ಮಾನಸವನ್ನು ನಿಮ್ಮ ಮಾನಸದೊಳಗಿಂದ ಇನ್ನೂ ಮರೆತಿಲ್ಲವೆಂದು ಆಶಿಸುತ್ತಾ...ಅಲ್ಪವಿರಾಮಕ್ಕೆ ಪೂರ್ಣವಿರಾಮವಿಡುತ್ತಿರುವೆ.
ನೋವು
ವರುಷಗಳೇ ಉರುಳಿದರೂ
ಮಾಗಿದ, ಮಾಯದ ಗಾಯವೊಂದು
ಉಲ್ಬಣಿಸಿದೆ, ಕೀವುತುಂಬಿ...
ನೀ ಮರೆತರೂ(?) ನಾ
ನಿನ್ನ ಮರೆತಿಲ್ಲ;
ನೀ ಮುಚ್ಚಿಟ್ಟರೂ ನಾ
ಮುಚ್ಚುವುದಿಲ್ಲ;
ನಿನ್ನ ಮಾತ್ರವಲ್ಲದೆ,
ನಿನ್ನೊಳಗಿನ ಪ್ರತಿಬಿಂಬವನೂ
ಬಿಡೆನೆನುತ,
ಸಾಯಿಸಿ ಬಿಡುವಂತಿದೆ
ಸತ್ತರೂ ಬರುವಂತಿದೆ!
ವರುಷಗಳೇ ಕಳೆದರೂ
ಮಾಗಿದ, ಮಾಯದ ಗಾಯವೊಂದು
ಹಸಿರಾಗಿ, ಉಸಿರಾಡತೊಡಗಿದೆ...
ಇಂದು-ಮುಂದು(?)-ಎಂದೆಂದೂ????!!
9 ಕಾಮೆಂಟ್‌ಗಳು:
manushyana jeevanadali nOvu idde irutte...
manassige dukha tharo kavana barediddeera...
ಅಲ್ಪ ವಿರಾಮಕ್ಕೆ ಪೂರ್ಣವಿರಾಮ ಕೊಡುವಾಗ ಒಳ್ಳೆ ಕವನ ನೀಡಿದ್ದೀರಿ...ವೆಲ್ ಕಂ ಬ್ಯಾಕ್ :)
HI... WELCOME BACK... :)
ಯಾಕೆ ಈ ವೇದನೆ? ಸಮಾಧಾನ ತಂದುಕೊಳ್ಳುವದೆ ಜೀವನದ ಸರಿಯಾದ ಹಾದಿ.
ನಮಸ್ಕಾರ,
ಬ್ಲಾಗು ಜಗತ್ತಿಗೆ ಜೋರು ತಯಾರಿ ಮಾಡಿಕೊಂಡೆ ಬಂದಿರೊ ಹಾಗಿದೆ.... :))
ಎರಡನೇ ಇನ್ನಿಂಗ್ಸ್ ಅಡೆತಡೆಗಳಿಲ್ಲದೆ ಸಾಗಲಿ..:))
-ಅಮರ
ಶಂಕರ್,
ಇದು ಮನಸ್ಸಿನ ದುಃಖ, ದುಗುಡ ಹೇಳುವ ಕವನ. ಇದು ಒಬ್ಬ ವ್ಯಕ್ತಿಯ ನೋವಿನ ಹಾಡಲ್ಲ.. ನೋವಿನಲ್ಲಿರುವ ಎಲ್ಲಾ ಜನರ ಹಾಡು-ಪಾಡು.
ವೇಣು, ವಿಕಾಸ್,
ತುಂಬಾ ಧನ್ಯವಾದಗಳು.
ಸುನಾಥರೆ,
ಗೆಳತಿಯೋರ್ವಳು ತನ್ನ ಮನದ ಬೇಗುದಿಯ ನನ್ನೊಂದಿಗೆ ಹಂಚಿಕೊಂಡಾಗ, ಆಕೆಯ ಮನದಲ್ಲುಂಟಾಗಿರುವ ವಿಪ್ಲವ, ಹೊಯ್ದಾಟ ಹೇಗಿರಬಹುದೆಂದು ಕಲ್ಪಿಸಿ ಬರೆದದ್ದು. ಮಾನಸ ಎಂದರೆ ಸತ್ಯಕ್ಕೆ ಕಲ್ಪನೆಯ ಮೆರುಗು ತಾನೇ? ಹಾಂ ನಾನೂ ಆಕೆಗೆ ನಿಮ್ಮ ಕಿವಿಮಾತನ್ನೇ ಹೇಳಿರುವೆ.
ಅಮರ್,
ಧನ್ಯವಾದಗಳು... ಜೋರಿನ ತಯಾರಿಯೋ ಅಲ್ಲವೋ ತಿಳಿಯದು.. ತಡೆಯಿಲ್ಲದೇ ಮುನ್ನುಗ್ಗಬೇಕೆಂಬ ನಿರ್ಧಾರವಂತೂ ಮಾಡಿದ್ದೇನೆ.. ಅದಕ್ಕೆ ತಮ್ಮ ಸಹಕಾರವೂ ಅತ್ಯಗತ್ಯ ;-)
ತೇಜಸ್ವಿನಿ ಅಕ್ಕ ,
ನಿಮ್ಮ ಬರಹದ ಲೋಕಕ್ಕೆ ಮೊದಲ ಪ್ರವೇಶ.ಖುಶಿಯಾಯಿತು. ನಿಮ್ಮ ಮಾತುಗಳಷ್ಟೇ ಸೊಗಸಾಗಿಸಿದೆ.
ಚೆಂದದ ಕವನ..
ಧನ್ಯವಾದಗಳು.
ಜೋಮನ್.
I repeat what Venu said --->
ಅಲ್ಪ ವಿರಾಮಕ್ಕೆ ಪೂರ್ಣವಿರಾಮ ಕೊಡುವಾಗ ಒಳ್ಳೆ ಕವನ ನೀಡಿದ್ದೀರಿ...
Nice one.
ಕಾಮೆಂಟ್ ಪೋಸ್ಟ್ ಮಾಡಿ