ಸೋಮವಾರ, ಮೇ 16, 2011

ಗ್ರೀಷ್ಮದ ಹೊಸ್ತಿಲಲ್ಲಿ...

ನೀಲ ಮುಗಿಲ ತುಂಬ ತುಂಬೆ
ದಟ್ಟ ಕಪ್ಪು ಮೋಡ
ಸುರಿಯತೊಡಗಿ ಮೈಯ ತುಂಬ
ಬೆವರಿನ ಹನಿ ನೋಡ

ಗಾಳಿಯೊಳಗು ಹಬೆಯ ಉರಿ
ಉರಿದುರಿದು ಬೆಂದ ಭುವಿ
ಬಾಯ್ತೆರೆದು ಕುಳಿತ ಕಪ್ಪೆ
ಚಿಪ್ಪಿಗೀಗ ಮುತ್ತ ಚಿಂತೆ

ಮಿಂಚು ಬಳಸಿ ಬಂದ ಗುಡುಗು
ಜೊತೆಗೆ ಬರಲು ಗಾಳಿ ಜೋರು
ಸ್ವೇದಬಿಂದುಗಳೆಲ್ಲಾ ಮಾಯ
ನೆಲದ ತುಂಬ ಮಳೆಯ ಮಾಲೆ

ಎಡ ಬಲ ಬಾಗುವ ಗಿಡಗಂಟೆ
ಜಾರಿ ತೂರಿ ಹಾರುವ ತರಗೆಲೆ
ನೀರಕುಡಿದು ತಂಪಾದ ಧರೆ
ವಸಂತ ಋತುವಿಗಿನ್ನು ತೆರೆ

ಮೊದಲ ಹನಿಯ ಸ್ಪರ್ಶದಿಂದ
ಮೈ ಮನಗಳಲ್ಲಿ ಮಿಡಿದ ಸ್ಪಂದ
ಕಣ್ಮುಚ್ಚಿ ಮೊಗವ ಮೇಲೆ ನೋಡೆ
ಮನದ ತುಂಬ ಸ್ವಾತಿ ಮುತ್ತು


- ತೇಜಸ್ವಿನಿ ಹೆಗಡೆ

12 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

very nice one! jodu arthada shabd saalu khushiyaayitu
baytereda kappa mattu kappe chippu -maleya muttige

ಕವಿತಾ ಹೇಳಿದರು...

Nange 'ಗ್ರೀಷ್ಮ' tumba ishta..Nimma kavana kooda ishtavaayitu..

ಮನಸು ಹೇಳಿದರು...

tumba chennagide...

ಕ್ಷಣ... ಚಿಂತನೆ... bhchandru ಹೇಳಿದರು...

madam,
very nice poem...

ಜಲನಯನ ಹೇಳಿದರು...

ಹೂಂ...ಹೌದು ...ಗ್ರೀಷ್ಮದ ಹೊಸ್ತಿಲ ಗಾಳಿಯೇ ಒಮ್ದು ತೆರನಾದ್ದು...
ನೀರಕುಡಿದು ತಂಪಾದ ಧರೆ
ವಸಂತ ಋತುವಿಗಿನ್ನು ತೆರೆ
ಈ ಸಾಲುಗಳು ಇಷ್ಟವಾದವು ... ಮಳೆ-ಇಳೆಯ ಬಾಂಧವ್ಯ ಚನ್ನಾಗಿ ಮೂಡಿದೆ..

ಸುಧೇಶ್ ಶೆಟ್ಟಿ ಹೇಳಿದರು...

E kavana manasige thampereyitu... maLeya kanavarike innu shuru :)

modhala saalinalli 'tumbe' padha baLake sariya?

sunaath ಹೇಳಿದರು...

ಮಳೆಗಾಗಿ ಕಾಯುವ ಭಾವಪೂರ್ಣ ಕವನ!
‘ಮನದ ತುಂಬ ಸ್ವಾತಿಮುತ್ತು’! ವಾಹ್!

nsru ಹೇಳಿದರು...

'ಗ್ರೀಷ್ಮ' ಋತುವಿನ ಆರಂಭದ ಚಿತ್ರಣ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಮುಂಗಾರು ಮಳೆಯನ್ನು ಧರೆ ತುಂಬು ಹೃದಯದಿಂದ ಸ್ವಾಗತಿದಂತಿದೆ..

"ಕಣ್ಮುಚ್ಚಿ ಮೊಗವ ಮೇಲೆ ನೋಡೆ
ಮನದ ತುಂಬ ಸ್ವಾತಿ ಮುತ್ತು"..ಈ ಸಾಲುಗಳು simply sooper :)

shivu.k ಹೇಳಿದರು...

ಮೇಡಮ್,
ಒಂದು ಋತುವಿನ ಆರಂಭವನ್ನು ಎಷ್ಟು ಚೆನ್ನಾಗಿ ಕವನದ ಮೂಲಕ ವರ್ಣಿಸಿದ್ದೀರಿ..ಮಳೆಯ ಬಗ್ಗೆ ವರ್ಣನೆ ಚೆನ್ನಾಗಿದೆ.

Bilimale ಹೇಳಿದರು...

I enjoyed this at burning Delhi

ತೇಜಸ್ವಿನಿ ಹೆಗಡೆ ಹೇಳಿದರು...

ಕವಿತೆಯನ್ನು ಮೆಚ್ಚಿ ಸ್ಪಂದಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು.

@ಸುಧೇಶ್,

‘ತುಂಬೆ’ = ತುಂಬಿದಾಗ ಎಂಬರ್ಥದಲ್ಲಿ ಬಳಸುತ್ತಾರೆ.... ಈ ಪದದ ಬಳಕೆ ಇದೆ. :)

ಧನ್ಯವಾದ.

.....
ಆದರಗಳೊಂದಿಗೆ,
ತೇಜಸ್ವಿನಿ ಹೆಗಡೆ.

manadandana ಹೇಳಿದರು...

"ಎಡ ಬಲ ಬಾಗುವ ಗಿಡಗಂಟೆ
ಜಾರಿ ತೂರಿ ಹಾರುವ ತರಗೆಲೆ
ನೀರಕುಡಿದು ತಂಪಾದ ಧರೆ
ವಸಂತ ಋತುವಿಗಿನ್ನು ತೆರೆ"
ee salugalu tumba hidisidavu.
idi kavanavu khushi needide.

_anushree hegde