ಗುರುವಾರ, ಜೂನ್ 3, 2010

ನಿರೀಕ್ಷೆ

ಕತ್ತಲೆಯ ಹೊದ್ದ ರಾಹು, ಪೂರ್ಣ ಚಂದಿರನ ನುಂಗಿ
ಇಂಚಿಂಚಾಗಿ ತಿಂದು ತೇಗಿ ಉಗುಳಿಹೋದ,
ಅರ್ಧ ಚಂದ್ರನಂತೆ, ನೀನಿಲ್ಲದ ಹೊತ್ತು.....

ಮಿನುಗುವ ತಾರೆಗಳಿಗೆ ಮಂಕುಬೂದಿಯನೆರಚಿ
ತನ್ನೊಳಗೆ ಮರೆಮಾಚಿ ಬೀಗಿ ನಗುವ,
ಕರಿಮೋಡದಂತೆ, ನೀನಿಲ್ಲದ ಹೊತ್ತು....

ಅದೆಲ್ಲೋ ಇಹುದಂತೆ ಸತ್ತ ಸಾಗರವೊಂದು
ಆ ಕಡಲನ್ನೇ ಕಣ್ಗಳೊಳಗೆ ತುಂಬಿ,
ಜೀವರಸ ಹೀರಿದಂತೆ, ನೀನಿಲ್ಲದ ಹೊತ್ತು....

ಕೊರೆವ ಚಳಿಗೆ ಮರಗಟ್ಟಿದ್ದ ಕೈಗಳಿಗೆ
ಮಂಜುಗಡ್ಡೆಯನುಜ್ಜಿ, ತೀಡಿ
ಬಿಸಿಯನೆಬ್ಬಿಸಲೆತ್ನಿಸಿದಂತೆ, ನೀನಿಲ್ಲದ ಹೊತ್ತು....

ಹೊತ್ತಲ್ಲದ ಹೊತ್ತಿನಲಿ, ಧುತ್ತೆಂದು ನುಗ್ಗುವ
ಒಲ್ಲದ ಯೋಚನೆಗಳಿಗೆ, ಸಲ್ಲದ ಸ್ಥಾನವ ಕೊಟ್ಟು
ಹಗಲಿರುಳೂ ಕೊರಗುತಿಹೆ, ನೀನಿಲ್ಲದ ಹೊತ್ತು....

ಆ ಸೂರ್ಯ, ಚಂದ್ರರರನೇ ಕೈಗಿತ್ತರೂ
ಮಿನುಗು ತಾರೆಗಳನೇ ಮುಡಿಗಿಟ್ಟರೂ
ಬೆಳಕಿಲ್ಲ ಮನದೊಳಗೆ, ನೀನಿಲ್ಲದ ಹೊತ್ತು....

ಚಿತ್ರಕೃಪೆ : [www.tabathayeatts.com/artthursday.htm]

 

- ತೇಜಸ್ವಿನಿ ಹೆಗಡೆ

 

26 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ತು೦ಬ ಚೆನ್ನಾಗಿದೆ

ಜಲನಯನ ಹೇಳಿದರು...

ನೀನಿಲ್ಲದಾ ಹೊತ್ತು..
ಕೊರೆವ ಚಳಿಗೆ ಮರಗಟ್ಟಿದ್ದ ಕೈಗಳಿಗೆ
ಮಂಜುಗಡ್ಡೆಯನುಜ್ಜಿ, ತೀಡಿ
ಬಿಸಿಯನೆಬ್ಬಿಸಲೆತ್ನಿಸಿದಂತೆ, ನೀನಿಲ್ಲದ ಹೊತ್ತು....
ಈ ಸಾಲುಗಳು ಬಹಳ ಹಿಡಿಸಿದವು..ಮಂಜುಗಡ್ಡೆಯನುಜ್ಜಿ ಬಿಸಿಯನೆಬ್ಬಿಸುವ
ವಿರೋಧಾಭಾಸ ಮೇಲ್ನೋಟಕ್ಕೆ ..ಆದರೆ ಬಹು ಅರ್ಥಗರ್ಭಿತ ಶಬ್ದ ಪ್ರಯೋಗ.....ತೇಜಸ್ವಿನಿ ಎಂದಿನಂತೆ...ಪರಾಕ್..ಬಹು ಪರಾಕ್..

kusu Muliyala ಹೇಳಿದರು...

superb

ಮನದಾಳದಿಂದ............ ಹೇಳಿದರು...

ಅಕ್ಕಾ.........
ವ್ವಾ........!
ಎಷ್ಟೊಂದು ಚೆನ್ನಾಗಿದೆ ನಿಮ್ಮ ಕವನ!
ಅದ್ಭುತ ಪದಗಳ ಜೋಡಣೆ!

ಸುಂದರ ಕವನ!

ಡಾ.ಕೃಷ್ಣಮೂರ್ತಿ.ಡಿ.ಟಿ. ಹೇಳಿದರು...

'ನೀನಿಲ್ಲದ ಹೊತ್ತು',ಕವನ ಚೆನ್ನಾಗಿತ್ತು.

Subrahmanya ಹೇಳಿದರು...

ಪದ ಸಂಯೋಜನೆ, ಭಾವ, ತುಂಬ ಇಷ್ಟವಾಯಿತು.

Guru's world ಹೇಳಿದರು...

ತುಂಬಾ ಚೆನ್ನಾಗಿ ಮೂಡಿ ಬಂದಿದೆ...good one..
"ನೀನಿಲ್ಲದಾ ಹೊತ್ತು..
ಕೊರೆವ ಚಳಿಗೆ ಮರಗಟ್ಟಿದ್ದ ಕೈಗಳಿಗೆ ...." ಸಾಲುಗಳು ತುಂಬಾ ಇಷ್ಟವಾದವು

Raghu ಹೇಳಿದರು...

ನೀನಿಲ್ಲದ ಹೊತ್ತು..ನಾನ್ ಹೇಗಿರುವೇನೋ ಆ ದೇವರಿಗೇ ಗೊತ್ತು..
ತುಂಬಾ ತುಂಬಾ ಚೆನ್ನಾಗಿದೆ ನೀನಿಲ್ಲದ ಹೊತ್ತು.
ನಿಮ್ಮವ,
ರಾಘು.

ಅನಾಮಧೇಯ ಹೇಳಿದರು...

neenillada hottu.....mana mttuva hagide........really very nice....

Prem.

ದಿವ್ಯಾ ಹೇಳಿದರು...

tejakka,
sooper kavana..:)

ಒಂದು ಸಾರಿ ಭಾವಂಗೆ ಓದಲೆ ಹೇಳಕಿತ್ತು ..;)

he may be very happy... :)

Divya Mallya - ದಿವ್ಯಾ ಮಲ್ಯ ಹೇಳಿದರು...

ಆಹಾ.. ತುಂಬಾ ಚಂದದ ಕವನ !

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನೀನಿಲ್ಲದ ಹೊತ್ತು ಕೊರೆವ ಚಳಿಗೆ ಮರಗಟ್ಟಿದ್ದ ಕೈಗಳು....ಮಂಜುಗಡ್ಡೆಯನುಜ್ಜಿ, ತೀಡಿ
ಬಿಸಿಯನೆಬ್ಬಿಸಲೆತ್ನಿಸಿದಂತೆ, ನೀನಿಲ್ಲದ ಹೊತ್ತು....

ಸೊಗಸಾದ ಕಲ್ಪನೆಗೆ ಕವನದ ರೂಪಕೊಟ್ಟಿದ್ದೀರಿ...

ತುಂಬಾ ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K ಹೇಳಿದರು...

nice!

ಚಿತ್ರಾ ಹೇಳಿದರು...

ತೇಜೂ ,
ಸುಂದರ , ಅರ್ಥಪೂರ್ಣ ಕವನ .
" ಆ ಸೂರ್ಯ, ಚಂದ್ರರರನೇ ಕೈಗಿತ್ತರೂ
ಮಿನುಗು ತಾರೆಗಳನೇ ಮುಡಿಗಿಟ್ಟರೂ
ಬೆಳಕಿಲ್ಲ ಮನದೊಳಗೆ, ನೀನಿಲ್ಲದ ಹೊತ್ತು...."

ತುಂಬಾ ಇಷ್ಟವಾಯ್ತು.

ಅನೂಹ್ಯ ಹೇಳಿದರು...

ತೇಜಸ್ವಿನಿ, ನಿಮ್ಮ ಕಲ್ಪನೆ ತುಂಬ ಚೆನ್ನಾಗಿದೆ. ಪ್ರತಿ ಪದವೂ ಸಹ ತುಂಬ ಭಾವುಕವಾಗಿತ್ತು. ಮನ ಮುಟ್ಟುವಂತ ಕವನ!!

ವನಿತಾ / Vanitha ಹೇಳಿದರು...

wonderful:))

ಮನಸು ಹೇಳಿದರು...

ಸೂಪರ್ ಕವನ....

pavs ಹೇಳಿದರು...

wav...super agiddu..

sunaath ಹೇಳಿದರು...

ತುಂಬ ಸುಂದರವಾದ ಕವನ. ‘ನೀನಿರುವ ಹೊತ್ತು’ ಎನ್ನುವ ಕವನವೂ ಬರಲಿ ಎನ್ನುವದು ನನ್ನ ಅಪೇಕ್ಷೆ.

Badarinath Palavalli ಹೇಳಿದರು...

ಅದೆಲ್ಲೋ ಇಹುದಂತೆ ಸತ್ತ ಸಾಗರವೊಂದು
ಆ ಕಡಲನ್ನೇ ಕಣ್ಗಳೊಳಗೆ ತುಂಬಿ,
ಜೀವರಸ ಹೀರಿದಂತೆ, ನೀನಿಲ್ಲದ ಹೊತ್ತು....

ಕವಿತೆಯನ್ನು ಪೂರ್ತಿಯಾಗಿ ಓದಿಸುವ ಶಕ್ತಿ ನಿಮ್ಮ ಶೈಲಿಯಲ್ಲೇ ಅಡಗಿದೆ.

keep it up

ತೇಜಸ್ವಿನಿ ಹೆಗಡೆ ಹೇಳಿದರು...

ಮೆಚ್ಚುಗೆಭರಿತ ಪ್ರತಿಕ್ರಿಯೆಗಳ ಮೂಲಕ ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಮಾನಸ ಕೆಲ ಸಮಯದವರೆಗೆ ಮರೆಯಾಗುತ್ತಿದೆ. ಹೊಸ ಯೋಚನೆ, ಹೊಸ ಭಾವನೆಗಳನ್ನು ಹೊತ್ತು ಮತ್ತೆ ಬಹುಬೇಗ ಬರುವ ನಿರೀಕ್ಷೆಯೊಂದಿಗೆ...........

ತೇಜಸ್ವಿನಿ ಹೆಗಡೆ.

@ದಿವ್ಯ,

ಕೆಲವರಿಗೆ ಕವನಗಳೆಂದರೆ ಕಬ್ಬಿಣದ ಕಡಲೆ :) ಆ ಸಾಲಿಗೆ ನನ್ನವರೂ ಸೇರುತ್ತಾರೆ :ಡ್

@ಕಾಕಾ,

ನನ್ನ ಕವನಕ್ಕಿಂತ ನಿಮ್ಮ ಪ್ರತಿಕ್ರಿಯೆ ತುಂಬಾ ಇಷ್ಟವಾಯಿತು ನನಗೆ. ಆ ಹೊತ್ತಿನ ಕವನದಾಗಮನವೂ ಬಹುಬೇಗ ಮಾನಸದಲ್ಲಿ ಮೂಡುವುದು :)

Prasad Shetty ಹೇಳಿದರು...

ನೀನಿಲ್ಲದ ಹೊತ್ತು
ಅದ ಕಳೆದವ ನನಗೆ ಗೊತ್ತು.! :)
ತುಂಬಾನೇ ಚೆನ್ನಾಗಿದೆ..

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿ
ಮತ್ತೊಂದು ಸುಂದರ ಕವಿತೆ
ತುಂಬಾ ಚೆನ್ನಾಗಿದೆ

Kirti ಹೇಳಿದರು...

nimm neerikhshe bahal chennagide..

ಚಿತ್ರಾ ಸಂತೋಷ್ ಹೇಳಿದರು...

ಅಕ್ಕಯ್ಯ...ಎಲ್ಲಿ ಮರೆಯಾಗಿ ಹೋಗುವೆ...ಅಮ್ಮನೂರಿಗಾ?
ಬೇಗ ಬಂದು ಬರೆಯಕೆ ಶುರು ಹಚ್ಚಿ. ಕವನ ತುಂಬಾ ಚೆನ್ನಾಗಿದೆ

Nagaraj Hebbar ಹೇಳಿದರು...

ತುಂಬ ಇಷ್ಟವಾಯ್ತು...ನಿಮ್ಮ ಸಾಲು...