ಭಾನುವಾರ, ಜೂನ್ 1, 2008

ಹುಡುಕಾಟ





ಹುಡುಕಾಟ

ಇರುವೆ ಜೊತೆಗೆ ಮನದ ಭಾವದೊಳಗೂಡಿ,
ಬರುವೆ ನಿನ್ನಂತರಂಗದಮಾತುಗಳೇ ನಾನಾಗಿ,
ಎಂದೆಲ್ಲಾ ಹೇಳಿ, ಮನ ಸೇರಿ,
ಬರಿಯ ಮೌನವಾದನಲ್ಲಾ...!
ನಲ್ಲ- ಬರಿಯ ಮೌನವಾಗಿಹನಲ್ಲಾ?!

ಕಣ್ಣೀರ ಹನಿಗೆಲ್ಲಾ ಕರಗಿ ನೀರಾದವನು,
ಪನ್ನೀರನಿತ್ತು ಮುಖವ ಬೆಳಗಿ,
ಕೆಸರಾದ ಮನದೊಳಗಿಳಿದು,
ಹಸಿರ ಬಿತ್ತಿ ಉಸಿರಾಡಿಸಿದ
ಉಸಿರೊಳಗೆ ಬೆರೆಯದೆ,
ಕರಗಿಹೋದನಲ್ಲಾ!
ನಲ್ಲ-ಕರಗಿಹೋದನಲ್ಲಾ..?!

ನನ್ನ ಕಣ್ಣ ಬಿಂಬಕೆ
ಹಸನಾದ ಕನಸ ತಂದು
ನನಸಾಗಿ ನಾ ಬರುವೆನೆಂದ,
ಇಂದು ಕನ್ನಡಿಯೊಳಗೆ
ಕಣ್ಣಬಿಂಬವ ನೋಡೆ
ಮಬ್ಬಾಗಿಹೋದನಲ್ಲಾ...!
ನಲ್ಲ-ಮಬ್ಬಾಗಿಹೋಗಿಹನಲ್ಲಾ..?!

ಭ್ರಮೆ - ನನ್ನದೆನ್ನುವುದೆಲ್ಲಾ
ಎಂದು ಹೇಳಿ ನಕ್ಕು, ಆ ನಗು
ನನ್ನೆದೆಯೊಳಗಿಳಿದು ತುಟಿಗೆಬರುವ ಮೊದಲೇ...
ಕಳೆದುಹೋದನಲ್ಲಾ..!
ನಲ್ಲ-ಕಳೆದುಹೋಗಿಹನಲ್ಲಾ....?!

25 ಕಾಮೆಂಟ್‌ಗಳು:

ಅಂತರ್ವಾಣಿ ಹೇಳಿದರು...

modala charaNa thumbaa hiDisitu.. :)

Gururaja Narayana ಹೇಳಿದರು...

ನಮಸ್ಕಾರ ತೇಜಸ್ವಿನಿ, ನಿಮಗೊಂದು ಆಹ್ವಾನ ಪತ್ರಿಕೆ.

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.


ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು
-ಕನ್ನಡಸಾಹಿತ್ಯ.ಕಾಂ ಬಳಗ

ಅಮರ ಹೇಳಿದರು...

.......... :) hooo!!! maanasada mudiyalli hosa hoovu aralide .... layout mast ide ,,,,,, kavana kuda :))
-amara

Sudi ಹೇಳಿದರು...

ನಮಸ್ತೆ ತೇಜಸ್ವಿನಿ
ನಿಮ್ಮ ಬರಹದ ಪರಿಚಯ ನನಗೆ ಗೆಳೆಯ ಜಯ್ ಮುಖಾಂತರ ಆಯಿತು

ತುಂಬಾ ಚೆನ್ನಾಗಿದೆ ಈ ಕವನ...ಅದರಲ್ಲೂ ದ್ವಿತೀಯ ಚರಣ ತುಂಬಾನೇ ಹಿಡಿಸಿತು ..

- ಸುಧಿ

ತೇಜಸ್ವಿನಿ ಹೆಗಡೆ ಹೇಳಿದರು...

@ಶಂಕರ್,

ಮೆಚ್ಚುಗೆಗೆ ತುಂಬಾ ಧನ್ಯವಾದಗಳು. ಭೇಟಿ ಕೊಡುತ್ತಿರಿ.

@ಗುರು,

ತುಂಬಾ ಉತ್ತಮ ಪ್ರಯತ್ನ. ಯಶಸ್ವಿಯಾಗಲಿ ಎಂದು ಹಾರೈಸುವೆ. ಇಂತಹ ಒಳ್ಳೆಯ ಕಾರ್ಯಕ್ರಮದ ಕರೆಯೋಲೆ ಸ್ಪಾಮ್ ಆಗಿಬಂದರೂ ಸಂತೋಷವೇ ;-)ತಪ್ಪದೇ ನನಗೆ ತಿಳಿದ ಸಾಹಿತ್ಯಾಸಕ್ತಿರಿಗೆಲ್ಲಾ ಲಿಂಕ್ ಕಳುಹಿಸುವೆ. ಧನ್ಯವಾದಗಳು.

@ಅಮರ್,

ತುಂಬಾ ಧನ್ಯವಾದಗಳು. ಬದಲಾವಣೆ ಜಗದ ನಿಯಮ. "ಮಾನಸ" ಇದಕ್ಕೆ ಹೊರತಲ್ಲ ;-) ಬರುತ್ತಿರಿ.

@ಸುಧಿ,

ಮಾನಸಕ್ಕೆ ಸ್ವಾಗತ. ನಿಮ್ಮ ಬ್ಲಾಗ್ ಕೂಡ "ನಿಮ್ಮ ತನ"(Its Me)ವನ್ನು ಎತ್ತಿ ಹಿಡಿವ ಬರಗಳಿಂದ ಕೂಡಿದೆ. ಮೆಚ್ಚುಗೆಗೆ ತುಂಬಾ ಆಭಾರಿ. ಬರುತ್ತಿರಿ.

ಪಯಣಿಗ ಹೇಳಿದರು...

ಮಾನಸದ ಹೊಸ ಹೂ-ಪಟ ಮೋಹಕವಾಗಿದೆ, ನಿಮ್ಮ ಹುಡುಕಾಟದ ಹಾಗ!

ವಿಷಯತ೦ತ್ರದ ಹೊಸ ಆಯಾಮಗಳತ್ತ ನಿಮ್ಮ ಪಯಣ ಹೀಗೆ ಸಾಗಲಿ....

sunaath ಹೇಳಿದರು...

ಸೊಗಸಾದ ಕವನ. ಅಭಿನಂದನೆಗಳು.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜಸ್ವಿನಿ ಅವರೆ..
ಮಾತು ಮೌನವಾಗಿದ್ದು....
ಉಸಿರೊಳಗಿನ ಹಸಿರು ಕಳೆದು ಹೋಗಿದ್ದು...
ಕಣ್ಣ ಬಿಂಬವೇ ಮಬ್ಬಾಗಿ ಹೋದ್ದು....
ನಗುವೊಂದು ಸ್ಪಂಧನ ಕಾಣದ್ದು....
ಯಾಕೆ?ಎಂಬುದ
ಎಳೆಳೆಯಾಗಿ ಬಿಡಿಸಿಟ್ಟಿದ್ದೀರಾ....
ಎಲ್ಲ ಸಾಲುಗಳಿಷ್ಟವಾದ್ವು.

ಕುಕೂಊ.. ಹೇಳಿದರು...

ನಿಮ್ಮ ಈ ಕವಿತೆಯ ಎಲ್ಲಾ ಸಾಲುಗಳಲ್ಲೂ ಭಾವನೆಯ ಸೆಲೆ ಜಿನುಗುತಿದೆ. ಕೊನೆಯ ಚರಣ ಸೊಗಸಾಗಿದೆ. ಕವನ ತುಂಬಾ ಖಷಿ ಕೊಟ್ಟಿತು.

ಬಾಳದಾರಿಯಲ್ಲೊಮ್ಮೆ ನಡೆದು ನನ್ನ ಗುಬ್ಬಚ್ಚಿ-ಗೂಡಿಗೆ ಬಂದು ಹೋಗಿ.

http://baaladaari.blogspot.com/
http://www.gubbacchi-goodu.blogspot.com/

ಧನ್ಯವಾದಗಳು
ಕುಮಾರಸ್ವಾಮಿ.ಕಡಾಕೊಳ್ಳ.
ಪುಣೆ

dinesh ಹೇಳಿದರು...

ಕವನ ತುಂಬಾ ಚೆನ್ನಾಗಿದೆ.... ಲೇ ಔಟ್ ಕೂಡಾ ಸೊಗಸಾಗಿದೆ....

Anveshi ಹೇಳಿದರು...

ಮಾನಸರೆ,

ಮೌನವಾಗಿಹನ್ ಅಲ್ಲಾ...
ಕರಗಿ ಹೋದನ್ ಅಲ್ಲಾ...

ಅಂತೆಲ್ಲಾ ದೇವರ ಸ್ಮರಣೆ ಮಾಡ್ತಾ ಇರುವಂತೆಯೇ ಕಾಣಿಸುತ್ತಿದೆ ಅಲ್ಲಾ!!!

ಆಲಾಪಿನಿ ಹೇಳಿದರು...

ಬೋರಲು ಬಿದ್ದ ಗುಲಾಬಿ ವರ್ಣದ ಹೂ,ಸ್ನೇಹಕೂಟದ ಹಸಿರು ಅಂಗಿ ತೊಟ್ಟ ಗೆಳೆಯರ ಬಳಗ,ಪಕ್ಕದಲ್ಲೇ ನೀಲಿಕಂಗಳಿಂದ ನೋಡುತ್ತ ನಿಂತ ‘ಹುಡುಕಾಟ’ ಎಲ್ಲ ಎಲ್ಲವೂ ತುಬಾ ಇಷ್ಟವಾಯಿತು. ಅಂದಹಾಗೆ ಮಾನಸದಲ್ಲಿ ಆಲಾಪಿಸಲು ಜಾಗ ಕೊಟ್ಟಿದ್ದೂ ಖುಷಿಯಾಯ್ತು....

jomon varghese ಹೇಳಿದರು...

ನಮಸ್ಕಾರ,

ಸೊಗಸಾದ ಕವಿತೆ. ಓದಿ ತುಂಬಾನೆ ಖುಷಿಯಾಯಿತು. ಮತ್ತೊಂದು ಖುಷಿಯ ವಿಷಯವೆಂದರೆ ನಿಮ್ಮ ಬ್ಲಾಗಿನ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸ ಬದಲಾಗಿರುವುದು. ತುಂಬಾ ಚೆನ್ನಾಗಿದೆ.

ಧನ್ಯವಾದಗಳು.

ಜೋಮನ್.

ತೇಜಸ್ವಿನಿ ಹೆಗಡೆ ಹೇಳಿದರು...

@ಪಯಣಿಗ, ಸುನಾಥರೆ, ಶಾಂತಲ, ಕುಮಾರಸ್ವಾಮಿ ಹಾಗೂ ದಿನೇಶ್ ,

ತುಂಬಾ ಧನ್ಯವಾದಗಳು.. ಮನಸದ ಹೊರಾಂಗಣ ಹಾಗೂ ಕವಿತೆಯನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿ ನನ್ನ ಪ್ರೋತ್ಸಾಹಿಸಿದ್ದಕ್ಕೆ. ಮಾನಸಕ್ಕೆ ಬರುತ್ತಿರಿ.

@ಅಸತ್ಯ ಅನ್ವೇಷಿ,

ಕೇಳಿರಬೇಕಲ್ಲಾ! "ಅವರರವರ ಭಾವಕ್ಕೆ ಅವರವರ ಭಕುತಿಗೆ..." ಆದರೆ ಒಂದಂತೂ ಸತ್ಯ. ನಾನಿಲ್ಲಿ "ಅಲ್ಲಾ"ನಂತೂ ಸ್ಮರಿಸುತ್ತಿಲ್ಲಾ...;-) ಧನ್ಯವಾದಗಳು. ಬರುತ್ತಿರಿ.

@ತಂಬೂರಿ ಹಾಗೂ ಜೋಮನ್ ಅವರೆ,

ಬದಲಾವಣೆ ಜಗದ ನಿಯಮ ತಾನೇ? ಮಾನಸವೂ ಇದಕ್ಕೆ ಹೊರತಲ್ಲ ;-) ಮೆಚ್ಚುಗೆಗಳಿಗೆ ಆಭಾರಿ. ಭೇಟಿಕೊಡುತ್ತಿರಿ.

Chevar ಹೇಳಿದರು...

good one.
ಕೆಲವು ಸಾಲುಗಳು ಮನ ತಾಕಿದವು.

mala rao ಹೇಳಿದರು...

ಕವಿತೆ ಚೆನ್ನಾಗಿದೆ
ನಿಮ್ಮ ಬ್ಲಾಗ್ ಸಿಂಗರಿಸಿರಿವ ಪರಿ ಇಷ್ಟವಾಯಿತು

ಏಕಾಂತ ಹೇಳಿದರು...

ನಿಮ್ಮ ಮೆಚ್ಚು ನುಡಿಗೆ ನಾನು ಋಣಿ. ನಿಮ್ಮ ಬ್ಲಾಗ್ ಮುದ್ದಾಗಿದೆ. ಕೆಲ ಸಾಲುಗಳು ತುಂಬಾ ಹಿಡಿಸಿವೆ. ಜೊತೆಗೆ ವಿನ್ಯಾಸ ಕೂಡಾ.

..Laxmikanth...

ಏಕಾಂತ ಹೇಳಿದರು...

ಪ್ರತಿಕ್ರಿಯೆಗೆ ಧನ್ಯವಾದಗಳು. ದಯವಿಟ್ಟು ನಿಮ್ಮ ಬಗ್ಗೆ ಹೇಳಿ. ನಿಮ್ಮ ಸಾಲುಗಳ ನಿರೀಕ್ಷೆಯಲ್ಲಿ...

ತೇಜಸ್ವಿನಿ ಹೆಗಡೆ ಹೇಳಿದರು...

@ ಚೇವರ್ ಹಾಗೂ ಮಾಲಾ ಅವರೆ,

ತುಂಬಾ ಧನ್ಯವಾದಗಳು. ಬರುತ್ತಿರಿ.

@ ಏಕಾಂತ,

ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು. ನನ್ನ ಕುರಿತು ಹೇಳಿಕೊಳ್ಳುವಂತಹದ್ದೇನಿಲ್ಲ.. ‘ಮಾನಸ’ವೇ ಎಲ್ಲವುದನ್ನೂ ಹೇಳುತ್ತದೆ...ಅಲ್ಲವೇ? :-) ಬೇಟಿಕೊಡುತ್ತಿರಿ.

ಸುಧೇಶ್ ಶೆಟ್ಟಿ ಹೇಳಿದರು...

ತೇಜಸ್ವಿನಿಯವರೇ….
ಕವನ ಮಧುರವಾಗಿತ್ತು. ಪ್ರತಿಸಾಲುಗಳೂ ಸು೦ದರವಾಗಿವೆ.
’ಕಾಣ್ಕೆ’ ಎಲ್ಲಿ ಸಿಗುತ್ತದೆ?

ತೇಜಸ್ವಿನಿ ಹೆಗಡೆ ಹೇಳಿದರು...

ಸುಧೇಶ್ ಅವರೆ,

ಮೆಚ್ಚುಗೆಗೆ ತುಂಬಾ ಧನ್ಯವಾದಗಳು. ‘ಕಾಣ್ಕೆ’ ಸಧ್ಯ ಮಂಗಳೂರಿನ ಬುಕ್ ಹೌಸ್ ಗಳಲ್ಲಿ ಲಭ್ಯ. ಬೆಂಗಳೂರಿನ ಬುಕ್ ಹೌಸ್ ಗಳಿಗೆ ಇನ್ನಷ್ಟೆ ಕೊಡಬೇಕಾಗಿದೆ. ಬೇಕಿದ್ದರೆ ನನ್ನಲ್ಲೂ ಪ್ರತಿಗಳಿರುತ್ತವೆ.

kanasu ಹೇಳಿದರು...

tumbaa chennagide...blogna vinyasa kuda priyavagide ;)

ಸುಧೇಶ್ ಶೆಟ್ಟಿ ಹೇಳಿದರು...

ಮ೦ಗಳೂರಿನಲ್ಲಿ ಪ್ರತಿಗಳು ಸಿಗುವುದಾದರೆ ಪರವಾಗಿಲ್ಲ. ನಾನು ಶೀಘ್ರದಲ್ಲೇ ಅತ್ತ ಹೋಗುತ್ತಿದ್ದೇನೆ. ಸಿಗದಿದ್ದರೆ ನಿಮ್ಮಿ೦ದ ಕೇಳಿ ಪಡೆಯುತ್ತೇನೆ. ಮ೦ಗಳೂರಿನ ಪುಸ್ತಕದ೦ಗಡಿಯ ವಿಳಾಸ ಕೊಡುತ್ತೀರಾ? ಜ್ಯೋತಿಯ ಹತ್ತಿರವಾದರೆ ಇನ್ನು ಚೆನ್ನ.

ಚಿತ್ರಾ ಹೇಳಿದರು...

"ಭ್ರಮೆ - ನನ್ನದೆನ್ನುವುದೆಲ್ಲಾ
ಎಂದು ಹೇಳಿ ನಕ್ಕು, ಆ ನಗು
ನನ್ನೆದೆಯೊಳಗಿಳಿದು ತುಟಿಗೆಬರುವ ಮೊದಲೇ.... "

ಮನತಟ್ಟುವ ಸಾಲುಗಳು !
ಮಾನಸದಲ್ಲಿ ಮೂಡುವ ಹೊಸ ಭಾವಕ್ಕಾಗಿ ಕಾಯುತ್ತಿದ್ದೇನೆ .

ತೇಜಸ್ವಿನಿ ಹೆಗಡೆ ಹೇಳಿದರು...

ಕನಸು,

ತುಂಬಾ ಧನ್ಯವಾದಗಳು. ಬರುತ್ತಿರಿ.

ಸುಧೇಶ್ ಅವರೆ,

ನಿಮಗೆ ನನ್ನ ಮೈಲ್ ಸಿಕ್ಕಿರಬಹುದೆಂದೆಣಿಸುವೆ. ಧನ್ಯವಾದಗಳು.

ಚಿತ್ರಾ,

ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು. ನವೀನ ಭಾವಗಳು ಸಧ್ಯವೇ ಮಾನಸವನ್ನು ತುಂಬಲಿವೆ.