ಗುರುವಾರ, ಮೇ 27, 2010

ಅರ್ಥವಾಗಿಯೂ ಅರ್ಥವಾಗದಿರುವ ಪ್ರಶ್ನೋತ್ತರಗಳಿವು....


ಕೆಲವು ಪ್ರಶ್ನೆಗಳು ಸದಾ ಎಚ್ಚರದಿಂದಿರುತ್ತವೆ
ಆದರೆ ಅವುಗಳ ಉತ್ತರಗಳೆಲ್ಲಾ ಸದಾ ನಿದ್ದೆಯಲ್ಲೇ...
ಒಮ್ಮೊಮ್ಮೆ, ಒಂದೊಮ್ಮೆ ಒಂದುತ್ತರ ಎಚ್ಚೆತ್ತರೂ,
ಆ ಉತ್ತರದ ಪ್ರಶ್ನೆ ಮಾತ್ರ ಮರೆತೇಹೋಗಿರುತ್ತದೆ!

ಕೆಲವೊಮ್ಮೆ ಪ್ರಶ್ನೆಗಳಿಗೆ, ಪ್ರಶ್ನೆಗಳೇ ಉತ್ತರವಾಗಿದ್ದರೆ,
ಮಗದೊಮ್ಮೆ ಉತ್ತರವೇ ಒಂದು ಪ್ರಶ್ನೆಯಾಗಿಬಿಡುತ್ತದೆ
ಕಾಡುವ ಪ್ರಶ್ನೆಗಳಿಗೆ ಒಂದಂತ್ಯವನ್ನು ಕಾಣಿಸ ಹೊರಟರೆ,
ಅವುಗಳುತ್ತರವೇ ಮೇಲೆದ್ದು ಬುಸುಗುಡತೊಡಗುತ್ತದೆ...

ಪ್ರಶ್ನೆಗಳೆಚ್ಚೆತ್ತೇ ಇರಲಿ, ಅವುಗಳುತ್ತರ ನಿದ್ದೆಯೊಳಗೇ ಬಿದ್ದಿರಲಿ...
ನನ್ನೊಳಗಿನ ನೀನು, ನಿನ್ನೊಳಗಿನ ನಾನು ಮಾತ್ರ
ಒಬ್ಬರಿಗೊಬ್ಬರು ಪ್ರಶ್ನೆಯಾಗಿ ಕಾಡದಿದ್ದರೆ ಸಾಕು!!!!

ಚಿತ್ರಕೃಪೆ [https://www.boucheron.com/]


-ತೇಜಸ್ವಿನಿ ಹೆಗಡೆ

24 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಪ್ರಶ್ನೇಗಳ ಗೋಜಲೇ ಹಾಗೇ!
ಉತ್ತರ ದೊರೆತ೦ತೆ ಮತ್ತೊ೦ದು ಧುತ್ತೆ೦ದು ನಿಲುತ್ತದೆ!
ಒ೦ದರ ಹಿ೦ದೊ೦ದು, ಒ೦ದಕ್ಕೊ೦ದು ಸರಪಣಿಯ೦ತೆ.....
ಉತ್ತರ ಹುಡುಕುತ್ತಾ ಕಳೆವ ಬದುಕ ಸ೦ತೆ
ಆದರೂ ಇದರಲ್ಲಿ ನಾವು ಕಳೆದು ಪ್ರಶ್ನೇಯಾಗಬಾರದಲ್ಲವೇ!!!! ಚೆ೦ದದ ಕವನ ಓದಿ ಖುಷಿಯಾಯಿತು.

PARAANJAPE K.N. ಹೇಳಿದರು...

ಕೊನೆಯ ಮೂರು ಸಾಲುಗಳು ಹೊಮ್ಮಿಸುವ ಭಾವ ಪ್ರಶ್ನಾತೀತ

sunaath ಹೇಳಿದರು...

ವಾಹ್! ನಿಮ್ಮ ಪ್ರಶ್ನೋತ್ತರ ಒಡಪಿನ ಕವನವು ಎಲ್ಲಿ ಪ್ರಶ್ನೆಯೇ ಆಗುವದೋ ಎಂದುಕೊಂಡಿದ್ದೆ. ಕೊನೆಗೆ ಉತ್ತರವೆಲ್ಲಿದೆ ಎನ್ನುವದನ್ನೂ ಹೇಳಿದ್ದೀರಲ್ಲ!

Dr.D.T.Krishna Murthy. ಹೇಳಿದರು...

ಪ್ರಶ್ನೆಗಳು ನಿಂತಾಗ ,ಉತ್ತರಗಳು ಕಾಣುತ್ತವೆ!

ದಿನಕರ ಮೊಗೇರ ಹೇಳಿದರು...

uttara sigada naanu, uttara sigada neenu..... soopar saalugalu madam,
yaavaagalaadaroo nammannu naavu artha maadikollodu saadyaanaa.... nanna blogigomme banni..... yaara blog goo upadate hogtaa illa....

ಮನಸು ಹೇಳಿದರು...

tumba chennagide saaluvaLu, prashne embude haage

Narayan Bhat ಹೇಳಿದರು...

ಕವನ ತುಂಬಾ ಸಾರವತ್ತಾಗಿದೆ..ಪೂರ್ಣ ಅರ್ಥವಾದರೆ ಪ್ರಶ್ನೆ ಏಳುವದಿಲ್ಲವೇನೋ ಅಲ್ಲವೇ?.

Subrahmanya ಹೇಳಿದರು...

ಪ್ರಶ್ನೋತ್ತರದ ಭಾವ ಪ್ರಶ್ನಾತೀತವಾಗಿದೆ. ಉತ್ತರವನ್ನು ಹುಡುಕುವ ಅವಶ್ಯಕತೆಯೇ ಇಲ್ಲ !.

ವಾಣಿಶ್ರೀ ಭಟ್ ಹೇಳಿದರು...

ನನ್ನೊಳಗಿನ ನೀನು, ನಿನ್ನೊಳಗಿನ ನಾನು ಮಾತ್ರ
ಒಬ್ಬರಿಗೊಬ್ಬರು ಪ್ರಶ್ನೆಯಾಗಿ ಕಾಡದಿದ್ದರೆ ಸಾಕು!!!!

tumba arthagarbhita salugalu..

nice post

Sushrutha Dodderi ಹೇಳಿದರು...

;-)

ಜಲನಯನ ಹೇಳಿದರು...

ಬಹುಸೊಗಸಾದ ಪ್ರಶ್ನೆ ಉತ್ತರಗಳ ನಡುವಿನ ಹೊರಾರ್ಥ ಮತ್ತು ಒಳಾರ್ಥಗಳ ದಟ್ಟ ಸಂಬಂಧಗಳನ್ನು ತಮ್ಮ ತಮ್ಮ ವಿವೇಚನೆ, ಯೋಚನೆಗನುಗುಣವಾಗಿ ಅರ್ಥೈಸಿಕೊಂಡು ನೋಡುವುದನ್ನು ಓದುಗನಿಗೇ ಬಿಟ್ಟಿರುವುದು ನಿಮ್ಮ ಕವನದ ಅತಿ ಮೆಚ್ಚುಗೆಯಾದ ಅಂಶ ತೇಜಸ್ವಿನಿ....ಐ ಲೈಕ್ಡ್ ಇಟ್ ...

ಮನದಾಳದಿಂದ............ ಹೇಳಿದರು...

ಅರ್ಥವಾಗುವ ಪ್ರಶ್ನೆಗಳ ಉತ್ತರವೇ ಅರ್ಥವಾಗುವುದಿಲ್ಲ.
ಪ್ರಶ್ನೆಗಳು ಎಚ್ಚರವಾಗಿರವಾಗಿರದಿದ್ದರೂ ಉತ್ತರ ನಿದ್ದೆಯಲ್ಲೇ ಇರಲಿ ಅಲ್ವಾ ಅಕ್ಕ?
ಅರ್ಥಗರ್ಭಿತ ಸಾಲುಗಳು
ಧನ್ಯವಾದ.

Manju Bhat ಹೇಳಿದರು...

chennagide madam, aadre hechchechchu prashnegalu eduradagale hechchu kaliyalu sadya ansotte..

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಇದು ನಿಜಕ್ಕೂ ತುಂಬಾ ಸೊಗಸಾದ ಪದ್ಯ. ಪ್ರಶ್ನೋತ್ತರಗಳ ತಾಕಲಾಟಗಳಿನ್ನು ಪದಗಳಲ್ಲಿ ಚೆನ್ನಾಗಿ ವರ್ಣಿಸಿದ್ದೀರಿ..

ನಿಮ್ಮ ಅನುಭವವೇ ನಮ್ಮದೂ ಅಲ್ಲವೇ?

ಧನ್ಯವಾದಗಳು.

Raghu ಹೇಳಿದರು...

manasa, tumba chenaagide kavana.
Raaghu.

Subrahmanya ಹೇಳಿದರು...

:D :D . ಎಲ್ಲಾ ನೀವೆ ಹೇಳ್ಬಿಟ್ರಲ್ಲಾ !.

Prasad Shetty ಹೇಳಿದರು...

ಪ್ರಷ್ಟ್ನೊತ್ತರ ಚೆನ್ನಾಗಿದೆ

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿಯವರೇ
ಒಳ್ಳೆಯ ಕವನ
ವಿಚಾರಪೂರ್ಣವಾಗಿದೆ

Pramod P T ಹೇಳಿದರು...

ಖುಷಿ ಆಯ್ತು ತೇಜು ಮೇಡಮ್ :)

ಸುಧೇಶ್ ಶೆಟ್ಟಿ ಹೇಳಿದರು...

ನನಗೂ ತುಂಬ ಪ್ರಶ್ನೆಗಳಿವೆ....!

ನನ್ನೊಳಗಿನ ನೀನು, ನಿನ್ನೊಳಗಿನ ನಾನು ಮಾತ್ರ
ಒಬ್ಬರಿಗೊಬ್ಬರು ಪ್ರಶ್ನೆಯಾಗಿ ಕಾಡದಿದ್ದರೆ ಸಾಕು!!!!

ಈ ಸಾಲುಗಳು ತು೦ಬಾ ಇಷ್ಟ ಆದವು....:)

Ittigecement ಹೇಳಿದರು...

ತೇಜಸ್ವಿನಿ...
ತುಂಬಾ ಚೆನ್ನಾಗಿದೆ..

ನೀ..
ನನ್ನೊಳಗೆ..
ಪ್ರಶ್ನೆಯಾಗಿ..
ಕಾಡುವ
ಕುತೂಹಲದ ..
ಉತ್ತರದ...
ನೀರಸವಾಗದೇ...
ನೀ..
ರಸವಾಗಿರು..

ಚಂದದ ಸಾಲುಗಳಿಗೆ ಅಭಿನಂದನೆಗಳು..

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) ಹೇಳಿದರು...

ತೇಜಸ್ವಿನಿಯವರೆ,ಕೊನೆಯ ಎರಡು ಸಾಲುಗಳು ಎಲ್ಲವನ್ನೂ ಹೇಳಿಬಿಡುತ್ತದೆ.ತು೦ಬಾ ಇಷ್ಟವಾಯಿತು ಕವನ.

Harisha - ಹರೀಶ ಹೇಳಿದರು...

ತೇಜಕ್ಕ, ಗುಡ್ ಒನ್ :-)

ಪ್ರಕಾಶಣ್ಣ, ನೀರಸವಾಗಿರದೇ .. ನೀ .. ರಸವಾಗಿರು.. :-) ಸೂಪರ್

ತೇಜಸ್ವಿನಿ ಹೆಗಡೆ ಹೇಳಿದರು...

ಅರ್ಥವಾಗಿಯೂ ಅರ್ಥವಾಗದಿರುವ ನನ್ನ ಪ್ರಶ್ನೋತ್ತರವನ್ನು ತಮಗೆ ತಿಳಿದಂತೇ ಅರ್ಥೈಸಿಕೊಂಡು ಉತ್ತರಿಸಿ, ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. :)

ಪ್ರೀತ್ಯಾದರಗಳೊಂದಿಗೆ,
ತೇಜಸ್ವಿನಿ ಹೆಗಡೆ.