![]() |
CopyRight:Tejaswini Hegde |
ಮೂಡಣದ ರವಿ ಹೊಸ ಬಾಳಿನೋದಯವ
ಹೊತ್ತು ತಂದಿದ್ದ ಆ ದಿನ...
ಕೈಗೆ ಕೈಯಬೆಸೆದು ಏಳು ಹೆಜ್ಜೆಯನಿಟ್ಟ-
ಆ ಸುದಿನದ ಮರುದಿನ..
ಉಷೆಯ ರಂಗನ್ನೇ ಕೆನ್ನೆಗೇರಿಸಿಕೊಂಡು
‘ಸತ್ಯನಾರಾಯಣನ’ ಕರೆದು
‘ಜೋಡಿ’ ಪೂಜೆಗೈದ ಆ ಕ್ಷಣ..
ಹಿರಿಯರ ಹಿತೋಪದೇಶ,
ಕಿರಿಯರ ಕೀಟಲೆ...
ಗೆಳೆಯರ ಚಟಾಕಿಯ ನಡುವೆ
`ನಾರಾಯಣ' ಬಂದು ಹೋಗಿದ್ದೇ ತಿಳಿಯಲಿಲ್ಲ!
ಆಶೀರ್ವದಿಸಿದ ಪುರೋಹಿತರು
ಹಸಾದವನಿತ್ತು ಅವನ ಕೈಗೆ,
‘ಅರ್ಧ ನಿನಗೆ ಉಳಿದರ್ಧ ಅರ್ಧಾಂಗಿಗೆ’ ಎಂದಾಗ...
ಮೊದಲಬಾರಿ ನಾ ಪೂರ್ಣಗೊಂಡ ಭಾವ..
ನಿನ್ನ ಕಣ್ಣೊಳಗೂ ತಿಂಗಳಬೆಳಕಿನ ತಂಪು
ಪತಿಪರಮೇಶ್ವರನ ಕಾಲಿಗೆರಗಿ
ಸ್ವೀಕರಿಸೆಂದು ಹಿರಿಯರೆಂದಾಗ,
ತಲೆಯೆತ್ತಿದ್ದೆ ನನ್ನೊಳಗಿನ ನಾನು...
‘ಎದೆಯೊಳಿದ್ದರೆ ಸಾಕಲ್ಲ... ಕಾಲಿಗೆ ಬೇರೆ ಬೇಕಿಲ್ಲ’
ನೀನೆಂದಾಗ, ನಸುನಕ್ಕಾಗ ಮಾತ್ರ
ಮನಸು ನಿನ್ನಡಿಗಳತ್ತ ಬಾಗಿತ್ತು..
ಕೈಗಳು ಅದನನುಸರಿಸಿದ್ದವು.
ಏರುವಿಕೆಯ ಹಂತವ, ಇಳಿಯುವಿಕೆಯಿಂದಲೇ
ತಿಳಿ ತಿಳಿಸಿದ ಈ ಸಂ-ಸಾರದ ಗುಟ್ಟು
ರಟ್ಟಾದಷ್ಟೂ ಗುಟ್ಟಾಗೇ ಉಳಿದಂತಿದೆ...
ಸೋತು ಗೆಲ್ಲುವ... ಗೆದ್ದೂ ಗೆಲ್ಲದಿರುವ
ಈ ಬದುಕಿನಾಟದಲ್ಲಿ ಇಬ್ಬರೂ ಸಮಾನರು
ಎಂದು ಸಾರಿದ ಆ ಸತ್ಯನಾರಾಯಣನ
ಸದಾ ನೆನೆ ನೆನೆದು ನಮಿಸುವೆ
-ತೇಜಸ್ವಿನಿ ಹೆಗಡೆ.
15 ಕಾಮೆಂಟ್‌ಗಳು:
cholo iddu tejakka...ಸೋತು ಗೆಲ್ಲುವ... ಗೆದ್ದೂ ಗೆಲ್ಲದಿರುವ
ಈ ಬದುಕಿನಾಟದಲ್ಲಿ ಇಬ್ಬರೂ ಸಮಾನರು tumba ishta atu
ತುಂಬಾ ಚೆನ್ನಾಗಿದೆ ಕವನ ತೇಜು... ಏನು ವಿಶೇಷದಿನವೇ ಮದುವೆಯ ದಿನ ಏನಾದರು ಇದೆಯೇ, ಊರಿಗೆ ಬೇರೆ ಹೋಗಿದ್ದೀರಿ ಪೂಜೆ ಸಮಾರಂಭ ನೆಡೆದಿರಬೇಕು... ಒಳ್ಳೆಯದಾಗಲಿ.
ಇಬ್ಬರೂ ಒಂದು ನಾಣ್ಯದ ಎರಡು ಮುಖವಿದ್ದಂತೆ...ಸತ್ಯನಾರಾಯಣ ನಿಮ್ಮ ಜೀವನವನ್ನು ಉತ್ಸಾಹದಿಂದಿಡಲೆಂದು ಆಶಿಸುತ್ತೇನೆ...
ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ನಿಮಗಿಬ್ಬರಿಗೂ... ದೇವರು ಸದಾ ಒಳ್ಳೆಯದನ್ನೇ ಅನುಗ್ರಹಿಸಲಿ ನಿಮಗೆ.... :-)
ಶ್ಯಾಮಲ
@ವಾಣಿ,
ತುಂಬಾ ಥ್ಯಾಂಕ್ಸ್ :)
@ಸುಗುಣಕ್ಕ, ಶ್ಯಾಮಲಕ್ಕ,
ಮೆಚ್ಚುಗೆಗೆ ತುಂಬಾ ಧನ್ಯವಾದಗಳು. ಆದರೆ ನನ್ನ ಮದುವೆ ವಾರ್ಷಿಕೋತ್ಸವವಲ್ಲ...:) ಹಾಗೇ ಸುಮ್ಮನೇ ಬರೆದದ್ದು.
ಚೆನ್ನಾಗಿದೆ... ತಮ್ಮ ತಮ್ಮ ಅಹಂ ಬದಿಗಿಟ್ಟು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಇಬ್ಬರೂ ಸಮಾನರು ಎನ್ನುವ ಮಾತನ್ನು ಚೆನ್ನಾಗಿ ಬೆರೆದಿದ್ದೀರಿ...
cholo iddu liked it.
badukina satyavannu kaavyavaagi hELida riti tumbaa chennaagide...
ತೇಜಸ್ವಿನಿ, ಚನ್ನಾಗಿವೆ ಸಾಲುಗಳು...ಶುಭಕೋರೋಕೆ ನೆಪ ಸಾಕು ಅದು ವಾರ್ಷಿಕೋತ್ಸವದ ಪರ್ವವೇ ಆಗಬೇಕೆಂದೇನಿಲ್ಲ...
ಆಶೀರ್ವದಿಸಿದ ಪುರೋಹಿತರು
ಹಸಾದವನಿತ್ತು ಅವನ ಕೈಗೆ,
‘ಅರ್ಧ ನಿನಗೆ ಉಳಿದರ್ಧ ಅರ್ಧಾಂಗಿಗೆ’ ಎಂದಾಗ...
ಇವು ಸಂಗಾತಿ ಜೊತೆಗೆ ಜೀವನದ ಸಾರ ಅಲ್ವೇ...?
chennaagide
-sitaram
thumba chennagidhe thejakka....hithavaagidhe kavana :)
:-) ಚೆನ್ನಾಗಿದೆ.
ತೇಜೂ,
ತಡವಾಯ್ತು , ಇರಲಿ . ಆದರೂ ಮನದಾಳದಿಂದ ಶುಭ ಹಾರೈಸುವೆ . ನಿಮ್ಮ ಜೀವನದಲ್ಲಿ ಸದಾ ಸಂತಸ ತುಂಬಿರಲಿ, ಪೂರ್ಣ ಭಾವ ಸದಾ ಸಂಪೂರ್ಣವಾಗಿರಲಿ !
Tejaswini,
tumba chenda baradde
ishta atu
ಕವನ ಚೆನ್ನಾಗಿದೆ.
:-)
ಪ್ರತಿಕ್ರಿಯಿಸಿದ, ಮೆಚ್ಚಿದ ಎಲ್ಲರಿಗೂ ತುಂಬಾ ಧನ್ಯವಾದಗಳು.
-ತೇಜಸ್ವಿನಿ ಹೆಗಡೆ
ಕಾಮೆಂಟ್ ಪೋಸ್ಟ್ ಮಾಡಿ