**ನನ್ನ-ನಿನ್ನ ನಡುವೆ**
ಒಲುಮೆಯ ಸಾಗರವಿದೆ
ನೋವ-ನಲಿವ ಅಲೆಗಳಿವೆ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!
----------------------------
**ವಿಶ್ವಾಸ**
ನಳ್ಳಿಯಿಂದ ಬಿಂದಿಗೆಗೆ
ಹನಿ ಹನಿಯಾಗಿ ನೀರ ತುಂಬಿದ ನೀರೆ
ತನ್ನ ಕಟಿಯಲ್ಲಿಟ್ಟು
ನಾಜೂಕಾಗಿ ನಡೆವಾಗ..
ಕಲ್ಲೆಡವಿ ಬಿದ್ದು
ಬಿಂದಿಗೆಯ ನೀರೆಲ್ಲಾ ಸೋರಿ
ಮಣ್ಣುಪಾಲು!
----------------------------
**ಪ್ರೀತಿ**
ದೇವಿಗಾಗಿ ಗರ್ಭಗುಡಿಯ
ಬಾಗಿಲ ಬಳಿ ಕಾದು
ಸುಸ್ತಾದ ಭಕ್ತ, ಕೊನೆಗೆ
ನಂದಾದೀಪದ ಬೆಳಕಿಗೆ
ಕೈ ಮುಗಿದು ಹೊರಟ
--------------------------
**ಕಾಲ**
ಪುಟ್ಟ ಮಗುವಿನ
ಕಪಿಮುಷ್ಠಿಯೊಳಡಗಿ ಭದ್ರವಾಗಿದ್ದ
ಮಂಜುಗಡ್ಡೆಯೊಂದು
ಕರಗಿ ಹನಿಯಾಗಿ
ನೀರಾಗಿ ಹರಿಯಿತು.
16 ಕಾಮೆಂಟ್ಗಳು:
ತೇಜು...
**ನನ್ನ-ನಿನ್ನ ನಡುವೆ**
ಒಲುಮೆಯ ಸಾಗರವಿದೆ
ನೋವ-ನಲಿವ ಅಲೆಗಳಿವೆ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!
**ಪ್ರೀತಿ**
ದೇವಿಗಾಗಿ ಗರ್ಭಗುಡಿಯ
ಬಾಗಿಲ ಬಳಿ ಕಾದು
ಸುಸ್ತಾದ ಭಕ್ತ, ಕೊನೆಗೆ
ನಂದಾದೀಪದ ಬೆಳಕಿಗೆ
ಕೈ ಮುಗಿದು ಹೊರಟ
ನಾಲ್ಕೂ ಭಾವಗಳೂ ಇಷ್ಟವಾದ್ವು. ಅದರಲ್ಲಿ ಇವೆರಡಂತೂ ಯಾಕೋ ಇನ್ನಷ್ಟು ಇಷ್ಟವಾದ್ವು.
ತೇಜಸ್ವಿನಿಯವರೇ,
"ನನ್ನ-ನಿನ್ನ ನಡುವೆ" ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸುನಾಮಿ comparision ವಿಭಿನ್ನವಾದರೂ ಹೇಳಿಮಾಡಿಸಿದಂತಿದೆ.
ನಳ್ಳಿಯಿಂದ...ಇದು ನಲ್ಲಿಯಿಂದ ಎಂದು ಇರಬೇಕಲ್ಲವೇ?
ಚೆನ್ನಾಗಿದೆ ರಿ.
ಇನ್ನೂ ಹೆಚ್ಚಿನ ಕವನಗಳು ಬರಲಿ.
ಜೀವನದ ನಗ್ನ ಸತ್ಯವನ್ನು ಬಹಳ ಚೆನ್ನಾಗಿ ತಿಳಿಯಪಡಿಸಿದ್ದೀರಿ.
ಲಾಲೀ ಕೇಳೋ ಕಂದ
ಇಂಥ ತಾಯಿಯಿಂದ
ಎಲ್ಲಿ ತೋರಿಸು ನಿನ್ನ ಹಲ್ಲು
ಕಚ್ಬೇಡ ನನ್ನ ಬೆರಳು
ಮಾಯೆ ಎನ್ನುವರು ಈ ಜೀವ ಜೀವನವನ್ನು
ನಾನೇನು ಹೇಳಲಿ ಇನ್ನು
ಏ ಜೀವನ ಒಂದು ಕನಸೇ
ಇದರಿಂದ ಆಚೆ ಬಂದ್ರೆ ಗೊತ್ತಾಗತ್ತೆ ಎಲ್ಲಾ ನನಸೇ
ಎಲ್ಲವೂ ಚೆನ್ನಾಗಿವೆ. ಕಾಲ ಮಾತ್ರ ಅತ್ಯುತ್ತಮವಾಗಿದೆ. ಕಾಲವನ್ನು ತಡೆಯೋರು ಯಾರೂ ಇಲ್ಲ! ಇದೇ ಪ್ರಯತ್ನದಲ್ಲಿ ಮುಂದುವರಿದರೆ ಇನ್ನೂ ಉತ್ತಮ ಕವನಗಳು ಹುಟ್ಟಬಹುದು. ಅಭಿನಂದನೆಗಳು.
ಒಲವಿನಿಂದ
ಬಾನಾಡಿ
ವ್ಹಾ ವ್ಹಾ ವ್ಹಾ ಎಷ್ಟೊಂದು ಸುಂದರ ಕವನಗಳು. ಮೊದಲನೆಯದು ತುಂಬಾ ಇಷ್ಟವಾಯಿತು. ಇನ್ನಷ್ಟು ಬರೆಯಿರಿ.
ಧನ್ಯವಾದಗಳು.
ಜೋಮನ್.
ತೇಜಸ್ವಿನಿ,
ಮರುಕ ತುಂಬಿದ ಮನದ ಕಾವ್ಯವಿದು. ಓದುಗರ ಮನವನ್ನೂ ಮಿಡಿಯುತ್ತವೆ.
hiii..
chennagide :)
hige baritiri nanv odutiruteve
ತೇಜಸ್ವಿನಿ. . .
‘ಪ್ರೀತಿ’ ತುಂಬಾ ಇಷ್ಟವಾಯಿತು. ಓದುಗರನ್ನು ಹೂಂ ಎನ್ನಿಸುವ ಶಕ್ತಿ ಪುಟ್ಟಕಾವ್ಯದಲ್ಲಿ ಅಡಕವಾಗಿದೆ. ಮತ್ತೆ ಮತ್ತೆ ಬರೀತಾ ಇರ್ರಿ. . .
**ನನ್ನ-ನಿನ್ನ ನಡುವೆ**
ಒಲುಮೆಯ ಸಾಗರವಿದೆ
ನೋವ-ನಲಿವ ಅಲೆಗಳಿವೆ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!
ತೇಜಸ್ವಿನಿ,
ಒಲುಮೆಯ ಸಾಗರದೊಳೆ
ನೋ-ನಲಿವ ಅಲೆಗಳೇಳುವುದು
ಒಲುಮೆಯ ಸಾಗರದೊಳೆ
ಮುತ್ತುಗಳು ಅರಳುವುದು
ಒಲುಮೆಯ ಸಾಗರದೊಳೆ
ಆಗಾಗ ಸುನಾಮಿಯೂ ಏಳುವುದು.
ಅದಕ್ಕೇ ಅದಕೆ ಒಲುಮೆಯೆನ್ನುವುದು!!
nanna ninna naduve, tumbaa chennaagide... :-)
Prayatna munduvarsi
~ Harsha
**ವಿಶ್ವಾಸ**
ನಳ್ಳಿಯಿಂದ ಬಿಂದಿಗೆಗೆ
ಹನಿ ಹನಿಯಾಗಿ ನೀರ ತುಂಬಿದ ನೀರೆ
ತನ್ನ ಕಟಿಯಲ್ಲಿಟ್ಟು
ನಾಜೂಕಾಗಿ ನಡೆವಾಗ..
ಕಲ್ಲೆಡವಿ ಬಿದ್ದು
ಬಿಂದಿಗೆಯ ನೀರೆಲ್ಲಾ ಸೋರಿ
ಮಣ್ಣುಪಾಲು!
ಅದೇ ನೀರ ಹಸಿಯಿಂದ
ವಿಶ್ವಾಸದ ಹಸಿರು ಗರಿಕೆ ಚಿಗುರೀತು!
namaskaara..nimma ellaa kavanagalannu odhi manasige khushi ayitu..hige baritaa iri..nimma kavanagalnnu odhuva bhagya nammadaagirali..
Sunil
@ ಶಾಂತಲಾ,
ತುಂಬಾ ಧನ್ಯವಾದಗಳು. ನೆನೆಪು ಕನಸಗಳನ್ನು ನಿಲ್ಲಿಸದೇ ಅವಿರತವಾಗಿ ಮುಂದುವರಿಸಬೇಕಾಗಿ ವಿನಮ್ರ ವಿನಂತಿ.
@ ಕಿರಣ್ ಅವರೆ,
ಮೆಚ್ಚುಗೆಗಳಿಗೆ ಧನ್ಯವಾದಗಳು. ಕನ್ನಡದಲ್ಲಿ ಳ ಕಾರದ ಪ್ರಯೋಗ ರೂಡಿಯಲ್ಲಿದೆ. ನಲ್ಲಿಯೆಂದರೂ ಸರಿಯೇ.
@ ಜಯಶಂಕರ್,
ತುಂಬಾ ಧನ್ಯವಾದಗಳು.
@ ಶ್ರೀನಿವಾಸ್ ಅವರೆ,
ಸುಂದರ ಚುಟುಕಿನ ಮೂಲಕ ಪ್ರತಿಕ್ರಿಯಿಸಿದ್ದಕ್ಕಾಗಿ ವಂದನೆಗಳು. ಬರುತ್ತಿರಿ.
@ ಬಾನಾಡಿ, ಜೋಮನ್ ಅವರೆ, ಸುನಾಥರೆ, ವೀಣಾ ಹಾಗೂ ಶ್ರೀದೇವಿ ಅವರೆ,
ನಿಮ್ಮೆಲ್ಲರ ಪ್ರೋತ್ಸಾಹಗಳಿಗೆ ಹಾಗೂ ಮೆಚ್ಚುಗೆಗಳಿಗೆ ನಾನು ತುಂಬಾ ಆಭಾರಿ. ಧನ್ಯವಾದಗಳು. ಮಾನಸಕ್ಕೆ ಭೇಟಿನೀಡುತ್ತಿರಿ.
@ ಸಿಮ್ಮಾ ಅವರೆ...
ಮಾನಸಕ್ಕೆ ಸ್ವಾಗತ. ತುಂಬಾ ಸುಂದರ ಹಾಗೂ ಅರ್ಥವತ್ತಾದ ವಿಮರ್ಶೆಗಳನ್ನು ನೀಡಿದ್ದೀರಾ.. ಹೌದು ವಿಶ್ವಾಸವನ್ನು ಮತ್ತೆ ಚಿಗುರಿಸಬಹುದು.. ಆದರೆ ಒಮ್ಮೆ ಕಳೆದುಕೊಂಡ ಮೆಳೆ ಅದನ್ನು ಮತ್ತೆ ಗಳಿಸುವುದು ಗೋರ್ಕಲ್ ಮೇಲೆ ಹುಲ್ಲು ಚಿಗಿರಿಸುವಷ್ಟು ಕಷ್ಟಕರ!
@ ಶ್ರೀ ಹರ್ಷ ಹಾಗೂ ಸುಶೀಲ್ ಕುಮಾರ್ ಅವರೆ,
ಮಾನಸಕ್ಕೆ ಸ್ವಾಗತ. ತುಂಬಾ ಧನ್ಯವಾದಳು. ಪ್ರೋತ್ಸಾಹ ಹೀಗೇ ಇರಲಿ.
hi tejaswiniyavare...
ella chutukagalu bahala bhavanatmakavagide.
"kaala"vantu tumbaa chennagide ;)
tejaswni avare
kavangalu chennaagive.
'nanna ninna naduve' maththu 'kaala' thumba ishta aaythu.
'nanna ninna naduve' odida mele nanna manasinalli ondu barahada kalpane banthu. aa barahakke ade hesaru needona endenisithu. aadre maththe bedavenisi bere sheershike needide
ಕಾಮೆಂಟ್ ಪೋಸ್ಟ್ ಮಾಡಿ