ಶುಕ್ರವಾರ 23 ಡಿಸೆಂಬರ್ 2011
‘ಇಲ್ಲ’ದೊಳಗಿನ ಇರುವಿಕೆಗೆ...
ಬೇಕಿಲ್ಲ....
ತಿರುಗಿ ನೋಡಬೇಕಾಗಿಲ್ಲ..
ಅಡ್ಡ ತಿಡ್ಡ, ತಿರುವು ಮುರುವು, ಕೊರಕಲು ದಾರಿಯನ್ನು
ಬತ್ತಿದ, ಒರತೆಯ ಒಸರನ್ನೂ ಕಾಣಿಸದ
ಹಳ್ಳ, ತೊರೆ, ಕೆರೆ, ನದಿ ಕಾಲುವೆಗಳನ್ನು
ಸೋತಿಲ್ಲ...
ಸೋಲಬೇಕಾಗಿಲ್ಲ ಭಾರ ಹೊತ್ತು ಹತ್ತು,
ನೀರು ಕುಡಿದು ದಪ್ಪಗಾದ ಹತ್ತಿಯೂ
ತೂಗಿದರೆ ತೋರಬಲ್ಲದು ಹತ್ತು ಕೇಜಿ ಭಾರವನ್ನು
ಹಿಂಜಿ ಹಗುರಾದರೆ, ತಲುಪುವುದು ಆಗಸವನ್ನು
ಕಂಡಿಲ್ಲ...
ಕಾಣಲೇಬೇಕೆಂದಿಲ್ಲ ನಾನು-ನೀನು...
ಎಲ್ಲರನೂ ಕುಣಿಸುತಿಹ ಸೂತ್ರಧಾರನನ್ನು
ಕಂಡರೆ ಸಾಕು ಮಿಡಿವ ಎದೆಬಡಿತದಲಿ,
ಮನದೊಳಗಿನ ವಿವೇಕದಲಿ ಅವನ ಪ್ರತಿಬಿಂಬವನು
-ತೇಜಸ್ವಿನಿ ಹೆಗಡೆ
ಇದಕ್ಕೆ ಚಂದಾದಾರರಾಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕವನ ತುಂಬಾ ಚೆನ್ನಾಗಿದ್ದೆ..............
ಪ್ರತ್ಯುತ್ತರಅಳಿಸುexcellent !. ಸರಳವಾದ ಪದಗಳಲ್ಲಿ ಹೆಚ್ಚು ಅರ್ಥಪೂರ್ಣವಾದ ಕವನವೊಂದನ್ನು ಕೊಟ್ಟಿದ್ದೀರಿ. ಚೆನ್ನಾಗಿದೆ.
ಪ್ರತ್ಯುತ್ತರಅಳಿಸುnice lines :)
ಪ್ರತ್ಯುತ್ತರಅಳಿಸುಯಾಕೋ ಯಾರ ಬಗೆಯೋ ಅವ್ಯಕ್ತ ಕೋಪ, ನಿರಾಸೆ ಮತ್ತು ಮರುಕ ಇದೆ ಅನಿಸಿತು. ಭಾವನೆಗಳ ಪ್ಯಾಕೇಜ್ ಇಲ್ಲಿದೆ.
ಪ್ರತ್ಯುತ್ತರಅಳಿಸುತೀವ್ರವಾಗಿ ಬರೆಯುವ ನಿಮ್ಮ ಮ್ರತಿಭೆಗೆ ನನ್ನ ಜೋಹಾರುಗಳು ಮೇಡಂ.
ತೇಜಸ್ವಿನಿ,
ಪ್ರತ್ಯುತ್ತರಅಳಿಸುಬದುಕಿಗೆ ಅಗತ್ಯವಾದ ಜೀವನಧರ್ಮವನ್ನು ಸುಂದರವಾದ ಸಾಲುಗಳಲ್ಲಿ ಹೊಸೆದಿದ್ದೀರಿ. ಅಭಿನಂದನೆಗಳು.
'ಜೀವನ ಧರ್ಮ ಯೋಗ'ದ ತಿರುಳಿರುವ,ತಿಳಿವಿರುವ ಸಾರಪೂರ್ಣ ಕವಿತೆ.
ಪ್ರತ್ಯುತ್ತರಅಳಿಸುnice lines
ಪ್ರತ್ಯುತ್ತರಅಳಿಸುSundara Salugalu madam...Nice....
ಪ್ರತ್ಯುತ್ತರಅಳಿಸುtumbaa ishtavaaytu madam illadolagina iruvike....
ಪ್ರತ್ಯುತ್ತರಅಳಿಸುಬೇಕಿಲ್ಲ...ಸೋತಿಲ್ಲ...ಕಂಡಿಲ್ಲ...ನೋಡಬೇಕಿಲ್ಲ, ಸೋಲಬೇಕಾಗಿಲ್ಲ...ಕಾಣಬೇಕೆಂದಿಲ್ಲ... ಇವುಗಳ ಸುತ್ತ ಸಾಧ್ಯಾಸಧ್ಯತೆಗಳನ್ನು ಬಿಂಬಿಸುವ ಸಾಲುಗಳು ಇಷ್ಟವಾದದ್ದು..ಶೈಲಿ
ಪ್ರತ್ಯುತ್ತರಅಳಿಸು