊತ್ತಾಗಲೇ ಇಲ್ಲ, ಆಗಲೆ ಸಾಕಷ್ಟು ಹಕ್ಕಿಗೊರಳು, ಕವಿನೆರಳಿನಿಂಚರ.
ಸುಂದರ ರಸಮಯ.

ತೇಜಸ್ವಿನಿ ಹೆಗಡೆ ಹೇಳಿದರು...

@ಗುರು ಅವರೆ,

ಮಾನಸಕ್ಕೆ ಭೇಟಿನೀಡಿದುದಕ್ಕಾಗಿ ಧನ್ಯವಾದಗಳು. "ಕನ್ನಡಪುತ್ರ" ಈಗ ಸ್ನೇಹಕೂಟವನ್ನು ಸೇರಿದೆ :)

@ಎಂ.ಡಿ. ಅವರೆ,
ಮೆಚ್ಚುಗೆಗಳಿಗೆ ನಾನು ಆಭಾರಿ. ಹಂ.. ನಿಜ.. ಇನ್ನೆರಡು ಸಾಲುಗಳನ್ನು ಸೇರಿಸಬಹುದಿತ್ತು.. ಆದರೆ ಮುಗಿಯದ ನೆನಪುಗಳಿಗೆ ಸಾಲುಗಳ ಹಂಗೇಕೆ ಎಂದು ಸುಮ್ಮನಾದೆ.:) ಧನ್ಯವಾದಗಳು.

@ಸುನಾಥರೆ,

ಆ ಭರವಸೆಯಲ್ಲಿಯೇ ಮಾನಸ ಕಾಯುತಲಿದೆ. ಪ್ರೋತ್ಸಾಹಕ್ಕೆ ಧನ್ಯವಾದಗಳು.

@ಶಾಂತಲಾ,
ನಿಜ.. ವಸಂತ ಬಂದು ಹೋದ ಅರಿವೇ ಆಗಲಿಲ್ಲ.. ಯಾವುದೇ ಆಗಲಿ.. ಕಳೆದುಕೊಂಡ ಮೇಲೆ ತಾನೇ ಆದರ ಮಹತ್ವ ತಿಳಿಯುವುದು? :) ತುಂಬಾ ಧನ್ಯವಾದಗಳು.

ಚಿತ್ರಾ ಹೇಳಿದರು...

ತೇಜಸ್ವಿನಿ,

ಸುಂದರವಾದ ನಿಮ್ಮ ಕವನಗಳನ್ನು ಓದುವಾಗ ತುಂಬಾ ಖುಷಿಯಾಗುತ್ತದೆ.
"ಬರಲಾರವೇ ಮತ್ತೆ ತಿರುಗಿ
ಆ ನೆನಪುಗಳೇ ಚಿಗುರಿ, ಹಸಿರಾಗಿ
ನವ ವಸಂತದ ಗಾಳಿ ಬೀಸಿ
ಶಿಶಿರ ತುಂಬಿಹ ಬಾಳಲಿ
ನಗುವಾಗಿಸೋ ಆ ಸುದಿನಗಳು "

ತುಂಬಾ ಚೆನ್ನಾಗಿದೆ .

ತೇಜಸ್ವಿನಿ ಹೆಗಡೆ ಹೇಳಿದರು...

ಚಿತ್ರಾ,
ಕವನ ಹೇಂಗಿದ್ದು ಹೇಳಿ ನಂಗೊತ್ತಿಲ್ಲೆ.. ಆದ್ರೆ ನಿನ್ನ ಪ್ರತಿಕ್ರಿಯೆ ಓದಿಯಂತೂ ರಾಶಿ ಸಂತೋಷ ಆತು. ಬರ್ತಾ ಇರಿ.

ಕುಕೂಊ.. ಹೇಳಿದರು...

ಹಬ್ಬಾ....!!!!!!!!!!!!!