ಶುಕ್ರವಾರ 24 ಜೂನ್ 2011

ತುಣುಕುಗಳು...

ಆಸೆ

ಮತ್ತೆ ಮತ್ತೆ ದಡವ ಬಡಿದು
ನುಗ್ಗಿ ನುಗ್ಗಿ ಸುಸ್ತಾಗಿ, ಸೋತರೂ
ಸೋಲೊಪ್ಪದೇ, ಹೊಸ ಹುರುಪಿಂದ
ಮತ್ತೆ ಮತ್ತೆ ತೆರಳಿ, ಹೊರಳಿ
ಮರಳುವ ಮರುಳು ತೆರೆಗಳಂತೆ


ನಿರಾಸೆ

ನಾಜೂಕಾಗಿ ನೇಯ್ದ ನುಣ್ಣನೆಯ
ಗೂಡೊಳಗೆ ಮೊಟ್ಟೆಯಿಟ್ಟು
ಹಗಲಿರುಳು ಕಾವುಕೊಟ್ಟು
ಇನ್ನೇನು ಮರಿ ಹೊರಬರುವಾಗ
ಮೊಟ್ಟೆ ಹಾವಿನ ಹೊಟ್ಟೆಸೇರಿದಂತೆ

ನಿರೀಕ್ಷೆ

ಅಂತಿಮ ಪರೀಕ್ಷೆಯ
ಕೊನೆಯ ಪ್ರಶ್ನೆಗೆ ಉತ್ತರಿಸಿದವ
ಹೊರಬಂದು, ಬರೆದ ಉತ್ತರ
ಸರಿಯೋ ತಪ್ಪೋ ಎಂದು ಚಡಪಡಿಸಿ
ಪುಸ್ತಕದ ಪ್ರತಿ ಹಾಳೆಯನ್ನೂ
ತೆರೆತೆರೆದು ಹುಡುಕಾಡಿದಂತೆ


ಕೆಲವು ಹಳೆಯ ತುಣುಕುಗಳು....

-ತೇಜಸ್ವಿನಿ ಹೆಗಡೆ.

15 comments:

  1. ತುಣುಕುಗಳು ಇಷ್ಟವಾದವು ಅಕ್ಕ..

    ಪ್ರತ್ಯುತ್ತರಅಳಿಸು
  2. ಚೆನ್ನಾಗಿವೆ :)
    ತುಣುಕುಗಳನ್ನು ಸೇರಿಸುತ್ತಾ ಸೇರಿಸುತ್ತಾ ಹೋದರೆ ಚಿತ್ರವಾಗಿಬಿದುತ್ತದಲ್ಲಾ, ಅದೇ ಒಂದು ನಿರಂತರ ಅಚ್ಚರಿ.

    ಪ್ರತ್ಯುತ್ತರಅಳಿಸು
  3. ಹೊಸ ರೀತಿಯ ತುಣುಕುಗಳು ಹೊಸದೊಂದು ಆಹ್ಲಾದವನ್ನು ನೀಡುತ್ತಿವೆ.

    ಪ್ರತ್ಯುತ್ತರಅಳಿಸು
  4. tumba artha poornavagive..e thara tunukugalu nange tumba ishta..:)

    ಪ್ರತ್ಯುತ್ತರಅಳಿಸು
  5. ಎಲ್ಲಾ ತುಣುಕುಗಳೂ ನೈಸ್ ಅದ್ರಲ್ಲೂ
    ಕಡೆಯ ತುಣುಕು...ನಮ್ಮೆಲ್ಲರ ಅನುಭವದ್ದು....

    ಪ್ರತ್ಯುತ್ತರಅಳಿಸು
  6. ತುಂಬಾ ಚೆನ್ನಾಗಿವೆ ಮಾನಸ ತುಣುಕುಗಳು.. ಇಷ್ಟವಾದವು

    ಪ್ರತ್ಯುತ್ತರಅಳಿಸು
  7. ತುಂಬಾ ಚೆನ್ನಾಗಿವೆ ಮಾನಸದ ಮನಸಿನ ತುಣುಕುಗಳು.. ಇಷ್ಟವಾದವು (ಕ್ಷಮಿಸಿ ಮೊದಲನೆ ಸರಿ ತಪ್ಪು ಬರೆದಿದ್ದೆ)

    ಪ್ರತ್ಯುತ್ತರಅಳಿಸು
  8. ತುಣುಕಗಳ ತಿಣುಕಾಟವನ್ನು ಮೆಚ್ಚಿ ಸ್ಪಂದಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು. :)

    -ತೇಜಸ್ವಿನಿ.

    ಪ್ರತ್ಯುತ್ತರಅಳಿಸು
  9. ನಿಮ್ಮ ವ್ಯಾಖ್ಯಾನ ಚೆನ್ನಾಗಿದೆ ಅಕ್ಕ...redefine ಮಾಡಿದಂತಿದೆ :)

    ಪ್ರತ್ಯುತ್ತರಅಳಿಸು
  10. "ಆಸೆ"tumbaa ista aatu.
    "ಮತ್ತೆ ಮತ್ತೆ ದಡವ ಬಡಿದು
    ನುಗ್ಗಿ ನುಗ್ಗಿ ಸುಸ್ತಾಗಿ, ಸೋತರೂ
    ಸೋಲೊಪ್ಪದೇ, ಹೊಸ ಹುರುಪಿಂದ
    ಮತ್ತೆ ಮತ್ತೆ ತೆರಳಿ, ಹೊರಳಿ
    ಮರಳುವ ಮರುಳು ತೆರೆಗಳಂತೆ" odidaga onnamni sanchalana feel aagtu.

    ಪ್ರತ್ಯುತ್ತರಅಳಿಸು