![]() |
| Aditi Hegde |
ಮುಷ್ಠಿಯಾಗಿದ್ದ ಪುಟ್ಟ ಕೈಬೆರಳುಗಳ ಬಿಡಿಸೆ,
ಥಟ್ಟೆಂದು ನನ್ನ ಬೆರಳೊಂದನು ಹಿಡಿದ ನಿನ್ನ ಸ್ಪರ್ಶಕೆ
ತುಂಬಿದವಿಂದು ನಾಲ್ಕು ವರುಷಗಳು!
ನೆತ್ತಿಯ ಮೃದು ಭಾಗವ ಮೂಸಿ, ಆಸ್ವಾದಿಸಿ
ಕಡಲೇ ಹಿಟ್ಟಿನ ಪರಿಮಳವ ಒಳ ತುಂಬಿಕೊಂಡ
ಆ ಘಳಿಗೆಗೆ ಇಂದು ನಾಲ್ಕು ವರುಷಗಳು!
ಕೋಣೆಯ ತುಂಬಿದ ಸಾಂಬ್ರಾಣಿ ಹೊಗೆಯ ಘಾಟಿಗೆ
ಕಣ್ಮುಚ್ಚಿ ಬೋರೆಂದು ಅತ್ತ ನಿನ್ನ ಹಿಡಿದಪ್ಪಿದಾಗ
ಹಾಗೇ ನಿದ್ದೆಗೆಳೆದ ಗೊಂಬೆಗಿಂದು ನಾಲ್ಕು ವರುಷಗಳು!
ಬಂಧು ಬಳಗವೆಲ್ಲಾ ನಿನ್ನ ಅಪ್ಪಿ ಮುದ್ದಾಡುತ್ತಿದ್ದರೂ,
‘ಅಮ್ಮಾ’ ಎಂದು ಮೊದಲ ಬಾರಿ ಕರೆದು ನನ್ನೊಳಗಿನ ತಾಯ್ತನಕ್ಕೆ
ಸಾಕ್ಷಿಯೊದಗಿಸಿದ ಕಿನ್ನರಿಗೀಗ ನಾಲ್ಕು ವರುಷಗಳು!
ನನ್ನೊಳಗಿನ ನೀನು, ನಿನ್ನನೊಳಗಿನ ನಾನು ಒಳಗೊಳಗೆ ವಿಕಸಿತಗೊಂಡು,
ಮೊದಲ ನೋಟ, ಮೊದಲ ಸ್ಪರ್ಶ, ಸುಧೆಯ ಹನಿಯ ತುಟಿಗಿತ್ತ
ಆ ದಿನದಗಳ ನೆನಪಿಗಿಂದು ನಾಲ್ಕು ವರುಷಗಳು!
‘ಅದಿತಿಗಾಗಿ’ :)
-ತೇಜಸ್ವಿನಿ ಹೆಗಡೆ.

Happy Birthday To Aditi...:-)
ಪ್ರತ್ಯುತ್ತರಅಳಿಸುHappy birthday Aditi :)
ಪ್ರತ್ಯುತ್ತರಅಳಿಸುKavana chennagide :)
ಶುಭಾಷಯಗಳು
ಪ್ರತ್ಯುತ್ತರಅಳಿಸು_ನನ್ನ 'ಮನಸಿನಮನೆ'ಗೂ ಬನ್ನಿ
happy birthday aditi :)
ಪ್ರತ್ಯುತ್ತರಅಳಿಸುಮಗುವಿನ ಬಗೆಗಿರುವ ತಾಯಿಯ ಮಮತೆಯನ್ನು ಬಿಂಬಿಸುವ ಕವನ. ಅದಿತಿಗೆ ಹುಟ್ಟುಹಬ್ಬದ ಶುಭಾಶಯಗಳು.
ಪ್ರತ್ಯುತ್ತರಅಳಿಸುಮೇಡಮ್,
ಪ್ರತ್ಯುತ್ತರಅಳಿಸುತಾಯಿ ಮಮತೆಯನ್ನು ಬಿಂಬಿಸುವ ನಿಮ್ಮ ಕವನ ಇಷ್ಟವಾಯಿತು. ಅದಿತಿಗೆ ಹುಟ್ಟುಹಬ್ಬದ ಶುಭಾಶಯಗಳು
ನಿಮ್ಮಪುಟ್ಟ ಅದಿತಿಗೆ ಹುಟ್ಟು ಹಬ್ಬದ ಶುಭಾಶಯಗಳು.ಕವನ ತುಂಬಾ ಚಂದವಿದೆ.
ಪ್ರತ್ಯುತ್ತರಅಳಿಸುHappy Birthday Putti:)
ಪ್ರತ್ಯುತ್ತರಅಳಿಸುHappy Bday Adthi:)
ಪ್ರತ್ಯುತ್ತರಅಳಿಸುಅದಿತಿಗೆ ಭಾವಪೂರ್ಣ ಶುಭಾಶಯಗಳನ್ನು ಹೇಳಿದ್ದೀರಿ. ನನ್ನ ಕಡೆಯಿಂದಲೂ ಪುಟಾಣಿಗೆ ಶುಭಾಶಯಗಳು.
ಪ್ರತ್ಯುತ್ತರಅಳಿಸುಅದಿತಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ :-)
ಪ್ರತ್ಯುತ್ತರಅಳಿಸುವಾತ್ಸಲ್ಯಪೂರ್ಣ ಕವನ ಅಕ್ಕ..ಪ್ರೀತಿಯ ಪುಟ್ಟಿಗೆ ಶುಭ ಹಾರೈಕೆಗಳು :)
ಪ್ರತ್ಯುತ್ತರಅಳಿಸುಅಬ್ದುಲ್ ಕಲಾಂ ಅವರು 'ಹುಟ್ಟಿದ ದಿನ' ದ ಬಗ್ಗೆ ಹೇಳಿದ ಮಾತು ನೆನಪಾಯ್ತು..
BIRTHDAY- "The Only day in your life when you cried and your mother was smiling"
ತಡವಾಗಿ ಆದ್ರೂ,
ಪ್ರತ್ಯುತ್ತರಅಳಿಸುತುಂಬು ಹಾರೈಕೆಗಳು ಮುದ್ದು ಅದಿತಿಗೆ.
ಕವಿತೆ ಚೆನಾಗಿದ್ದು. ಅಮ್ಮನ ಹಾಡು!
ಪ್ರೀತಿಯಿಂದ,ಸಿಂಧು
ಮನ ತು೦ಬಿದ ಅದಿತಿಗೆ ಹುಟ್ಟುಹಬ್ಬದ ಶುಭಾಶಯಗಳು.
ಪ್ರತ್ಯುತ್ತರಅಳಿಸುನನ್ನ ಪುಟ್ಟಿಗೆ ಪ್ರೀತಿಯಿಂದ ಆಶೀರ್ವದಿಸಿದ, ಶುಭಾಶಯಗಳನ್ನಿತ್ತ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು. :)
ಪ್ರತ್ಯುತ್ತರಅಳಿಸು-ತೇಜಸ್ವಿನಿ ಹೆಗಡೆ.
Belated wishes to Putti(Aditi)-many many happy returns of the day.
ಪ್ರತ್ಯುತ್ತರಅಳಿಸುಪದರ ಪದರವಾಗಿ ತಾಯ್ತನದ ಸೊಬಗ ಅನುಭವಿಸಿದ ಕ್ಷಣಗಳ ಹೆಕ್ಕಿ ಮಗುವಿಗೆ ಸಮರ್ಪಿಸಿ ಅಭಿನಂದಿಸಿದ್ದು ತುಂಬಾ ಇಷ್ಟವಾಯಿತು.
ಅದಿತಿ Belated wishes ಹುಟ್ಟು ಹಬ್ಬದ ಶುಭಾಶಯಗಳು.
ಪ್ರತ್ಯುತ್ತರಅಳಿಸುಹುಟ್ಟು ಹಬ್ಬದ ಶುಭಾಶಯಗಳು
ತೇಜಸ್ವಿನ ಮೇಡಮ್ ನಿಮ್ಮ ಕವನ ನಿಜಕ್ಕೂ ಚನ್ನಾಗಿದೆ
ತಾಯ್ತನದ ವಿವರಣೆ ಅದ್ಬುತ.
ದಯವಿಟ್ಟು ನನ್ನ ಬ್ಲಾಗ್ ನೋಡಿ
http://rakeshashapur.blogspot.com
ಕವಿಜಗತ್ತಿನ ಮಗುವಿಗೆ ನಿಮ್ಮ ಸಲಹೆ ಕೊಡಿ
ಧನ್ಯವಾದಗಳು