ಸೋಮವಾರ, ಆಗಸ್ಟ್ 6, 2012

ಒಂದಿರುಳು ಕನಸಿನಲಿ...

ಬಿಟ್ಟು ಬಿಡು ಸಖ...
ಒಂದು ರಾತ್ರಿಯ ಸವಿಗನಸ
ನನಗಾಗಿ, ನನ್ನೊಳಗಿನ ಕನಸಿಗಾಗಿ...

ರೆಪ್ಪೆಗಳ ಮೇಲೆ ನಿನ್ನ
ಸವಿನೆನಪುಗಳ ಭಾರ ಬಿದ್ದು,
ಅರೆನಿದ್ರೆಗೆ ನಾ ಜಾರುವ ಮೊದಲೇ...
ಅರೆನಿಮೀಲಿತ ಕಣ್ಣಂಚಿಂದ ಒಳಜಾರಬೇಡ ಕಳ್ಳನಂತೇ...

ಗೋಲಿಗಳು ಸ್ಥಿತ್ಯಂತರಗೊಂಡು
ಸುಷುಪ್ತಿಯೊಳಗೂ ನನ್ನೆಚ್ಚರಿಸಿ,
ಕಚಗುಳಿಯಿಟ್ಟು, ನಿದ್ದೆಯನೇ ಹಗಲಾಗಿಸಿ,
ನನ್ನೊಳಗಿನ ಕನಸುಗಳ ಮಲಗಿಸಬೇಡ ಮಳ್ಳನಂತೇ...

ನಿನ್ನೊಳಗೆ ನಾನು, ನನ್ನೊಳಗೆ ನೀನು
ಎಲ್ಲವನೂ ಒಪ್ಪಿದೆ, ಅಪ್ಪಿದೆ.
ಎಲ್ಲೋ ಒಂದೆಡೆ ಸದಾ ಮಿಡಿವ ನನ್ನೊಳಗಿನ ’ನನ್ನ’
ನನಗಾಗಿ ಒಂದು ದಿನ ಕೊಟ್ಟು ಬಿಡು ಸಖ
ಬಿಟ್ಟು ಬಿಡು ಒಂದು ರಾತ್ರಿಯ
ನನ್ನೊಳಗಿನ ನನ್ನ ಕನಸಿಗಾಗಿ....

--ತೇಜಸ್ವಿನಿ ಹೆಗಡೆ.

5 ಕಾಮೆಂಟ್‌ಗಳು:

sunaath ಹೇಳಿದರು...

ದಂಪತಿಗಳಿಗೆ ಭಿನ್ನ ವ್ಯಕ್ತಿತ್ವವಿರುತ್ತದೆ ಎನ್ನುವುದನ್ನು ಅರಿತು, ಮನ್ನಿಸಿದಾಗಲೇ ದಾಂಪತ್ಯದಲ್ಲಿ ಸಾಮರಸ್ಯ ಇರುವುದು ಎನ್ನುವ ಭಾವವನ್ನು ತುಂಬ ಚೆನ್ನಾಗಿ ಕವನಕ್ಕೆ ಅಳವಡಿಸಿದ್ದೀರಿ.

ದಿನಕರ ಮೊಗೇರ ಹೇಳಿದರು...

innondu bhaavaviruva kavana....
chennaagide....

ಚುಕ್ಕಿಚಿತ್ತಾರ ಹೇಳಿದರು...

ಒಳ್ಳೆಯ ಭಾವ.. :)

ಅಮರೇಶ ಲಿಂಗಸ್ಗೂರ್ ಹೇಳಿದರು...

first title nodida thakshana ond kshana C Ashwath avru nenpadru...

Unknown ಹೇಳಿದರು...

ಚಂದ ಪೋಣಿಸಿದ್ದೀರಿ ಪದಗಳನ್ನು, ಅದರೊಟ್ಟಿಗೆ ಆ ಭಾವನೆಯನ್ನು...ಮೊದಲನೋಟಕ್ಕೆ ಇಷ್ಟವಾಯ್ತು!