ಬುಧವಾರ, ಅಕ್ಟೋಬರ್ 6, 2010

ಪ್ರಾರ್ಥನೆ


Courtesy - www.downtownstudentministries.org

ಇಷ್ಟು ಶಕ್ತಿಯ ಕೊಡು ಭಗವಂತ
ಮಾನಸಿಕ ಶಕ್ತಿ ದುರ್ಬಲವಾಗದಿರಲಿ
ಒಳ್ಳೆಯ ದಾರಿಯಲ್ಲಿ ಸಾಗುತಿಹ ನಮ್ಮಿಂದ
ತಪ್ಪಿಯೂ ಯಾವ ತಪ್ಪೂ ಉಂಟಾಗದಿರಲಿ.

ದೂರವಾಗಿಸಿ ಅಜ್ಞಾನದ ಕತ್ತಲ, ಜ್ಞಾನದ ಬೆಳಕನು ನೀಡು
ಎಲ್ಲಾ ಕೆಡುಕಿಂದ ಬದುಕಿರುವ ನಮಗೆ, ಸಿಕ್ಕಷ್ಟೇ ಸರಿ ಉತ್ತಮ ಬದುಕ ನೀಡು
ಯಾರ ಕುರಿತೂ ಯಾರಿಗೂ ದ್ವೇಷವುಂಟಾಗದಿರಲಿ, ಹಗೆಯ ಭಾವ ಮನದೊಳು ಮನೆಮಾಡದಿರಲಿ
ಒಳ್ಳೆಯ ದಾರಿಯಲ್ಲಿ ಸಾಗುತಿಹ ನಮ್ಮಿಂದ
ತಪ್ಪಿಯೂ ಯಾವ ತಪ್ಪೂ ಉಂಟಾಗದಿರಲಿ.

ನಮಗೇನು ದೊರಕಿದೆ ಎಂದು ನಾವು ಯೋಚಿಸದೇ, ನಾವೇನು ಅರ್ಪಿಸಿದ್ದೇವೆಂದು ಯೋಚಿಸುವ
ಎಲ್ಲರಿಗೆ ಹಂಚುತ ಸಂತಸದ ಹೂವುಗಳ, ಎಲ್ಲರ ಜೀವನ ಮಧುವನವಾಗುಸುವ
ನಿನ್ನ ಕರುಣಾರಸವನು ನೀ ಹರಿಸಿ, ಪಾವನಗೊಳಿಸು ಮನದ ಪ್ರತಿ ಕೋಣೆಯ
ಒಳ್ಳೆಯ ದಾರಿಯಲ್ಲಿ ಸಾಗುತಿಹ ನಮ್ಮಿಂದ
ತಪ್ಪಿಯೂ ಯಾವ ತಪ್ಪೂ ಉಂಟಾಗದಿರಲಿ
ಇಷ್ಟು ಶಕ್ತಿಯ ಕೊಡು ಭಗವಂತ
ಮಾನಸಿಕ ಶಕ್ತಿ ದುರ್ಬಲವಾಗದಿರಲಿ
 

[ಇದು ನಾನು ಸದಾ ಗುನುಗುವ ನನ್ನ ಬಹು ಮೆಚ್ಚಿನ ಹಾಡುಗಳಲ್ಲೊಂದು. ಹಿಂದಿ ಚಲನಚಿತ್ರದ ಜನಪ್ರಿಯ ಹಾಡೊಂದರ ಕನ್ನಡಾನುವಾದವಿದು. ನನ್ನ ಮೊದಲ ಪ್ರಯತ್ನ. ತಪ್ಪಿರಬಹುದು. ಇದ್ದಲ್ಲಿ ತಿದ್ದಬೇಕಾಗಿ ವಿನಂತಿ. ಹಾಗೇ ಇದು ಯಾವ ಚಿತ್ರದ ಯಾವ ಹಾಡೆನ್ನುವುದನ್ನು ನೀವೇ ಕಂಡುಹಿಡಿದುಕೊಳ್ಳಬೇಕು :) ಈ ಹಿಂದಿ ಹಾಡು ಬೇಕಿದ್ದಲ್ಲಿ (mp3 format) ತಿಳಿಸಿ. ಲಿಂಕ್ ಮೈಲ್ ಮಾಡುವೆ..]

-ತೇಜಸ್ವಿನಿ.

18 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಪರವಾಗಿಲ್ಲ.

ಸೀತಾರಾಮ. ಕೆ. / SITARAM.K ಹೇಳಿದರು...

itani shakti hame dena dataa
man ka viswas Kamzor ho naa
ham chale
ಇದೇ ಅಲ್ಲವೇ ಹಾಡು. ಚೆಂದದ ಅನುವಾದ. ಇದು ನನ್ನ ಇಷ್ಟದ ಹಾಡು ಸಹಾ...
Link :http://www.youtube.com/watch?v=-w_P5Pr6eEQ

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ,
ಪುಟಾಣಿಯ ಚಿತ್ರದೊಂದಿಗೆ ಪ್ರಾರ್ಥನೆ ತುಂಬಾ ಚೆನ್ನಾಗಿದೆ. ಕನ್ನಡಾನುವಾದವೂ ಸೊಗಸಾಗಿದೆ.

ಸಂದೀಪ್ ಕಾಮತ್ ಹೇಳಿದರು...

ನಿಜಕ್ಕೂ ತುಂಬಾ ಅದ್ಭುತವಾದ ಪ್ರಾರ್ಥನೆ ಹಾಡು ಅದು.

sunaath ಹೇಳಿದರು...

ಇದು ‘ಗುಡ್ಡಿ’ ಎನ್ನುವ ಹಿಂದೀ ಚಲನಚಿತ್ರದ ಗೀತೆಯಲ್ಲವೆ?(ವರ್ಷ: ೧೯೭೪?)
"ಹಮ್ ಕೊ ಮನಕೀ ಶಕ್ತಿ ದೇನಾ....."
ಜಯಾ ಭಾದುರಿ ಈ ಗೀತೆಯ ದೃಶ್ಯದಲ್ಲಿ ಶಾಲಾ ವಿದ್ಯಾರ್ಥಿನಿಯಾಗಿ ಅಭಿನಯಿಸಿದ್ದಾಳೆ.
ನಿಮ್ಮ ಅನುವಾದ ಸಶಕ್ತವಾಗಿದೆ. Congrats.

ಸುಧೇಶ್ ಶೆಟ್ಟಿ ಹೇಳಿದರು...

chennagidhe praarthane.... hindhi ashtondhu artha aagalla :P

Subrahmanya ಹೇಳಿದರು...

ಗೊತ್ತಿಲ್ಲ. ಅನುವಾದವೆಂದೇನೂ ನನಗೆ ಅನಿಸಲಿಲ್ಲ, ನಿಮ್ಮದೇ ಕವನವೆನ್ನಿಸಿತು. ಪ್ರಾರ್ಥನೆ ದೇವರಿಗೆ ತಲುಪಿ ಒಳ್ಳೆಯದಾಗಲೆಂದು ನಿಮ್ಮೊಡನೆ ನಾನೂ ಪ್ರಾರ್ಥಿಸುತ್ತೇನೆ.

PARAANJAPE K.N. ಹೇಳಿದರು...

ನನ್ನ ಪ್ರಕಾರ ಇದು ಅಂಕುಶ್ ಚಿತ್ರದ ಹಾಡು. ಅಲ್ಲವೇ? ಅನುವಾದ ಚೆನ್ನಾಗಿದೆ.

ತೇಜಸ್ವಿನಿ ಹೆಗಡೆ ಹೇಳಿದರು...

@ಅನಾಮಧೇಯ,
ನಿಮ್ಮ ಹೆಸರನ್ನೂ ಹಾಕಿದ್ದರೆ ಪರವಾಗಿರಲಿಲ್ಲ. ಧನ್ಯವಾದಗಳು. (ಹೆಸರಿಲ್ಲದ ಕಮೆಂಟ್‌ಗಳನ್ನು ಇನ್ನು ಮುಂದೆ ಪ್ರಕಟಿಸಬಾರದೆಂದು ನಿರ್ಧರಿಸುವೆ. ದಯವಿಟ್ಟು ಸಹಕರಿಸಿ :))

@ಸೀತಾರಾಂ ಸರ್,

ಹೌದು ಇದು ಅಂಕುಶ್ ಚಿತ್ರದ ಇತನಿ ಶಕ್ತಿ ಹಮೆ ದೇನಾ ದಾತಾ.. ಹಾಡಿನ ಅನುವಾದ. ತುಂಬಾ ಸುಶ್ರಾವ್ಯವಾದ ಹಾಡು. ಕೇಳಿದಷ್ಟೂ ಕೇಳಬೇಕೆನಿಸುತ್ತದೆ. ಕೇಳುತ್ತಿರುವಂತೇ ಮನಸೊಳಗೆ ಶಾಂತಿ ತುಂಬುವ ಅನುಭವವಾಗುವುದು. ಇದೇ ರೀತಿಯ ಹಾಡು ಕಾಕಾ ಅವರು ಹೇಳಿದ್ದೂ ಕೂಡ. ಕನ್ನಡದಲ್ಲಿ ಜಿ.ಎಸ್.ಎಸ್. ಅವರ "ಶಕ್ತಿಯ ಕೊಡು ಹೇ ಪ್ರಭು" ಕವನವೂ ತುಂಬಾ ಚೆನ್ನಾಗಿದೆ. ಇದರ ಬಗ್ಗೆ ಮತ್ತೆ ಬರೆಯುವೆ.
ಧನ್ಯವಾದಗಳು.

@ಚಂದ್ರು ಅವರೆ,
ತುಂಬಾ ಧನ್ಯವಾದಗಳು. ಅನುವಾದ ಅಷ್ಟೊಂದು ಸಮರ್ಪಕವಾಗಿ ಬರಲಿಲ್ಲ. ಹಿಂದಿಯ ಪದಗಳು ಕನ್ನಡಕ್ಕಿಂತ ಭಿನವಾಗುತ್ತವೆ...ಕೆಲವೊಂದು ಅರ್ಥಗಳನ್ನು ಯಥಾವತ್ತಾಗಿ ಹಾಕಲು ಆಗದು. ಧನ್ಯವಾದಗಳು.

@ಸಂದೀಪ್ ಕಾಮತ್,
ಹೌದು. ತುಂಬಾ ಸುಂದರ ಹಾಗೂ ಅರ್ಥವತ್ತಾದ ಪ್ರಾರ್ಥನೆ ಇದು! (ಅರ್ಥವಾಗುವವರಿಗೆ:))


@ಕಾಕಾ,
ಇದು ಗುಡ್ಡಿ ಚಿತ್ರಗೀತೆಯಲ್ಲ....ಇದು ಅಂಕುಶ್ ಚಿತ್ರದ ಗೀತೆ (ಸೀತಾರಾಂ ಅವರು ಹೇಳಿದ್ದಾರೆ ನೋಡಿ..). ಆದರೆ ನೀವಂದಿದ್ದು ನಿಜ... ಗುಡ್ಡಿಯ ಈ ಗೀತೆಯೂ ತುಂಬಾ ಚೆನ್ನಾಗಿದೆ. ಅದನ್ನೂ ಡೌನ್‌ಲೋಡ್ ಮಾಡುವೆ ಈಗ :)
ಧನ್ಯವಾದಗಳು.

@ಸುಧೇಶ್,

ಇನ್ಮುಂದೆ ನಮಗಿಂತ ಚೆನ್ನಾಗಿ ಹಿಂದಿ ನಿಮಗೆ ಬರಬೇಕು ನೋಡಿ :) ಅಲ್ಲಿದ್ದ ಮೇಲೆ ಅಲ್ಲಿಯ ಭಾಷೆ ಬಹು ಬೇಗ ಬರುವುದು. ಹಿಂದಿ ಅರ್ಥವಾಗದವರಿಗೇ ಕನ್ನಡಾನುವಾದ ಮಾಡಿದ್ದು :)
ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

@ಸುಬ್ರಹ್ಮಣ್ಯ್ ಅವರೆ,

ಇದು ನನ್ನ ಕವನವಲ್ಲ. ಕೇವಲ ಅನುವಾದ ಅಷ್ಟೇ. ನನ್ನ ಪ್ರಾರ್ಥನೆಯೂ ಇದೇ ಆಗಿದೆ. ಧನ್ಯವಾದಗಳು.

@ಪರಾಂಜಪೆ ಅವರೆ,

ಹೌದು ಇದು ಅಂಕುಶ್ ಚಲನಚಿತ್ರದ "ಇತನಿ ಶಕ್ತಿ ಹಮೆ ದೇನಾ ದಾತಾ.." ಹಾಡಿನ ಅನುವಾದ. ಧನ್ಯವಾದ.

ಸುಮ ಹೇಳಿದರು...

ಈ ಹಾಡು ನನಗೂ ಇಷ್ಟವಾಗುತ್ತದೆ. ಇದೇ ತರಹದ ಹಾಡು ಕನ್ನಡದಲ್ಲೊಂದಿದೆ. "ತಂದೆ ನೀ ನೀಡು ಬಾ ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ ಬಾಳಾ ಇರುಳಿಗೆ "
ಯಾವ ಚಿತ್ರದ್ದೆಂದು ನನಗೆ ನೆನಪಿಲ್ಲ ..ಬಹುಶಃ ಅಂಕುಶ್ ಚಿತ್ರದ ಕನ್ನಡ ರೀಮೇಕ್ ಆಗಿರಬಹುದು.

ಅನಾಮಧೇಯ ಹೇಳಿದರು...

ನಿಜಕ್ಕೂ ಸ್ಪೂರ್ತಿ ತುಂಬುವ ಗೀತೆ.
"ತಂದೆ ನೀ ನೀಡು ಬಾ ......" ಹಾಡು ಕನ್ನಡದ "ರಾವಣ ರಾಜ್ಯ" ಚಿತ್ರದ್ದು.
ಹೌದು, ಇದು ಹಿಂದಿಯ "ಅಂಕುಶ್" ಚಿತ್ರದ ರಿಮೇಕ್.

ಮೋಹನ ಬಿಸಲೇಹಳ್ಳಿ

ಸಾಗರದಾಚೆಯ ಇಂಚರ ಹೇಳಿದರು...

ಹಿಂದಿಯ ''ಏ ಮಾಲೀಕ್ ತೆರೆ ಬಂಧೆ ಹಮ್'' ನೆನಪಾಯಿತು

ಭಗವಂತನ ಲೀಲೆ ಅಪಾರ

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇದಮ್,
ಇದರ ಮೊದಲ ಸಾಲು ಓದಿದ ಕೂಡಲೇ ನೆನಪಾದ ಹಾಡು ...... " ಇತನಿ ಶಕ್ತಿ ಹಮೇ ದೇನ ದಾತಾ... ಮನ್ಕಿ ವಿಶ್ವಾಸ ಕಮಜೊರ್ ಹೋನ...." ತುಂಬಾ ಚೆನ್ನಾಗಿದೆ ಅನುವಾದ.... ನನ್ನ ಮೊಬೈಲ್ ನಲ್ಲಿ ಆಗಾಗ ಕೆಳುತ್ತಾ ಇರುತ್ತೇನೆ ಈ ಹಾಡನ್ನ..... ನನಗೂ ಈ ಹಾಡು ಖುಶಿ ಮತ್ತು ಉತ್ಶಾಹ ತುಂಬತ್ತೆ....

ಚಿತ್ರಾ ಹೇಳಿದರು...

ತೇಜೂ,

ಮೊದಲನೇ ಸಾಲಿಗೆ ಹಾಡು ನೆನಪಾಯ್ತು. ತುಂಬಾ ಚಂದದ ಹಾಡು ಅದು. ಮನಸ್ಸಿಗೆ ಒಂಥರಾ ಧೈರ್ಯ ತುಂಬುತ್ತದೆ . ಅನುವಾದ ಎನಿಸುವುದಿಲ್ಲ ನಿನ್ನ ಕವನ.
ನಿನ್ನದೇ ಬರಹದ ಛಾಯೆ ಗಾಢವಾಗಿದೆ.

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಇದರ ಹಿಂದಿ ಹಾಡು ನನಗೆ ಗೊತ್ತಿಲ್ಲ. ಆದ್ರೆ ಕನ್ನಡಕ್ಕೆ ಚೆನ್ನಾಗಿ ಅನುವಾದ ಮಾಡಿದ್ದೀರಿ..ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.

ಮನಸಿನಮನೆಯವನು ಹೇಳಿದರು...

ಉತ್ತಮವಾದ ಪ್ರಾರ್ಥನೆ..
ಪುಟಾಣಿ ಫೋಟೋ ಮುದ್ದುಮುದ್ದಾಗಿದೆ..

Ashok.V.Shetty, Kodlady ಹೇಳಿದರು...

Akka,

ee haadu one of my fav....nange ee haadu tumbaa ishta...tumbaa sundaravaagi anuvaadisiddiri, Dhanyavadagalu...