ಒಂದು ಮೊಳ ದುಂಡು ಮಲ್ಲಿಗೆ ಮಾಲೆ,
ಒಂದೇ ಒಂದು ಕ್ಯಾಡ್‌ಬರಿ ಚಾಕೊಲೇಟ್
ಮುದ್ದಾದ, ಪುಟ್ಟದೊಂದು ಗ್ರೀಟಿಂಗ್ ಕಾರ್ಡ್
ಇವುಗಳಲ್ಲೇ ಒಂದನ್ನಾದರೂ ನೀ ನಿನ್ನ
ಹೂನಗೆಯ ಲೇಪನದಿಂದಿತ್ತಿದ್ದರೆ,
ನಾ ಕಣ್ಬಿಟ್ಟ ದಿನ ಮತ್ತಷ್ಟು ಬೆಳಕಾಗುತಿತ್ತು..
ಒಂದು ವರುಷ ಎಂ.ಪಿ.ತ್ರಿ,
ಮರುವರ್ಷವೋ ಪೆನ್ ಡ್ರೈವ್,
ಮತ್ತೆ ಬಂತು ಡಿಜಿಟಲ್ ಕ್ಯಾಮರಾ,ಅದ ಹಿಂಬಾಲಿಸಿ ಪಡೆದೆ ವೆಬ್‍ಕ್ಯಾಮ್,
ಲಾಪ್‌ಟಾಪ್, ಓಪ್ಟಿಕಲ್ ಮೌಸ್!
ಪ್ರತಿಬಾರಿಯೂ ಮನಸು ಹೇಳುತಿತ್ತು
ನೀನೊಬ್ಬ ಪಕ್ಕಾ, ಗಣಕ ಯಂತ್ರ ಅಭಿಯಂತರ.
ಕೇಳಿ ಪಡೆಯುವುದು ಉಡುಗೊರೆಯಲ್ಲ,
ಪ್ರತಿ ಸಲವೂ 'ಮೌನಂ ಸಮ್ಮತಿ ಲಕ್ಷಣಂ' ಅಲ್ಲ...
ಗೊತ್ತು ಬಿಡು, ಭಾವನೆಗಳಿಗೂ ತಾಂತ್ರಿಕತೆಗೂ
ಕಾಗೆ-ಕೋಗೆಲೆಗಳಂತರ.....
ಮೃದು ಹೂವೊಂದ ಬಯಸಿದ ಮನಸಿಗೆ
ನೀ ನೀಡುತ್ತಾ ಹೋದೆ, ಬಹು ದೊಡ್ಡ
ಸಾಫ್ಟ್‌ವೇರ್ ಗಿಫ್ಟ್‌ಗಳ!
-ತೇಜಸ್ವಿನಿ ಹೆಗಡೆ :)
23 ಕಾಮೆಂಟ್‌ಗಳು:
ಮೃದು ಹೂವು ಬಯಸಿದ ಮನಸಿಗೆ ದುಬಾರಿ ಗಿಫ್ಟ್ ಗಳೇ ಸಿಕ್ಕಿದ್ದರೂ, ಇನ್ನೂ ಹೂವಿನ-ಚಾಕೊಲೇಟಿನ ಕನಸು ಕನವರಿಕೆ ಬಿಟ್ಟಿಲ್ಲವೆನಿಸುತ್ತದೆ. ಈ ಆಸೆ-ಕನಸುಗಳೇ ಹೀಗೆ, ಕೊನೆಯಿಲ್ಲದವು. ಈ ಕನಸು ಸು೦ದರ "ನಾಳೆ" ಗಳಿಗಾಗಿ ಕಾತರಿಸುವ ಮತ್ತು ಸುಮಧುರ ಸ೦ಬ೦ಧ ಬೆಸೆಯುವ ಸಾಧನ. ಕವನ ಚೆನ್ನಾಗಿದೆ.
ನಮ್ಮ ಭಾವನೆಗಳನ್ನು ಯಾ೦ತ್ರಿಕತೆ ಅದು ಹೇಗೆ ತಿ೦ದುಹಾಕುತ್ತದೆಯಲ್ಲವೇ?ಭಾವನೆಗಳೇ ಬತ್ತಿ ಹೋಗುವ..,ಭಕ್ಷೀಸುಗಳು ಎಷ್ಟಿದ್ದರೇನು?.
ತೇಜಸ್ವಿನಿಯವರೇ ಬಹಳ ಸು೦ದರ ಕವನ.ತು೦ಬಾ ಇಷ್ಟ್ಟವಾಯ್ತು.
ಹೂನಗೆಯೊ೦ದಿಗಿನ ಹಲವು ಸಮಯದ ಆಪ್ತ ಕ್ಷಣಗಳ ಒಡನಾಟದ ನೀರೀಕ್ಷೆಯ ಹುಟ್ಟು ಹಬ್ಬದ ಆಚರಣೆಯಲ್ಲಿರುವವರಿಗೆ ಅವರ ಆಪ್ತರು ಯಾರದೋ ಕೈಯ್ಯಲ್ಲಿ ದುಬಾರಿ ಕಾಣಿಕೆಗಳ ಕಳಿಸಿದರೇ ಮನ ಪ್ರಫ಼ುಲ್ಲವಾಗದು. ಅವರ ಮನದ ಖುಷಿಯ ಅ೦ಶಗಳನ್ನು ಗುರುತಿಸಿ, ಅದನ್ನು ಕನಿಷ್ಟ ಅವರ ಹುಟ್ಟುಹಬ್ಬದ೦ದು ನೇರವೇರಿಸಿ ಕೊಡುವ ಸ೦ತಸ, ನಾವು ಅ೦ದುಕೊಡಿರುವ ಬೆಲೆಬಾಳೋ ಉಡುಗೊರೆಯಲ್ಲಿ -ಇಲ್ಲ ಎ೦ಬುದನ್ನು ಸೂಚ್ಯವಾಗಿ ತಿಳಿಸಿದ್ದಿರಾ....
ಚೆ೦ದದ ಕವನ.
tumba chennagide.. gift kododu aadambirekeyalla preeti needidare ade gift...
kavana tumba istavaayitu nanna bhaavaneyu nimmanteye
ತೇಜಸ್ವಿನಿ,
ಗಣಕ ಪ್ರೇಮಿ ಮನಸಿಗೆ ಪೆನ್ ಡ್ರೈವೇ ಗುಲಾಬಿ ಹೂ, ಲ್ಯಾಪ್ ಟಾ^ಪೇ ಕ್ಯಾಡಬರಿ ಚೊಕೊಲೇಟ್! ಆತ ಕೊಟ್ಟಿದ್ದೆಲ್ಲ ಪ್ರೀತಿಯ ಕಾಣಿಕೆಯೇ!
aha.. entha sundhara kavithe... :)
nimage aa dhubaari gifts beDadiddare nange kodi tejakka... :)
nimage neevu bayasida gifts gaLu aadashtu bega sigali :)
aahaaa.... hosa nireekshe tumbaa chennaagide..... aadroo kaanike kanikeye alvaa madam....... aadroo chocolate... gulaabiya haage allave alla.......
ಛೇ ನನಗೆ ಯಾವಾಗ ಯಾರಾದ್ರೂ ಲ್ಯಾಪ್ ಟಾಪ್ ,ಡಿಜಿಟಲ್ ಕ್ಯಾಮೆರಾ ಗಿಫ್ಟ್ ಕೊಡ್ತಾರೋ? :(
ಕವನ ಚೆನ್ನಾಗಿದೆ .ಮನಸ್ಸಿನ ಜಾಡು ನಿಗೂಢ !ಅದು ಬಯಸುವುದು ಒಂದು,ನಾವು ಪಡೆಯುವುದು ಇನ್ನೊಂದು!ಭಾವುಕ ಮನಸ್ಸಿನ ಇಷ್ಟಗಳು
ವ್ಯಾವಹಾರಿಕ ಮನಸ್ಸಿಗೆ ವಿಚಿತ್ರ ವಾಗಿ ಕಾಣುತ್ತದೆ .ಪ್ರತಿ ಮನಸ್ಸಿಗೂ ಅದರದೇ ಜಾಡು ,ಅದರದೇ ಪಾಡು!
ತೇಜಸ್ವಿನಿ ಮೇಡಮ್,
ಹೂ ಮನಸ್ಸಿಗೆ ಸಿಗುವ ಗಿಪ್ಟುಗಳು ಅವು ಎಂಥವೇ ಆಗಿದ್ದರೂ ಮನಸ್ಸು ಬೇರೇನೋ ಬಯಸುವುದು ಸಹಜ. ಈ ಅಸೆಗಳಿಗೆ ಅಂತ್ಯವಿಲ್ಲ. ಕವನದಲ್ಲಿ ಗಣಕಯಂತ್ರದ ಸ್ಪೇರ್ಸುಗಳೆಲ್ಲಾ ಸ್ಥಾನ ಪಡೆದುಕೊಂಡಿರುವುದು ಹೊಸದೆನಿಸುತ್ತದೆ.
`-'
ಎಲ್ಲದರಲ್ಲೂ ಇರುವ ಪ್ರೀತಿಯೇ ದೊಡ್ಡ ಕಾಣಿಕೆ. But ಪ್ರೀತಿ ಅಷ್ಟು ಬೇಗ ಕಾಣಿಸಿಕೊಳ್ಳುವುದೇ ಇಲ್ಲ..!. ಕವನದಲ್ಲಿ accessories ಗಳು ಬಂದಿದ್ದು ಚೆನ್ನಾಗಿದೆ.
ಕವಿತೆ ಚೆನ್ನಾಗಿದೆ :)
ಭಾವನೆಗೆ ತಕ್ಕಂತೆ ಕಾಣಿಕೆಗಳು ಸಿಕ್ಕಲಿ; ಹಾಗೆಯೇ, ಸಿಕ್ಕ ಕಾಣಿಕೆಗಳಲಿ ಭಾವನೆಗಳನ್ನು ಕಂಡುಕೊಳ್ಳುವಂತಾಗಲಿ...
ತೇಜಸ್ವಿನಿ ಮೇಡಂ, ಕಾಣಿಕೆಗಳ ಪಟ್ಟಿಯನ್ನು ಚೆನ್ನಾಗಿ ಹೆಣೆದಿದ್ದೀರಿ. ಕವನ ಚೆನ್ನಾಗಿದೆ.
ಇನ್ನಷ್ಟು ಹೊಸ ಹೊಸ ಸರಣಿಯ ಕವಿತೆಗಳು ಬರಲಿ..
ತೇಜಸ್ವಿನಿಯವರೇ...
ಎಷ್ಟೆಲ್ಲಾ ದುಬಾರಿ ಕಾಣಿಕೆಗಳು ಬಂದರೂ, ಕೊನೆಗೂ ಮನ ಬಯಸಿದ್ದು ಬರಲಿಲ್ಲ.... :-) ಸಿಕ್ಕ ಕಾಣಿಕೆಗಳೆಲ್ಲವ ಬಿಟ್ಟು... ಸಿಗದುದರೆಡೆಗೆ ತುಡಿವುದೆ ತುಂಟ ಮನ..... ಚೆನ್ನಾಗಿದೆ... ಪ್ರೀತಿ ತುಂಬಿದ ಹುಚ್ಚು ಮನಸ್ಸು ಹೇಗೆ ಭಾವುಕವಾದ, ಅನುರಾಗ ಭರಿತವಾದ ಕಾಣಿಕೆ ಬಯಸುತ್ತೆ ಅನ್ನೋದು ಹೇಳಿದ ರೀತಿ ಅದ್ಭುತವಾಗಿದೆ....ಹೊಸ ಅಲೆಯ ಕವಿತೆ....:-)
ತೇಜೂ,
ಚಂದ ಇದ್ದು ಕವನ . ಕೆಲವೊಮ್ಮೆ , ಪುಟ್ಟ ಪುಟ್ಟ , ಅತೀ ಸಾಧಾರಣ ಎನಿಸುವ ವಸ್ತುಗ ಳು ಕೊಡುವ ಖುಷಿಯನ್ನು ಅತ್ಯಂತ ದುಬಾರಿ ಅಥವಾ ಬಲು ಜನಪ್ರಿಯ ವಸ್ತುಗಳು ಕೊಡಲು ಸಾಧ್ಯವಿಲ್ಲ.
ಪ್ರೀತಿ ತುಂಬಿದ ಒಂದು ಹೂಮುತ್ತಿನೆದುರು ಬೆಲೆಬಾಳುವ ಆಭರಣ ಕ್ಷುಲ್ಲಕ ಎನಿಸಿಬಿಡುತ್ತದೆ !
ಅಲ್ಲಾ ಕಣ್ರೀ, ಇಷ್ಟೊಳ್ಳೆ ಕಾಣಿಕೆಗಳು ಸಿಗ್ತಾ ಇದ್ರೂ ಮತ್ತೆ ಮುಸಿ ಮುಸಿ ಅಂತಾ ಅಳ್ತಾ ಇದ್ದೀರಲ್ರಿ? ನಿಮಗೆ ಅವು ಬೇಡ ಅಂದ್ರೆ ನಮಗೆ ಕೊಡಿ!
ಬ್ಲಾಗ್ ಸ್ನೇಹಿತರೊಬ್ಬರು ಹೇಳಿದಂತೆ, "ಸಿಕ್ಕ ಕಾಣಿಕೆಗಳೆಲ್ಲವ ಬಿಟ್ಟು... ಸಿಗದುದರೆಡೆಗೆ ತುಡಿವುದೆ ತುಂಟ ಮನ" ಅಲ್ವಾ?
ಸಿಕ್ಕಿದ್ದಕ್ಕೆ ಖುಸಿ ಪಡಿ ಆಯ್ತಾ.........
ಚೆನ್ನಾಗಿದೆ ನಿಮ್ಮ ಕಾಣದ ಕಾಣಿಕೆಗಳ ಕನವರಿಕೆ.
ತಂತ್ರಜ್ಞಾನ ಯುಗದಲ್ಲಿ ಗಣಕ ಯಂತ್ರಗಳೇ ಗಿಫ್ಟ್ ಆಗಿ ಸಿಕ್ಕಿರಬೇಕಾದರೆ ಇನ್ನು
ಮ್ರದು ಹೂಗಳ ಮೇಲಿನ ಪ್ರೀತಿಯೇ
ನಿಮ್ಮಲ್ಲಿನ ಮ್ರದು ಮನಸಿನ ಅನಾವರಣವಿದು
ಆ ಗಿಫ್ಟುಗಳು ನಿಮ್ಗೆ ಬೇಡವೊ ಹೇಗೆ.. ಆದ್ರೂ ನಿಮ್ಮ ಕವಿತೆ ಚೆನ್ನಾಗಿದೆ...ಎಂದಿನಂತೆ...!
ತೇಜಸ್ವಿನಿ,
ಚೆನಾಗಿದ್ದು. ಇಷ್ಟ ಆತು.
ನಮಗೆ ಸರಳವಾಗಿ ಕಂಡಿದ್ದು ಒಂದೊಂದ್ಸಲ ಬೇರೆಯವರಿಗೆ ಅರ್ಥವೇ ಆಗದ ಗೊಂದಲವಾಗಿಬಿಟ್ಟಿರ್ತು.
but practically speaking -
ಡಿಜಟಲ್ಲೋ ಲೈವೋ - ಗಿಫ್ಟ್ ಕೊಡಕ್ಕು ಅಂತ ಅನ್ನಿಸಿರುವುದು ತುಂಬ ಮುಖ್ಯ. ಏನು ಅನ್ನದು ಗಣ್ಯ - all different stages of life.
ಪ್ರೀತಿಯಿಂದ
ಸಿಂಧು
ಕವನದಲ್ಲಿ ಹೊಸತನವಿದೆ, ಚೆನ್ನಗಿದೆ ಕವನ
ತೇಜಸ್ವಿನಿಯವರೆ,
ಕವನ ಚೆನ್ನಾಗಿದೆ. ಕೆಲವರು ದುಬಾರಿ ವಸ್ತುಗಳನ್ನು ಎದುರು ನೊಡುತ್ತಾರೆ, ಮತ್ತೆ ಕೆಲವರು ಭಾವನಾತ್ಮಕವಾಗಿ ಪ್ರೀತಿಯನ್ನು ವ್ಯಕ್ತಪಡಿಸಲೆಂದು ಕಾಯುತ್ತಾರೆ. ಎರಡು ತಪ್ಪಲ್ಲ ಅನ್ನೋದು ನನ್ನ ಭಾವನೆ. ಆದರೂ ನಾವು "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ನಡೆವುದೆ ಜೀವನ" ಅನ್ನೋದನ್ನ ಪಾಲಿಸ್ತೇವೆ ಒಮ್ಮೊಮ್ಮೆ ಅನ್ಸತ್ತೆ.
ನಿಮ್ಮಿಂದ ಹೀಗೆಯೆ ಉತ್ತಮವಾದ ಬರವಣಿಗೆಗಳು ಬರಲಿ. ನನ್ನ ಬ್ಲೊಗ್ ಕಡೆ ಸಮಯ ಸಿಕ್ಕಾಗ ಬರುತ್ತಿರಿ..
ಕವನವನ್ನು ಮೆಚ್ಚಿ, ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಕವದೊಳಗಿರುವುದೂ ಪ್ರೀತಿಯೇ, ಕವನದೊಳಗಿನ ಕಾಣಿಕೆಗಳೊಳಗಿರುವುದೂ ಪ್ರೀತಿಯೇ. ಕನವರಿಕೆಗಳೂ ಪ್ರೀತಿಯದ್ದೇ... ಎಷ್ಟೆಂದರೂ ಕವನ ಅವರವರ ಭಾವಕ್ಕೆ ಬಿಟ್ಟಿದ್ದಷ್ಟೇ :)
ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆ ಮಾನಸದ ಮೇಲಿರಲಿ.
ಕಾಮೆಂಟ್ ಪೋಸ್ಟ್ ಮಾಡಿ