ಮಂಗಳವಾರ, ಅಕ್ಟೋಬರ್ 6, 2009

ಎಚ್ಚರಿಕೆ!!!!


ಬ್ಲಾಗ್ ಜಗತ್ತೊಳಗೊಂದು ವಿಕೃತ ಮನಸ್ಸಿದೆ....... ಎಚ್ಚರಿಕೆ!!!!



ನಿನ್ನೆ ರಾತ್ರಿಯವರೆಗೂ ನಾನು ಈ ಒಂದು ಕಹಿ ಸತ್ಯದಿಂದ ವಂಚಿತಳಾಗಿದ್ದೆ. ಅದೇನೆಂದರೆ... ನಮ್ಮೊಳಗೇ ಓರ್ವ ವ್ಯಕ್ತಿ ಹೆಣ್ಣಿನ ಹೆಸರನ್ನಿಟ್ಟುಕೊಂಡು ಓರ್ವ ಟೀನೇಜ್ ಹುಡುಗಿ ಹೇಗೆ ಅನುಭಾವಿಸುತ್ತಾಳೋ ಅದೇ ರೀತಿಯಂತೇ ಯೋಚಿಸುತ್ತಾ ಅದನ್ನೇ ತನ್ನ ಬ್ಲಾಗಿನಲ್ಲಿ(ಹುಡುಗಿ ಹೆಸರಿನಲ್ಲಿ..) ಹಾಕುತ್ತಿದ್ದ. ಈ ಬ್ಲೋಗ್ ಎಷ್ಟೋ ಜನರಿಗೆ ಗೊತ್ತು. ಅದರೊಳಗಿನ ಬರಹಗಳೆಲ್ಲಾ ಸುಪರಿಚಿತ. ತುಂಬಾ ಚೆನ್ನಾಗಿಯೂ ಇದ್ದವು... ಹಾಗಾಗೇ ಬಹಳಷ್ಟು ಜನ ಓದಿದ್ದರು.. ಕಮೆಂಟಿಸಿದ್ದರು. ಆದರೆ ಅಸಲಿಗೆ ಅದು ಹುಡುಗಿಯಲ್ಲ.. ನಮ್ಮೊಳಗೇ ಸುಪರಿಚಿತವಾಗಿರುವ ಓರ್ವನದ್ದು ಎಂದು ತಿಳಿಯಿತು.!!!!

ಏಷ್ಟೋ ಜನ ಅಂಕಣಕಾರರು ಹುಡುಗಿಯ ಹೆಸರಲ್ಲಿ ಬರಹಗಳನ್ನು, ಕಥೆಗಳನ್ನು, ಲೇಖನಗಳನ್ನು ಬರೆದಿದ್ದಾರೆ. ನಮಗೆಲ್ಲಾ ಗೊತ್ತು. ಅದು ತಪ್ಪೂ ಅಲ್ಲ.. ಅವರವ ಇಚ್ಚೆ. ವೈಯಕ್ತಿಕ ಅಭಿಪ್ರಾಯವಷ್ಟೇ. ಇದರಿಂದ ಯಾವುದೇ ಅಪಾಯವೂ ಇಲ್ಲ.

ಆದರೆ ಅದೇ ಬೇನಾಮಿ ಹೆಸರನಡಿ ನಮಗೆ ಮೈಲ್/ಚಾಟಿಂಗ್ ಮಾಡಿ, ನಮ್ಮ ಭಾವನೆಗಳ ಜೊತೆ, ಸೂಕ್ಷ್ಮ ಸಂವೇದನೆಗಳ ಜೊತೆ ಆಟವಾಡಿ ಸಂತೋಷಪಡೆಯುವ ಮನಃಸ್ಥಿತಿ ಖಂಡಿತ ಆರೋಗ್ಯಕರವಾಗಿದ್ದಲ್ಲ. ವಿಕೃತವೇ ಸರಿ. ಇದೇ ಅನುಭವವೇ ನನ್ನೊಂದಿಗಾಗಿದ್ದು.

ಕರ್ನಾಟಕದ ಹುಡುಗಿಯ ಹೆಸರಿನಡಿ ಬ್ಲಾಗ್ ನಡೆಸುತಿದ್ದ ಆ ವ್ಯಕ್ತಿ ಅದೇ ಹೆಸರಿನೊಂದಿಗೆ ನನ್ನೊಡನೆ ಮೈಲ್ ಸಂಪರ್ಕ ಬೆಳೆಸಿದ. ಬ್ಲಾಗ್ ಬರಹಗಳಿಂದ ಸುಪರಿಚಿತ ಹುಡುಗಿ..ಉತ್ತಮ ಬರಹಗಾರ್ತಿ(????) ಎಂದು ಎಣಿಸಿ ನಾನೂ ಉತ್ತರಿಸುತ್ತಾ ಹೋದೆ. ಮೈಲ್‌ಗಳಲ್ಲೆಲ್ಲೂ "ಆಕೆ" "ಆತ" ಎನ್ನುವ ಯಾವ ಸೂಚನೆಯೂ ತಿಳಿಯಲಿಲ್ಲ. ಅಷ್ಟೊಂದು ಹುಡುಗಿಯಂತೇ ಬರವಣಿಗೆಯಿತ್ತು ಆ ಮಹಾಶಯನದ್ದು...!!!
ನಿನ್ನೆ ಓರ್ವ ಹಿತಚಿಂತಕರ ಮೂಲಕ ಆ ಬ್ಲಾಗ್ ಓರ್ವನದೆಂದೂ ಆತನಿಗೆ ಮದುವೆಯಾಗಿ ಮಗುವಿದೆಯೆಂದೂ ನಮ್ಮೊಳಗೇ ತನ್ನ ನಿಜ ನಾಮಧೇಯದಲ್ಲೇ ಮತ್ತೊಂದು ಬ್ಲಾಗ್ ನೆಡೆಸುತ್ತಿದ್ದಾನೆಂದೂ.. ಸುಪರಿಚಿತ ಬರಹಗಾರನೆಂದೂ ತಿಳಿಯಿತು. ಸುದ್ದಿ ಕೇಳಿ ಅರೆಕ್ಷಣ ಮಾತೇ ಹೊರಡಲಿಲ್ಲ. ಆತನ ಮೈಲ್‌ಗಳಲ್ಲಿ ಆತನೇ ಹೇಳಿಕೊಂಡಿರುವಂತೆ ಇರುವ ಖಿನ್ನತೆಗೆ ನಾನು ನನ್ನ ಜೀವನದ ಕಷ್ಟಗಳನ್ನು, ಹೋರಾಟವನ್ನು, ನೋವುಗಳನ್ನು ನಾನು ಹೇಗೆ ಎದುರಿಸಿ ಬಂದೆ, ಯಾವ ರೀತಿ ಬದುಕನ್ನು ಸ್ವೀಕರಿಸಬೇಕು ಎಂದೆಲ್ಲಾ ಧೈರ್ಯತುಂಬಿದ್ದೆ. ನನ್ನ ಭಾವನೆಗಳನ್ನು ಸೂಕ್ಷ್ಮತೆಗಳನ್ನು ಓರ್ವ ಹುಡುಗಿಯ ರೂಪದಲ್ಲಿ ಬಂದು ಜಗ್ಗಾಡಿ, ಅಪಹಾಸ್ಯಮಾಡಿ, ಇನ್ನು ಯಾವತ್ತೂ ಯಾರನ್ನೂ ಮುಖತಃ ಪರಿಚಯವಿಲ್ಲದೆಯೇ ಮಾತಾಡಿಸಲೂ ಬಾರದೆಂಬ ನಿರ್ಧಾರಕ್ಕೆ ಎಳೆದೊಯ್ದ ಆ ವ್ಯಕ್ತಿಗೆ ನನ್ನ ಧಿಕ್ಕಾರವಿದೆ. ನಿಜಕ್ಕೂ ಮಾನಸಿಕತೆಯಿಂದ ಬಳಲುತ್ತಿರುವಂತೆ ಕಾಣುವ ಆ ಮನಃಸ್ಥಿತಿಗೆ ಸಹಾನುಭೂತಿಯೂ ಇದೆ. ಅನುಕಂಪವಿದೆ. ಕೇವಲ ಒಬ್ಬರ ಮಾತು ಕೇಳಿ ನಾನು ಈ ಪೋಸ್ಟ್ ಹಾಕುತ್ತಿಲ್ಲ.. ಇಲ್ಲಾ ತೀರ್ಮಾನಕ್ಕೆ ಬಂದಿಲ್ಲ.. ಇನ್ನೂ ಕೆಲವರನ್ನು ವಿಚಾರಿಸಿಯೇ ಈ ರೀತಿ ಬರೆಯುತ್ತಿದ್ದೇನೆ.

ನೀವೂ ಇದೇ ರೀತಿಯ ಮೋಸಕ್ಕೆ ಒಳಗಾಗಿರಬಹುದು. ಒಳಗಾಗಲೂ ಬಹುದು ಎಚ್ಚರಿಕೆ!!!! ಈ ರೀತಿ ಆ ವ್ಯಕ್ತಿ ನನ್ನೊಂದಿಗೆ ಮಾತ್ರವಲ್ಲ. ಬೇರೆ ಕೆಲವರೊಡನೆಯೂ ಆಡಿದ್ದು ತಿಳಿದು ಬಂತು. ಆದರೆ ಅವರೆಲ್ಲಾ ಬಾಯಿ ಮುಚ್ಚಿ ಕುಳಿತರು. ಆತನ ಖ್ಯಾತಿಗೋ(?) ಇಲ್ಲಾ "ನಮಗೇಕೆ ಸುಮ್ಮನೆ ಎಂದೋ..." ಇದೇ ರೀತಿ ಮೋಸಹೋದ ಒಬ್ಬನಿಂದ ಆತನ ನಿಜ ಹೊರಬೀಳುತ್ತಿದ್ದಂತೇ ಆ ವ್ಯಕ್ತಿ ಬಹುಶಃ ಹುಡುಗಿ ಹೆಸರಿನಲ್ಲಿರುವ ಬ್ಲಾಗ್‌ನಲ್ಲಿ ಬರವಣಿಗೆಯನ್ನೂ ನಿಲ್ಲಿಸಿದ...ಅಂತೆಯೇ ನನ್ನ ಮೈಲ್‌ಗೆ ಉತ್ತರಿಸುವುದು ನಿಲ್ಲಿಸಿದ..... ಆದರೆ ಆಗ ನಾನು ಯಾವುದೋ ಸಮಸ್ಯೆಯಿಂದ ಆಕೆ(???) ನನ್ನ ಮೈಲ್‌ಗೆ ಉತ್ತರಿಸುತ್ತಿಲ್ಲ, ಬ್ಲಾಗ್‌ಕೂಡಾ ಬರೆಯುತ್ತಿಲ್ಲ ಎಂದು ಸುಮ್ಮನಿದ್ದೆ.

ಆದರೆ......

ಇಂದು ಸತ್ಯ ನನಗೆ ತಿಳಿದಿದೆ. ಹೆಸರನ್ನು ಹಾಕದೇ ನಾನು ಈ ಘಟನೆಯನ್ನು ಮುಂದಿಟ್ಟಿದ್ದೇನೆ. ಆ ವ್ಯಕ್ತಿಗೆ ಇನ್ನಾದರೂ ತನ್ನ ತಪ್ಪಿನ ಅರಿವಾದರೆ ನನ್ನಲ್ಲಿ ಕ್ಷಮೆ ಕೇಳಲಿ. ದೇವರು ಆತನಿಗೆ ಮುಂದೆ ಈ ರೀತಿ ಯಾರೊಂದಿಗೂ ಅವರ ಭಾವನೆಗಳ ಜೊತೆ ಆಡದಂತಹ ಬುದ್ಧಿಕೊಡಲೆಂದು ಪ್ರಾರ್ಥಿಸುವೆ. ತಮ್ಮ ತೆವಲಿಗೋಸ್ಕರ, ಇನ್ನೊಬ್ಬರನ್ನು ಬಲಿಪಶುಮಾಡಿಕೊಂಡು ಈ ರೀತಿ ಸಂತೋಷಪಡುವವರನ್ನು ಏನೆನ್ನೋಣ ಹೇಳಿ?! ಆ ವ್ಯಕ್ತಿ ಇದನ್ನೆಲ್ಲಾ ಕೇವಲ ತನ್ನ ಕ್ಷಣಿಕ ಸಂತೋಷಕ್ಕಾಗಿ ಹುಡುಗಿಯಂತೆಯೇ ನಟಿಸುತ್ತಾ, ಮೈಲ್ ಕಳಿಸುತ್ತಾ ಇದ್ದನೆಂದಾದಲ್ಲಿ ಆತನಿಗೆ ಮೆಡಿಕಲ್ ಟ್ರೀಟ್‌ಮೆಂಟಿನ ಅಗತ್ಯವಿದೆ. he may be suffering from "Personality disorder"!!!.

ಇಲ್ಲಿ ನಾನೇನೂ ದೊಡ್ಡ ಮೋಸಕ್ಕೆ ಬಲಿಯಾದನೆಂದು ಕೂಗಾಡುತ್ತಿದ್ದೇನೆ... ಕೇವಲ ಹುಡುಗಿ ಹೆಸರಿನಲ್ಲಿ ಮೈಲ್ ಸಂಪರ್ಕ ಮಾಡಿದ್ದಕ್ಕೆ ಇಷ್ಟು ಗಲಾಟೆನಾ ಎಂದೂ ಕೆಲವರಿಗೆ ಅನಿಸಬಹುದು. ಆದರೆ ಇಲ್ಲಿ ಬಲಿಯಾಗಿರುವುದು ನನ್ನ ಭಾವನೆಗಳು, ಮನುಷ್ಯರ ಮೇಲಿನ ನಂಬಿಕೆಗಳು. ನಂಬಿಕೆ ಬಹು ಅಮೂಲ್ಯವಾದದ್ದು. ನಮ್ಮೊಳಗಿನ ಭಾವನೆಗಳನ್ನು ಹಂಚಿಕೊಳ್ಳುವಾಗ ಇರಬೇಕಾದದ್ದು ಇದೇ. ನನ್ನ ಅಂಗವೈಕಲ್ಯವನ್ನು ಉದಾಹರಿಸುತ್ತಾ ಹೇಗೆ ನೀನು ಮೇಲೆ ಬರಬೇಕೆಂದು ನಾನು ಉಪದೇಶಿಸಿದಾಗಲೂ ಆ ವ್ಯಕ್ತಿಗೆ ನೈತಿಕತೆ ಚುಚ್ಚಲಿಲ್ಲವೇ? ಮತ್ತೂ ಅದೇ ಹೆಸರಿನಡಿ.."ಅಕ್ಕಾ... ಅಕ್ಕಾ.." ಅನ್ನುತ್ತಾ ಖಿನ್ನತೆ, ಒಂಟಿತನ ಎನ್ನುತ್ತಾ ನನ್ನ ಮೋಸಗೊಳಿಸುತ್ತಾ ಹೋದ. ಅಕ್ಕಾ ಅನ್ನುವ ಪದಕ್ಕೂ ಅದರ ಘನತೆಗೂ ಅಪಾರ ಹಾನಿಯನ್ನೂ ತಂದಿಟ್ಟ...:( :(

ಇಂತಹವರಿಂದ ಬ್ಲಾಗ್ ಜಗತ್ತೇ ಕೊಳಕಾಗುತ್ತಿದೆ. ಮಾನಸವೂ ಮಂಕಾಗುತ್ತಿದೆ. ಮತ್ತೆ ಈ ವ್ಯಕ್ತಿ ಇನ್ನೋರ್ವ ಹುಡುಗಿಯ ಹೆಸರಿನಡಿಯಲ್ಲೋ ಇಲ್ಲಾ ಬೇರಾವ ರೀತಿಯಲ್ಲೋ ಇನ್ಯಾರ ಭಾವನೆಗಳೊಂದಿಗೂ ಆಡದಿರಲೆಂದು, ಮೋಸಮಾಡದಿರಲೆಂದು ನಿಮ್ಮೆಲ್ಲರ ಎಚ್ಚರಿಸುತ್ತಿರುವೆ. ಸಂಪೂರ್ಣ ಮುಸುಕು ಹಾಕಿ ಕೇವಲ ಹೆಸರನ್ನು ಮಾತ್ರ ಹೇಳುತ್ತಾ ವ್ಯವಹರಿಸುವವರೊಂದಿಗೆ ಜಾಗೃತೆಯಾಗಿರಿ.


ಎಚ್ಚರಿಕೆ!!!!!!!!!


- ತೇಜಸ್ವಿನಿ ಹೆಗಡೆ

43 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ನಿಮ್ಮ ಬ್ಲಾಗ್ ಬರಹ ಓದಿದೆ, ಏನು ಹೇಳಲಿ,. ಎ೦ತೆ೦ಥವರು ಇದ್ದಾರೆ ಜಗದಲ್ಲಿ ಅನ್ನಿಸಿತು. ಆತ ಸುಪರಿಚಿತ ಬರಹಗಾರ ಅ೦ತ ಬೇರೆ ಹೇಳ್ತೀರಿ. ಇನ್ನಾದರು ಆತನಿಗೆ ಮತ್ತು ಆತನ೦ತಹ ಬೇನಾಮಿ ವ್ಯಕ್ತಿತ್ವಗಳಿಗೂ ಬುದ್ಧಿ ಬರಲಿ.

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿ ಮೇಡಮ್, ಇದೀಗ ತಾನೇ ನಿಮ್ಮ ಬ್ಲಾಗನ್ನು ನೋಡಿದೆ. ಓದಿದಾಗ ತುಂಬಾ ಬೇಸರವಾಯಿತು. ಏನು ಬರೆಯಬೇಕು ಅಥವಾ ಹೇಳಬೇಕೆಂದೇ ತೋಚಲಿಲ್ಲ. ಇನ್ನೂ ಇಂತಹ ಅದೆಷ್ಟು ಜನ ಹೀಗೆ ಮೋಸದಿಂದ ಬರೆಯುತ್ತಿರುವರೋ ತಿಳಿಯದು. ಪರಿಚಿತ ಬರಹಗಾರ ಎಂದು ತಿಳಿಸಿದ್ದೀರಿ. ಇಂತಹ ವಿಕೃತ ಮನಸ್ಸಿನವರ ಬಗ್ಗೆ ಸಹ ಬ್ಲಾಗಿಗರಿಗೆ ಎಚ್ಚರಿಕೆಯನ್ನು ನೀಡಿದ್ದೀರಿ.

ಇನ್ನಾದರೂ, ಇಂತಹ ಅನಾಮಿಕ ವ್ಯಕ್ತಿಗಳಿಗೆ ಒಂದು ಎಚ್ಚರಿಕೆಯಾಗಲಿ.

ಧನ್ಯವಾದಗಳು.

ಚಂದ್ರು,

ranjith ಹೇಳಿದರು...

ತುಂಬಾ ತಡವಾಗಿ ಬಂದ ಎಚ್ಚರಿಕೆ (ನನ್ನ ಪಾಲಿಗೆ). ನನಗೆ ನಿಜ ಗೊತ್ತಾದಾಗ (ಅವರು ನಿಮಗೆ ಪರಿಚಯಸ್ಥರು ಅನ್ನಿಸಿದ್ದರಿಂದ) ನಿಮಗೂ ಗೊತ್ತಿದ್ದಿರಬಹುದು ಆ ಮುಸುಕಿನ ಬಗ್ಗೆ ಅಂತ ತಿಳಿದಿದ್ದೆ.

ಆ ವ್ಯಕ್ತಿ ಹೇಳಿಕೊಳ್ಳುವ ಗೆಳತಿಯೋರ್ವಳು (ಈಕೆ ನಿಮ್ಮ ನೆಚ್ಚಿನ ಲೇಖಕಿಯೂ ಹೌದು) ಇದರಲ್ಲಿ involved ಅಂತ ತಿಳಿದಾಗ ತುಂಬ ಅಯೋಮಯ ಸ್ಥಿತಿ ಏರ್ಪಾಟಾಗಿತ್ತು.

ಈಗ ಹಾಗೆ ನಂಬಿದ್ದು ನನ್ನ ತಪ್ಪೆಂದು ನನಗನ್ನಿಸಿದೆ.

ಬರಹಗಾರರನ್ನು ಕೇವಲ ಬರಹಕ್ಕಾಗಿ ಅಷ್ಟೇ ಮೆಚ್ಚಿಕೊಳ್ಳಬೇಕು.

-ರಂಜಿತ್

Lakshmi Shashidhar Chaitanya ಹೇಳಿದರು...

Very shocking tejakka. As you said, this person needs medical help. naavu innu sikkapatte careful aagirodu namage oLLedu. illandre bhavanegaLige vedike aagiruva blog loka sikkapatte haaLaagi hogatte. Bloggers must responsible now, its the need of the hour.

ಜಲನಯನ ಹೇಳಿದರು...

ಮನಸ್ಸಿನ ಯಾವುದೋ ಕೊರತೆ ಅಥವಾ ವಿಕೃತತೆಗೆ ಬಲಿಯಾಗಿ ಈ ರೀತಿ ಅಸಹಜವಾಗಿ ವರ್ತಿಸುವವರು ಸಮಾಜದ ಪಿಡುಗುಗಳು..ಇದು ಹೆಸರಿರುವ ಲೇಖಕ ಮಾಡಿದರೆ ಅದು ಯಾವುದೇ ರೀತಿ ಕ್ಷಮೆಗೆ ಅರ್ಹವಲ್ಲ, ನನಗೆ ತಿಳಿದ ಮಟ್ಟಿಗೆ ಇಂತಹವರನ್ನು ಮಟ್ಟಹಾಕಲು ಸೈಬರ್ ಕಾನೂನಿನ ಮೊರೆಹೋದರೂ ತಪ್ಪಿಲ್ಲ ...ಇದು ತೇಜಸ್ವಿನಿಗಾದ ಅನುಭವ ಆದರೂ ಹೀಗೇ ಗುರಿಯಾದವರು ಅವರಂತೆ ಧೈರ್ಯ ತೋರಿ ಹೇಳಿಕೊಳ್ಳುತ್ತಿಲ್ಲ ಆದ್ದರಿಮ್ದ ಇಂತಹ ಪೀಡನೆ ಇತರರಿಗೂ ಆಗಿರಬಹುದು...ಆಗಬಹುದು...ಎಚ್ಚರಿಕೆ ವಹಿಸಿ.
ನನ್ನ ಬ್ಲಾಗಿನಲ್ಲಿ ಪ್ರಾಮಾಣಿಕತೆ ಅಪ್ರಾಮಾಣಿಕತೆ ಚರ್ಚೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲೇ ಇಂತಹ ಅದೂ ಬುದ್ಧಿಜೀವಿಯೊಬ್ಬರ ವಿಕೃತತೆ.. ಪ್ರಾಮಾಣಿಕರನ್ನು ಬೆಚ್ಚಿಬೀಳಿಸಿದೆ. ನನ್ನ ಅನಿಸಿಕೆ ಇವರ ಪರಿಚಯ ಅಥವಾ ಗುರುತು ಗೊತ್ತಿರುವವರು ಸೈಬರ್ ಕ್ರೈಂ ಗೆ ತಿಳಿಸಿದರೆ ಉತ್ತಮ. ಈ ಸಂದರ್ಭದಲ್ಲಿ ತೇಜಸ್ವಿನಿಗೆ..ಇದೊಂದು ವಿದ್ಯಾವಂತ ಪೋಕರಿಯ ನೀಚತನ ಎಂದು ಪರಿಗಣಿಸಿ ಮನಸ್ಸಿಗೆ ಹಚ್ಚಿಕೊಳ್ಳಬಾರದೆಂದು ಸಾಂತ್ವನ ಹೇಳಬಹುದಷ್ಟೇ..

ಸಾಗರದಾಚೆಯ ಇಂಚರ ಹೇಳಿದರು...

Very bad ...
ಇಂಥಹ ಬ್ಲಾಗ್ ಗಳನ್ನು ತೆಗೆದು ಹಾಕಬೇಕು,
ನಿಜಕ್ಕೂ ಆಘಾತಕಾರೀ ಸುದ್ದಿ ಇದು

kanasu ಹೇಳಿದರು...

ohh! bahala dinagala nantara nimma blogige bheti kotte...odi atankavaaitu...naanu saha ide reeti ondu ghataneyannanubhavisiddene...adare blognalli alla...orkut na networknalli....nijakku idu tumbaa aghatakaari!!

Sandeepa ಹೇಳಿದರು...

ಓದಿ ಬಹಳ ಬೇಸರವಾಯಿತು.

"ಕರ್ನಾಟಕದ ಹುಡುಗಿಯ ಹೆಸರಿನಡಿ" - ಎಂದ್ದಿದ್ದೀರಿ. ಉತ್ತರ ಕರ್ನಾಟಕದ ಹುಡುಗಿಯ ಹೆಸರಿನಲ್ಲೆ?

ವಿ.ರಾ.ಹೆ. ಹೇಳಿದರು...

IT IS TOTALLY DISGUSTING !!

ನನಗಂತೂ ಸಿಕ್ಕಾಪಟ್ಟೆ ಆಶ್ಚರ್ಯ ಆಗುತ್ತಿದೆ.
ಹೀಗೆಲ್ಲ ಇರುತ್ತಾರೆ ಜನ ! ಯಾಕೆ ಹೀಗೆ ಅಂತ ಅರ್ಥಾಗುತ್ತಿಲ್ಲ !

ಗೊತ್ತಾದ ತಕ್ಷಣ ನೀವು ಬರೆದು ಎಚ್ಚರಿಸಿದ್ದು ಒಳ್ಳೆಯದಾಯ್ತು.
ಅವರ ಇಂಥಹ ಕೆಲಸವನ್ನು ಖಂಡಿಸುತ್ತೇನೆ .

Sushrutha Dodderi ಹೇಳಿದರು...

ತೇಜಕ್ಕ,

ಓದಿ, ಸುದ್ದಿ ಕೇಳಿ ಸಖತ್ ಬೇಜಾರಾಯ್ದು. ಇದಕ್ಕೆ ಏನು ಮಾಡ್ಲಿಕ್ಕೆ ಸಾಧ್ಯ ಅಂತ ಆಗ್ಲಿಂದ ಯೋಚನೆ ಮಾಡ್ತಾ ಇದ್ದಿ. ಯಾವುದಕ್ಕೂ ನೀನು ಧೃತಿಗೆಡಡ.. ಇಲ್ಲಿ ಬರ್ತಿರೋ ಪ್ರತಿಕ್ರಿಯೆಗಳನ್ನ ನೋಡ್ತಿದ್ರೆ ಇಂತಹ ವಿಕೃತಿಗೆ ಇನ್ನೆಷ್ಟು ಜನ ಬಲಿಯಾಗಿದ್ದಾರೋ ಅಂತ ಆತಂಕ ಆಗ್ತಿದ್ದು..

ಹಿಂಗೆಲ್ಲ ಆಗ್ತಾ ಇದ್ರೆ ಮನುಷ್ಯರನ್ನ ಹೆಂಗೆ ನಂಬೋದು?

bhadra ಹೇಳಿದರು...

ಇದೇ ರೀತಿಯ ಅನುಭವ ನನಗೆ ಬಹಳ ಹಿಂದೆ ಆಗಿತ್ತು. ಅದನ್ನು ಲೇಖನವಾಗಿ ಅದುವೇಕನ್ನಡದಲ್ಲಿ ಪ್ರಕಟಿಸಿದ್ದೂ ಉಂಟು. ನನ್ನೊಂದಿಗೆ ತರಲೆ ಮಾಡುತ್ತಿದ್ದ ಆ ವ್ಯಕ್ತಿ, ಸಮಾಜದಲ್ಲಿ ಗಣ್ಯ, ಕನ್ನಡ ಭಾಷೆಗಾಗಿ ಹೋರಾಡುತ್ತಿರುವ ಎಂದು ಹೇಳಲು ನಾಚಿಕೆ ಆಗುತ್ತದೆ. ಅಂದಿನಿಂದ ನನ್ನ ಬರಹಕ್ಕೆ ಕಡಿವಾಣ ಬಿದ್ದಿತು. :(

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜು...
ಆ ಹುಡುಗಿ ಹುಡುಗ ಅಂತ ನಂಗೆ ಎರಡುತಿಂಗಳ ಹಿಂದೆಯೇ ಗೊತ್ತಾಗಿತ್ತು. ಆದರೆ ಆ ಹುಡುಗಿಯ ಜೊತೆ ನನಗೆ ಹೆಚ್ಚು ಕಾಂಟಾಕ್ಟ್ ಇತ್ತಿಲ್ಲೆ. ಆದ್ರೂ ಅದು ಗಂಡಸು ಅಂತ ಗೊತ್ತಾದ ಮೇಲಿಂದ ಬರೀ ಹೆಸರು ಮಾತ್ರ ಹಾಕ್ಯಂಡು ಊರುಕೇರಿ ಪರಿಚಯವೇ ಇಲ್ಲದ ಎಲ್ಲ ಬ್ಲಾಗುಗಳ ಮೇಲೂ ನನಗೆ ಸಂಶಯ ಬರಕ್ಕೆ ಶುರುವಾಗಿದ್ದು.
ಒಳ್ಳೆ ಲೇಖನ. ಇಂಥದಕ್ಕೆಲ್ಲ ಹುಡುಗಿಯರೇ ಸಪೋರ್ಟ್ ಮಾಡದು ನಿಲ್ಸವ್ವು.
ಖಿನ್ನತೆಯ ಬಗ್ಗೆ ಲೇಖನ ಓದಿ ಓದಿ ಪಾಪ ಅನ್ಸಿ ನಾನೂ ಆ ಬ್ಲಾಗಲ್ಲಿ ಈಷ್ಟುದ್ದಕ್ಕೆ ಒಂದು ಕಾಮೆಂಟ್ ಬರ್ದಿದ್ದಿ.
ಈಗ ಈ ಲೇಖನ ಓದಿ ಅವರ ಖಿನ್ನತೆಯ ಬಗ್ಗೆ ಇನ್ನೂ ಪಾಪ ಅನ್ನಿಸಿ ಇನ್ನೂ ಊದ್ದ ಕಾಮೆಂಟೇ ಬರೀಲಾಗಿತ್ತು ಅನ್ನಿಸ್ತಾ ಇದ್ದು.

ಅರಕಲಗೂಡುಜಯಕುಮಾರ್ ಹೇಳಿದರು...

ತೇಜಸ್ವಿನಿ ಹೆಗಡೆ/ಮಾನಸ/ಪಂಚಮಿ ಹೆಗಡೆ ಯವರೇ,
ಮುಖವಿಲ್ಲದ ಬ್ಲಾಗ್ ಬಗ್ಗೆ ಸದಾ ಎಚ್ಚರ ಅಗತ್ಯ, ನಿಮಗೆ ವಿಚಾರ ಪ್ರಬುದ್ದತೆ ಇದೆ. ಅದಾಗ್ಯೂ ನೀವು ಮೋಸ ಹೋಗಿದ್ದು ಬೇಸರದ ಸಂಗತಿ, ಇರಲಿ ಭಾವನಾತ್ಮಕವಾಗಿ ಇಂತಹ ವಿಚಾರಗಳು ಘಾಸಿಗೊಳಿಸುತ್ತವೆ. ಇನ್ನು ಮುಂದಾದರೂ ಎಚ್ಚರಿಕೆಯ ಹೆಜ್ಜೆ ಇರಲಿ. ಕೆಲವೊಮ್ಮೆ ಯಾರದೋ ಮುಖವನ್ನು ಅಂಟಿಸಿ, ನಕಲಿ ಹೆಸರಿನಲ್ಲಿ ಬ್ಲಾಗ್ ಮಾಡುವವರು ಇದ್ದಾರೆ ಆದ್ದರಿಂದ ಪ್ರತಿಕ್ರಿಯೆ ನೀಡುವಾಗ ಮತ್ತು ಅನುಸರಿಸುವಾಗ ಎಚ್ಚರವಿರಲಿ.

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

ತೇಜಸ್ವಿನಿ ಯವರೆ,
ನನಗೆ ಬ್ಲಾಗ ಲೋಕ ಹೊಸದು. ನನಗೆ ಖುಷಿಯಿತ್ತು. ಬ್ಲಾಗಿನಿಂದ ಮುಖ ಪರಿಚಯ ಇಲ್ಲದ ಎಷ್ಟೋ ಜನ ಆತ್ಮೀಯರಾಗಿದ್ದಾರೆ. ಬರಹಗಳಿಗೆ ಮಾರು ದೂರವಿದ್ದ ನನ್ನಂತವರು ಕೂಡ ಬರೆಯುವ ಪ್ರಯತ್ನ ಮಾಡಿಸಿದ್ದಾರೆ. ಅವರಿಗೆ ನಾನು ತುಂಬಾ ಋಣಿ. ಆದರೆ ನಿಮ್ಮ ಈ ಲೇಖನ ದಿಂದ ನನಗೆ ತುಂಬಾ ಆಶ್ಚರ್ಯ ಆಯಿತು. ನೀವು ಎಚ್ಚರಿಸಿದ್ದು
ಒಳ್ಳೆಯದೇ ಆಯಿತು. ಒಂದು ಒಳ್ಳೆಯ ವಾಹಿನಿಯನ್ನು ದೂರುಪಯೋಗೋಳಿಸಿದ್ದಕ್ಕೆ ತುಂಬಾ ಬೇಜಾರಾಯಿತು. ಒಬ್ಬ ಈ ರೀತಿ ಮಾಡಿ ಎಲ್ಲರನ್ನು ಸಂಶಯಿಸುವಂತಾಯಿತಲ್ಲಾ.......

Parisarapremi ಹೇಳಿದರು...

ayyo, heegoo saadhyave anstu! alla, aa vyakti oLLe doctor hatra tOrskoLOdu oLLedu.

ಸುಪ್ತದೀಪ್ತಿ ಹೇಳಿದರು...

ತೇಜು, ನಿನಗಾದ ಆಘಾತವನ್ನು ಇತರರ ಜೊತೆ ಹಂಚಿಕೊಂಡು ಬೇರೆಯವರಿಗೂ ಹೀಗಾಗದಿರಲೆಂದು ಎಚ್ಚರಿಕೆಯ ಗಂಟೆ ಬಾರಿಸಿದ ನಿನ್ನ ದೊಡ್ಡ ಮನಸ್ಸಿಗೆ ವಂದನೆಗಳು ಕಣೇ.

ಇಂಥ ಕ್ಷುಲ್ಲಕ ಮನದ ಕೀಟಗಳಿಗೆ, ಹುಳಗಳಿಗೆ ನನ್ನದೂ ಧಿಕ್ಕಾರವಿದೆ.

ಚಿತ್ರಾ ಹೇಳಿದರು...

ತೇಜೂ,
ಓದಿ ಒಮ್ಮೆ ಶಾಕ್ ಆಯಿತು.
ನಿಜ, ಯಾರು ಯಾವುದೇ ನಾಮಧೇಯದಲ್ಲಿ ಏನನ್ನೂ ಬರೆಯಬಹುದು ಅದು ಅವರ ಇಷ್ಟ . ಆದರೆ ವೈಯುಕ್ತಿಕ ಮಟ್ಟದಲ್ಲಿ ಸಂಪರ್ಕ ಇಟ್ಟುಕೊಳ್ಳುವಾಗ ಅದೇ ಮುಸುಕಿನಲ್ಲಿ ವ್ಯವಹರಿಸುವುದು ತಪ್ಪು ಎಂದು ನಾನೂ ಭಾವಿಸುತ್ತೇನೆ. ನಿನ್ನೊಂದಿಗೆ ಹೀಗಾಗಿದ್ದು ನಿಜಕ್ಕೂ ಬೇಸರ ತಂದಿತು .
ಸಾಧಾರಣವಾಗಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯೊಡನೆ ತನ್ನ ಭಾವನೆಗಳನ್ನು ಹಂಚಿಕೊಂಡಷ್ಟು ಮುಕ್ತವಾಗಿ ಒಬ್ಬ ಗಂಡಸಿನೊಡನೆ ಹಂಚಿಕೊಳ್ಳುವುದಿಲ್ಲ . ಹೀಗಿರುವಾಗ , ಹೆಣ್ಣಿನಂತೆ ನಟಿಸುತ್ತಾ, ಸ್ನೇಹ ಬೆಳೆಸುವ ಪ್ರಯತ್ನ ಮಾಡಿದ್ದು ತಪ್ಪು.ಇದು ಒಂದು ರೀತಿಯಲ್ಲಿ ಒಬ್ಬರ ಖಾಸಗೀ ಭಾವನೆಗಳೊಡನೆ ಆಟ ಆಡಿದಂತೆ .
ಬ್ಲಾಗ್ ಪ್ರಪಂಚದಲ್ಲಿ ನಾನು ಅಷ್ಟು ಹಳಬಳೇನಲ್ಲ. ಆದರೆ ಇಲ್ಲಿಯವರೆಗೆ ಎಲ್ಲರೂ ಸೌಜನ್ಯದಿಂದಲೇ ನಡೆದುಕೊಂಡಿದ್ದಾರೆ . ಮುಖ ಪರಿಚಯವಿಲ್ಲದೆ ಸ್ನೇಹಿತರಾಗುವ ಈ ಬ್ಲಾಗ್ ಲೋಕದಲ್ಲಿ ಈಗ ಇಂಥದ್ದೊಂದು ಘಟನೆಯನ್ನು ಕೇಳಿದಾಗ ಒಂಥರಾ ಆಘಾತ ! ಯಾರು ಹೇಗೆ, ಯಾರನ್ನು ನಂಬುವುದು ಯಾರನ್ನು ಬಿಡುವುದು .. ಎಂಬ ಸಂಶಯದ ಹುಳು ಜನರ ಮನಸ್ಸಿನಲ್ಲಿ ಹರಿದಾಡಬಹುದು.
ನಿನಗೆ ಇದರಿಂದ ಎಷ್ಟು ನೋವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಲ್ಲೆ ಆದರೆ ಮುಂದೆ ಎಚ್ಚರವಹಿಸುವಂತೆ ನಮಗೆಲ್ಲ ಈ ಘಟನೆಯೊಂದು ಪಾಠ ಅಲ್ಲವೇ? ನೀ ಹೇಳಿದ ವ್ಯಕ್ತಿ ಯಾರೇ ಇರಲಿ, ಅವರಿಗೆ ತಮ್ಮ ತಪ್ಪು ಅರಿವಾದರೆ ನಿನ್ನಲ್ಲಿ ಕ್ಷಮೆ ಕೇಳುವ ಬುದ್ಧಿ ದೇವರು ಕೊಡಲಿ !

ಮನಸು ಹೇಳಿದರು...

ತೇಜಸ್ವಿನಿಯವರೇ,
ನಿಜಕ್ಕೂ ಇದು ಆಘಾತಕಾರಿ ವಿಷಯ... ಹೀಗೂ ಇರುತ್ತಾರ ಜನ ಎಂದು ನನಗೆ ಭಯವಾಗುತ್ತೆ.... ಯಾರ ಸಂಪರ್ಕವೂ ಬೇಡಾ ಯಾರನ್ನು ನಂಬಬಾರದು ಎನ್ನಿಸುತ್ತೆ ಆದರೆ ಒಳ್ಳೆ ಜನರಿಗೂ ಕೆಟ್ಟ ಹೆಸರು ಬರುತ್ತೆ ಇಂತಾ ಜನರಿಂದ...
ತಾನು ಒಬ್ಬರ ಭಾವನೆಗಳ ಜೊತೆ ಆಟವಾಡಿದ್ದೇನೆ ಎಂದು ಆ ವ್ಯಕ್ತಿಗೆ ಅನಿಸಬೇಕು... ಜನ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇದೇ ಉದಾಹರಣೆ... ಏಕೆ ಇಂತಹ ಜೀವನ ತಿಳಿಯದು!!! ನಿಮ್ಮ ಅನುಭವ ನಮಗೆಲ್ಲಾ ಒಂದು ಪಾಠ ಹುಷಾರಾಗಿರಬೇಕು....
ವಂದನೆಗಳು ಹಾಗು ಧನ್ಯವಾದಗಳು ನೀವು ಇಂತಹ ವಿಚಾರವನ್ನು ನಮ್ಮೊಟ್ಟಿಗೆ ಹಂಚಿಕೊಂಡಿದ್ದಕ್ಕೆ...

AntharangadaMaathugalu ಹೇಳಿದರು...

ತೇಜಸ್ವಿನಿಯವರೆ...
ನಿಮ್ಮ ಬರಹ ಓದಿ ನಿಜಕ್ಕೂ ನನಗೆ ಶಾಕ್ ಆಯಿತು. ಜನರು ಹೀಗೂ ಇರುತ್ತಾರಾ ಎಂದು... ನಾನು ಬ್ಲಾಗ್ ಲೋಕಕ್ಕೆ ಈಗಷ್ಟೇ ಎಂಟ್ರಿ ಕೊಟ್ಟುರುವವಳು... ನಿಜಕ್ಕೂ ಭಯವಾಗುತ್ತದೆ, ಯಾರನ್ನು ನಂಬುವುದೆಂದು? ನಿಮ್ಮ ಬರಹದ ಮೂಲಕ ಎಲ್ಲರನ್ನೂ ಎಚ್ಚರಿಸಿದ್ದಕ್ಕೆ ವಂದನೆಗಳು. ಒಬ್ಬರು ಮಾಡುವ ತಪ್ಪಿನಿಂದಾಗಿ ನಾವು ಎಲ್ಲರನ್ನೂ (ಮುಖ ಮತ್ತು ವಿಳಾಸ ಇಲ್ಲದವರನ್ನು) ಸಂಶಯಿಸುವಂತಾಗುತ್ತದೆ... ನೊಂದುಕೊಳ್ಳಬೇಡಿ, ನಾವೆಲ್ಲಾ ಇದ್ದೇವೆ ನಿಮ್ಮ ಜೊತೆ...
ಶ್ಯಾಮಲ

namana bajagoli ಹೇಳಿದರು...

ಬಹುಶ "ವಿಮರ್ಶಕಿ" ಅಗಿರ್ಬೆಕಲ್ವ ಮೆಡಮ್ ?http://vimarshaki.wordpress.com/

sunaath ಹೇಳಿದರು...

ತೇಜಸ್ವಿನಿ,
ಇಂಥವರೂ ಇರುತ್ತಾರೆಯೆ?
I am shocked.

hamsanandi ಹೇಳಿದರು...

ಹ್ಮ್.. ಈ ಬ್ಲಾಗರ್ ಬಹಳ ದಿನದಿಂದ ಬ್ಲಾಗಲ್ಲಿ ಏನೂ ಬರೀತಾ ಇಲ್ಲ ಅಲ್ವೆ! ಅಂದಹಾಗೆ ನಾನು ಯೋಚಿಸ್ತಿರೋದು ಅದೇ ವ್ಯಕ್ತಿಯ ಬಗ್ಗೆ ಆದ್ರೆ (ಅದ್ಯಾರು ಅಂತ ನನಗೆ ಗೊತ್ತಿಲ್ಲ) - ಆ ಬರಹದ ಶೈಲಿಯನ್ನು ನಾನು ಮೆಚ್ಚಿದ್ದೆ - ಮತ್ತೆ ಇನ್ನೊಬ್ಬರನ್ನು "ನೀವೇ ಈಕೆಯಾ?" ಅಂತ ಕೇಳೂ ಇದ್ದೆ. ಅವರು ’ಆಕೆ’ ಆಗಿರದೇ ಇದ್ದಿದ್ದು ಒಳ್ಳೇ ಸಂಗತಿ ಅಂತ ಈಗ ಗೊತ್ತಾಯ್ತು!

Dileep Hegde ಹೇಳಿದರು...

ಬ್ಲಾಗ್ ಲೋಕದಲ್ಲೂ ಇಂತವರು ಇದಾರಾ..?? ನಾನು ಇದೆಲ್ಲಾ ಬರೀ ಆರ್ಕುಟ್ ಮುಂತಾದ Social Networking ಸೈಟು ಗಳಲ್ಲಿ ಮಾತ್ರ ಅನ್ಕೊಂಡಿದ್ದೆ... ನಿಜಕ್ಕೂ ಆಘಾತಕಾರಿ... ನಮ್ಮ ಎಚ್ಚರದಲ್ಲಿ ನಾವಿರೋದು ಉತ್ತಮ... ಮಾಹಿತಿಗಾಗಿ ಅನಂತ ಧನ್ಯವಾದಗಳು....

Manjunatha Kollegala ಹೇಳಿದರು...

ನಿಮ್ಮ ಅನುಭವ ಬೇಸರ ತರುವಂಥದ್ದು, ಆದರೆ ಈ "ಎಚ್ಚರಿಕೆ ಘಂಟೆ" ಅನಗತ್ಯ ಭಯ/ಆತಂಕ ಸೃಷ್ಟಿಸದಿರಲಿ ಎಂದು ಆಶಿಸುತ್ತೇನೆ (in view of the kind of comments coming up here). ಏಕೆಂದರೆ, ಇಂಥ ಉದಾಹರಣೆಗಳು ಬರೀ ಅಪವಾದ (exception) ಅಷ್ಟೇ ಹೊರತು ಸಾಮಾನ್ಯ ಸ್ಥಿತಿ ಅಲ್ಲ, ಕೊನೆಯ ಪಕ್ಷ ಸಾಹಿತ್ಯಕ ಬ್ಲಾಗಿನ ಲೋಕದಲ್ಲಾದರು. ಏಕೆಂದರೆ, ಇಂಥಾ ಒಂದು ಕೆಟ್ಟ ಅನುಭವಕ್ಕೆ ವಿರುದ್ಧವಾಗಿ ನಮಗೆ ಹತ್ತು ಜನ ಸಜ್ಜನ ಮಿತ್ರರು (ನಿಜವಾದ) ದೊರಕಿದ್ದಾರೆಂಬುದನ್ನು ಮರೆಯಬಾರದು.

ಅಪರಚಿತರಬಗ್ಗೆ ಒಂದು ಆರೋಗ್ಯಕರ ಎಚ್ಚರ ಅಗತ್ಯ. ಆದರೆ ಅದು ಸಾರಾಸಗಟು ಅಪನಂಬಿಕೆಗೆ ಎಡೆಮಾಡಬಾರದೆನ್ನುವುದು ನನ್ನ ಅನಿಸಿಕೆ. ನಿಮ್ಮ ಓದುಗರೊಬ್ಬರು ಕಾಮೆಂಟಿಸಿದಂತೆ, ಬರಹವನ್ನೂ ಲೇಖಕನನ್ನೂ ಪ್ರತ್ಯೇಕಿಸಿ ನೋಡುವುದೂ, ಬರಹವನ್ನಷ್ಟೇ ಮೆಚ್ಚುವುದೂ ಅಗತ್ಯವೆನಿಸುತ್ತದೆ. ಸಾಹಿತ್ಯಕ ಚರ್ಚೆ ವೈಯಕ್ತಿಕ ಚರ್ಚೆ ಆಗಬೇಕಿಲ್ಲ. ವೈಯಕ್ತಿಕವಾಗಿ involve ಆಗುವ ಮುನ್ನ ವ್ಯಕ್ತಿಯ ಪೂರ್ವಾಪರ ತಿಳಿಯುವುದು ಒಳ್ಳೆಯದು.

Anyway, ಈ ಘಟನೆ ನಿಮ್ಮ ಬ್ಲಾಗ್/ಬರೆಯುವ ಉತ್ಸಾಹವನ್ನು ಕಡಿಮೆ ಮಾಡದಿರಲಿ

ಶ್ರೀನಿಧಿ.ಡಿ.ಎಸ್ ಹೇಳಿದರು...

ಯಾಹೂ ಚಾಟ್ ರೂಂ ನ ಸಾಧ್ಯತೆ ಬ್ಲಾಗ್ ಜಗತ್ತಿಗೂ ಬಂದಿದೆ ಅಂತ ಆಯ್ತು! ಧಿಕ್ಕಾರವಿದೆ ಇಂತ ಮನಸ್ಥಿತಿಗೆ. ಆ ವ್ಯಕ್ತಿಗೆ, ಅರುಣ ಹೇಳಿದ ಹಾಗೆ ವೈದ್ಯರ ಅವಶ್ಯಕತೆ ಇದೆ, ಪ್ರಾಯಶ:.

ಭಾವನೆಗಳ ಜೊತೆ ಆಟವಾಡುವ ಇಂಥ ವ್ಯಕ್ತಿಯನ್ನು ಭಾಗಶ:ವಾದರೂ ಬಹಿರಂಗಗೊಳಿಸುವ ಧೈರ್ಯ ತೋರಿದ್ದಕ್ಕಾಗಿ ಶಹಭಾಸ್!

ಅನಾಮಧೇಯ ಹೇಳಿದರು...

ಆದರೆ ಭಾಗಶ: ತೋರಿಸೋದರಿಂದ ಉಪಯೋಗವಾದೀತಾ? ಅನುಮಾನ ನನಗೆ.

Unknown ಹೇಳಿದರು...

ಈ ಲೇಖನವನ್ನು ಓದಿ 'ಹೀಗೂ ಉಂಟೆ?' ಎಂದು ಕೈಅಲ್ಲಾಡಿಸಿ ಸುಮ್ಮನಾಗಿಬಿಡುವುದೇ ಎನ್ನುವಂತಾಗಿದೆ ನನ್ನ ಸ್ಥಿತಿ. ನಾವು ಮೋಸ ಹೋಗಿ ಕಳೆದುಕೊಂಡಿದ್ದಕ್ಕಿಂತ, ಮೋಸ ಹೋದೆವಲ್ಲಾ ಎಂಭಾ ಭಾವನೆಯೇ ಹೆಚ್ಚು ನೋವುಂಟು ಮಾಡುತ್ತದೆ.
ಇನ್ನು ಬ್ಲಾಗ್ ಲೋಕದಲ್ಲಿ ಎಷ್ಟೆಷ್ಟು ಹೆಣ್ಣು ಗಂಡು ಅಸಲಿ (!)ನಕಲಿಗಳಿವೆಯೋ ಬಲ್ಲವರು ಯಾರು? ಇಂತಹ ಬ್ಲಾಗಿಗರಿಗೆ ಧಿಕ್ಕಾರವಿರಲಿ.

ಆಲಾಪಿನಿ ಹೇಳಿದರು...

ತೇಜಕ್ಕಾ...
ನಾವಂದುಕೊಂಡ ಹಾಗೆ ಎಲ್ಲವೂ ಇದ್ದಿದ್ದರೆ...
ಬದುಕ ಬಂಡಿ ತುಂಬ ಭಾವನೆಗಳೇ ಎಂದು ಹೊರಟವರಿಗೆ ವಾಸ್ತವದ ತಗ್ಗುದಿನ್ನೆಗಳು ಎಚ್ಚರಿಸುತ್ತವೆ.
ಆ ಎಚ್ಚರಿಕೆಗಳೇ ನಮ್ಮನ್ನು ಗಟ್ಟಿಗೊಳಿಸುತ್ತವಲ್ಲವೆ? ಸ್ನೇಹ, ವಿಶ್ವಾಸ, ನಂಬಿಕೆ ; ಬಿಂದಿಗೆಯೊಳಗಿನ ನೀರಿನಂತಿದ್ದರೆ ಸಾಕೇನೋ...

Guruprasad ಹೇಳಿದರು...

ತೇಜಸ್ವಿನಿ
ಇದು ನಿಜಕ್ಕೂ ಆತಂಕಕಾರಿ ವಿಷಯ,,, ಸ್ವಲ್ಪ ಸೂಕ್ಷ್ಮ ಗೊತ್ತಾದ ತಕ್ಷಣ ಅವೊಇದ್ ಮಾಡುವುದು ಒಳಿತು,, ನಿಮಗಾದ ಅನುಭವವನ್ನು ಹಾಗು ಆತಂಕವನ್ನು ಎಲ್ಲರ ಮುಂದೆ ಹೇಳಿಕೊಂಡು ಎಚ್ಚರಿಕೆ ಕೊಟ್ಟಿದ್ದಿರಾ.. ಇನ್ನು ಮುಂದೆ ಬ್ಲಾಗ್ ನಲ್ಲಿ ವ್ಯವಹರಿಸುವಾಗ ಅದಸ್ತು ಜಾಗೃತ ರಾಗಿರಬೇಕು,,,

ಚಕೋರ ಹೇಳಿದರು...

ಬೇರೆ ಹೆಸರಲ್ಲಿ ಬರೆಯುವ ನನ್ನಂತವರಿಗೆ (ಬರಹಕ್ಕೆ ನನ್ನ ವೈಯುಕ್ತಿಕತೆ ತಟ್ಟದಿರಲಿ ಎಂಬ ಭಾವನೆಯಿಂದಷ್ಟೇ) ಇಂಥ ಘಟನೆ, ವ್ಯಕ್ತಿಗಳಿಂದ ಆಗುವ ಹಾನಿ ತುಂಬಾ.

ವೈಯುಕ್ತಿಕವಾಗಿ ಅದೇ ಹೆಸರಲ್ಲಿ ಮಾತಾಡಿಸಿದ್ದು, ವ್ಯವಹಾರ ಖಂಡಿತಾ ತಪ್ಪೆಂದು ಒಪ್ಪುತ್ತೇನೆ.

ಯಜ್ಞೇಶ್ (yajnesh) ಹೇಳಿದರು...

ತೇಜಕ್ಕಾ,

ತುಂಬಾ ಬೇಸರವಾಯ್ತು ಕೇಳಿ. ನಿಮ್ಮ ಪೋಸ್ಟ್ ಎಲ್ಲಾ ಅನಾಮದೇಯರಿಗೆ ಒಂದು ಎಚ್ಚರಿಕೆಯ ಸಂಕೇತವಾಗ್ಲಿ.

ಸಂದೀಪ್ ಕಾಮತ್ ಹೇಳಿದರು...

ಛೇ ಬೇಜಾರು:(

Keshav.Kulkarni ಹೇಳಿದರು...

ಬ್ಲಾಗಿನಲ್ಲಿ ಅನಾಮಿಕತೆ ಇದೆ. ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ ಬರೆಯುವುದು ಹೊಸದೇನಲ್ಲ. ಆದರೆ ವಿಷಯ ವೈಯಕ್ತಿಕವಾದಾಗಲಾದರೂ ತಮ್ಮ ಗುಟ್ಟನ್ನು ತಾವೇ ಬಿಟ್ಟು ಕೊಟ್ಟು ಮನಸು ಹಗುರಾಗಿಸಿದ್ದರೆ ಈ ತೊಂದರೆಯೇ ಆಗುತ್ತಿರಲಿಲ್ಲ. ಅನಾಮಿಕ ಕೊಮೆಂಟ್ ಹಾಕುವ ಓದುಗರ ಮೇಲೆ ಇಷ್ಟು ದಿನ ಬ್ಲಾಗಿಗರೆಲ್ಲ ಬರೆದದ್ದಾಯಿತು, ಇನ್ನು ಇದರ ಸರದಿ ಅಂತ ಅನಿಸುತ್ತೆ. ಏನೇ ಇರಲಿ, ಹೀಗಾಗಬಾರದಿತ್ತು. ವಿ ಆರ್ ವಿತ್ ಯು.

- ಕೇಶವ ಕುಲಕರ್ಣಿ

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರತಿಕ್ರಿಯೆಯ ಮೂಲಕ ಬೆಂಬಲ ಸೂಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಮೊದಲಿಗೆ ಈ ರೀತಿ ವರ್ತಿಸಿದವಳು(ನು/ರು) ವಿಮರ್ಶಕಿ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. (ಇಲ್ಲಿ ನಮನ್ ಬಜಗೋಳಿ ಅವರು ಇದು "ವಿಮರ್ಶಿಕೆಯೇ?" ಎಂದು ಕೇಳಿದ್ದಾರೆ.) ವಿಮರ್ಶಕಿ ಯಾರೆಂದೂ ನನಗೆ ಗೊತ್ತಿಲ್ಲ. ಅಲ್ಲಿಂದ ಯಾವ ಮೈಲ್ ಕೂಡಾ ಬಂದಿಲ್ಲ. ಆದಷ್ಟು ವಿವಾದ ರಹಿತ ಕಮೆಂಟ್ ಗಳನ್ನಷ್ಟೇ ಹಾಕಿದ್ದೆ. ಆದರೂ ಹೇಗೋ ಏನೋ ಈ ಕಮೆಂಟ್ ಪಬ್ಲಿಶ್ ಆಗೋಗಿದೆ.

ಇಲ್ಲಿ ಈ ಘಟನೆಯನ್ನು ಹಾಕುವುದರ ಹಿಂದಿನ ಉದ್ದೇಶ ತುಂಬಾ ಸರಳವಾಗಿತ್ತು. ನನ್ನಂತೇ ಬೇರೇ ಯಾರೂ ಮೋಸ ಹೋಗದಿರಲೆಂದು ಅಷ್ಟೇ. ಇದಕ್ಕಿಂತ ಬೇರೆ ಯಾವ ಅನ್ಯ ಉದ್ದೇಶವೂ ಇರಲಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ.

ಇನ್ನು ಈ ವಿಷಯಕ್ಕಿಲ್ಲೇ ತೆರೆ ಎಳೆಯುತ್ತಿದ್ದೇನೆ. ಇದರ ಹಿಂದೆ ಯಾರಿದ್ದಾರೆ? ಯಾಕೆ ಹೀಗೆ ಮಾಡಿದರೂ? ಇದೆಲ್ಲಾ ಇನ್ನು ಅನವಶ್ಯಕ. ಈ ರೀತಿ ಇನ್ನು ಮುಂದೆ ಯಾರೂ ಯಾರೊಂದಿಗೂ ನಡೆದುಕೊಳ್ಳದಿರಲೆಂದೇ ಪ್ರಾರ್ಥಿಸುವೆ.

ಮಗದೊಮ್ಮೆ ಆದರ ಹಾಗೂ ಧನ್ಯವಾದಗಳೊಂದಿಗೆ,

-ತೇಜಸ್ವಿನಿ ಹೆಗಡೆ.

ವಿನಾಯಕ ಕೆ.ಎಸ್ ಹೇಳಿದರು...

jai ho...idaste nanna anisike...symantic norton ee haavali tappisalu hosa technology develop maadatante kaayona...

ಶಿವಪ್ರಕಾಶ್ ಹೇಳಿದರು...

Shocking News Madam

ಸುಧೇಶ್ ಶೆಟ್ಟಿ ಹೇಳಿದರು...

ಎಚ್ಚರಿಸಿದ್ದಕ್ಕೆ ಥ್ಯಾ೦ಕ್ಸ್ ತೇಜಕ್ಕ....

ಮನಸ್ವಿ ಹೇಳಿದರು...

ತುಂಬಾ ಬೇಸರವಾಯಿತು.. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಬ್ಲಾಗುಗಳಲ್ಲಿ ಇಂತವು ಇವೆಯಾ?? ತಿಕ್ಕಲುತನ ಖಿನ್ನತೆ, ಮಾನಸಿಕ ಅಸ್ವಸ್ಥತೆ ಹೊಂದಿರುವವರು ಮಾತ್ರ ಇಂತಹ ವಿಕೃತಿಯನ್ನು ಮಾಡುತ್ತಾರೆ, ಬ್ಲಾಗಿಗರನ್ನು ಎಚ್ಚರಿಸಿದ ನಿಮಗೆ ದನ್ಯವಾದಗಳು.

Jagadeesh Chandra ಹೇಳಿದರು...

I am yet to become a blogger. After reading this I am thinking what to do?
bsjchandra

VENU VINOD ಹೇಳಿದರು...

ತೇಜಸ್ವಿನಿಯವರೆ,
ನಿಮ್ಮ ಜತೆ ಆಗಿದ್ದರ ಬಗ್ಗೆ ನಗೂ ವಿಷಾದ ಇದೆ.ಇಂತಹ ಮಾನಸಿಕತೆ ಇರುವ ವ್ಯಕ್ತಿಗಳಿಗೆ ಮದ್ದಿಲ್ಲ...ಅವರ ಬ್ಲಾಗನ್ನು ನಿಲ್ಲಿಸಬೇಕು ಎಂದು ನಾವು ಹೇಳಿದರೆ ಅದು ಯಶಸ್ವಿ ಆಗಬಹುದು ಎಂದೂ ಕಾಣಿಸೋದಿಲ್ಲ. ಬ್ಲಾಗರ್‌ಗಳು genuine ಎಂದು ಖಚಿತಪಡಿಸಿಕೊಳ್ಳದೆ ಅವರೊಂದಿಗೆ ಖಾಸಗಿ ಅಥವಾ ಅರೆಖಾಸಸಗಿ ಅಭಿಪ್ರಾಯ ಹಂಚಿಕೊಳ್ಳದಿರಿವುದೇ ನಮಗೆ ಶ್ರೇಯಸ್ಕರ..
ಎಚ್ಚರಿಕೆಯ ಲೇಕನಕ್ಕೆ thanks.

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಿಮಗಾದ ಅನುಭವ ನನಗೂ ಆಗಿದೆ ಅಂದುಕೊಳ್ಳುತ್ತೇನೆ. ಆ ವ್ಯಕ್ತಿ ನನ್ನಿಂದ ಫೋಟೋಗಳನ್ನು ಪಡೆದಿದ್ದ. ನಂತರ ಆತನ ಬ್ಲಾಗ್ ಅಪ್‍ಡೇಟ್ ಆಗಲಿಲ್ಲ. ಇನ್ನು ಮುಂದೆ ನಾನು ಹುಷಾರಾಗಿರಬೇಕು. ನೀವು ಹುಷಾರಾಗಿರಿ.
ಎಚ್ಚರಿಸಿದ್ದಕ್ಕೆ ಧನ್ಯವಾದಗಳು.

ವಸಂತ ಹೇಳಿದರು...

ಇದು ನಿಜಕ್ಕೂ ಅಚ್ಚರಿಯ ವಿಷಯ. ಕನ್ನಡದ ಬಗ್ಗೆ ಪ್ರೀತಿ ಇರೋ ಕೆಲವೇ ಕೆಲವು ಆರೋಗ್ಯವಂತ ಮನಸ್ಸುಗಳು ಇವತ್ತು ಕನ್ನಡ ಬ್ಲಾಗ್ ಪ್ರಪಂಚದಲ್ಲಿದ್ದಾರೆ. ಅಲ್ಲಿ ಕೂಡಾ ಇಂತದ್ದೊಂದು ಮನೆ ಮುರುಕರು ಬಂದು ಸೇರಿ ನಿಮಗೆ ತೊಂದರೆ ನೀಡಿದ್ದು ಖಂಡನೀಯ.

ಸೂರ್ಯ ವಜ್ರಾಂಗಿ ಹೇಳಿದರು...

ತುಂಬಾ ವಿಳಂಬವಾಗಿ ಪ್ರತಿಕ್ರಿಯೆ ನೀಡುತ್ತಿದ್ದೇನೆ..
ನಿಮ್ಮ ಮನಸ್ಸಿನ ಮುಗ್ಧತೆ ಕಂಡು, ನಿಮ್ಮ ಮೇಲೆ ಅನುಕಂಪವೂ ಅವರ ಮೇಲೆ ಸಿಟ್ಟೂ ಬಂತು. ಅಂತೂ ಕೊನೆಗೂ ಸತ್ಯ ತಿಳಿಯಿತಲ್ಲಾ ಅನ್ನುವುದೇ ಸಮಾಧಾನ.
ಅಂದ ಹಾಗೆ ಆಕಸ್ಮಿಕವಾಗಿ ನಿಮ್ಮ ಬ್ಲಾಗಿಗೆ ಕಣ್ಣಾಡಿಸಿದೆ.
ವಿಮರ್ಶಕಿಗೆ ಕೃತಜ್ಞತೆ ಸಲ್ಲಿಸಬೇಕು. ಆ ಬ್ಲಾಗಿನಿಂದಾಗಿ ನಿಮ್ಮ ಬ್ಲಾಗಿನ ಮೇಲೆ ಕಣ್ಣಾಡಿಸಿದೆ.