ಬುಧವಾರ, ನವೆಂಬರ್ 10, 2010

ಆಲಾಪಿನಿ


Courtesy - http://media.photobucket.com/
ನಿನ್ನ ಖಾಲಿ ಬದುಕೊಳಗೆ ರಂಗುಗಳನ್ನು
ನಾ ತುಂಬುತ್ತಾ ತುಳುಕುತ್ತಾ
ನನ್ನೊಳಗಿನ ನಾನು ಬಣ್ಣಗೆಟ್ಟು
ಖಾಲಿಯಾಗತೊಡಗಿದೆನಲ್ಲಾ...
ನೀ ಮಿಡಿದ ಶ್ರುತಿ ಲಯಕ್ಕೆ
ನಾ ತಾಳ ಹಾಕುತ್ತಾ ಕುಣಿಯುತ್ತಾ
ಅಪಸ್ವರವೊಂದು ನಡುವೆಲ್ಲೋ ಹುಟ್ಟಿ
ಮೆಲ್ಲನೆ ಕುಂಟತೊಡಗಿದೆನಲ್ಲಾ...

ಸಾಗರಿಯ ಬಿಳಿಯಂಚಿನ ಕಪ್ಪು ಸೀರೆ ಬೇಡ
ಸುಗಂಧಿಯ ಸುವಾಸನೆಯ ಮತ್ತೂ ಬೇಡ
ಮುಡಿಗೆ ಮಿನುಗುವ ತಾರೆಗಳು ಬೇಡ
ಕಿವಿಗಳಿಗೆ ವಜ್ರದೋಲೆಯೂ ಬೇಡ

ನನ್ನೊಳಗಿನ ಮಾಸಲು ಭಾವಗಳಿಗೆ
ನಿನ್ನ ಪ್ರೀತಿಯ ರಂಗುಗಳ ತುಂಬು
ನನ್ನೆದೆಯ ವೀಣಾವಾದನಕ್ಕೆ
ನೀ ರಾಗಮಾಂತ್ರಿಕನಾಗಿ ಸಾಥ್ ನೀಡು
ಇನ್ನೇನೂ ಕೇಳೆನು, ನಾನು ನಿನ್ನೇನೂ ಬೇಡೆನು
ಸಪ್ತವರ್ಣಗಳೊಳಗಿನ ಸುಪ್ತ ಸ್ವರಗಳ
ನುಡಿಸಿ ಬಿಡು ಒಮ್ಮೆ!

-ತೇಜಸ್ವಿನಿ

20 ಕಾಮೆಂಟ್‌ಗಳು:

Dr.D.T.Krishna Murthy. ಹೇಳಿದರು...

'ಸಪ್ತ ವರ್ಣಗಳೊಳಗಿನ ಸುಪ್ತಸ್ವರಗಳ ನುದಿಸಿಬಿಡು ಒಮ್ಮೆ !'.....ಸುಂದರ ಸಾಲುಗಳು.ಚಂದದ ಕವನ.ಅಭಿನಂದನೆಗಳು.

ಮೃತ್ಯುಂಜಯ ಹೊಸಮನೆ ಹೇಳಿದರು...

ಶೃತಿ ಅಲ್ಲ, ಶ್ರುತಿ ಎಂದಾಗಬೇಕಲ್ಲವಾ?

ತೇಜಸ್ವಿನಿ ಹೆಗಡೆ ಹೇಳಿದರು...

@ಕೃಷ್ಣಮೂರ್ತಿ ಅವರೆ,

ಮೆಚ್ಚುಗೆಗೆ ಧನ್ಯವಾದಗಳು.

@ಹೊಸಮನಿ ಅವರೆ,

ಸರಿಪಡಿಸಿದ್ದೇನೆ. ಈ ವಿಷಯವಾಗಿ ಹಲವಷ್ಟು ವಾದ-ವಿವಾದಗಳಾಗಿವೆ. ಧನ್ಯವಾದಗಳು.

ಚುಕ್ಕಿಚಿತ್ತಾರ ಹೇಳಿದರು...

ಪ್ರೇಮ ಒ೦ತರಾ ಬಾರ್ಟರ್ ಸಿಸ್ಟಮ್ ಹಾಗೆ..
ಅವರ್ಣನೀಯ ಭಾವನೆಗಳ ವಿನಿಮಯ ಅಗುತ್ತಲೇ ಇರಬೇಕು..
ಖಾಲೀ ಬಿಟ್ಟ ಜಾಗ ತು೦ಬುತ್ತಲೇ ಇರಬೇಕು..!

ಅದುವೇ ಪ್ರೇಮ.. ಅದುವೇ ಜೀವನ..

sunaath ಹೇಳಿದರು...

ತೇಜಸ್ವಿನಿ,
ವಾಸ್ತವಲೋಕವನ್ನು ಚಿತ್ರಿಸಿದ್ದೀರಿ. ಬಾಳಿನಲ್ಲಿ ಸರಿಯಾದ ಸಮೀಕರಣವಿದ್ದರೆ ಮಾತ್ರ ಬಾಳು fulfill ಆಗುತ್ತದೆ.

Karthik Kamanna ಹೇಳಿದರು...

andada kavana, oLLeya padavinyAsa.. sangeetada ALa harivugaLa baLake kavanada merugu hechchiside!

ಮಹೇಶ ಹೇಳಿದರು...

ಸಪ್ತವರ್ಣಗಳ ಸುಪ್ತಸ್ವರ ನುಡಿಸಿ ಬಿಡು. ತುಂಬಾ ಚೆನ್ನಾಗಿದೆ

shiva ಹೇಳಿದರು...

when v r angry v can change decision bt not feelings the chenged decisionmay give satisfaction at dat time bt later it hurts our feelings a lot

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಆಲಾಪಿನಿ ಚೆನ್ನಾಗಿದೆ. ಚಿತ್ರಕ್ಕೆ ತಕ್ಕಂತಹ ಕವನ.

ಮನಸಿನ ಮಾತುಗಳು ಹೇಳಿದರು...

ತೇಜಕ್ಕ,
ಕವನ ಚನಾಗಿದ್ದು ಎಂದಿನಂತೆ..:-)

ತೇಜಕ್ಕ, ಒಂದೊಳ್ಳೆ ಕಥೆ ಬರದು ಬ್ಲಾಗ್ನಲ್ಲಿ ಹಾಕು.ತುಂಬಾ ದಿನಗಳಿಂದ ನಾನು ನಿನ್ನ ಕಥೆಯ ಬರುವಿಕೆಗಾಗಿ ಕಾಯ್ತಾ ಇದೀನಿ...:-)ನಿನ್ನ ಕಥೆಗಳು ಓದೋಕೆ ನಂಗಿಷ್ಟ ಆಗ್ತವೆ..

ಸೀತಾರಾಮ. ಕೆ. / SITARAM.K ಹೇಳಿದರು...

chendavide kavana

ಮನಮುಕ್ತಾ ಹೇಳಿದರು...

nice poem

umesh desai ಹೇಳಿದರು...

ತೇಜಸ್ವಿನಿ ಅವರೆ ಸುಂದರ ಕವಿತೆ ಪದಗಳ ಸಮೀಕರಣವೂ ಸೊಗಸಾಗಿದೆ

ಸಾಗರದಾಚೆಯ ಇಂಚರ ಹೇಳಿದರು...

ಕೊನೆಯ ಸಾಲು ಮಾತ್ರ ಬಹಳಷ್ಟು ಚಿಂತನೆಗೆ ಹಚ್ಚಿತು
ಸುಂದರ ಕವನ

ವಿ.ರಾ.ಹೆ. ಹೇಳಿದರು...

adbhuta!

Soumya. Bhagwat ಹೇಳಿದರು...

very nice poem tejakka..:) ninna kavanagala oduvudara majane bere.. :)

ಪ್ರವೀಣ್ ಭಟ್ ಹೇಳಿದರು...

sakatha iddu akka... alaapiniya alaapane!!

shivu.k ಹೇಳಿದರು...

ಶ್ರೀದೇವಿ ಮೇಡಮ್,

ಸಂಗೀತದ ಬಗ್ಗೆ ನೀವು ಬರೆಯುವ ಕವನ ಅರ್ಥಗರ್ಭಿತವಾಗಿರುತ್ತದೆ..

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಿಮ್ಮ ಹೆಸರಿನ ಬದಲು ಶ್ರೀದೇವಿಯವರ ಹೆಸರು ತಪ್ಪಾಗಿ ಕಾಮೆಂಟ್ ಮಾಡಿದ್ದೇನೆ..ತಿದ್ದಿಕೊಳ್ಳಿ..

ತೇಜಸ್ವಿನಿ ಹೆಗಡೆ ಹೇಳಿದರು...

ಕವನವನ್ನು ಮೆಚ್ಚಿ ಸ್ಪಂದಿಸಿದ ಎಲ್ಲಾ ಮಾನಸ ಓದುಗರಿಗೂ ತುಂಬಾ ಧನ್ಯವಾದಗಳು. :)

ಶಿವು ಅವರೆ,

ಈ ಕವನವನ್ನು ಬರೆದಿದ್ದು ನಾನೇ, ಶ್ರೀದೇವಿ ಅವರು ಅಲ್ಲ... ಬಹುಶಃ ಅವರ ಬ್ಲಾಗಿನ ಶೀರ್ಷಿಕೆ ಹಾಗೂ ನನ್ನ ಕವನದ ಶೀರ್ಷಿಕೆ ಒಂದೇ ಆಗಿದ್ದು ನಿಮಗೆ ಗೊಂದಲವಾಗಿರಬೇಕು :)
ಧನ್ಯವಾದಗಳು.