ಮಂಗಳವಾರ, ಜನವರಿ 15, 2013

ನನ್ನ ಪ್ರತಿಬಿಂಬದ ಮೊದಲ ಕವನ....


ಅದು ಆಗೋದೇ ಹಾಗೆ! ಬರೆಯೋ ಮನಸು ಬಂದಾಗ ಸಮಯವಿರುವುದಿಲ್ಲಾ.. ಇಲ್ಲಾ ಏನಾದರೂ ಅಡೆ ತಡೆ ಇದ್ದೇ ಇರುತ್ತದೆ... ಇನ್ನು ಸಮಯ ಸಿಕ್ಕಾಗ ಬರೆಯೋ ಹುಕ್ಕಿ ಇರೊಲ್ಲಾ.. ಯಾಕೋ ಏನೂ ಬೇಡವೆನ್ನೋ ಉದಾಸೀನತೆ ಆವರಿಸುತ್ತದೆ. ಅವತ್ತೊಂದು ದಿನ ಹೀಗೇ... ಬರೀಲೇ ಬೇಕು ಅಂತಾ ಕೂತಿದ್ದೆ ಅಷ್ಟೇ... ಅದಿತಿ ಬಂದವಳೇ "ಅಮ್ಮಾ.. ನೀ ಲೆಪ್‍ಟಾಪ್ ನಲ್ಲಿ ಎಂತ ಬರೀತಾ ಇರ್ತೆ ಹೇಳು? ನಾನೂ ಬರೀತೆ.." ಎಂದು ಪಕ್ಕದಲ್ಲಿ ಕೂತೇ ಬಿಟ್ಟಳು. ಸರಿ.. ಬರೆದಿದ್ದ ಯಾವುದೋ ಒಂದು ಕವಿತೆಯನ್ನು ತೋರಿಸಿ ಓದಿದೆ. ಅವಳಿಗೆಷ್ಟು ಅರ್ಥವಾಯಿತೋ ಗೊತ್ತಿಲ್ಲ.. ಆಮೇಲೆ ೫-೬ ಬಾರಿ ಕವಿತೆಗಳ ಬಗ್ಗೆ, ಹಾಡನ್ನು ಬರೆಯೋದರ ಬಗ್ಗೆ ಕೇಳಿದ್ದಳು. ನಾನೂ ಅವಳಿಗರ್ಥವಾಗೋ ರೀತಿ ಏನೋ ಒಂದು ಹೇಳಿದ್ದೆ. ಆದರೆ ಇಂದು ಹೀಗೆ ಬಳಿ ಬಂದವಳೇ.. "ಅಮ್ಮಾ ನೀ ಇವತ್ತು ನನ್ನ ಕವಿತೆ ಬರಿ.. ನಾ ಬಸ್ಸಲ್ಲಿ ಬರ್ತಾ ಒಂದು ಕವಿತೆ ಕಟ್ಟಿದ್ದೆ.. ನಾನೇ ಹಾಡ್ತೆ.." ಎಂದು ಹೇಳ್ತಾ ಕೂತಳು. ಹಾಡೋವಾಗ ಒಂದು ಸಾಹಿತ್ಯವಿದ್ದರೆ ಅದನ್ನೇ ಮತ್ತೆ ಅವಳಲ್ಲಿ ಹೇಳಿಸಿ ನಾನು ಇದ್ದದನ್ನು ಇದ್ದ ಹಾಗೇ ಬರೆದುಕೊಳ್ಳುವಾಗ ಸ್ವಲ್ಪ ಬೇರೆ ಆಗಿತ್ತು. ಹಾಡ್ತಾ ಹಾಡ್ತಾ ಅವಳೇ ಅವಳ ಸಾಹಿತ್ಯವನ್ನು ತಿದ್ದುತ್ತಿದ್ದಳು! ಹೀಗೇ ಅವಳು ಹೇಳಿದ್ದನ್ನೇ ಬರೆದುಕೊಂಡು ಅವಳೇ ರಾಗ ಹಾಕಿ ಹಾಡಿದ್ದನ್ನೂ ರೆಕಾರ್ಡ್ ಮಾಡಿದೆ. ರಾಗ, ಸಾಹಿತ್ಯ, ಸಂಗೀತ ಎಲ್ಲವೂ ಅದಿತಿ ಹೆಗಡೆಯದ್ದೇ! :) ಕೇಳುವಾಗ.. ಬರೆದುಕೊಳ್ಳುವಾಗ ನನ್ನೊಳಗೆ ಅರಿಯದ ಪುಳಕ, ಸಂತಸ, ಹೆಮ್ಮ! ಸ್ವತಃ ನಾನು ಮೊದಲ ಸಲ ಬರೆದಾಗಲೂ ನನ್ನೊಳಗೆ ಹೀಗೆಲ್ಲಾ ಅನುಭೂತಿ ಆಗಿತ್ತೋ ಇಲ್ಲವೋ! 

ಅದಿತಿಯ ಆ ಪುಟ್ಟ ಕವನ ಇಲ್ಲಿದೆ :-      

(ಅವಳೇನು ಹೇಳಿದಳೋ.. ಹಾಡಿದಳೋ ಅದನ್ನು ಹಾಗೇ ನಿಮ್ಮ ಮುಂದಿರಿಸಿದ್ದೇನೆ:))


ಕೃಷ್ಣ ಕೃಷ್ಣ ಕೊಳಲು ಹಿಡಿದ ಕೃಷ್ಣ
ಕೃಷ್ಣ ಕೃಷ್ಣ ಕೊಳಲು ಹಿಡ್ಕೊಂಡು ಹಾಡು ಹೇಳ್ತಾನೆ.. 
ಕೃಷ್ಣ ಬರೀ ಬೆಣ್ಣೆ ತಿನ್ನೋದೇಕೆ?
ಕೃಷ್ಣ ನೀನು ಚಂದಮಾಮ ಇದ್ದಲ್ಲಿ ಹೋಗು...
ಕೃಷ್ಣ ಕೃಷ್ಣ ನಿನ್ನ ನವಿಲು ಗರಿ ಚೊಲೋ ಇದೆ
ಕೃಷ್ಣ ಕೃಷ್ಣ ನೀನ್ಯಾಕೆ ನವಿಲುಗರಿ ಹಾಕ್ಕೊಂಡಿದೀಯಾ..
ಕೃಷ್ಣ ಪುಟ್ಟ ಮಗು ಆಗಿ ತೊಟ್ಟಿಲಲ್ಲಿ ಮಲಗಿದ್ದಾನೆ (೨ ಸಲ)
ಕೃಷ್ಣ ಯಾಕೆ ಮಗು ಆಗಿ ತೊಟ್ಟಿಲಲ್ಲಿದ್ದಾನೆ?
ಕೃಷ್ಣ ಬಲರಾಮ್ ಕೃಷ್ಣ ಬಲರಾಮ್ (೨ ಸಲ)
ಬಲರಾಮ್ ಕೃಷ್ಣ ಬಲರಾಮ್ ಕೃಷ್ಣ... (೨ ಸಲ)

-ಅದಿತಿ ಹೆಗಡೆ. 

(ಟಿಪ್ಪಣಿ :- ಚಂದಮಾಮ ಇದ್ದಲ್ಲೇ ಕೃಷ್ಣ ಯಾಕೆ ಹೋಗ್ಬೇಕು? ಎಂದು ನಾನು ಕೇಳಿದ್ದಕ್ಕೆ.. ಅವನು ಇರೋದೇ ಚಂದಮಾಮ ಇರೋ ಕಡೆ ಅಂತಪ್ಪಾ.... ಅಂದರೆ ಆಕಾಶದಲ್ಲಂತೆ...:) ಹಾಗೇ ಕಾರ್ಟೂನ್‍ನಲ್ಲಿ ನೋಡಿದ್ದಾಳಂತೆ ಕೃಷ್ಣ ಇದ್ದಲ್ಲಿ ಬಲರಾಮ್ ಇರ್ಲೇ ಬೇಕಂತೆ.. ಹಾಗಾಗಿ ಕೊನೆಯ ಎರಡು ಸಾಲುಗಳು! )

15 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

cute! :)
hugs to Aditi - the poetess!

sindhu

Sheela Nayak ಹೇಳಿದರು...

ಅದಿತಿ ಪುಟ್ಟಾ...
ಇಲ್ಲ್ ಬಾ...ನನ್ನ ತಬ್ಬಿ ಒಂದು ಸಿಹಿ ಮುತ್ತು ಕೊಡಂತೆ! ತುಂಬಾ ಚೆನ್ನಾಗಿದೆ ನಿನ್ನ ಕಾವ್ಯ! ಇನ್ನೂ ತುಂಬಾ ಬರೀಬೇಕು..ನಮಗೆಲ್ಲಾ ತೋರಿಸಬೇಕು ಆಯ್ತಾ!

ಹೌದು ತೇಜಸ್ವಿ,
ನಮ್ಮ ಮಗು ಬರೆದದ್ದು ನಮಗೆ ಮಹಾಕಾವ್ಯನೇ! ಆ ಪುಳಕ ನಾನೂ ಇಲ್ಲಿ ಅನುಭವಿಸಿದೆ..ನಾನು ಯಾವಾಗಲೂ ಹೇಳುವುದುಂಟು..ನನ್ನ ಮಕ್ಕಳೇ ನನ್ನ ಅತ್ಯುತ್ತಮ ಚಿತ್ರ!

Ashwini ಹೇಳಿದರು...

Wow.. choo cute :):) ... Great Aditi.. :)

Sheela Nayak ಹೇಳಿದರು...

ನಮ್ಮ ಪುಟಾಣಿ ಕವಯತ್ರಿಗೆ ಒಂದು tight hug. lots of love!
ತೇಜಸ್ವಿ, ನಿಮ್ಮ ಪುಳಕವನ್ನು ನಾನೂ ಅನುಭವಿಸಿದೆ. ನಿಮಗೂ hearty congratulations!

ಮನಸು ಹೇಳಿದರು...

ಅಲೇ ಮುದ್ದು ಅದಿತಿ ಏನು ಕಲ್ಪನೆನವ್ವಾ... ಕೂಸೆ ಹಿಂಗೆ ಬರಿತಾ ಇರು..

ಮನಸು ಹೇಳಿದರು...

ನಮ್ಮ ಮುದ್ದು ಕೂಸಿಗೆ ಪ್ರೀತಿಯ ಅಪ್ಪುಗೆ... ಕಲ್ಪನೆ ಚೆನ್ನಾಗಿದೆ ಹೀಗೆ ಮುಂದುವರಿಯಲಿ. ಬಂಗಾರಮುದ್ದು ಆಲ್ ದಿ ಬೆಸ್ಟ್ :)

ದಿವ್ಯಾ ಮಲ್ಯ ಕಾಮತ್ ಹೇಳಿದರು...

so sweet!! ನನಗೂ ಓದುತ್ತಾ ಹೋದಂತೆ ರೋಮಾಂಚನವಾಯಿತು :-) ತುಂಬಾ ಖುಷಿ ಕೂಡ.. ಇಬ್ಬರಿಗೂ ಅಭಿನಂದನೆಗಳು.

Anuradha ಹೇಳಿದರು...

ತುಂಬಾ ಚೆನ್ನಾಗಿದೆ ....ಅವಳ ಭಾವನೆಯಂತೆ ಕವನವೂ ಮೂಡಿ ಬಂದಿದೆ ...ಅದಿತಿ ಗೊಂದು ಪ್ರೀತಿಯ ಅಪ್ಪುಗೆ ...

venkat.bhats ಹೇಳಿದರು...

aha chanda baraddale...

sunaath ಹೇಳಿದರು...

ಎಂಥಾ ಸೊಗಸಾದ ಕಲ್ಪನೆ ಈ ಪುಟ್ಟ ಪೋರಿಯದು! ಅವಳಿಗೆ ನನ್ನ ಶರಣು!

Subrahmanya ಹೇಳಿದರು...

:-), nice

ಚುಕ್ಕಿಚಿತ್ತಾರ ಹೇಳಿದರು...

muddu... juttu kunisuttaa haadodannu kalpisikonde..:)

ಸುಧೇಶ್ ಶೆಟ್ಟಿ ಹೇಳಿದರು...

So nice :)

ಚಿತ್ರಾ ಹೇಳಿದರು...

ಮುದ್ದು ಪುಟ್ಟಿಯ ಮುದ್ದಾದ ಕವನ !
ನನ್ ಪರವಾಗಿನೂ ಒಂದು ಮುತ್ತು ಕೊಡು ಅದಿತಿಗೆ !

ಅನಾಮಧೇಯ ಹೇಳಿದರು...

so nice super re