ಗುರುವಾರ, ಜನವರಿ 21, 2010

ಕ್ಷಿತಿಜದಾಚೆ...


ಸಪ್ತಸಾಗರದಾಚೆ ನಿಂತಿಹುದು,
ಸುಪ್ತವಾಗಿ ನಡುಗುಡ್ಡವೊಂದು
ನೆಟ್ಟನಡುವೆ ಕುಳಿತಿಹೆ ನಾನಲ್ಲೇ,
ಬಟ್ಟಬಯಲೊಳಿಹ ಒಂಟಿ ಮರದಂತೆ
ನಿಲ್ಲದ ಸುಳಿಗಾಳಿ ಸುತ್ತಮುತ್ತೆಲ್ಲಾ,
ತೆರೆಗಳ ಭೋರ್ಗರೆತ ಕಿವಿಯ ತುಂಬೆಲ್ಲಾ
ತಲೆಯೆತ್ತಿದರೆ ಸಾಕು ಕಾರ್ಮೋಡದ ಸೂರು,
ನಾವೆಯೂ ಬಳಿಯಿಲ್ಲ, ಬದುಕಿಸುವರಾರು?!

ಉರಿಬಿಸಿಲ ತಾಪಕ್ಕೆ ಬಳಲಿ ಬೆಂಡಾದೆ,
ಉಪ್ಪಿನೊಳಗೇ ಸಿಹಿಯ ಹುಡುಕಿ ನಾ ಸೋತೆ
ದೇಹದೊಳಗಿಂದ ಪ್ರಾಣ ದೂರಾಗುತಿರಲು,
ಅಗೋ! ಅಲ್ಲಿ ಭುವಿ-ಬಾನು ಒಂದಾಗುತಿಹವು.

30 ಕಾಮೆಂಟ್‌ಗಳು:

Karthik Kamanna ಹೇಳಿದರು...

ಚೆನ್ನಾಗಿದೆ! :)

ಕ್ಷಣ... ಚಿಂತನೆ... ಹೇಳಿದರು...

madam,
ee kaviteyalli manadaalada novannu todikondantide enisitu. chennagide. chitraroopavannu kaTTi koduttade.

Subrahmanya ಹೇಳಿದರು...

hmmmm....ಪ್ರಕೃತಿಯ ಮುಂದೆ ನಾವೆಲ್ಲಾ ಅಸಹಾಯಕರೆ. ಕವನ ಓದಿದ ನಂತರ ಒಂದು ರೀತಿಯ ಶೂನ್ಯ ಆವರಿಸಿದಂತೆ ಅನಿಸಿತು....ಚೆನ್ನಾಗಿದೆ.

Raghu ಹೇಳಿದರು...

ತೇಜಸ್ವಿನಿ ಅವರೇ..
ಚೆನ್ನಾಗಿ ಬರೆದಿದ್ದೀರಿ.... ಭೂಮಿ ಮೇಲೆ ಇರೋರು ಒಂದಲ್ಲ ಒಂದು ರೀತಿಯಿಂದ ಒಂಟಿನೇ....ಕತ್ತಲಾದ ಕಳೆದ ಮೇಲೆ ಬೆಳಕು ಬಂದೆ ಬರುತ್ತೆ... ಸ್ವಲ್ಪ ಕಾಯಬೇಕು ಅಸ್ಟೇ ಅಲ್ವ...?
ನಿಮ್ಮವ,
ರಾಘು.

ಆನಂದ ಹೇಳಿದರು...

ಚೆನ್ನಾಗಿದೆ.
ಓದುತ್ತಿರುವಾಗ ಅಡಿಗರ 'ಯಾವ ಮೋಹನ ಮುರಲಿ...' ನೆನಪಾಯಿತು

ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ
ಒಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ

ಶಿವಪ್ರಕಾಶ್ ಹೇಳಿದರು...

ಕವನ ತುಂಬಾ ಚನ್ನಾಗಿದೆ ಮೇಡಂ.

Nisha ಹೇಳಿದರು...

Chendada kavana.

ಸೀತಾರಾಮ. ಕೆ. / SITARAM.K ಹೇಳಿದರು...

ಜನಜ೦ಗುಳಿಯಲ್ಲಿ ನಡುಗಡ್ಡೆಯಾಗಿ, ಒ೦ಟಿತನದಲ್ಲಿ ಮುಲುಗಿ, ನಜ್ಜಾಗಿ, ಒದ್ದಾಡುವ ಯಾ೦ತ್ರಿಕ ಬದುಕಿನ ಉಸಿರುಗಟ್ಟಿಸುವ ಸ್ವಯ೦ಕೃತ ಬದುಕಿನಲ್ಲಿ ಕಳೆದುಹೋಗುತ್ತಿರುವವರ ದ್ವನಿಯಾಗಿದೆ ಕವನ.
ದೂರದಲ್ಲಿನ ಬಾನು-ಭುವಿಯ ಮಿಲನ ನೋಡಿ, ಬದುಕ ಅಶಯವ ಆರದ೦ತೆ ಹಿಡಿದಿಟ್ಟು ಓಡುವ ನಮಗೆ ಆ ಮಿಲನ ದೊರಕಿತೇ? ಕವನದ ಕೊನೆ -
ಆಶಯವೋ? ಮರಿಚೀಕೆಯೋ?

umesh desai ಹೇಳಿದರು...

ಮೇಡಮ್ ನಿಮ್ಮ ಕವಿತಾ ಓದಿದೆ ಆ ಸ್ಥಾನದಲ್ಲಿ ನನ್ನನ್ನು ಊಹಿಸಿಕೊಂಡೆ ಭಯವಾಯಿತು

ಸವಿಗನಸು ಹೇಳಿದರು...

ಪ್ರಕೃತಿಯ ವಿವರಣೆ ಒಳ್ಳೆ ಪದಜೋಡಣೆಯೊಂದಿಗೆ ಕವನ ತುಂಬ ಚೆನ್ನಾಗಿದೆ....

ಚುಕ್ಕಿಚಿತ್ತಾರ ಹೇಳಿದರು...

ಕಷ್ಟಗಳ ನಡುವೆ ನಲುಗುತ್ತಿರುವಾಗ....
ದೂರದಲ್ಲೊ೦ದು ಆಸೆಯ ಮಿ೦ಚು...
ಭಾನೂ ಭೂಮಿ... ಸೇರೀತು....
ಸುಖದ ಕನಸು ನನಸಾದೀತು..


ಚ೦ದದ ಕವನ..

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿ ಯವರೇ
ಪದ್ಯದ ಶೀರ್ಷಿಕೆ ಬಹಳಷ್ಟು ಆಕರ್ಷಿಸಿತು
ಒಳಗಿನ ಹೂರನವಂತೂ ಸೂಪರ್
ಅದರಲ್ಲೂ
ಉರಿಬಿಸಿಲ ತಾಪಕ್ಕೆ ಬಳಲಿ ಬೆಂಡಾದೆ,
ಉಪ್ಪಿನೊಳಗೇ ಸಿಹಿಯ ಹುಡುಕಿ ನಾ ಸೋತೆ
ದೇಹದೊಳಗಿಂದ ಪ್ರಾಣ ದೂರಾಗುತಿರಲು,
ಅಗೋ! ಅಲ್ಲಿ ಭುವಿ-ಬಾನು ಒಂದಾಗುತಿಹವು

ತುಂಬಾ ಇಷ್ಟ ದ ಸಾಲುಗಳು

ತೇಜಸ್ವಿನಿ ಹೆಗಡೆ ಹೇಳಿದರು...

@ ಕಾರ್ತಿಕ್, ಚಂದ್ರಶೇಖರ್, ಸುಬ್ರಹ್ಮಣ್ಯ ಭಟ್, ರಘು, ಆನಂದ, ಶಿವಪ್ರಕಾಶ್, ನಿಶಾ - ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. ನನ್ನ ಪುಟ್ಟ ಕವಿತೆಗೆ ಮೆಚ್ಚುಗೆಯ ಪ್ರತಿಕ್ರಿಯೆಯನ್ನಿತ್ತು ಇನ್ನಷ್ಟು ಪ್ರೋತ್ಸಾಹ ತುಂಬಿರುವಿರಿ.

@ ಸೀತಾರಾಮ್ ಅವರೆ,

ಕವನವೆಂಬುದು ಅವರವರ ಭಾವಕ್ಕೆ ಬಿಟ್ಟಿದ್ದು :) ನೀವು ಹೇಗೆ ಬೇಕಿದ್ದರೂ ಅರ್ಥೈಸಿಕೊಳ್ಳಬಹುದು.

ಆದರೆ ನಾನಿಲ್ಲಿ, ಸಾವಿನ ಅಂತಿಮ ಕ್ಷಣದಲ್ಲಿರುವವನೊಬ್ಬ ಮರೀಚಿಕೆಯನ್ನು ಕಂಡು ಆಶಾವಾದ ಹೊಂದಿದ ಚಿತ್ರಣ ತುಂಬಲು ಯತ್ನಿಸಿದ್ದೇನೆ. ಕೊನೆಯ ಕ್ಷಣದಲ್ಲೂ ಆತನಿಗೇನೋ ಆಶಯ. ಚಮತ್ಕಾರದ ನಿರೀಕ್ಷೆ. ಈ ಭವದ ಕೋಟಲೆಯಿಂದ ತಾನು ಪಾರಾಗಬಲ್ಲೆನೆಂಬ ಹುಮ್ಮಸ್ಸು. ಆದರೆ ಉಸಿರು ಸಾಥ್ ನೀಡುತ್ತಿಲ್ಲ. ಹೇಗೆ ಭುವಿ-ಬಾನಿನ ಸೇರುವಿಕೆ ಅಸಾಧ್ಯವೋ ಹಾಗೇ ಬದುಕಲ್ಲಿ ಶಾಶ್ವತ ಶಾಂತಿ ಬದುಕಿರುವಾಗಲೇ ಅಸಾಧ್ಯ!

ತುಂಬಾ ಧನ್ಯವಾದಗಳು.

@ ಉಮೇಶ್,

ನನಗೂ ಬರೆದಾದಮೇಲೆ ಊಹಿಸಿಕೊಂಡಾಗ ತುಂಬಾ ಭಯವಾಗಿತ್ತು. ಜೊತೆಗೆ ಒಂದು ತರಹದ ರೋಮಾಂಚನ ಕೂಡ. ಒಂದಲ್ಲ... ಎರಡಲ್ಲ.. ಏಳು ಸಾಗರ ನನ್ನ ಕಣ್ಮುಂದಿರುವುದ ನೆನೆದು :)

@ ಸವಿಗನಸು, ಚುಕ್ಕಿಚಿತ್ತಾರ, ಸಾಗರದಾಚೆಯ ಇಂಚರ,

ಮೆಚ್ಚುಗೆಗಳಿಗೆ ಬಹು ಆಭಾರಿ. ಧನ್ಯವಾದಗಳು.

sunaath ಹೇಳಿದರು...

ತೇಜಸ್ವಿನಿ,
ಹೋರಾಟ, ಹತಾಶೆಗಳನ್ನು ಈ ಕವನ ಚೆನ್ನಾಅಗಿ ಬಿಂಬಿಸುತ್ತಿದೆ.
ಈ ಕವನ ಕೇವಲ ಕಲ್ಪನೆಯಿಂದ ಮೂಡಿ ಬಂದಿರಲಿ ಎಂದು ಹಾರೈಸುತ್ತೇನೆ.

Uma Bhat ಹೇಳಿದರು...

ತುಂಬಾ ಚಂದದ ಕವಿತೆ.

ಜಲನಯನ ಹೇಳಿದರು...

ತೇಜಸ್ವಿನಿ, ವಿಪರೀತಗಳ ಮಧ್ಯೆ ಇರುವಾಗ..ಅದನ್ನು ಅನುಮೋದಿಸಿ ನಡೆವುದು ಪರಿಸ್ಥಿತಿಯನ್ನು ಒಪ್ಪಿಕೊಂಡ ಭಾವವೇ..? ಚಿಕ್ಕ ಸಂದೇಹ...ನಟ್ಟ-ನಡು...ಬಿಟ್ಟು ನೆಟ್ಟ-ನಡು ಎಂದಿರುವುದು ಬೇರೆಯವರು ನಿಮ್ಮನ್ನಲ್ಲಿ ನೆಟ್ಟರೆಂದೇ?...ಚನ್ನಾಗಿದೆ ಪದ ಜೋಡಣೆ.

ಸುಧೇಶ್ ಶೆಟ್ಟಿ ಹೇಳಿದರು...

’ಕ್ಷಿತಿಜ’ ಶೀರ್ಷಿಕೆ ತು೦ಬಾ ಚ೦ದ ಇದೆ.. ಹಾಗೆಯೇ ಕವನ ಕೂಡ....

ಶರಶ್ಚಂದ್ರ ಕಲ್ಮನೆ ಹೇಳಿದರು...

ತೇಜಕ್ಕ ಕವನ ಚನ್ನಾಗಿದ್ದು. 'ಕ್ಷಿತಿಜ' ಅನ್ನೋ ಪದ ನಂಗೆ ತುಂಬಾ ಇಷ್ಟ... 'ನಿರೀಕ್ಷೆ' ಅನ್ನೋ ಒಂದು ಭಾವ ನಮ್ಮಲ್ಲಿ ಎಲ್ಲಿ ವರೆಗೆ ಇರ್ತೋ ಅಲ್ಲಿವರೆಗೆ ಜೀವನ ಸಂತಸನೆ ಅಲ್ದಾ ? ನೋವು ಕಳೆದ ಮೇಲೆ ನಲಿವೊಂದೆ...

ಶರಶ್ಚಂದ್ರ ಕಲ್ಮನೆ

PARAANJAPE K.N. ಹೇಳಿದರು...

ತು೦ಬಾ ಚೆನ್ನಾಗಿದೆ.

Pramod P T ಹೇಳಿದರು...

ಹಾಯ್ ತೇಜು ಮೇಡಂ,

ನಂಗಂತೂ ಈ ಕವನ ತುಂಬಾ ಇಷ್ಟ ಆಯ್ತು.

ವಿದ್ಯಾ ದದಾತಿ 'ವಿನಯಂ' !! ಹೇಳಿದರು...

ತುಂಬಾ ಚೆನ್ನಾಗಿ ಬರೆದಿದ್ದೀರಿ. ಓದಿ ತುಂಬಾ ಖುಷಿ ಆಯ್ತು. ಕವನಗಳು ಇನ್ನಷ್ಟು ವ್ಯಕ್ತವಾಗಲಿ :-)

ಅಂತರ್ವಾಣಿ ಹೇಳಿದರು...

ಈ ಕವನ ಅರ್ಥವಾಗುವಂತದ್ದು :)
ಯಾಕೋ ಈ ಎರಡು ಸಾಲುಗಳು ತುಂಬಾ ಮೆಚ್ಚುಗೆಯಾದವು.

ತಲೆಯೆತ್ತಿದರೆ ಸಾಕು ಕಾರ್ಮೋಡದ ಸೂರು,
ನಾವೆಯೂ ಬಳಿಯಿಲ್ಲ, ಬದುಕಿಸುವರಾರು?!

ದೀಪಸ್ಮಿತಾ ಹೇಳಿದರು...

ಕವನ ತುಂಬಾ ಚೆನ್ನಾಗಿದೆ

Kirti ಹೇಳಿದರು...

Hi madam poem is very nice.have you checked my blog again..

V.R.BHAT ಹೇಳಿದರು...

ಕವನ ಚೆನ್ನಾಗಿದೆ,ಮನದಲ್ಲಿ ಸ್ಪುರಿಸುವ ಭಾವನೆಗಳಿಗೆ ರೂಪಕೊಡುವ ಪ್ರಯತ್ನ !

AntharangadaMaathugalu ಹೇಳಿದರು...

ಶೀರ್ಷಿಕೆಯೇ ನನ್ನನ್ನು ತುಂಬಾ ಆಕರ್ಷಿಸಿತು ತೇಜು ಅವರೇ... ಕವಿತೆಯೂ ಚೆನ್ನಾಗಿದೆ......

ಶ್ಯಾಮಲ

ಮನದಾಳದಿಂದ............ ಹೇಳಿದರು...

ಚನ್ನಾಗಿ ಬರೆದಿದ್ದೀರಿ, ಜೀವನದಲ್ಲಿ ಯಾರೇ ಬಂದು ಹೋದರೂ ಕೊನೆಯಲ್ಲಿ ನಾವು ಒಂಟಿಯೇ. ಒಳ್ಳೆ ಕವನ.

ತೇಜಸ್ವಿನಿ ಹೆಗಡೆ ಹೇಳಿದರು...

ಕಾಕಾ, ಉಮಾ, ಜಲನಯನ, ಸುಧೇಶ್, ಶರಶ್ಚಂದ್ರ, ಪರಾಂಜಪೆ, ಪ್ರಮೋದ್, ‘ವಿನಯಂ’, ಶಂಕರ್, ದೀಪಸ್ಮಿತ, ಕೀರ್ತಿ, ವಿ.ಆರ್.ಭಟ್, ಶ್ಯಾಮಲ, ಪ್ರವೀಣ್ - ಮೆಚ್ಚಿ ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೇರಣೆಯೇ ನನ್ನ ಮುಂದಿನ ಬರಹಗಳಿಗೆ ಸ್ಪೂರ್ತಿಯಾವುದು.

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಂ,
ಪ್ರಕ್ರತಿಯ ಮುಂದೆ ನಾವೆಲ್ಲಾ ಏನು ಎಂದು ಸಾರುವ ಕವನಕ್ಕೆ ಧನ್ಯವಾದ.... ಚೆನ್ನಾಗಿದೆ.......

Sri ಹೇಳಿದರು...

hello tejaswini,
you have an excellent blog... :)

btw, i had this idea too about:
ondu sagarada teeradalliya Ekaangi huDugi...

http://chitta--tochidatta.blogspot.com/2009/12/blog-post_12.html

nimma anisike tiLisi... :)